Advertisements

ದೊಡ್ಡ ಖಾಯಿಲೆಯಿಂದ ನರಳುತ್ತಿರುವ ಕಮಲ್ ಹಾಸನ್ ಪುತ್ರಿ ಶೃತಿ! ದುಃಖದಲ್ಲಿ ಕಮಲ್ ಹಾಸನ್.. ಏನಾಗಿದೆ ನೋಡಿ.

Cinema

ಸದ್ಯ ಬಹುಭಾಷಾ ನಟಿ ಶೃತಿ ಹರಿಹರನ್ ನಾನು ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ ಸಮಸ್ಯೆ ಎದುರಿಸುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೊವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ನಟಿ ತಮ್ಮ ಆರೋಗ್ಯ ಕುರಿತಾದ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನೊಂದಿಗೆ ನೀವು ವರ್ಕೌಟ್‌ ಮಾಡಿದ್ದು ನಾನು ಎಂಡೋಮೆಟ್ರಿಯೋಸಿಸ್‌ನೊಂದಿಗೆ ಹಾರ್ಮೋನ್ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಹೌದು ಇದೊಂದು ನೈಸರ್ಗಿಕ ಕ್ರಿಯೆ ಎಂದು ನನಗೆ ಗೊತ್ತಿದ್ದರೂ ಅದರೊಂದಿಗೆ ಹೋರಾಟ ಮಾಡಲೇಬೇಕಿದೆ. ಶೂಟಿಂಗ್ ನಡುವೆಯೂ ನಿತ್ಯ ವ್ಯಾಯಾಮ ಮಾಡುತ್ತಿದ್ದು ಸರಿಯಾದ ಊಟ ಮತ್ತು ವೇಳೆಗೆ ಸರಿಯಾಗಿ ನಿದ್ದೆ ಮಾಡಬೇಕಿದೆ.

Advertisements
Advertisements

ಸದಾ ಸಂತೋಷದಿಂದ ಇರುವುದೇ ಇದಕ್ಕೆ ಪರಿಹಾರ ಎಂದು ಹಲವರು ಸೂಚಿಸಿದ್ದಾರೆ. ಹಾಗಾಗಿ ನಾನು ಸದಾ ಲವಲವಿಕೆಯಿಂದ ಇರುವುದಕ್ಕೆ ಪ್ರಯತ್ನಿಸುತ್ತಿದ್ದೇನೆ ಎಂದು ಶ್ರುತಿ ಹಾಸನ್ ಬರೆದುಕೊಂಡಿದ್ದಾರೆ.ವೈದ್ಯಕೀಯ ಸಂಶೋಧನೆಯ ಪ್ರಕಾರ ಶೇ 5-25ರಷ್ಟು ಮಹಿಳೆಯರಲ್ಲಿ ಪಿಸಿಓಎಸ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು ಇದರಿಂದಾಗಿ ಋತುಚಕ್ರ ಹಾರ್ಮೋನ್‍ಗಳಲ್ಲಿ ಏರುಪೇರಾಗುತ್ತಿದೆ. ಹೌದು ಗರ್ಭಧಾರಣೆ ಸಾಮರ್ಥ್ಯದಲ್ಲೂ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದುಇದ್ದಕ್ಕಿದ್ದಂತೆ ತೂಕ ಹೆಚ್ಚಳ ಮುಖದ ಮೇಲೆ ಕೂದಲು ಬರುವುದು ಮೊಡವೆ ತಲೆ ಕೂದಲು ಉದುರುವುದು ಈ ರೀತಿಯ ಸಮಸ್ಯೆ ಕಾಣಿಸಿಕೊಂಡಲ್ಲಿ ಪಿಸಿಓಎಸ್ ಪರೀಕ್ಷೆ ಮಾಡಿಸುವುದು ಒಳಿತು ಎಂಬುದು ವೈದರ ಸಲಹೆಯಾಗಿದೆ.

ಈ ಸಮಸ್ಯೆ ಅನುವಂಶೀಯತೆಯಿಂದ ಉಂಟಾಗುವುದು. ತಾಯಿ ಚಿಕ್ಕಮ್ಮ ಅಕ್ಕ-ತಂಗಿ ಸೇರಿದಂತೆ ವಿವಿಧ ಸಂಬಂಧಿಗಳಲ್ಲಿ ಈ ಸಮಸ್ಯೆಗಳಿದ್ದಲ್ಲಿ ಪರೀಕ್ಷೆ ಮಾಡಿಕೊಳ್ಳುವುದು ಒಳಿತಾಗಿದ್ದು ಪಿಸಿಒಎಸ್ ಸಮಸ್ಯೆ ಇರುವವರಿಗೆ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವುದಿಲ್ಲ.ಇವುಗಳು ನೋಡುವುದಕ್ಕೆ ಮುತ್ತುಗಳ ತರಹವೇ ಕಾಣಿಸುತ್ತವೆ. ಈ ಕಾರಣದಿಂದಾಗಿ ಗರ್ಭಧಾರಣೆಯಾಗುವುದಿಲ್ಲ.ವ್ಯಾಯಾಮ ಮಾಡದಿರುವುದು ಅನಾರೋಗ್ಯಕರ ಜೀವನಶೈಲಿ ಹಾಗೂ ಹಾರ್ಮೋನ್‌ಗಳ ಅಸಮತೋಲನ ಅತ್ಯಧಿಕ ಮಾನಸಿಕ ಒತ್ತಡ ಕೊಬ್ಬಿನ ಪದಾರ್ಥಗಳ ಸೇವನೆ ಪಿಸಿಒಎಸ್ ಸಮಸ್ಯೆ ಉಲ್ಬಣ ಗೊಳ್ಳಲು ಪ್ರಮುಖ ಕಾರಣವಾಗಿದ್ದು ಈ ಸಮಸ್ಯೆ ಬರುವುದನ್ನು ಆರೋಗ್ಯಕರ ಜೀವನಶೈಲಿ ಪಾಲಿಸುವ ಮೂಲಕ ತಡೆಗಟ್ಟಬಹುದು‌.

ದೈಹಿಕ ವ್ಯಾಯಾಮ ಹಾಗೂ ಆರೋಗ್ಯಕರ ಆಹಾರಕ್ರಮ ಪಾಲಿಸುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದ್ದು ಇಷ್ಟಾಗಿಯೂ ಸಮಸ್ಯೆ ನಿವಾರಣೆಯಾಗದಿದ್ದಲ್ಲಿ ಅಂಡಾಶಯವನ್ನು ಕೊರೆಯುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇದರಲ್ಲಿ ಸಣ್ಣ ಎಲೆಕ್ಟ್ರಾನಿಕ್ ಸೂಜಿ ಬಳಸಿ, ಅಂಡಾಶಯದಲ್ಲಿ ಚಿಕ್ಕರಂಧ್ರ ಮಾಡಲಾಗುತ್ತದೆ. ಈ ಮೂಲಕ ಟೆಸ್ಟೋಸ್ಟಿರೋನ್ ಉತ್ಪತ್ತಿಯನ್ನು ತಗ್ಗಿಸಿ ಅಂಡೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲಾಗುತ್ತದೆ.