ನಮಸ್ತೆ ಸ್ನೇಹಿತರೆ ಎಲ್ಲರಿಗೂ ತಮ್ಮ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಎಂಬ ಛಲವಿರುತ್ತದೆ. ಕೆಲವರು ಕನಸಿನ ಬೆನ್ನತ್ತಿ ನಿರಂತರ ಶ್ರಮದಿಂದ ಯಶಸ್ವಿಯಾಗುತ್ತಾರೆ. ನೆಚ್ಚಿನ ಒಂದು ಕಾರು ಹಾಗೂ ಒಂದು ಸುಂದರ ಮನೆ ಇದು ಕೋಟ್ಯಾಂತರ ಮಧ್ಯಮ ವರ್ಗದ ಜನರ ಕನಸಾಗಿರುತ್ತದೆ. ಅದರಂತೆಯೇ ಇಲ್ಲೊಬ್ಬ ಕನ್ನಡದ ನಟಿ ಕೊನೆಗೂ ತಮ್ಮ ಬಹಳ ದಿನಗಳಿಂದ ಕಂಡ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಈ ಕನ್ನಡದ ಪ್ರಸಿದ್ಧ ನಟಿ ತಮ್ಮ ಕನಸಿನ ಐಷಾರಾಮಿ ಬಿಎಂಡಬ್ಲ್ಯೂ330li ಎಂಬ ಕಾರ್ ತೆಗೆದುಕೊಂಡಿದ್ದರು, ಇದನ್ನು ಸ್ವತಃ ಅವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಖುಷಿ ಪಟ್ಟಿದ್ದಾರೆ. ಈ ಕಾರಿನ ಶೋರೂಮ್ ಬೆಲೆಯು ಸುಮಾರು ಅರವತ್ತು ಲಕ್ಷ. ಅಷ್ಟಕ್ಕೂ ಈ ನಟಿ ಯಾರು ಎಂದು ನಿಮಗೆ ಸಂದೇಹ ಮೂಡಿರುತ್ತದೆ. ಈ ನಟಿ ಯಾರು ಅಲ್ಲ, ಅವರೇ ಕಾರುಣ್ಯಾ ರಾಮ್.

ಸ್ಯಾಂಡಲ್ ವುಡ್ ನಟಿ ಹಾಗೂ ಬಿಗ್ ಬಾಸ್ ಸೀಸನ್4 ರ ಸ್ಪರ್ಧಿ ಆಗಿದ್ದ ಕಾರುಣ್ಯ ರಾಮ್ ಇತ್ತೀಚೆಗೆ ಐಷರಾಮಿ BMW ಕಾರು ಖರೀದಿ ಮಾಡಿ ಸುದ್ದಿಯಾಗಿದ್ದರು, ಇದೀಗ ನೂತನ ಮನೆಯ ಗೃಹ ಪ್ರವೇಶ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ. ‘ಕಳೆದೊಂದು ವರ್ಷದಿಂದ ಒಂದೊಳ್ಳೆ ಮನೆಗಾಗಿ ಹುಡುಕಾಟ ಮಾಡುತ್ತಿದ್ದೆವು. ಕೊನೆಗೂ ನಮಗೆ ಇಷ್ಟವಾಗುವ ಪ್ರೀತಿಯಲ್ಲಿ ಈ ಮನೆ ಸಿಕ್ಕಿದೆ. ಲಾಕ್ಡೌನ್ ಆಗುವ ಮುಂಚೆಯೇ ಹೊಸ ಮನೆಯ ಗೃಹ ಪ್ರವೇಶ ಮಾಡುವ ಯೋಜನೆ ಮಾಡಿಕೊಂಡಿದ್ದೆವು. ಹಾಗಾಗಿ ವಿಶೇಷವಾಗಿ ಶುಭದಿನವಾದ ಅಕ್ಷಯ ತೃತೀಯ ದಿನದಂದು ಹಾಲು ಉಕ್ಕಿಸುತ್ತಿದ್ದೇವೆ ಎಂದು ನಟಿ ಕಾರುಣ್ಯ ತಿಳಿಸಿದ್ದಾರೆ’. ತಮ್ಮ ತಂದೆ ತಾಯಿ ತಂಗಿಯ ಜೊತೆ ಸರಳವಾಗಿ ಗೃಹ ಪ್ರವೇಶ ಕಾರ್ಯಕ್ರಮ ನಡೆಸಿದ್ದಾರೆ.

ನಟಿ ಕಾರುಣ್ಯ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ, ‘ನೀವು ಕನಸು ಕಂಡರೆ ಗೆಲುವು ಸಾಧಿಸಬಹುದು ಕೊನೆಗೆ ನನ್ನ ಇನ್ನೊಂದು ಕನಸು ಇದೀಗ ನೆರೆವೇರಿದೆ’. ಅಷ್ಟೇ ಅಲ್ಲದೆ ಹೊಸ ಮನೆಯ ಗೃಹ ಪ್ರವೇಶ ಸಂಭ್ರಮದ ಒಂದಷ್ಟು ಫೋಟೋಗಳನ್ನು ಸಹ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಟೋಗಳಲ್ಲಿ ಕಾರುಣ್ಯ ರಾಮ್ ಅವರ ಸೋದರಿ ಮತ್ತು ತಂದೆ ತಾಯಿಗಳು ಹಾಜರಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ವಜ್ರಕಾಯ ಚಿತ್ರದಲ್ಲಿ ಕಾರುಣ್ಯ ರಾಮ್ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ, ಎರಡು ಕನಸು, ಕಿರಗೂರಿನ ಗಯ್ಯಾಳಿಗಳು, ಮನೆ ಮಾರಾಟಕ್ಕಿದೆ ಹೀಗೆ ಸುಮಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ನಟಿ ಕಾರುಣ್ಯಾ ರಾಮ್ ಒಂದಷ್ಟು ರಿಯಾಲಿಟಿ ಶೋಗಳ ಜೊತೆಗೆ ತಕ ಧಿಮಿತಾ ಡ್ಯಾನ್ಸ್ ಶೋನಲ್ಲಿ ರನ್ನರ್ ಅಪ್ ಆಗಿ ಮಿಂಚಿದ್ದರು. ಬಿಗ್ ಬಾಸ್ ಸೀಸನ್ 4ರ ಸ್ಪರ್ಧಿಯಾಗಿ ಸಹ ಭಾಗವಹಿಸಿದ್ದರು. ಕಷ್ಟ ಪಟ್ಟರೆ ಎಲ್ಲವೂ ಸಾಧ್ಯ ಎಂದು ಈ ನಟಿಯನ್ನು ನೋಡಿದರೆ ತಿಳಿಯುತ್ತದೆ.. ಈ ನಟಿಯ ಬಗ್ಗೆ ನೀವೇನಂತಿರಾ ಸ್ನೇಹಿತರೆ..