Advertisements

ಪೋಸ್ಟ್ ವೆಡ್ಡಿಂಗ್ ಚಿತ್ರೀಕರಣಕ್ಕೆ ನದಿಯ ಬಳಿ ತೆರಳಿದ ಜೋಡಿ.. ಗಂಡ ನದಿಯಿಂದ ಹೊರ ಬಾರಲೇ ಇಲ್ಲ.. ಹೆಂಡತಿ ಏನಾದಳು ಗೊತ್ತಾ.. ಬೆಚ್ಚಿಬಿದ್ದ ಕುಟುಂಬ..

Kannada News

ನೂರಾರು ಕನಸು ಕಂಡು ದಾಂಪತ್ಯ ಜೀವನಕ್ಕೆ‌ ಕಾಲಿಡುವರು.. ಭವಿಷ್ಯದ ಬಗ್ಗೆ ಸಾಕಷ್ಟು ಯೋಜನೆ ಹಾಕಿಕೊಳ್ಳುವರು.. ಅಂದುಕೊಂಡಂತೆ ಸಾಕಷ್ಟು ಜನ ಬಾಳುವರು.. ಆದರೆ ಕೆಲ ಸಣ್ಣ ಅಜಾಗರೂಕತೆಯೋ ಅಥವಾ ಕೆಟ್ಟ ಸಮಯವೋ ತಿಳಿಯದು.. ಆದರೆ ಸಂಬಂಧ ಶುರುವಾಗಬೇಕಾದ ಸಮಯದಲ್ಲಿಯೇ ದುರಂತ ಅಂತ್ಯ ಕಂಡುಬಿಡುತ್ತಾರೆ.. ಅದೇ ರೀತಿ‌ ಇಲ್ಲೊಂದು ಜೋಡಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಮದುವೆಯ ನಂತರ ಪೋಸ್ಟ್ ವೆಡ್ಡಿಂಗ್ ಫೋಟೋ ಚಿತ್ರೀಕರಣಕ್ಕೆ ತೆರಳಿದ ಜೋಡಿ ದುರಂತ ಅಂತ್ಯ ಕಾಣುವಂತಾಗಿ ಹೋಯ್ತು.. ಒಂದು ಕಡೆ ಮದುಮಗ ನದಿಯಿಂದ ಹೊರ ಬಾರಲೇ ಇಲ್ಲ.. ಇತ್ತ ಈ ಹೆಣ್ಣು ಮಗಳು ಏನಾದಳು ತಿಳಿದರೆ ನಿಜಕ್ಕೂ ಮನಕಲಕುತ್ತದೆ..

ಹೌದು ಇತ್ತೀಚಿನ ದಿನಗಳಲ್ಲಿ ಎಲ್ಲಿಯಾದರೂ ಪ್ರವಾಸಕ್ಕೆ ಹೋದರೆ ಅಥವಾ ಮತ್ತಿನ್ನೇಂಖ್ ವಿಶೇಷವಾದ ಸಮಯದಲ್ಲಿ ನಮ್ಮಲ್ಲಿರುವ ಆ ವಿಶೇಷ ಸಮಯವನ್ನು ಸವಿಯದೇ ಅದೇ ಸಮಯದಲ್ಲಿ ಕೇವಲ ಫೋಟೋ ವೀಡಿಯೋ ತೆಗೆಯುವುದರಲ್ಲಿಯೇ ಮುಳುಗಿ ಹೋಗಿ ಆ ಸಮಯದ ನಿಜವಾದ ಅರ್ಥವನ್ನೇ ತಿಳಿಯದಾಗಿ ಬಿಡುತ್ತೇವೆ.. ಎದುರು ಇದ್ದಾಗ ಆ ಕ್ಷಣವನ್ನು ಅನುಭವಿಸದೇ ನಂತರ ಕೇವಲ ಫೋಟೋದಲ್ಲಿ ನೋಡಿ ಸಂತೋಷ ಪಡುತ್ತೇವೆ.. ಅದರಲ್ಲೂ ಕಳೆದ ಕೆಲ ವರ್ಷಗಳಿಂದ ಈ ಫೋಟೋ ಅನ್ನೋದು ಒಂದು ಗೀಳಾಗಿ ಹೋಗಿದೆ.. ಇಂತಹ ಗೀಳಿನಿಂದ ಅನೇಕ ಅತಾಚುರ್ಯಗಳು ನಡೆದು ಹೋಗಿದ್ದು ಸಾಕಷ್ಟು ಮಂದಿ ಜೀವವನ್ನೇ ಕಳೆದುಕೊಂಡ ಘಟನೆಗಳು ಆಗಾಗ ನಡೆಯುತ್ತಲೇ ಇದೆ.. ಅದೇ ರೀತಿ ಈ ಜೋಡಿ ಮದುವೆಯಾಗಿ ಹೊಸ ಜೀವನ ಶುರು ಮಾಡಬೇಕಾದ ಈ‌ ಮುದ್ದಾದ ಜೋಡಿ ಇದೀಗ ಜೀವನದ ಹೊಸ ಆರಂಭದಲ್ಲಿಯೇ ಅಂತ್ಯ ಕಾಣುವಂತಾಗಿದೆ..

ಹೌದು ಈ ಹೆಣ್ಣು ಮಗಳ ಹೆಸರು ಕಾರ್ತಿಕಾ.. ಈತನ ಹೆಸರು ರೆಜಿಲ್.. ಕೇರಳದ ಕೆಡಿಯಂಗಡದ ನಿವಾಸಿಗಳು.. ಕಳೆದ ಮಾರ್ಚ್ ಹದಿನಾಲ್ಕರಂದು ಈ ಜೋಡಿಯ ಮದುವೆ ಅದ್ಧೂರಿಯಾಗಿ ನೆರವೇರಿತ್ತು.. ಈ ಮುದ್ದಾದ ಜೋಡಿ ಭವಿಷ್ಯದ ನೂರಾರು ಕನಸು ಕಂಡು ಹೊಸ ಜೀವನ ಶುರು ಮಾಡಿದ್ದರು.. ಇದೇ ಸಮಯದಲ್ಲಿ ಪೋಸ್ಟ್ ವೆಡ್ಡಿಂಗ್ ಫೋಟೋ ಚಿತ್ರೀಕರಣ ಮಾಡಿಸಿಕೊಳ್ಳಬೇಕೆಂಬ ಆಸೆ ಇಬ್ಬರಲ್ಲಿಯೂ ಇತ್ತು.. ಅದೇ ಕಾರಣಕ್ಕೆ ಜಾಗವೊಂದನ್ನು ಪ್ಲಾನ್ ಮಾಡಿ ಅಲ್ಲಿಗೆ ತೆರಳಿದ್ದಾರೆ.. ಆದರೆ ಅಲ್ಲಿಂದ ಮರಳಿ ಬರುವುದಿಲ್ಲ ಎಂದು ಬಹುಶಃ ಅವರು ಕನಸಿನಲ್ಲಿಯೂ ಊಹಿಸಿರಲಿಲ್ಲ ಎನಿಸುತ್ತದೆ..

ಹೌದು ರೆಜಿಲ್ ಹಾಗೂ ಕಾರ್ತಿಕಾ ಇಬ್ಬರೂ ಸಹ ಕೇರಳಾದ ಕೋಯಿಕ್ಕೋಡ್ ಸಮೀಪದ ಕೊಟ್ಟಿಯಾಡಿ ನದಿಯ ಬಳಿಗೆ ಬಂದಿದ್ದಾರೆ.. ಬಂದವರು ನದಿಯ ದಡದಲ್ಲಿ ಫೋಟೋ ತೆಗೆಸಿಕೊಂಡಿದ್ದರೆ ಚೆನ್ನಾಗಿತ್ತು.. ಆದರೆ ಫೋಟೋ ಆಸೆಗೆ ನೀರಿ‌ನ ಒಳಗೆ ಹೋಗಿದ್ದಾರೆ.. ಈ ಸಮಯದಲ್ಲಿ ಇಬ್ಬರೂ ಸಹ ನದಿಗೆ ಬಿದ್ದಿದ್ದಾರೆ ಎನ್ನಲಾಗಿದೆ.. ಫೋಟೋಗ್ರಾಫರ್ ಗಳನ್ನು ಕರೆದುಕೊಂಡು ಹೋಗಿದ್ದರೋ ಅಥವಾ ತಾವೇ ಫೋಟೋ ತೆಗೆದುಕೊಳ್ಳುತ್ತಿದ್ದರೋ ತಿಳಿಯದು.. ಆದರೆ ಇಬ್ಬರೂ ಸಹ ನದಿಗೆ ಬಿದ್ದಿದ್ದು ಅಲ್ಲಿಂದ ಹೊರ ಬರಲಾಗದೇ ಕಾಪಾಡಿ ಎಂದು ಕೂಗಿ ಕೊಂಡಿದ್ದಾರೆ.. ಸಹಾಯಕ್ಕಾಗಿ ಯಾರೋ ಕೂಗುತ್ತಿರುವುದು ಕೇಳಿದ ಅಲ್ಲಿನ ಅಕ್ಕಪಕ್ಕದ ಸಾರ್ವಜನಿಕರು ತಕ್ಷಣ ಸ್ಥಳಕ್ಕೆ ಬಂದು ನದಿಗೆ ಬಿದ್ದು ಕಾರ್ತಿಕಾಳನ್ನು ಹಾಗೂ ರೆಜಿಲ್ ನಲ್ಲಿ ಎಳೆದು ದಡಕ್ಕೆ ತಂದಿದ್ದಾರೆ..

ಆದರೆ ಅದಾಗಲೇ ಕಾಲ ಮಿಂಚಿ ಹೋಗಿತ್ತು.. ಹೌದು ರೆಜಿಲ್ ಅದಾಗಲೇ ಕೊನೆಯುಸಿರೆಳೆದು ಬಿಟ್ಟಿದ್ದನು.. ಇತ್ತ ಕಾರ್ತಿಕಾಳ ಸ್ಥಿತಿ ಗಂಭೀರವಾಗಿದ್ದು ಆಕೆಯನ್ನು ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಸ್ಟ್ ವೆಡ್ಡಿಂಗ್ ಚಿತ್ರೀಕರಣಕ್ಕೆ ಬಂದು ಫೋಟೋಗೆ ಪೋಸ್ ನೀಡುವಾಗ ನದಿಗೆ ಬಿದ್ದಿದ್ದಾರೆ ಎಂದು ಅಲ್ಲಿನ ಪೋಲೀಸರು ತಿಳಿಸಿದ್ದಾರೆ.. ಏತಕ್ಕಾಗಿ ಇದೆಲ್ಲಾ.. ಇತೀಚಿನ ಯುವ ಜನತೆಯ ತಲೆಗೆ ಗೀಳತ್ತಿಸಿರುವ ಫೋಟೋ ವೀಡಿಯೋಗಳು ಇತಿಮಿತಿಯಲ್ಲಿದ್ದರೆ ಎಲ್ಲವೂ ಚೆಂದ.. ಆದರೆ ಕೇವಲ‌ ಒಂದು ಫೋಟೋಗಾಗಿ ಇರೋ ಒಂದು ಜೀವನವನ್ನೇ ಮುಕ್ತಾಯ ಮಾಡಿಕೊಳ್ಳೋದು ಎಂದರೆ ಹೇಗೆ..

ಈಗ ದೇವರ ದಯೆಯಿಂದ ಆ ಹೆಣ್ಣು ಮಗಳು ಆಸ್ಪತ್ರೆಯಿಂದ ಬದುಕಿ ಬರಲಿ.. ಆದರೆ ಇನ್ನು ತಾನು ಇರುವಷ್ಟು ದಿನವೂ ಈ ಘಟನೆ ಮಾತ್ರ ಕಾಡದೇ ಇರದು.. ಹದಿನೈದು ದಿನದಲ್ಲಿ ಸಂಭ್ರಮದಲ್ಲಿದ್ದ ಮನೆಯೀಗ ಮದುಮಗನನ್ನೇ ಕಳೆದುಕೊಂಡು ಸೂತಕದ ಮನೆಯಾಗಿ ಹೋಯ್ತು.. ವಿಚಾರ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರು ಇಬ್ಬರನ್ನು ಈ ಸ್ಥಿತಿಯಲ್ಲಿ ಕಂಡು ಬೆಚ್ಚಿಬಿದ್ದಿದ್ದಾರೆ.. ಆ ಹುಡುಗನ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.. ದಯವಿಟ್ಟು ಯಾರೇ ಆಗಲಿ ಫೋಟೋ ವೀಡಿಯೋ ಅನ್ನೋ ಗೀಳಿಗೆ ಬಿದ್ದು ಮಾಡಬಾರದ ಸಾಹಸಗಳನ್ನು ಮಾಡಿ ಕುಟುಂಬಕ್ಕೆ ನೋವು ನೀಡಬೇಡಿ.. ಹೋದ ಜಾಗದಲ್ಲಿ ಆ ಕ್ಷಣವನ್ನು ನಿಜವಾಗಿ ಜೀವಿಸಿ.. ಫೋಟೋದಲ್ಲಿಯಲ್ಲ.. ಎಲ್ಲವೂ ಬೇಕು.. ಆದರೆ ಮಿತಿಯಲ್ಲಿರಬೇಕಷ್ಟೇ.. ಆ ಹೆಣ್ಣು ಮಗಳಿಗೆ ಭಗವಂತ ಧೈರ್ಯ ನೀಡಲಿ..