Advertisements

ಕೆಜಿಎಫ್ ಬಗ್ಗೆ ರಾಪ್ ಸಾಂಗ್ ಮಾಡಿದ ಲಂಡನ್ ವ್ಯಕ್ತಿ.! ಇದಕ್ಕೆ ಪ್ರಶಾಂತ್ ನೀಲ್ ಮಾಡಿರುವ ಕೆಲಸ ಏನು ಗೊತ್ತಾ..? ಈತನಿಗೆ ಭಾರಿ ಡಿಮ್ಯಾಂಡ್ ಈಗ…

Cinema

ನಮಸ್ತೆ ಸ್ನೇಹಿತರೆ, ಕೆಜಿಎಫ್ ಚಾಪ್ಟರ್ 2 ಕ್ರೇಜ್ ಅಷ್ಟಿಷ್ಟಲ್ಲ ಕಂಣ್ರೀ. ನಮ್ಮ ಭಾರತ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಸಖತ್ ಹವಾ ಸೃಷ್ಟಿಸಿದೆ ಕೆಜಿಎಫ್ ಸಿನಿಮಾ. ಕೆಜಿಎಫ್ ಚಾಪ್ಟರ್ 1 ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದ್ಧೂರಿ ಬಿಡುಗಡೆಯಾಗಿ ಬ್ಲಾಕ್ಬಸ್ಟರ್ ಹಿ’ಟ್ ಆಗಿತ್ತು. ದಾಖಲೆಗಳ ಪ್ರಕಾರ ಕೆಜಿಎಫ್ ಚಾಪ್ಟರ್ 1 ಸಿನಿಮಾ ಸುಮಾರು 50ಕ್ಕೂ ಹೆಚ್ಚು ದೇಶಗಳಲ್ಲಿ 1000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಕೆಜಿಎಫ್ ಚಾಪ್ಟರ್ 1 ನೋಡಿದ ವೀಕ್ಷಕರೆಲ್ಲರೂ ಈಗ ಚಾಪ್ಟರ್ 2 ಚಿತ್ರಕ್ಕಾಗಿ ಎಲ್ಲೆಡೆ ಕಾತುರದಿಂದ ವೈಟ್ ಮಾಡುತ್ತಿದ್ದಾರೆ. ಸದ್ಯಕ್ಕೆ ಚಪ್ಟರ್ 2 ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸವೂ ಪೂರ್ಣಗೊಂಡಿದೆ. ಇನ್ನು ಬಾಕಿ ಇರುವುದು ಕೇವಲ ರಿಲೀಸ್ ಡೇಟ್ ಹೇಳುವುದು ಮಾತ್ರ. ಆದರೆ ಚೀ’ನಾ ರೋಗದ ಕಾರಣದಿಂದ ಸಿನಿಮಾ ತಂಡಕ್ಕೆ ರಿಲೀಸ್ ಡೇಟ್ ಹೇಳಲು ಸಾಧ್ಯವಾಗುತ್ತಿಲ್ಲ.

Advertisements
Advertisements

ಇಷ್ಟೆಲ್ಲಾ ನಡೆದರೂ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಹವಾ ಮಾತ್ರ ಇನ್ನೂ ಕಮ್ಮಿಯಾಗಿಲ್ಲ. ಪ್ರಪಂಚದಾದ್ಯಂತ ಪ್ರೇಕ್ಷಕರು ಕೆಜಿಎಫ್ ನೋಡಿ ಫಿದಾ ಆಗಿದ್ದಾರೆ. ಇದೀಗ, ಲಂಡನ್ ಮೂಲದ ವ್ಯಕ್ತಿಯೊಬ್ಬ ಕೆಜಿಎಫ್ ಚಾಪ್ಟರ್ 1 ಸಿನಿಮಾ ನೋಡಿ, ಅದಕ್ಕಾಗಿ ವಿಶೇಷವಾದ ಸಾಂಗ್ ಮಾಡಿದ್ದಾನೆ. ಕೆಜಿಎಫ್ ಚಾಪ್ಟರ್ 1 ಸಿನಿಮಾ ನೋಡಿ ಫಿದಾ ಆದ ಈ ಲಂಡನ್ ವ್ಯಕ್ತಿ, ತನ್ನ ಶೈಲಿಯಲ್ಲಿ ಕೆಜಿಎಫ್ ಬಗ್ಗೆ ಒಂದು ರಾಪ್ ಸಾಂಗ್ ಅನ್ನು ಮಾಡಿದ್ದಾನೆ. ಇದನ್ನು ನೋಡಿದ ಪ್ರಶಾಂತ ಏನು ಮಾಡಿದ್ದಾರೆ ಗೊತ್ತಾ.. ಮುಂದೆ ಓದಿ..

2018ರಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಚಿತ್ರವನ್ನು ಇತ್ತೀಚಿಗಷ್ಟೇ ನೋಡಿದ ಲಂಡನ್ ಪ್ರಜೆ ಫುಲ್ ಫಿದಾ ಆಗಿ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ”ನಾನು ಮೊದಲ ಸಲ ಭಾರತದ ಸಿನಿಮಾ ನೋಡಿದ ಸಿನಿಮಾ ಎಂದರೆ ಅದು ಕೆಜಿಎಫ್. ಈ ಸಿನಿಮಾ ನೋಡಿದ್ಮೇಲೆ ಈ ಸಿನಿಮಾ ಇಷ್ಟವಾಗಿ ಹಾಡೊಂದನ್ನು ಮಾಡಿದ್ದೇನೆ. ನೀವೆಲ್ಲರೂ ಎಂಜಾಯ್ ಮಾಡ್ತೀರಾ ಅಂತ ನನಗೆ ಭರವಸೆ ಇದೆ” ಎಂದಿದ್ದಾನೆ. ಈ ಹಾಡು ನೋಡಿದ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ “ಈ ಹಾಡು ತುಂಬಾ ಚೆನ್ನಾಗಿದೆ, ಧನ್ಯವಾದ. ನಮ್ಮನ್ನು ರಂಜಿಸಿದ್ದಕ್ಕೆ ಸಂತೋಷವಾಗಿದೆ” ಅಂತ ರಿಪ್ಲೇ ಮಾಡಿದ್ದಾರೆ. ಕೆಜಿಎಫ್ ಚಾಪ್ಟರ್ 2 ಸಿನಿಮಾಗಾಗಿ ನೀವು ಕಾಯುತ್ತಿದ್ದೀರಾ.. ಹಾಗಿದ್ದರೆ ಕಮೆಂಟ್ ಮಾಡಿ ತಿಳಿಸಿ.