Advertisements

ರೈತರಿಂದ ನೇರವಾಗಿ ತರಕಾರಿಗಳನ್ನು ಖರೀದಿ ಮಾಡಿ ಬಡವರಿಗೆ ಹಂಚುತ್ತಿದ್ದಾರೆ ಕನ್ನಡದ ಸ್ಟಾರ್ ನಟ, ನೀವೂ ಕೂಡಾ ನಿಮ್ಮ ಬೆಳೆಯನ್ನು ಕಳುಹಿಸಬೇಕೇ.. ಈ ನಂಬರ್ ಇದೆ ನೋಡಿ…

Inspiration

ಕೋ’ವಿಡ್19 ಬಿಕ್ಕಟ್ಟು ದೇಶದಾದ್ಯಂತ ಸಂದಿಗ್ಧ ಪರಿಸ್ಥಿತಿ ನಿರ್ಮಾಣ ಉಂಟುಮಾಡಿದೆ, ಕೊ’ರೋನ ವೈ’ರಸ್ ಎರಡನೇ ಅಲೆಯಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ತುಂಬಾ ಏರಿಕೆಯಾಗಿದೆ. ಹಾಗಾಗಿ ರಾಜ್ಯದಲ್ಲಿ ಕೋ’ವಿಡ್19 ಪ್ರಕರಣಗಳನ್ನು ನಿಯಂತ್ರಣ ಮಾಡುವ ಸಲುವಾಗಿ ರಾಜ್ಯ ಸರ್ಕಾರ ಕೋ’ವಿಡ್ ಲಾ‌ಕ್ ಡೌನ್ ಜಾರಿಮಾಡಿದೆ. ಕಠಿಣ ಮಾರ್ಗಸೂಚಿಯನ್ನು ಆದೇಶಿಸಿ ಲಾಕ್ಡೌನ್ ಜಾರಿ ಮಾಡಲಾಗಿದೆ. ಇದರ ಪರಿಣಾಮ ವಾಣಿಜ್ಯ ವ್ಯವಹಾರ ಚಟುವಟಿಕೆ ಸೇರಿದಂತೆ ಹಲವು ಚಟುವಟಿಕೆಗಳು ಕೂಡ ಸಂಪೂರ್ಣ ಸ್ಥಗಿತಗೊಂಡಿದೆ. ಲಾಕ್ಡೌನ್, ನಿ’ರುದ್ಯೋಗ, ಆರ್ಥಿಕ ಸ’ಮಸ್ಯೆಯಿಂದಾಗಿ ಸಿನಿಮಾರಂಗದ ಕಾರ್ಮಿಕರು ಕೂಡ ಜೀವನ ನಡೆಸಲು ಕ’ಷ್ಟ ಪಡುತ್ತಿದ್ದಾರೆ.

Advertisements
Advertisements

ಹಾಗಾಗಿ ನಟ ಉಪೇಂದ್ರ ಚಿತ್ರರಂಗದಲ್ಲಿ ಅಗತ್ಯ ಇರುವ ಕಲಾವಿದರ ಕುಟುಂಬಗಳಿಗೆ‌ ಹಾಗೂ ಇತರೆ ಕಾರ್ಮಿಕರ ಕುಟುಂಬಗಳಿಗೆ ಅಗತ್ಯ ಆಹಾರಧಾನ್ಯ ಕಿಟ್ ನೀಡುವ ಒಳ್ಳೆಯ ಕಾರ್ಯಕ್ಕೆ ಚಾಲನೆ ನೀಡಿದ್ದರು. ಇವರ ಜೊತೆಯಾಗಿ ನಟ ಸಾಧುಕೋಕಿಲ, ಶೋಭರಾಜ್, ನಿರ್ದೇಶಕ ಪವನ್ ಒಡೆಯರ್ ಆರ್ಥಿಕವಾಗಿ ದೇಣಿಗೆ ನೀಡಿ ನೆರವಾಗಿದ್ದರು. ಇವರೆಲ್ಲರ ಸಹಕಾರದೊಂದಿಗೆ ಉಪೇಂದ್ರ ಅವರು ತಮ್ಮ ಮನೆ ಬಳಿ ಕನ್ನಡ ಚಲನಚಿತ್ರರಂಗದ ಕಾರ್ಮಿಕರು ಸಂಬಂಧಿಸಿದ ವಿಭಾಗವಾರು ಐಡಿ ಕಾರ್ಡ್ ತೋರಿಸಿ ಆಹಾರ ಧಾನ್ಯ ಕಿಟ್ ಪಡೆಯುವ ವ್ಯವಸ್ಥೆ ಮಾಡಿದ್ದಾರೆ..

ಇದರ ಜೊತೆಗೆ ಇದೀಗ ಉಪೇಂದ್ರ ಅವರು ರೈತರಿಗೂ ಸಹ ನೆರವಾಗಿ ನಿಂತಿದ್ದಾರೆ. ರಾಜ್ಯದಲ್ಲಿ ಲಾಕ್ ಡೌನ್ ಇರುವ ಕಾರಣ ಕೃಷಿ ಕ್ಷೇತ್ರಕ್ಕೂ ಕೂಡ ಬಹಳ ಏ’ಟು ಬಿದ್ದಿದೆ. ಬೆಳೆದ ಬೆಳೆಗೆ ಬೆಲೆ ಇಲ್ಲದೆ ರೈತರು ತಾವು ಬೆಳೆದ ಹೂವು, ತರಕಾರಿಗಳನ್ನು ರಸ್ತೆಗೆ ಸುರಿದು ಹೋಗುತ್ತಿದ್ದಾರೆ. ಈ ಸಂಧರ್ಭದಲ್ಲಿ ಉಪೇಂದ್ರ ತಾವು ನೀಡುತ್ತಿರುವ ಆಹಾರಧಾನ್ಯ ಕಿಟ್ ಜೊತೆಗೆ ತರಕಾರಿ ನೀಡಲು ಪ್ಲಾನ್ ಮಾಡಿದ್ದಾರೆ. ಅದಕ್ಕಾಗಿ ರೈತರಿಂದ ಅವರು ಬೆಳೆದ ತರಕಾರಿಗಳನ್ನು ಸೂಕ್ತ ಬೆಲೆಗೆ ತೆಗೆದುಕೊಂಡು ರೈತರಿಗೂ ಒಳ್ಳೆಯ ಬೆಲೆ ಸಿಗುವಂತೆ ನೆರವು ನೀಡಿದ್ದಾರೆ…

ಇದರ ಬಗ್ಗೆ ಉಪೇಂದ್ರ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ, ರೈತರ ಗಮನಕ್ಕೆ, ನೀವು ಹಂಚಿಕೊಳ್ಳಬೇಕಾದ ಮಾಹಿತಿ ನೀವು ಬೆಳೆದ ಬೆಳೆ ಯಾವುದು, ಆ ಬೆಳೆ ಎಷ್ಟು ಕೆಜಿ/ಕ್ವಿಂಟಾಲ್ ಇದೆ, ಅದರ ಅಂತಿಮ ಬೆಲೆ ಎಷ್ಟು ಅದನ್ನು ಬೆಂಗಳೂರಿಗೆ ಸಾಗಿಸಲು ಸಾರಿಗೆ ವೆಚ್ಚ ಎಷ್ಟು, ಈ ವಿವರಗಳನ್ನು ದಯವಿಟ್ಟು ಕಳಿಸಿಕೊಡಿ ಎಂದು ಹೇಳಿದ್ದಾರೆ.. ಉಪೇಂದ್ರ ಅವರಿಗೆ ವಿವರಗಳನ್ನು ಕಳುಹಿಸಿಕೊಡುವ ವಾಟ್ಸ್ಅಪ್ ನಂಬರ್ 9845763396. ಇವರ ಈ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ರೈತರು ನೇರವಾಗಿ ಕರೆಮಾಡಿ ತಾವು ಬೆಳೆದ ತರಕಾರಿಯನ್ನು ನೀಡಿದ್ದಾರೆ. ಕಾರ್ಮಿಕರಿಗೆ ರೈತರಿಂದ ಕೊಂಡ ತರಕಾರಿಗಳನ್ನು ಆಹಾರಧಾನ್ಯ ಕಿಟ್ ಜೊತೆಗೆ ನೀಡುತ್ತಿದ್ದಾರೆ. ಉಪೇಂದ್ರ ಅವರ ಈ ಪ್ಲಾನ್ ಬಗ್ಗೆ ನೀವು ಏನು ಹೇಳುತ್ತೀರ ಸ್ನೇಹಿತರೆ…