ತೆಲುಗು ಚಿತ್ರರಂಗದಲ್ಲಿ ಎನ್. ಟಿ. ಆರ್ ಕುಟುಂಬ ಎಂದರೆ ತುಂಬಾ ಪ್ರಸಿದ್ಧ, ಮತ್ತು ಹೆಸರುವಾಸಿಯಾದ ಕುಟುಂಬ. ಒಂತರ ಕನ್ನಡದಲ್ಲಿ ದೊಡ್ಡಮನೆ ಇದ್ದಂಗೆ. ದಾನ, ಧರ್ಮ ಸಮಾಜ ಸೇವೆಗೆ ಸದಾ ಟೊಂಕ ಕಟ್ಟಿ ನಿಂತ ಮನೆತನ ಎಂದು ಹೇಳಿದರೆ ತಪ್ಪಾಗಲಾರದು. ಎನ್. ಟಿ. ಆರ್ ಅವರು ರಾಜಕೀಯದಲ್ಲೂ ಹೆಸರು ಮಾಡಿದವರು. ಸದಾ ಬಡವರ ಏಳ್ಗೆಗೆ ಶ್ರಮಿಸಿದವರು. ಇದೀಗ ಇವರ ಮೊಮ್ಮಗ ಜೂನಿಯರ್ ಎನ್. ಟಿ. ಆರ್ ಕೂಡಾ ಅದೇ ದಾರಿಯಲ್ಲಿ ನಡೆಯುತ್ತಿದ್ದಾರೆ.
ಇವರ ತಾಯಿ ಕುಂದಾಪುರದವರು. ಇವರು ನೋಡಿದ ಹುಡುಗಿಯನ್ನೇ ಜೂನಿಯರ್ ಎನ್.ಟಿ.ಆರ್ ಕಣ್ಣುಮುಚ್ಚಿ ತಾಳಿ ಕಟ್ಟಿದ್ದಾರಂತೆ. ಅವರು ಯಾವ್ ಜಿಲ್ಲೆಯವರು ಅಂತ ತಿಳಿಯೋಣ ಬನ್ನಿ. ಜೂನಿಯರ್ ಎನ್ಟಿಆರ್ ಅವರು ಲಕ್ಷ್ಮಿ ಪ್ರಣತಿ ಎನ್ನುವವರನ್ನು 2011ರಲ್ಲಿ ಬಹು ಅದ್ದೂರಿಯಾಗಿ ವಿವಾಹವಾದರು. ಇನ್ನು ಇವರಿಬ್ಬರ ಮದುವೆಗೆ ಜೂನಿಯರ್ ಎನ್ಟಿಆರ್ ಬರೋಬ್ಬರಿ ನೂರು ಕೋಟಿ ವೆಚ್ಚ ಮಾಡಿ ವಿವಾಹವಾಗಿದ್ದಾರೆ ಎನ್ನಲಾಗಿದೆ. ಒಬ್ಬ ಸ್ಟಾರ್ ನಟರ ಮದುವೆ ಅಂದರೆ ಅಲ್ಲಿ ಸೆಲೆಬ್ರೆಟಿಗಳು ವಿಐಪಿ ಗಳು ಇದ್ದೇ ಇರುತ್ತಾರೆ.
ಇವರ ಇನ್ನೊಂದು ವಿಶೇಷ ಗುಣವನ್ನು ಹೇಳಲೇ ಬೇಕು. ಜೂನಿಯರ್ ಎನ್ಟಿಆರ್ ತಂದೆ ತಾಯಿ ನೋಡಿದ ಹುಡುಗಿಯನ್ನೇ ಮದುವೆ ಆಗುತ್ತೇನೆ. ಮದುವೆ ಆಗುವರೆಗೂ ಯುವತಿಯೊಂದಿಗೆ ಮಾತನಾಡುವುದಾಗಲಿ, ಮೀಟ್ ಮಾಡುವುದಾಗಲಿ, ನೋಡುವುದನ್ನು ಮಾಡುವುದಿಲ್ಲ. ತಾಳಿ ಕಟ್ಟಿದ ಮೇಲೆ ಪತ್ನಿಯ ಮುಖ ನೋಡುವುದಾಗಿ ಮಾತು ನೀಡಿದ್ದರು. ಹಾಗೆ ನಡೆದುಕೊಂಡರು. ತಂದೆಯವರದ ನಂದಮೂರಿ ಆರ್ ಆರ್ ಚಿತ್ರದ ಯಶಸ್ಸಿನ ನಂತರ ಇದೀಗ ತನ್ನ 30ನೇ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. ಕೊರಟಾಲ ಶಿವ ಅವರ ಜೊತೆ ತಮ್ಮ 30ನೇ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಎನ್ ಟಿ ಆರ್. ಈ ಸಿನಿಮಾದ ಬಳಿಕ ಕೆಜಿಎಫ್ ಸಿನಿಮಾದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾದಲ್ಲು ಎನ್ ಟಿಆರ್ ನಟಿಸಲಿದ್ದಾರೆ. ಜೂನಿಯರ್ ಎನ್ಟಿಆರ್ ಅವರು ಮೊದಲೇ ಅತ್ಯುತ್ತಮ ನಟ ಎನಿಸಿಕೊಂಡವರಾಗಿದ್ದು ಇದೀಗ ಈ ಎರಡು ಚಿತ್ರಗಳೂ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿವೆ.ಇವರ ಪತ್ನಿ ಲಕ್ಷ್ಮಿ ಪ್ರಣತಿ ಕೂಡಾ ತಾಯಿ ಊರಾದ ಕುಂದಾಪುರದವರು. ಹೀಗಾಗಿ ತಾಯಿಯ ಮುದ್ದಿನ ಸೊಸೆಯಾಗಿದ್ದಾರೆ.