Advertisements

ದೇಶ-ಭಾಷೆ ಮೀರಿದ ಯಶ್ ಅಭಿಮಾನಿಗಳು. ನೇಪಾಳದಲ್ಲೂ ಶುರುವಾಗಿದೆ ಯಶ್ ಹವಾ!

Cinema

ನಮಸ್ತೆ ಸ್ನೇಹಿತರೆ, ನಿಮಗೆ ತಿಳಿದಿರುವಂತೆ, ಯಶ್ ಅವರು ಅಭಿನಯಿಸಿದ ಕೆಜಿಎಫ್ ಚಾಪ್ಟರ್ 1 ಭಾರತದಲ್ಲಿ ಧೂ’ಳೆಬ್ಬಿಸಿದೆ. ಅಭಿಮಾನಿಗಳ ಮತ್ತು ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದಿದೆ. ಕೆಜಿಎಫ್ ಚಾಪ್ಟರ್ 2 ಅನ್ನು ಬಿಡುಗಡೆ ಮಾಡಲು ಸಿನಿಮಾ ತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಕೆಜಿಎಫ್​ ಚಾಪ್ಟರ್​ 2 ಚಿತ್ರವನ್ನು ನೋಡಲು ಭಾರತ ಮಾತ್ರವಲ್ಲದೆ ನೇಪಾಳದಲ್ಲಿ ಇರುವ ಸಿನಿಪ್ರಿಯರು ಕೂಡ ಕಾಯುತ್ತಿದ್ದಾರೆ. ಅಲ್ಲಿಯೂ ಸಹ ‘ಕೆಜಿಎಫ್​ 2’ ಕ್ರೇಜ್​ ಜೋರಾಗಿದೆ. ನೇಪಾಳದ ವಾಹನಗಳ ಮೇಲೆ ‘ಕೆಜಿಎಫ್​ 2’ ಎಂದು ಬರೆದಿರುವ ಫೋಟೋ ಈಗ ವೈ’ರಲ್​ ಆಗಿದೆ.

Advertisements
Advertisements

ವಾಹನದ ಮೇಲೆ ‘ಕೆಜಿಎಫ್​ 2’ ಎಂದು ಬರೆಯಲಾಗಿದೆ ಎಂದರೆ ಇದು ಚಿತ್ರತಂಡ ಮಾಡುತ್ತಿರುವ ಪ್ರಮೋಷನ್​ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಇದು, ನೇಪಾಳದ ಯಶ್​ ಅಭಿಮಾನಿಯೊಬ್ಬರ ಲಾರಿ ಹಿಂಬದಿಯಲ್ಲಿ ಕಾಣಿಸಿದ ಬರಹವಾಗಿದೆ. ರಾಕಿಂಗ್ ಸ್ಟಾರ್​ ಮೇಲಿನ ಅಭಿಮಾನಕ್ಕಾಗಿ ಹಾಗೂ ಕೆಜಿಎಫ್​ 2 ಸಿನಿಮಾ ಮೇಲಿನ ನಿರೀಕ್ಷೆಗಾಗಿ ಆ ಅಭಿಮಾನಿಯು ತನ್ನ ಲಾರಿಯ ಹಿಂಬದಿಯಲ್ಲಿ ‘KGF 2 Coming Soon’ ಎಂದು ಬರೆಸಿದ್ದಾರೆ. ಯಶ್​ ಹವಾ ನೇಪಾಳದಲ್ಲೂ ಇದೆ ಎಂಬುದಕ್ಕೆ ಇದು ಸಾಕ್ಷಿ ಒದಗಿಸುತ್ತಿದೆ. ಈ ಫೋಟೋ ಕಂಡು ಯಶ್​ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಕೆಜಿಎಫ್​ 2 ತಂಡಕ್ಕೆ ಸಂಜಯ್​ ದತ್​, ರವೀನಾ ಟಂಡನ್,
ಮುಂತಾದವರ ಆಗಮನ ಆಗಿರುವುದರಿಂದ ಚಿತ್ರದ ತೂ’ಕ ಇನ್ನಷ್ಟು ಹೆಚ್ಚಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಜುಲೈ 16ರಂದು ವಿಶ್ವದಾದ್ಯಂತ ಈ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​ 17 ಕೋಟಿಗಿಂತಲೂ ಅ’ಧಿಕ ವೀಕ್ಷಣೆ ಪಡೆದಿದೆ.
‘ಕೆಜಿಎಫ್​ 2’ ತಂಡದಿಂದ ಸಿಗುವ ಎಲ್ಲಾ ಅಪ್​ಡೇಟ್​ಗಳಿಗಾಗಿ ಯಶ್​ ಫ್ಯಾನ್ಸ್​ ಮತ್ತು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಸಿನಿಮಾದ ಪ್ರಚಾರಕಾರ್ಯಗಳಿಗೆ ಚಿತ್ರತಂಡದಿಂದ ಚಾಲನೆ ಸಿಗುವ ನಿರೀಕ್ಷೆ ಇದೆ. ಟ್ರೇಲರ್​ ಮತ್ತು ಹಾಡುಗಳ ಮೇಲೆ ಸಿನಿಪ್ರಿಯರು ಸಿಕ್ಕಾ’ಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನೀವು ಕೆಜಿಎಫ್ ಚಾಪ್ಟರ್ 2 ನೋಡಲು ತುಂಬಾ ಕಾತರದಿಂದ ಕಾಯುತ್ತಿದ್ದೀರಾ? ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ.