Advertisements

ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಒಟ್ಟು ಹತ್ತು ದೊಡ್ಡ ವ್ಯಕ್ತಿಗಳು ಯಾರ್ಯಾರು ಗೊತ್ತಾ? ಯಾರಿಗೆಲ್ಲ ಸಿಕ್ಕೆದೆ ನೋಡಿ!!

Cinema

ಪ್ರೀಯ ಓದುಗರೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ, ಗೌರವಿಸಿ ನೀಡುವ ಪ್ರಶಸ್ತಿಯೇ ಈ ಕರ್ನಾಟಕ ರತ್ನ ಪ್ರಶಸ್ತಿ. ಇದನ್ನು ಕನ್ನಡ ನಾಡು ಒಂದಾದ ದಿನವಾದ ಕನ್ನಡಿಗರ ಹಬ್ಬದ ದಿನಾ ಅಂದ್ರೇ ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದಂದು ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ನೀಡುತ್ತಾರೆ.

ನಮ್ಮ ಕರ್ನಾಟಕದಲ್ಲಿ ಯಾರು ಯಾರು ಈ ಪ್ರಶಸ್ತಿ ಪಡೆದಿದ್ದರೆ ಅಂತಾ ಹೇಳತೀವಿ ಈ ಲೇಖನವನ್ನು ಓದುತ್ತಾ ಹೋಗಿ. ಕನ್ನಡ ಕಲಾ ಸೇವೆ, ಶಿಕ್ಷಣ, ವೈದ್ಯಕೀಯ, ವಿಜ್ಯಾನ, ಸಮಾಜ ಸೇವೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಸರ್ಕಾರ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಯಾರೆಲ್ಲ ಈ ಪ್ರಶಸ್ತಿಗೆ ಭಜಿನರಾಗಿದ್ದಾರೆ ಅಂತಾ ಹೇಳತೀವಿ ಮುಂದೆ ಓದಿ.

ಮೊದಲನೆಯದಾಗಿ ಸಾಹಿತ್ಯ ಲೋಕದಲ್ಲಿ ಅಪಾರ ಸಾಧನೆ ಮಾಡಿದ ರಾಷ್ಟ್ರಕವಿ ಕುವೆಂಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಲಭ್ಯವಾಗಿದೆ. ಎರಡನೇಯದಾಗಿ ಕನ್ನಡ ಚಿತ್ರಗಳನ್ನು ಮಾತ್ರ ಮಾಡುತ್ತ ಲಕ್ಷ ಲಕ್ಷ ಅಭಿಮಾನಿಗಳನ್ನು ಗಳಿಸಿಕೊಂಡ ನಟ, ಹಾಗೂ ಕನ್ನಡ ಚಲನಚಿತ್ರದಲ್ಲಿ ಕಲಾ ಸೇವೆ ಮಾಡಿದ ದೊಡ್ಡಮನೆಯ ದೇವರು ಡಾಕ್ಟರ್ ರಾಜಕುಮಾರ್ ಅವರಿಗೂ ವಿಧಾನಸೌಧದ ಎದುರು ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು.


ಮೂರನೆಯದಾಗಿ ರಾಜಕೀಯ ಕ್ಷೇತ್ರದಲ್ಲಿ ಸಾಧನೆಗೈದ ರಾಜಕೀಯ ಧುರೀಣ ನಿಜಲಿಂಗಪ್ಪ ಅವರಿಗೂ ಕೂಡ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿದೆ. ನಾಲ್ಕೈನೆಯದಾಗಿ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರೊಫೆಸರ್ ಸಿ.ಎನ್.ಆರ್ ರಾವ್ ಅವರಿಗೂ ಕೂಡ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಐದನೆಯದಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆದುಕೊಂಡವರು ಡಾಕ್ಟರ್ ದೇವಿ ಶೆಟ್ಟಿ. ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗಿತ್ತು. ಆರನೆಯದಾಗಿ ಇನ್ನು ಸಂಗೀತ ಮಾಂತ್ರಿಕ ಸಂಗೀತ ಲೋಕದಲ್ಲಿ ಅತ್ಯದ್ಭುತ ಸಾಧನೆಯನ್ನ ಮಾಡಿದ ಪಂಡಿತ ಭೀಮ್ ಸೇನ್ ಜೋಶಿ ಕೂಡ ಕರ್ನಾಟಕ ರತ್ನ ಪುರಸ್ಕೃತರು.

ಏಳನೇಯದಾಗಿ ಸಮಾಜ ಸೇವೆಯಲ್ಲಿ ನಿರತರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿ, ಸಿದ್ದಗಂಗಾ ಮಠದ ಸ್ವಾಮೀಜಿಗಳಾಗಿದ್ದ ಇವರು ಸಾಕಷ್ಟು ಸಮಾಜ ಪರ ಕೆಲಸಗಳನ್ನು ಮಾಡಿದ್ದಾರೆ. ಇವರಿಗೂ ಕೂಡ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ.

ಎಂಟನೆಯದಾಗಿ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಗೈದಿರುವ ದೇವೆಗೌಡ ಅವರಿಗೂ ಕೂಡ ಕರ್ನಾಟಕ ರತ್ನ ಪ್ರಶಸ್ತಿ ಲಭ್ಯವಾಗಿದೆ. ಒಂಬತ್ತನೆಯದಾಗಿ ಸಮಾಜ ಸೇವೆಯಲ್ಲಿ ನಿರತರಾಗಿರುವ ದಕ್ಷಿಣ ಕನ್ನಡದಲ್ಲಿ ಹೆಚ್ಚು ಖ್ಯಾತಿಗಳಿಸಿರುವ ಡಾಕ್ಟರ್ ವೀರೇಂದ್ರ ಹೆಗ್ಗಡೆ ಅವರಿಗೂ ಕೂಡ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

ಆದ್ರೆ 10ನೆ ಪ್ರಶಸ್ತಿ ತುಂಬಾ ವಿಶೇಷವಾಗಿ ನೀಡಲಾಗಿದೆ. ಅದು ಯಾರಿಗೆ ಗೊತ್ತಾ? ಇಂದು ಮನೆ, ಅರಮನೆ, ಗುಡಿಸಲಾಲಲ್ಲಿ ಇದೀಗ ದೇವರಾಗಿ ಪೋಜಿಸಿ ಕೊಳ್ಳುತ್ತಿರುವ ನಮ್ಮ ನಿಮ್ಮೆಲ್ಲರ ಮೆಚ್ಚಿನ ನಟ, ಅತ್ಯದ್ಭುತ ಗಾಯಕ, ಅತ್ಯುತ್ತಮ ವ್ಯಕ್ತಿ, ನಗುವನ್ನು ಹಂಚುವ ಹೃದಯವಂತ ಪುನೀತ್ ರಾಜಕುಮಾರ್ ಅವರಿಗೆ. ಇವರ ದಾನ ಧರ್ಮಗಳು ಇದೀಗ ಗುರುತಿಸಲಾಗಿದೆ.

ಇವರಿಗೆ ಮರಣನಂತರ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ಖಂಡಿತವಾಗಿಯೂ ಕನ್ನಡಿಗರಿಗೆ ಹೆಮ್ಮೆಯ ವಿಷಯ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವುದಕ್ಕೆ ಅವರ ಅಭಿಮಾನಿಗಳು ತುಂಬಾನೇ ಸಂತಸ ಕೊಟ್ಟಿದೆ. ಎಲ್ಲರು ಈ ಬಾರಿ ಫುಲ್ ಖುಷಿಯಾಗಿದ್ದಾರೆ. ಪುನೀತ್ ಅವರ ಸಾಮಾಜಿಕ ಕಳಕಳಿಗೆ ಇದೀಗ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.