Advertisements

ಸಾಮಾನ್ಯ ಯುವಕ ಗೂಗಲ್ ಸಿಇಒ ಆಗಿ ಬೆಳೆದ ಕಥೆ..! ಇವರ ಒಂದು ದಿನದ ಸಂಬಳ ಎಷ್ಟು ಗೊತ್ತಾ..?

Inspiration

ನಮಸ್ತೆ ಸ್ನೇಹಿತರೆ, ಸಾಮಾನ್ಯ ಮಧ್ಯಮ ವರ್ಗದ ಹುಡುಗ ಗೂಗಲ್ ಸಿಇಓ ಆಗಿ ಬೆಳೆದ ಕಥೆ ನಿಮಗೆ ಗೊತ್ತಾ, ಭಾರತೀಯ ಮೂಲದ 48 ವರ್ಷದ ಪ್ರಾಯದ ಸುಂದ‌ರ್ ಪಿಚ್ಚೈ ಪುಟ್ಟ ಮಧ್ಯಮ ಕುಟುಂಬದಲ್ಲಿ ಜನಿಸಿ ಇಂದು ಜಗತ್ತಿನ ಪ್ರತಿಷ್ಟಿತ ಸಂಸ್ದೆ ಗೂಗಲ್ ವರೆಗೆ ಪ್ರಯಾಣ ಬೆಳೆಸಿರುವುದು ನಿಜಕ್ಕೂ ಎಲ್ಲರಿಗೂ ಪ್ರೇರಣೆ. ಇನ್ನು ಇವರ ಮೊಬೈಲ್ ನಲ್ಲಿ ಯಾರದೇ ವ್ಯಕ್ತಿಯ ಸಂಪರ್ಕ ಸಂಖ್ಯೆ ಸೇವ್ ಆಗಿಲ್ಲ. ಎಲ್ಲಾ ಆಪ್ತರ, ಸಹೋದ್ಯೋಗಿಗಳ ನಂಬರ್ ಅವರ ತಲೆಯಲ್ಲಿ ಸೇವ್ ಆಗಿರುತ್ತದೆ. ಇಂತಹ ವಿಶಿಷ್ಟ ರೀತಿಯ ವ್ಯಕ್ತಿ ದಕ್ಷಿಣ ಭಾರತದವರು ಎಂಬುದು ಹೆಮ್ಮೆಯ ಸಂಗತಿ.

Advertisements
Advertisements

ಜೂನ್ 10 1972 ರಂದು ತಮಿಳುನಾಡಿನ ಮಧುರೈಯಲ್ಲಿ ಸುಂದರ್ ಪಿಚ್ಚೈ ಜನಿಸುತ್ತಾರೆ. ಸುಂದರ್ ಅವರಿಗೆ ಬಾಲ್ಯದಿಂದಲು ಆಗಾದ ಬುದ್ದಿ ಶಕ್ತಿಯ ಜೊತೆಗೆ ಜ್ಞಾಪಕ ಶಕ್ತಿ ಆ’ಧಿಕವಾಗಿತ್ತು. ಅದು ಎಷ್ಟರ ಮಟ್ಟಿಗೆ ಅಂದರೆ ತಮ್ಮ ಮನೆಯಲ್ಲಿದ್ದ ಟೆಲಿಫೋನ್ ಡೈರಿಯ ಎಲ್ಲಾ ಕಾಂಟ್ಯಾಕ್ಟ್ ನಂಬರ್ ಅನ್ನು ಬಾಯಿಪಾಠ ಮಾಡಿ ನೆನಪಿನಲ್ಲಿ ಇಟ್ಟುಕೊಳ್ಳುವಷ್ಟು. ಇವರು ವಿಧ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿದ್ದ ಕಾರಣ ಇವರಿಗೆ ಬ’ಡತನ ಅ’ಡ್ಡಿಯಾಗಿರಲಿಲ್ಲ. ತಮ್ಮ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಮದ್ರಾಸ್ ನಲ್ಲಿ ಪೂರೈಸುತ್ತಾರೆ. ತದ ನಂತರ ಖಾರಕ್ ಪುರದ ಇಂಡಿಯನ್ ಇನ್ಸಿಟ್ಯುಟ್ ನಲ್ಲಿ ಲೋಹ ಶಾಸ್ತ್ರದಲ್ಲಿ ಇಂಜಿನಿಯರಿಂಗ್ ಪದವಿ ಪಡೆಯುತ್ತಾರೆ.

ನಂತರ ‌ಅಮೇರಿಕಾದ ಸ್ಟನ್ಫರ್ಡ್ ವಿಶ್ವವಿಧ್ಯಾಲಯದಲ್ಲಿ ಮೆಟಿರಿಯಲ್ಸ್ ವಿಭಾಗದಲ್ಲಿ ಎಂಎಸ್ ಪದವಿ ಪಡೆದ ಸುಂದರ್ ಪಿಚ್ಚೈ 2002 ರಲ್ಲಿ ಅಲ್ಲಿನ ಪೆನ್ಸಿಲ್ವಿನಿಯಾ ಸ್ಕೂಲ್ ನಲ್ಲಿ ಎಂಬಿಎ ಪದವಿ ಕೂಡ ಪಡೆಯುತ್ತಾರೆ. 2004 ರಲ್ಲಿ ಗೂಗಲ್ ಸಂಸ್ಥೆಯ ಉದ್ಯೋಗಿಯಾಗಿ ಸೇರಿಕೊಂಡರು. ಗೂಗಲ್ ಸರ್ಚ್ ಟೋನ್ ಬಾರ್ ತಾಂತ್ರಿಕ ವಿಭಾಗದ ಪುಟ್ಟ ತಂಡದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾಗ ಅಂದು ಇಂಟರ್ನೆಟ್ ಎಕ್ಸ್ ಪ್ಲೋರರ್ ಮೂಲಕವೇ ಗೂಗಲ್, ಯಾಹೂ ಸರ್ಚ್ ಮಾಡಬೇಕಾಗಿತ್ತು. ಗೂಗಲ್ ಸರ್ಚ್ ಟೂಲ್ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಸುಂದರ್ ಪಿಚ್ಚೈಗೆ ವಿನೂತನವಾದ ಐಡಿಯಾ ಹೊ’ಳೆದಿತ್ತು. ಅದೇನಪ್ಪಾ ಅಂದರೆ ಇತರೆ ವೆಬ್ ಸರ್ಚ್ ನಲ್ಲಿ ಗೂಗಲ್ ಸರ್ಚ್ ಮಾಡೋ ಬದಲು ಗೂಗಲ್ ಅನ್ನೇ ಸರ್ಚ್ ಇಂಜಿನ್ ಆಗಿ ಅಭಿವೃದ್ದಿ ಪಡಿಸಬಹುದು ಎಂಬುದು. ಇದನ್ನು ತನ್ನ ತಂಡದೊಂದಿಗೆ ಹಾಗೂ ಅಂದಿನ ಗೂಗಲ್ ಸಿಇಓ ಅವರಿಗೆ ತಿಳಿಸಿದಾಗ ಅಧಿಕವಾಗಿ ಖರ್ಚಾಗುತ್ತದೆ ಎಂದು ಸುಂದರ್ ಪಿಚ್ಚೈ ಅವರ ಆಲೋಚನೆಯನ್ನ ತಿ’ರಸ್ಕಾರ ಮಾಡಿದರು.

ತದ ನಂತರ ಸರ್ಚ್ಬಾರ್ ನಲ್ಲಿ ಕೆಲವು ಸುಧಾರಣೆ ತರಲು ಯತ್ನಿಸಿದ ಸುಂದರ್ ಪಿಚ್ಚೈ ತಂಡದ ಫಲವಾಗಿ ಗೂಗಲ್ ಕ್ರೋಮ್ ಅಭಿವೃದ್ದಿ ಪಡಿಸಲಾಯಿತು. 2010 ರಷ್ಟರಲ್ಲಿ ಗೂಗಲ್ ಕ್ರೋಮ್ ಭಾರಿ ಫೇಮಸ್ ಸರ್ಚ್ ಬಾರ್ ಆಗಿ ಹೊರಹೊಮ್ಮಿತು. ಈ ಮೂಲಕ ಸುಂದರ್ ಪಿಚ್ಚೈ ವಿಶ್ವವಿಖ್ಯಾತರಾದರು. ಹೀಗೆ ಜಗತ್ತಿನ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಜೀವನದ ಹಾದಿಯನ್ನು ಹಂಚಿಕೊಂಡು ಹೊಸ ಉದ್ಯಮಿಗಳಿಗೆ ಮೋಟಿವೇಶನ್ ಮಾಡುತ್ತಿದ್ದರು. ಇದಾದ ಬಳಿಕ ಕ್ರೋಮ್ ಓಎಸ್, ಗೂಗಲ್ ಕ್ರೋಮ್, ಫೈರ್ ಫಾಕ್ಸ್ ಸರ್ಚ್ ಇಂಜಿನ್ ಗಳು ಪ್ರಪಂಚದ ಟಾಪ್ ಸರ್ಚ್ ಇಂಜಿನ್ ಗಳಾಗಿ ಬೆಳೆದವು.

2015 ರಲ್ಲಿ ಸುಂದರ್ ಪಿಚ್ಚೈ ಗೂಗಲ್ ಸಂಸ್ಥೆಯ ಸಿಇಓ ಆಗಿ ತದ ನಂತರ ಆಲ್ಫಬೆಟ್ ಇಂಕ್ ಬೋರ್ಡ್ ಸದಸ್ಯರು ಕೂಡ ಆದರು. ಇದೇ ಸಮಯದಲ್ಲಿ ಪ್ರತಿಷ್ಟಿತ ಸೋಶಿಯಲ್ ಮೀಡಿಯಾಗಳಾದ ಟ್ಟಿಟ್ಟರ್, ಫೇಸ್ಬುಕ್ ಸಂಸ್ಥೆಗಳು ಕೂಡ ಆಫರ್ ನೀಡಿದಾಗ ಅದನ್ನು ತಿರಸ್ಕರಿಸಿ ಗೂಗಲ್ ಕಂಪನಿಯಲ್ಲಿ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಒಂದು ದಿನದ ಸ್ಯಾಲರಿ ಸುಮಾರು 6ಕೋಟಿ. ಇವರು ಇನ್ನೂರು ಮಿಲಿಯನ್ ಆದಾಯ ಹೊಂದಿರುವ ಭಾರತೀಯ ಮೂಲದ ಅಮೇರಿಕನ್ನರಾಗಿದ್ದಾರೆ. ಸಣ್ಣ ಹಳ್ಳಿಯಿಂದ ಬೆಳೆದುಬಂದ ಸುಂದರ್ ಪಿಚ್ಚೈ ಅವರು ಇಂದು ಜಗತ್ತಿನಾದ್ಯಂತ ಗುರುತಿಸಿಕೊಂಡಿರುವ ಯಶಸ್ವಿ ವ್ಯಕ್ತಿಯಾಗಿ ಬೆಳೆದು ನಿಂತಿದ್ದಾರೆ. ಸುಂದರ್ ಪಿಚ್ಚೈಯವರ ಯಶಸ್ಸಿನ ಕಥೆಯ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.