Advertisements

ಬಡ ಮಹಿಳೆ ಮನೆಗೆ ದುಡ್ಡು, ಸೀರೆ ತಗೊಂಡು ಹೋಗಿ ಜಿಲ್ಲಾದಿಕಾರಿ ಮಾಡಿದ ಕೆಲಸ ನೋಡಿ ಬೆಚ್ಚಿ ಬಿದ್ದ ಮಹಿಳೆ!

ಪ್ರಿಯ ಓದುಗರೇ ಇಂದಿನ ಕಾಲದಲ್ಲಿ ವೃದ್ಧಶ್ರಮಗಳು ಹೆಚ್ಚಾಗುತ್ತವೆ. ಕಾರಣ ಮಕ್ಕಳಿಗೆ ಸಂಸ್ಕಾರ ಎನ್ನುವುದಿಲ್ಲ. ವಯಸ್ಸಾದ ತಂದೆ ತಾಯಿಯನ್ನು ಆಶ್ರಮಕ್ಕೆ ಸೇರಿಸುವುದು ವೃದ್ಧಾಶ್ರಮಕ್ಕೆ ಸೇರಿಸುವುದು ರೂಡಿಯಂತಾಗಿದೆ. ಆದರೆ ಈ ಡಿಸಿ ಮಾಡಿರುವ ಕೆಲಸಕ್ಕೆ ಆ ಬಡ ಮಹಿಳೆ ಕಣ್ಣೀರು ಹಾಕಿದ್ದಾರೆ. ಹಾಗಾದರೆ ಅವರು ಮಾಡಿರುವ ಕೆಲಸವಾದರೂ ಏನು ಗೊತ್ತಾ? ಯಾಕೆ ಆ ಮಹಿಳೆ ಕಣ್ಣೀರು ಹಾಕಿದರು? ಹೇಳ್ತೀವಿ ಸ್ಟೋರಿನ ಕೊನೆಯವರೆಗೂ ಓದಿ. ಇದೊಂದು ಬಡತನದ ಕುಟುಂಬ. ಪತಿಯ ಸಾವಿನ ನಂತರ ಇಂತಹ ಬಡತನದಲ್ಲಿಯೇ ಎಲ್ಲ ಮಕ್ಕಳನ್ನು ಸಹ ಹೊಟ್ಟೆಬಟ್ಟೆ ಕಟ್ಟಿ ತಾಯಿ ಸಲುಹಿ ದೊಡ್ಡವರನ್ನಾಗಿ ಮಾಡಿದಳು. ಅಷ್ಟೇ ಅಲ್ಲ ಅಂತಹ ಕಷ್ಟ ಕಾಲದಲ್ಲಿ ಅವರಿಗೆ ಉತ್ತಮ ಶಿಕ್ಷಣವನ್ನು ಸಹ ಕೊಡಿಸಿದರು. ದಡ ಸೇರಿದ ಮೇಲೆ ಅಂಬಿಗನ ಸಹಾಯ ವೇತಕೆ ಎನ್ನುವಂತೆ ತಾಯಿಯನ್ನು ಮರೆತು ತಮ್ಮ ಜೀವನ ಸಾಗಿಸಿದ್ದಾರೆ. ಇತ್ತ್ ಆ ಬಡ ತಾಯಿಯ ಕಷ್ಟ ಕೇಳುವುರಿಲ್ಲ. ಆಕೆಗೆ ಇರಲು ಒಂದು ಸೂರು ಕೂಡ ಇರಲಿಲ್ಲ. ಇದನ್ನು ಸ್ಥಳೀಯ ಅಧಿಕಾರಿಗೆ ಅದೆಷ್ಟೋ ಬಾರಿ ತಿಳಿಸಿದರೂ ಸಹ ಈ ಮಹಿಳೆಗೆ ಸಹಾಯವಾಗಲಿ, ಅವರ ಪರವಾಗಿ ಯಾವೊಬ್ಬ ಅಧಿಕಾರಿಯೂ ಕೇಳಿಸಿಕೊಳ್ಳುವುದಾಗಲಿ, ಸಹಾಯ ಮಾಡುವುದಾಗಲಿ ಮಾಡಿರಲಿಲ್ಲ.

ಹೊಸ ಜಿಲ್ಲಾಧಿಕಾರಿಯಾಗಿ ಕರೂರು ಜಿಲ್ಲೆಗೆ ಅಣ್ಣಬುಳೋಗಳ್ಳ ಅವರು ವರ್ಗವಾಗಿ ಹೋದರು. ಅಲ್ಲಿಗೆ ಹೋದ ಮೇಲೆ ಅವರಿಗೆ ಉತ್ತಮ ಹೆಸರು ಬಂದಿತ್ತು. ಕಾರಣ ಅವರ ಕಾರ್ಯಗಳು ಉತ್ತಮವಾಗಿದ್ದವು. ಈ ಬಡ ಅಜ್ಜಿಯ ಬಗ್ಗೆ ಗ್ರಾಮಸ್ಥರಿಂದ ತಿಳಿದ ಅಧಿಕಾರಿ ಅವರನ್ನು ಭೇಟಿಯಾಗಲು ಇಚ್ಛೆಸುತ್ತಾರೆ. ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗುತ್ತಿರುವ ಸಮಯದಲ್ಲಿ ತನ್ನ ಮನೆಯಿಂದಲೇ ನಾಟಿಕೋಳಿಯ ಸಾರು, ವಡೆ ಪಾಯಸ ಹಾಗೂ ತನ್ನ ಸ್ವಂತ ದುಡ್ಡಿನಲ್ಲಿ ಎರಡು ಕಾಟನ್ ಸೀರೆಗಳನ್ನು ತೆಗೆದುಕೊಂಡು ಅಜ್ಜಿಯನ್ನು ಭೇಟಿಯಾಗಲು ಗುಡಿಸಲಿಗೆ ಹೋಗುತ್ತಾರೆ. ಅಧಿಕಾರಿಯನ್ನು ಕಂಡ ಅಜ್ಜಿ ಯಾರಪ್ಪ ನೀನು?ನನಗಾಗಿ ಊಟವನ್ನು ಯಾಕೆ ತಂದಿದ್ದೀಯಾ? ನನಗ್ಯಾಕೆ ಇದೆಲ್ಲಾ ತಂದಿದ್ದೀಯಾ ಮಗಾ ಎನ್ನುತ್ತಾಳೆ. ಅದಕ್ಕೆ ಜಿಲ್ಲಾಧಿಕಾರಿಯವರು ನಾನು ನಿಮ್ಮ ದೂರದ ಸಂಬಂಧಿ ಅಜ್ಜಿ ಎಂದು ಸುಳ್ಳು ಹೇಳುತ್ತಾರೆ. ಅಜ್ಜಿ ನಾನು ಈ ತರದ ಊಟವನ್ನು ಮಾಡಿ ಅದೆಷ್ಟೋ ವರ್ಷಗಳೇ ಆಗಿತ್ತು ಎಂದು ಕಣ್ಣೀರು ಹಾಕುತ್ತಾರೆ. ಅಜ್ಜಿಯ ಜೊತೆಗೆ ಅಧಿಕಾರಿ ಅನ್ನಬೆಳಗೊಳ ಅವರು ಕೂಡ ಊಟ ಮಾಡುತ್ತಾರೆ.

Advertisements
Advertisements

ತನ್ನ ಪಕ್ಕದ ಗುಡಿಸಿಲಿನಲ್ಲಿ ಇದ್ದ ಇನ್ನು ವಯಸ್ಸಾದ ಮಹಿಳೆಯರಿಗೂ ಸಹ ಊಟವನ್ನು ಹಂಚಿ ತಿನ್ನುತ್ತಾರೆ. ಇದನ್ನು ಕಂಡ ಅಧಿಕಾರಿ ಅಜ್ಜಿಗೆ ಸರ್ಕಾರದಿಂದ ಬರಬೇಕಾದ ವಿಧವಾ ವೇತನ ಮತ್ತು ರೇಷನ್ ನನ್ನು ಈ ತಿಂಗಳಿನಿಂದಲೇ ಕೊಡುವಂತೆ ಆಜ್ಞಾಪಿಸುತ್ತಾರೆ. ಅದರಂತೆ ಸರ್ಕಾರದಿಂದ ಬರಬೇಕಾದ ಎಲ್ಲ ಸವಲತ್ತು ಕೂಡ ಅಜ್ಜಿಗೆ ಲಭಿಸುತ್ತದೆ. ಇದಾದ ಕೆಲ ದಿನಗಳ ನಂತರ ಅಜ್ಜಿಗೆ ಗೊತ್ತಾಗುತ್ತದೆ ತನ್ನ ಮನೆಗೆ ಬಂದಿದ್ದು ಆ ಜಿಲ್ಲೆಯ ಜಿಲ್ಲಾಧಿಕಾರಿ ಎಂದು. ಆಗ ಅಜ್ಜಿ ಪಶ್ಚಾತ್ತಾಪಪಟ್ಟು ಅಧಿಕಾರಿಯನ್ನು ಭೇಟಿಯಾಗಲು ಹೋಗುತ್ತಾರೆ. ಕ್ಷಮೆಯಾಚಿಸುತ್ತಾರೆ. ಆದರೆ ಜಿಲ್ಲಾ ಅಧಿಕಾರಿ ಹೇಳುತ್ತಾರೆ ನನಗೂ ಒಬ್ಬ ಮಗ ಇದ್ದಾರೆ, ಆತನು ಈ ಜಿಲ್ಲೆಯ ಕಲೆಕ್ಟರ್ ಆಗಿದ್ದಾರೆ ಎಂದು ಹೆಮ್ಮೆಯಿಂದ ಹೇಳಿ ಎನ್ನುತ್ತಾರೆ. ಆ ಮಾತುಗಳನ್ನು ಕೇಳಿಸಿಕೊಂಡ ಅಜ್ಜಿ ಕಣ್ಣೀರಾದರು. ಹೆತ್ತ ನನ್ನ ಮಕ್ಕಳು ನನ್ನನ್ನು ದೂರ ಮಾಡಿದ್ರು. ಆದ್ರೆ ನೀವು ನನ್ನ ಅಮ್ಮ ಅಂದಿದ್ದು ಖುಷಿಯಾಗಿದೆ ಎಂದು ಆನಂದ್ ಬಾಷ್ಪ ಸುರಿಸಿದರು. ಎಲ್ಲರೂ ಈ ಜಿಲ್ಲಾಧಿಕಾರಿಯಂತೆ ಇದ್ದರೆ ವೃದ್ಧಶ್ರಮಗಳು ಹುಟ್ಟಿಕೊಳ್ಳುವುದಿಲ್ಲ.

Leave a Reply

Your email address will not be published.