Advertisements

ಎಲ್ಲಾ ದಾಖಲೆಗಳನ್ನು ಅಡ್ಡಡ್ಡ ಉದ್ದುದ್ದ ಮಲಗಿಸಿದ ನಟ ರಿಷಬ್ ಶೆಟ್ಟಿ! ಅಬ್ಬಾ 6 ದಿನದಲ್ಲಿ ಕಾಂತಾರ ಸಿನಿಮಾ ಬಾಚಿದ್ದು ಅದೆಷ್ಟು ಕೋಟಿ ಗೊತ್ತಾ? ನೋಡಿ..

Cinema

ಪ್ರೀಯ ಓದುಗರೇ ಕೆಲದಿನಗಳಿಂದ ಬಾರಿ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವ ಚಿತ್ರ ಕಾಂತಾರ. ಇದು ಇಡಿ ಸ್ಯಾಂಡಲ್ ವುಡ್ ನ್ನು ದೂಳು ಎಬ್ಬಿಸಿದೆ. ಇದರ ಸಂಪಾದನೆಯು ಎಲ್ಲ ಚಿತ್ರಗನ್ನು ಬದಿಗೊತ್ತಿದೆ. ಈ ಇಡಿ ಸಿನಿಮಾದಲ್ಲಿ ಗ್ರಾಮ್ಯ ಭಾಷೆ, ಗ್ರಾಮೀಣ ಸೊಗಡು, ಕರಾವಳಿ ಸಂಸ್ಕೃತಿಯ ಸುಂದರವಾದ ಚಿತ್ರಣವನ್ನು ಹೆಣೆಯಲಾಗಿದ್ದು, ನೋಡುಗರ ಮನಸ್ಸನ್ನು ಸೋರೆಮಾಡಿದೆ. ಇನ್ನೂ ಇದು ಗಳಿಸಿದ ಸಂಭಾವನೆ ಕೇಳಿದ್ರೆ ದಂಗಗುತ್ತೀರಾ. ಕಾಂತಾರ ಗಳಿಸಿದ ಕಾಂಚನ ಎಷ್ಟು ಗೊತ್ತು? ಅದನ್ನ ಹೇಳತೀವಿ ಈ ಲೇಖನವನ್ನು ಪೂರ್ಣವಾಗಿ ಓದಿ. ಈ ಕಾಂತಾರ ಸಿನಿಮಾ ಪೂರ್ತಿ ಅರಣ್ಯ, ಆದಿವಾಸಿ ಜನರು, ಅವರ ಜೀವನ, ಜಾತಿ, ಆಹಾರ ಪದ್ಧತಿ, ಆಚರಣೆಗಳು ಸೇರಿದಂತೆ ಕರಾವಳಿಯ ವಿವಿಧ ವಿಚಾರಗಳ ಕುರಿತು ಅದ್ಭುತವಾದ ದೃಶ್ಯ ವೈಭವವನ್ನು ಕಣ್ಮುಂದೆ ಇಡುತ್ತದೆ ಈ ಸಿನಿಮವನ್ನು ಮಾಡಲಾಗಿದೆ.ಇಡಿ ಸಿನಿಮಾ ಅರಣ್ಯದಲ್ಲಿ ನಿರ್ಮಾಣವಾಗಿದ್ದರಿಂದ ನೈಸರ್ಗಿಕ ಸೌಂದರ್ಯ ಇಲ್ಲಿ ಎದ್ದು ಕಾಣುತ್ತಿದೆ.

Advertisements
Advertisements

ಹಾಗೆ ಕರಾವಳಿಯ ದೈವಾತರಾಧನೆ, ಮನುಷ್ಯ-ಪ್ರಕೃತಿಯ ನಡುವಿನ ಸಂಘರ್ಷ ಸೇರಿದಂತೆ ಹಲವಾರು ಆಸಕ್ತಿದಾಯಕ ವಿಚಾರಗಳನ್ನು ಸೂಕ್ಷ್ಮವಾಗಿ ಈ ಸಿನಿಮಾ ಮೂಲಕ ಜನರ ಮುಂದೆ ಇಡಲಾಗಿದೆ. ಈ ಮೊದಲು ಸಿನಿಮಾದ ಟ್ರೈಲರ್ ನೋಡಿಯೇ ಅಭಿಮಾನಿಗಳು ಫುಲ್ ಫಿದಾ ಆಗಿದ್ದರು. ಯಾವಾಗ ಈ ಸಿನಿಮಾ ರಿಲೀಸ್ ಆಗಬಹುದು ಅಂತ ಬಕ ಪಕ್ಷಿಯಂತೆ ಕಾಯ್ತಾ ಇದ್ರು. ಇನ್ನು ವಿಜಯ ಕಿರಂದೂರು ಅವರ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಒಂದು ಮಟ್ಟಿಗೆ ಹೆಚ್ಚಿಗೆ ನಿರೀಕ್ಷೆ ಇತ್ತು. ಜನರ ಎಲ್ಲ ನಿರೀಕ್ಷೆಗಳನ್ನು ಮುಟ್ಟುವಲ್ಲಿ ಕಾಂತಾರ ಸಿನಿಮಾ ಯಶಸ್ಸನ್ನಗಳಿಸಿದೆ. ಇನ್ನು ಕಾಂತರಾಜ್ ಸಿನಿಮಾದ ಪ್ರೀಮಿಯರ್ ಶೋ ನೋಡಿ ಸಾಕಷ್ಟು ಸೆಲೆಬ್ರಿಟಿಗಳು ಈ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು.
ಅಭಿಮಾನಿಗಳ ನಿರೀಕ್ಷೆಯಂತೆ ರಿಷಬ್ ಶೆಟ್ಟಿ ಅವರ ಎಫರ್ಟ್ ಕಾಂತಾರ ಸಿನಿಮಾದಲ್ಲಿ ಎದ್ದು ಕಾಣುತ್ತಿದೆ. ರಿಷಬ್ ಶೆಟ್ಟಿ ಅವರ ಮೇಲೆ ಕನ್ನಡ ಸಿನಿಮಾ ಇಂಡಸ್ಟ್ರಿ ಇಟ್ಟಿದ್ದ ನಿರೀಕ್ಷೆಗಳು ಈಗ ಹೆಚ್ಚಾಗುತ್ತಿವೆ. ಇಂತಹ ಸಿನಿಮಾಗಳು ಇನ್ನಷ್ಟು ಬರಲಿ ಎನ್ನುವುದು ಕನ್ನಡ ಸಿನಿಪ್ರಿಯರ ಆಸೆಯಾಗಿದೆ.

ಇನ್ನು ಕಾಂತಾರ ಸಿನಿಮಾದ ಕಲೆಕ್ಷನ್ ವಿಚಾರಕ್ಕೆ ಬಂದರೆ ರಿಷಬ್ ಶೆಟ್ಟಿ ಅವರ ಈವರೆಗಿನ ಎಲ್ಲಾ ಸಿನಿಮಾಗಳ ಗಳಿಕೆಯನ್ನು ಮೀರಿಸಿದೆ. ನಿರೀಕ್ಷಿಸಿದ ಮಟ್ಟಕ್ಕಿಂತ ಹೆಚ್ಚು ಆದಾಯ ಈ ಸಿನಿಮಾ ಗಳಿಸುತ್ತಿದೆ. ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಎರಡನೇ ದಿನ ಎಂಟು ಕೋಟಿ ರೂಪಾಯಿಗಳಿಗೆ ಮೂರನೆಯ ದಿನ ಇದು 10 ಕೋಟಿಗೆ ಏರಿಕೆಯಾಗಿದೆ. ಅಂದರೆ ಕೇವಲ ಮೂರು ದಿನಗಳಲ್ಲಿ 23 ಕೋಟಿ ಹಣ ಗಳಿಸಿ 6ನೇ ದಿನಕ್ಕೆ 80 ಕೋಟಿ ಗಳಿಸಿದ ಹೆಗ್ಗಳಿಕೆ ಕಾಂತಾರ ಸಿನಿಮದ್ದಾಗಿದೆ. ಈ ಮೊದಲು ಈ ಸಿನಿಮಾವನ್ನು ಕೆಲವೇ ಕೆಲವು ಥಿಯೇಟರ್ಗಳಲ್ಲಿ ರಿಲೀಸ್ ಮಾಡಲಾಗಿತ್ತು. ಇದು ಅಪಾರ ಪ್ರಮಾಣದಲ್ಲಿ ಸದ್ದು ಮಾಡಿದಾಗ ಈ ಕಾಂತರಾ ಸಿನಿಮಾದ ಶೋಗಳನ್ನ ಹಾಗೂ ಥಿಯೇಟರ್ ಸಂಖ್ಯೆಗಳನ್ನು ಹೆಚ್ಚಿಸಲಾಯಿತು. ಈ ವಾರವೂ ಕೂಡ ಕಾಂತಾರಾ ಸಿನಿಮಾ ಫುಲ್ ಹೌಸ್ ಪ್ರದರ್ಶನ ಕಾಣೋದು ಗ್ಯಾರಂಟಿಯಾಗಿದೆ.

ಹಾಗೆ ಕಾಂತಾರ ಸಿನಿಮಾದಲ್ಲಿ ರಿಷಭ್ ಶೆಟ್ಟಿಯವರ ಜೊತೆಗೆ ಪ್ರಮೋದ್ ಶೆಟ್ಟಿ ಅಚ್ಚುತ್ ಕುಮಾರ್ ಸೇರಿದಂತೆ ಯಕ್ಷಗಾನ, ಹಾಗೂ ಅನುಭವಿ ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಈ ಸಿನಿಮಾ ಟ್ರೇಡ್ ವಿಶ್ಲೇಷಕರ ಪ್ರಕಾರ ಬಿಡುಗಡೆಯಾದ ಮೊದಲ ದಿನ ಅಂದರೆ ಶುಕ್ರವಾರ 5/6ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಎರಡನೇ ದಿನ 8 ಕೋಟಿ ರೂಪಾಯಿ ಗಳಿಸಿದರೆ, ಮೂರನೆಯ ದಿನ ಇದು 10 ಕೋಟಿ ಗಳಿಸಿತು. ಅಂದರೆ ಕೇವಲ ಮೂರು ದಿನಗಳಲ್ಲಿ 23 ಕೋಟಿ ಹಣ ಗಳಿಸಿ 6ನೇ ದಿನಕ್ಕೆ 80 ಕೋಟಿಗಳಿಸುವ ಮೂಲಕ ಎಲ್ಲ ದಾಖಲೆಯ ಸಿನಿಮಾಗಳನ್ನು ಅಡ್ಡಡ್ಡ ಉದ್ದುದ್ದ ಮಲಗಿಸಿದೆ. ಇನ್ನೂ ಕರ್ನಾಟಕದ ಬಹುತೇಕ ಎಲ್ಲ ಥಿಯೇಟರಗಳಲ್ಲಿ ಇದೀಗ ಕಾಂತಾರ ಬಾರಿ ಸದ್ದು ಮಾಡುತ್ತಿದ್ದು ದಾಖಲೆಯನ್ನು ಬರೆಯುತ್ತಿದೆ.

Leave a Reply

Your email address will not be published.