Advertisements

ಹದಿನಾರು ವರ್ಷಕ್ಕೆ ಪ್ರೀತಿ ಎಂದು ಮನೆ ಬಿಟ್ಟು ಹೋಗಿ ಎರಡೇ ಪ್ರೇಮಿಯ ಜೊತೆ ಎಂತಹ ಸ್ಥಿತಿಯಲ್ಲಿ ಸಿಕ್ಕಳು ನೋಡಿ.. ಮಗಳ ಸ್ಥಿತಿ ನೋಡಿ ಕುಸಿದು ಬಿದ್ದ ಅಪ್ಪ ಅಮ್ಮ..

Kannada News

ನಮಸ್ಕಾರ ಪ್ರಿಯ ವೀಕ್ಷಕರೆ ವಯಸ್ಸಿನ ಮಾಯಾಜಾಲಕ್ಕೆ ಯಾರು ತಾನೆ ಮಾರು ಹೋಗೊದಿಲ್ಲ ಹೇಳಿ, ಚಿಕ್ಕ ವಯಸ್ಸಿನಲ್ಲೇ ಪ್ರೀತಿ , ಪ್ರೇಮ,‌ಪ್ರಣಯ ಅಂತಾ ಮೂರ ಹೊತ್ತು ಅದರಲ್ಲೆ ಮುಳುಗಿಬಿಟ್ಟಿರುತ್ತಾರೆ. ಹಿಂದಿನ ಕಾಲದಲ್ಲಿ ಕಾಲೇಜ್ ನಲ್ಲಿ ಹುಟ್ಟುವ ಪ್ರೀತಿ ಇಂದಿನ ಡಿಜಿಟಲ್ ಕಾಲದಲ್ಲಿ ಹೈ ಸ್ಕೂಲ್ ಮೆಟ್ಟಿಲು ಹತ್ತುವ ಮುನ್ನವೆ ಚಿಗುರೊಡೆದು ಬಿಟ್ಟಿರುತ್ತದೆ. ಪ್ರೀತಿ ಅರ್ಥವೇ ತಿಳಿಯದ ಹುಡುಗ ಹುಡುಗಿಯರು ಪ್ರೀತಿ ಮೋಸ ಹೋಗುತ್ತಾರೆ, ಪ್ರಾಣ ಕಳೆದುಕೊಳ್ಳುವ ಸುದ್ದಿಗಳನ್ನು ನೋಡೆ ಇರ್ತಿವಿ. ಈಗ ನಾವು ಹೇಳ‌ ಹೋಗುತ್ತಿರುವ ಘಟನೆಯು ಅಂತಹದ್ದೆ, ಚಿಕ್ಕ ವಯಸ್ಸಿನಲ್ಲಿ ಪ್ರೀತಿಸಿ ಮನೆಯವರ ಮಾತು ಧಿಕ್ಕರಿಸಿ ಹೋದವಳ ಕಥೆ‌ ಏನಾಗಿತ್ತು ಗೊತ್ತಾ? ಯಾರು ಅವಳು? ಅವಳಿಗೆ ಆಗಿದ್ದಾದ್ರು ಏನು ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ಕೊನೆವರೆಗೂ ಓದಿ ತಪ್ಪದೆ ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಲು ಮರೆಯದಿರಿ…

Advertisements
Advertisements

ಈ ಘಟನೆ ನಡದಿರುವುದು ರಾಮನಗರದಲ್ಲಿ. ಇನ್ನು ಎಸ್ ಎಸ್ ಎಲ್ ಸಿ ಓದುವಾಗಲೇ ಪ್ರೀತಿ ಹುಟ್ಟಿದ್ದು ಹದಿನಾರು ವರ್ಷದ ಹುಡುಗಿಗೆ ತನಗಿಂತ ಹತ್ತು ವರ್ಷ ದೊಡ್ಡವನೊಂದಿಗೆ. ಈ ವಿಚಾರ ಹೆತ್ತ ತಂದೆ ತಾಯಿಗೆ ತಿಳಿದು ಬುದ್ದಿ ಹೇಳಿದರು ಕೇಳದೆ ಅವನೊಂದಿಗೆ ಹೋದವಳ ಸ್ಥಿತಿ ಹೀಗಾಗುತ್ತದೆ ಎಂದು ಯಾರು ಊಹಿಸಿರಲಿಲ್ಲ. ಸರಳ ಸ್ವಭಾವದ ತಂದೆ ತಾಯಿ‌ ಮಗಳು ಓದುವಾಗಲೇ ಈ ರೀತಿ ತಪ್ಪು ಮಾಡಿದ್ದಾಳೆ ಎಂದು ಆಕೆಗೆ ಬೇದರಿಸಲಿಲ್ಲ‌. ಬದಲಿಗೆ ಚೆನ್ನಾಗಿ ಓದು ಮುಂದೆ ನೋಡೋಣ ಎಂದು ಎಷ್ಟೇ ತಿಳಿಹೇಳಿದರು ಆಕೆ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅಂತು ಹೆತ್ತ ತಂದೆ ತಾಯಿ ಮನನೊಯಿಸಿ ಕೊನೆಗೂ ರಾಮನಗರದಲ್ಲಿ ತಾನು ಪ್ರೀತಿಸಿದವನೊಟ್ಟಿಗೆ ಹೋಗಿದ್ದಳು. ಆದರೆ ಆಕೆ ಪ್ರೀತಿಸಿದ ಹುಡುಗನ ಜೊತೆ ಸಿಕ್ಕ ಸ್ಥಿತಿ ಕಂಡು ಹೆತ್ತವರು ಬೆಚ್ಚಿಬಿದ್ದಿದ್ದಾರೆ..

ಹೌದು ಹೀಗೆ ಪ್ರೀತಿ ಎಂದು 10 ನೇ ತರಗತಿಯಲ್ಲಿರುವಾಗಲೇ ಮನೆ ಬಿಟ್ಟು ಹೋದವಳ ಹೆಸರು ಕಾವ್ಯ.. ವಯಸ್ಸು ಇನ್ನೂ ಹದಿನಾರು, ಅಪ್ರಾಪ್ತೆ .. ರಾಮನಗರ ತಾಲೂಕಿನ ಸುಗ್ಗನಹಳ್ಳಿ ಗ್ರಾಮದವಳಾದ ಇವಳದು ರೈತಾಪಿ ಕುಟುಂಬ. ಹೋಲದಲ್ಲಿ ಕೆಲಸ ಮಾಡುತ್ತಾ ಮಗಳು ಚನ್ನಾಗಿ ಓದಿ ದೊಡ್ಡದಾದ ‌ಹುದ್ದೆ ಹಿಡಿದು‌ ನಮ್ಮ ಕಷ್ಟವನ್ನೆಲ್ಲ ದೂರ ಮಾಡುತ್ತಾಳೆ ಎಂದು ಹೆತ್ತವರು ತಿಳಿದಿದ್ದರು ಆದರೆ ಕಾವ್ಯಳ ಗುರಿಯೇ ಬೇರೆಯಾಗಿತ್ತು. . ಆದರೆ ತಪ್ಪು ಅವಳದ್ದು ಇರಬಹದು ಆಕೆ ಆ ವಯಸ್ಸಿಗೆ ಮನಸ್ಸಿಗೆ ಆಗುವ ಆಕರ್ಷಣೆಯು ಇರಬಹದು. ಪ್ರೀತಿ ಎಂಬ ಮಾಯಾಜಾಲದಲ್ಲಿ ಕಾವ್ಯ ವಾಸ್ತವ ಜೀವನ, ಓದು, ಬರಹ ತಂದೆ ತಾಯಿ‌ ಎಲ್ಲವನ್ನು ಮರೆತು ಹೋಗಿದ್ದಳು.

ಇನ್ನು ಆಕೆ ಪ್ರೀತಿಸಿದ ಪ್ರಿಯಕರನ ಕುರಿತು ಹೇಳಬೇಕಾದರೆ ಆತ ರಾಮನಗರ ತಾಲೂಕಿನ ದೇವರಸೇಗೌಡನದೊಡ್ಡಿಯ ನಿವಾಸಿ. ಈತನ ಹೆಸರು ಹರೀಶ್ ವಯಸ್ಸು ಇಪ್ಪತ್ತಾರು ವರ್ಷ. ಓದುವುದನ್ನು ಬಿಟ್ಟು ಅದಾಗಲೇ ವರ್ಷಗಳೆ ಕಳೆದಿತ್ತು. ಜೀವನ ಸಾಗಿಸುವುದಕ್ಕಾಗಿ ವೃತ್ತಿಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕೈಯಲ್ಲಿ ಕೆಲಸ ಅಂತ ಹಾಯಾಗಿದ್ದ ಹರೀಶ್ ಇತ್ತ ಹದಿನಾರು ವರ್ಷದ ಕಾವ್ಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ.. ಇಬ್ಬರೂ ಪರಸ್ಪರ ಒಪ್ಪಿಯೇ ಪ್ರೀತಿ ಮಾಡುತ್ತಿದ್ದರು.. ಇವರ ಪ್ರೀತಿ ವಿಷಯ ಎರಡೂ ಕುಟುಂಬಗಳಿಗೆ ತಿಳಿಯಲು ಹೆಚ್ಚು ಸಮಯವೇನು ತಗೆದುಕೊಳ್ಳಲಿಲ್ಲ. ಮನೆಯಲ್ಲಿ ತಮ್ಮ ಪ್ರೀತಿಯ ವಿಚಾರವ ತಿಳಿದಿದೆ ಎಂದು ಅರಿತ ಇವರಿಬ್ಬರೂ ತಮ್ಮ ತಮ್ಮ ಮನೆಯಲ್ಲಿ ನಮ್ಮಿಬ್ಬರಿಗೆ ಮದುವೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ..

ಆದರೆ ಎರಡೂ ಕುಟುಂಬದಲ್ಲಿಯೂ ಮದುವೆಗೆ ಒಪ್ಪಿಗೆ ನೀಡುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಇತ್ತ ಕಾವ್ಯಾಳ ಮನೆಯಲ್ಲಿ ಮಗಳಿಗೆ ಇನ್ನೂ ಹದಿನಾರು ವರ್ಷ..‌ಇಷ್ಟು ಚಿಕ್ಕವಯಸ್ಸಿಗೆ ಮದುವೆ ಮಾಡುವುದು ಸರಿಯಲ್ಲ. ಓದುವ ವಯಸ್ಸು ನಿನ್ನದು ಚನ್ನಾಗಿ ಓದು ಮುಂದೆ ಈ ವಿಷಯದ ಕುರಿತು ಮುಂದೆ ಚರ್ಚೆ ಮಾಡಬಹದು ಎಂದಿದ್ದಾರೆ. ನೀನಿನ್ನು ಚಿಕ್ಕವಳು.. ಇದೆಲ್ಲಾ ಈಗಲೇ ಬೇಡ. ಇನ್ನು ನಾಲ್ಕೈದು ವರ್ಷ ಹೋಗಲಿ ಆಮೇಲೆ ನಿನ್ನ ಇಷ್ಟ ಬಂದಂತೆ ಮದುವೆ ಮಾಡ್ತವಿ ಅಂತ ಹೇಳಿದ್ದರು ಕಾವ್ಯ ಮಾತ್ರ ತನ್ನ ಹಠ ಬಿಡಲೆಯಿಲ್ಲ.

ದೊಡ್ಡವರು ಹೇಳಿದ‌ ಮಾತು ಕೇಳದಿದ್ರೆ ಅನಾಹುತ ತಪ್ಪಿದ್ದಲ್ಲ ಎಂಬುವುದಕ್ಕೆ ಕಾವ್ಯಳೆ ಸಾಕ್ಷಿ. ಕೊನೆಗು‌ ಅಪ್ಪ ಅಮ್ಮನ ಮಾತಿಗೆ ಸ್ವಲ್ಪವು ಬೆಲೆ ಕೊಡದ ಅವಳು ತನ್ನ ಪ್ರೀತಿಯೇ ಸರ್ವಸ್ವ, ಪ್ರಿಯಕರನೆ ದೇವರು ಎಂದು ಮುಳುಗಿ ಹೋಗಿದ್ದಳು ಅವನ ಪ್ರೀತಿಯಲ್ಲಿ. ಮೊದಲೇ ಒಬ್ಬಳೆ ಮಗಳೆಂದು ಪ್ರೀತಿಯಿಂದ ಬೆಳೆಸಿದ್ದೇ ಕಾರಣವೇನೊ‌ ಆಕೆ ಪಾಲಕರ ಮಾತನ್ನು ಅಕ್ಷರಶಃ ಒಪ್ಪಲಿಲ್ಲ. ಕೊನೆಗೆ ಭಾನುವಾರ ಹರೀಶ್ ಹಾಗೂ ಕಾವ್ಯಾ ಇಬ್ಬರೂ ಸಹ‌ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಮುಂದೆ ಯಾವುದೇ ಒಂದು ದೇವಸ್ಥಾನದ ಮುಂದೆ ಮದುವೆಯನ್ನೂ ತಮ್ಮಿಷ್ಟದಂತೆ ಮಾಡಿಕೊಂಡಿದ್ದಾರೆ.. ಅಷ್ಟಕ್ಕೆ ಸುಮ್ಮನಾಗಿದ್ದರೆ ಇಂದು ಮಗಳನ್ನು ಹೆತ್ತವರು ಇಂತಹ ಸ್ಥಿತಿಯಲ್ಲಿ ನೋಡಬೇಕಿರಲಿಲ್ಲ..

ಆದರೆ ಮದುವೆ ಮಾಡಿಕೊಂಡು ನಂತರ ಸಮಯ ಕಳೆಯಲೆಂದು ಇಬ್ಬರು ರಾಮದೇವರ ಬೆಟ್ಟಕ್ಕೆ ಬಂದಿದ್ದಾರೆ..ಅಲ್ಲಿಯೇ ಅವರಿಬ್ಬರ ಜೀವನದಲ್ಲಿ ನಡೆಯ ಬಾರದ್ದು ನಡೆದು ಹೋಗಿತ್ತು. ಹೆತ್ತವರ ಮಾತು ಕೇಳದಕ್ಕೆ ಕಾವ್ಯ ಅದಾಗಲೇ ಪಶ್ಚಾತ್ತಾಪಕ್ಕೆ ಗುರಿಯಾಗಿದ್ದಳು. ಇಬ್ಬರು ಸಮಯ ಕಳೆಯಲೇಂದು ಸಮೀಪದ ರಾಮದೇವರ ಬೆಟ್ಟಕ್ಕೆ ಬಂದಿದ್ದಾರೆ. ಆದರೆ ಅವರಿಬ್ಬರು ಅಲ್ಲಿಗೆ ಬಂದಿದ್ದು ಪ್ರೀತಿಯಿಂದ ‌ಸಮಯ ಕಳೆಯಲು ಅಲ್ಲ. ಈ ಜಗತ್ತನ್ನೆ ಬಿಡುವ ನಿಧಾರ ಮಾಡಿ ಬಿಟ್ಟಿದ್ದರು. ಹೌದು ರಾಮನಗರದ ಬೆಟ್ಟದಲ್ಲಿ ಇಬ್ಬರೂ ಸಹ ಒಟ್ಟಿಗೆ ಒಂದೆ‌‌ ಮರಕ್ಕೆ ನೇಣು ಬಿಗಿದುಕೊಂಡು ಜೀವ ಕಳೆದುಕೊಂಡು ಬಿಟ್ಟಿದ್ದಾರೆ.. ಇತ್ತ ಮನೆಯಲ್ಲಿ ಮಗಳು ಕಾಣದಿರಲು‌ ಗಾಬರಿಗೊಂಡು ಪಾಲಕರು ಮಗಳಿಗಾಗಿ ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾರೆ. ಆದರೆ ಮಗಳು ಅದಾಗಲೇ ಏನು ತಿಳಿಯದೆ ತಪ್ಪು ನಿರ್ಧಾರ ತೆಗೆದುಕೊಂಡು ಪ್ರಾಣವನ್ನೆ ಕಳೆದುಕೊಂಡು ಬಿಟ್ಟಿದ್ದಳು.

ಊರಿನ ಬೇರೆ ಬೇರೆ ಜಾಗಗಳಲ್ಲಿ ಹುಡುಕಾಟ ನಡೆಸುತ್ತಿದ್ದ ತಂದೆ ತಾಯಿಗೆ ಪೊಲೀಸರ ಕಡೆಯಿಂದ ಫೋನ್ ಒಂದು ಬಂದು ರಾಮದೇವರ ಬೆಟ್ಟದಲ್ಲಿ ನಡೆದ ಸಂಗತಿ ತಿಳಿಸುತ್ತಾರೆ. ಚಿಕ್ಕ ಮಗಳು ಇನ್ನು ಬಾಳಿ ಬದುಕುವ ಎಳೆ ವಯಸ್ಸು ಆಕೆಯನ್ನು ಆ ಸ್ಥಿತಿಯಲ್ಲಿ ಕಂಡು ಕುಸಿದು ಬಿದ್ದಿದ್ದಾರೆ.. ಇತ್ತ ಮನೆಯ ಮಗ ಎಲ್ಲಾ ‌ಜವಾಬ್ದಾರಿಯನ್ನು ಹೊತ್ತಿದ್ದ ಹರೀಶ್ ತಂದೆ ತಾಯಿಯನ್ನು ನೆನಪಿಸಿಕೊಳ್ಳದೆ ಪ್ರೀತಿಗಾಗಿ ಪ್ರಾಣ ಬಿಟ್ಟು ತನ್ನ ಹೆತ್ತವರನ್ನು ಅನಾಥರನ್ನಾಗಿ‌ ಮಾಡಿದ್ದಾನೆ. ಮಗನನ್ನು ಕಳೆದುಕೊಂಡು ಗೋಳಾಡುತ್ತಿದ್ದ ಅವರನ್ನು ನೋಡುವುದು ನಿಜಕ್ಕೂ ದುಃಖಕರ ಸಂಗತಿಯಾಗಿತ್ತು.

ತಂದೆ ತಾಯಿಯ‌ ಮಾತು ಕೇಳದೆ ಪ್ರಾಣ ಕಳೆದುಕೊಂಡ ಇವರಿಬ್ಬರು ನಿಜಕ್ಕೂ ಮೂರ್ಖರೆ. ಪ್ರೀತಿ ಕುರುಡು ನಿಜ ಆದರೆ ವಾಸ್ತವದ ಸತ್ಯ ವನ್ನು ಅರಿಯುವುದು ಅಷ್ಟೆ ಮುಖ್ಯ. ಕಾವ್ಯಾಳದ್ದು ಚಿಕ್ಕ ವಯಸ್ಸು‌‌ ಮನೆಯವರು ಎಷ್ಟೆ ತಿಳಿ ಹೇಳಿದರು ಆಕೆ ಕೇಳದೆ ತನ್ನ ಕಾಲಿನ ಮೇಲೆ ಕಲ್ಲು ಹಾಕಿಕೊಂಡು ಬಿಟ್ಟಳು. ಆದರೆ ಹರೀಶ್ ವಯಸ್ಸಿನಲ್ಲಿ‌ ದೊಡ್ಡವನು. ವಯಸ್ಸಿಗೆ ತಕ್ಕಂತೆ ಅವನಿಗೆ ಪ್ರಬುದ್ಧತೆಯು ಇರುತಿತ್ತು. ಜಗತ್ತನ್ನು ಕಂಡವನು ಅವನಾದರು ಎರೆಡು ಕುಟುಂಬದೊಂದಿಗೆ ಮಾತನಾಡಿ ಸಮಯ‌ ಪಡೆದು ನಂತರ ಮದುವೆಯಾಗುವ ನಿರ್ಧಾರ ತೆಗೆದುಕೊಂಡಿದ್ದರೆ ಅವರಿಬ್ಬರು ಇಂದು ಅವರವರ ಕುಟುಂಬದೊಂದಿಗೆ ಇರುತ್ತಿದ್ದರು. ಆದರೆ ಅವರ ಜೀವನದಲ್ಲಿ ಅವರು ಅವಸರವಾಗಿ ತೆಗೆದುಕೊಂಡ ನಿರ್ಧಾರವೇ ಅವರ ಜೀವನಕ್ಕೆ ಮುಳುವಾಗಿತ್ತು. ಅದೇನೆ ಆಗಲಿ ಎಷ್ಟೆ ದೊಡ್ಡವರಾಗಲಿ ಹೆತ್ತವರ ಮಾತು ಕೇಳದಿದ್ದರೆ ಅನಾಹುತ ತಪ್ಪಿದ್ದಲ್ಲ ಎಂಬುವುದಕ್ಕೆ ಈ ಘಟನೆಯೇ ಸಾಕ್ಷಿ..