Advertisements

ಫೇಮಸ್ ಟಿಕ್ ಟಾಕರ್ ಲೇಮ್ ನ ಗರ್ಲ್ ಫ್ರೆಂಡ್ ಯಾರು ಅಂತ ಗೊತ್ತಾ..? ಈಕೆ ಕೂಡ ತುಂಬಾ ಫೇಮಸ್…

Entertainment Kannada News

ನಮಸ್ತೆ ಸ್ನೇಹಿತರೆ, ಖಬಾನೆ ಲೇಮ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ.. ತನ್ನ ಟಿಕ್ ಟಾಕ್ ವಿಡಿಯೋಗಳ ಮೂಲಕ ತುಂಬಾ ಫೇಮಸ್ ಆಗಿದ್ದಾನೆ. ಸೋಶಿಯಲ್ ಮೀಡಿಯಾಗಳಲ್ಲಿ ಎಲ್ಲಿ ನೋಡಿದರೂ ಈತನದ್ದೇ ಹವಾ.. ಯಾವ ಟ್ರೋಲ್ ಪೇಜ್ ನೋಡಿದರು ಈತನ ಮುಖವೇ ನಮಗೆ ಕಾಣಿಸುತ್ತದೆ.. ಬೇರೆಯವರು ಮಾಡುವ ಕಷ್ಟದ ಕೆಲಸಗಳನ್ನು ಸುಲಭವಾಗಿ ಈತನ ರೀತಿಯಲ್ಲಿ ಕೈಗಳನ್ನು ಮುಂದೆ ತಂದು ತೋರಿಸುವ, ಟಿಕ್ ಟಾಕ್ ಮಾಡಿ ತುಂಬಾ ಫೇಮಸ್ಸ್ ಆದವನು ಈ ಖಬಾನೆ ಲೇಮ್.. ಈತನಿಗೆ ಸಪರೇಟ್ ಅಭಿಮಾನಿಗಳ ಗುಂಪೇ ಇದೆ. ಅಷ್ಟಕ್ಕೂ ಈತನ ಲೈಫ್ ಸ್ಟೈಲ್ ಏನು.. ಈತನ ಗರ್ಲ್ ಫ್ರೆಂಡ್ ಯಾರು ಅಂತ ನೋಡೋಣ ಬನ್ನಿ…

Advertisements
Advertisements

ಲೇಮ್ 9 ಮಾರ್ಚ್ 2000 ರಲ್ಲಿ ಇಟಲಿಯ ಚಿವಾಸ್ಸೊದಲ್ಲಿ ಜನಿಸಿದರು. ಚಿಕ್ಕವಯಸ್ಸಿನಲ್ಲಿ ಒಂದು ಸಾರ್ವಜನಿಕ ವಸತಿ ಸಂಕೀರ್ಣದಲ್ಲಿ ಬೆಳೆದರು. ಇವರು ಮುಸ್ಲಿಂ ಕುಟುಂಬದಿಂದ ಬಂದವರು. ಲೇಮ್ ಫುಟ್ಬಾಲ್ ಮತ್ತು ಬ್ಯಾಸ್ಕೆಟ್ ಬಾಲ್ ನಂತಹ ಅಥ್ಲೆಟಿಕ್ಸ್ ಆಟಗಾರರು ಆಗಿದ್ದಾರೆ. ಪ್ರೌಢಶಾಲೆಯಲ್ಲಿ ಅವರು ಜೂನಿಯರ್-ಮಟ್ಟದ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ಶಿಪ್ಗಳಲ್ಲಿ ಆಡಿದ್ದರು.
ಲೇಮ್ ಟಿಕ್‌ಟಾಕ್‌ಗಿಂತ ಮುಂಚೆ, ಸಿಎನ್‌ಸಿ ಯಂತ್ರ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ನಂತರ ಕೋವಿಡ್ -19 ಲಾಕ್‌ಡೌನ್‌ಗಳ ಸಮಯದಲ್ಲಿ ಮಾರ್ಚ್ 2020 ರಲ್ಲಿ ಲೇಮ್ ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದರು.

ಪ್ರಸ್ತುತ ಲೇಮ್ ಹೆಚ್ಚು ಫಾಲವರ್ಸ್ ಇರುವ ಇಟಾಲಿಯನ್ ಟಿಕ್‌ ಟಾಕರ್. ಲೇಮ್ ಪ್ರಸ್ತುತ ಟಿಕ್‌ಟಾಕ್‌ನಲ್ಲಿ 104.1 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದು, ವಿಶ್ವದಾದ್ಯಂತ ಅತಿಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಎರಡನೇ ಟಿಕ್‌ಟೋಕರ್ ಆಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 34.8 ಮಿಲಿಯನ್‌ಗಿಂತಲೂ ಹೆಚ್ಚು ಹೊಂದಿದ್ದಾರೆ. ಸ್ಟಾರ್ ಆಗಿರುವ ಲೇಮ್ ನ ಗರ್ಲ್ ಫ್ರೆಂಡ್ ಯಾರು ಅಂತ ನಿಮಗೆ ಯೋಚನೆ ಬಂದಿರಬಹುದು. ಹೌದು ಈತನ ಗರ್ಲ್ ಫ್ರೆಂಡ್ ಹೆಸರು ಜೈರಾ ನುಚ್ಚಿ. ಸುಮಾರು ಎರಡು ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದಾರೆ. ಲೇಮ್ ನ ಬಗ್ಗೆ ನೀವೇನಂತಿರಾ ಸ್ನೇಹಿತರೆ.. ಕಮೆಂಟ್ ಮಾಡಿ ತಿಳಿಸಿ.