ಭಾರತದಲ್ಲಿ ಅತ್ಯುತ್ತಮ ಸಾಧನೆ ಮಾಡುವ ದೇಶದ ಕ್ರೀಡಾಪಟುಗಳಿಗೆ ಕೊಡಮಾಡುವ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿ ಇಷ್ಟು ದಿನ ರಾಜೀವ್ ಗಾಂಧಿ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಆದರೆ ಈಗ ಅದನ್ನು ನರೇಂದ್ರಮೋದಿಯವರು ಬದಲಾಯಿಸಿದ್ದಾರೆ ಶುಕ್ರವಾರ ಟ್ವೀಟ್ ಮಾಡಿದ ಮೋದಿ ದೇಶದ ನಾಗರಿಕರು ಮಾಡಿರುವ ಮನವಿಯ ಮೇರೆಗೆ ಅತ್ಯುನ್ನತ ಕ್ರೀಡಾ ಪ್ರಶಸ್ತಿಯನ್ನು ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಅವರ ಹೆಸರನ್ನು ಇಟ್ಟು ಟ್ವೀಟ್ ಮಾಡಿದ್ದಾರೆ.

ಅಷ್ಟಕ್ಕೂ ಧ್ಯಾನ್ ಚಂದ್ ಯಾರು ಗೊತ್ತಾ. ನಿಮ್ಮ ಹಾಕಿ ಸ್ಟಿಕ್ಕಿನಲ್ಲಿ ಮ್ಯಾಗ್ನೇಟ್ ಇದೆ ಅಂತ ಅನುಸ್ತಿದೆ ಅದನ್ನ ಚೆಕ್ ಮಾಡ್ಬೇಕು ಅಂತ ಒಮ್ಮೆ ಬೇರೆ ದೇಶದಲ್ಲಿ ಆಡುವಾಗ ಧ್ಯಾನ್ ಚಂದರ ಹಾಕಿ ಸ್ಟಿಕ್ಕನ್ನ ಪರೀಕ್ಷೆ ಮಾಡಲಾಗಿತ್ತಂತೆ, ಇದು ನಿಜಾನೋ ಸುಳ್ಳೊ ಗೊತ್ತಿಲ್ಲ ಆದ್ರೆ ಧ್ಯಾನ್ ಚಂದ್ ಸ್ಟಿಕ್ಕಿಗೆ ಹಾಕಿ ಬಾಲ್ ಸಿಕ್ರೆ ಅವರ ಸ್ಕಿಕ್ಕಲ್ಲಿ ಮ್ಯಾಗ್ನೇಟ್ ಇದ್ಯೇನೊ ಅನ್ನೋ ಅನುಮಾನ ಮೂಡುವಷ್ಟು ಸೊಗಸಾಗಿ ಆಡ್ತಿದ್ರಂತೆ ಧ್ಯಾನ್ ಚಂದ್ ಚಿಕ್ಕ ವಯಸ್ಸಿನಲ್ಲೇ ಸೇನೆ ಸೇರಿದ ಧ್ಯಾನ್ ಚಂದರಿಗೆ ಹಾಕಿ ಆಟ ಬಿಡುವಿನ ವೇಳೆಯ ಹವ್ಯಾಸವಾಗಿತ್ತು.

ಬರು ಬರುತ್ತ ಅದರಲ್ಲಿ ಹೆಚ್ಚು ಮಗ್ನರಾಗಿ ಅಧ್ಬುತವಾಗಿ ಆಡಲು ಶುರು ಮಾಡಿದ ನಂತರ ಅವರನ್ನ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಯ್ತು, ಸತತ ಮೂರು ಒಲಿಂಪಿಕ್ ಕ್ರೀಡಾಕೂಟಗಳ ಫೀಲ್ಡ್ ಹಾಕಿಯಲ್ಲಿ ಭಾರತ ಸ್ವರ್ಣ ಪದಕ ಗೆದ್ದಿತ್ತು, ಈ ಮೂರು ಬಾರಿ ಗೆಲ್ಲುವಾಗಲು ಧ್ಯಾನ್ ಚಂದ್ ಭಾರತ ತಂಡದಲ್ಲಿ ಆಡಿದ್ದರು ಹಾಗೆ ಒಲೆಂಪಿಕ್ಸ್ ಕ್ರೀಡಾಕೂಟಗಳಲ್ಲಿ ಒಟ್ಟು 33 ಗೋಲು ಬಾರಿಸಿ ಭಾರತದ ಬಂಗಾರದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಬರೀ ಇಷ್ಟಕ್ಕೆ ಇವತ್ತು ಅವರ ಹೆಸರನ್ನ ಖೇಲ್ ರತ್ನ ಪ್ರಶಸ್ತಿಗೆ ಹೆಸರನ್ನ ಇಟ್ಟಿದಾರೆ ಅಂತ ಅನ್ಕಂಡ್ರೆ ಅದು ತಪ್ಪು ಕಲ್ಪನೆ.

ಅದಿನ್ನೂ ಅಂತಹ ಗುಣಮಟ್ಟ ಹೊಂದಿರದ ಕ್ರೀಡಾಂಗಣಗಳು ಇದ್ದ ಕಾಲ, ಇನ್ನು ಭಾರತದ ಆಟಗಾರರಿಗೆ ಗುಣಮಟ್ಟದ ಶೂಗಳು ಸಹ ಇರ್ಲಿಲ್ಲ, ಒಮ್ಮೆ ಜರ್ಮನಿಯ ವಿರುದ್ಧ ಆಡುವಾಗ ಸೆಕೆಂಡ್ ಆಫ್ ಶುರುವಾಗೊ ಮುನ್ನ ಹಾಕಿ ಅಂಗಳಕ್ಕೆ ನೀರನ್ನ ಸಿಂಪಡಿಸಿ ಸಾಧಾರಣ ಶೂಗಳನ್ನ ಹಾಕಿದ್ದ ಭಾರತೀಯ ಆಟಗಾರರಿಗೆ ಸಮಸ್ಯೆ ಉಂಟುಮಾಡಿ ಪಂದ್ಯವನ್ನ ಗೆಲ್ಲಲು ಪ್ಲಾನ್ ಮಾಡಿದ್ರಂತೆ, ಇದನ್ನ ಗಮನಿಸಿದ ಧ್ಯಾನ್ ಚಂದ್ ಶೂಗಳನ್ನ ಬಿಚ್ಚಿ ಬರಿಗಾಲಲ್ಲಿ ಆಡಿದ್ದಲ್ಲದೆ ಆ ಪಂದ್ಯದಲ್ಲಿ ಭರ್ಜರಿ ಗೋಲುಗಳನ್ನ ಬಾರಿಸಿ ಭಾರತಕ್ಕೆ ಗೆಲುವಿನ ಉಡುಗೊರೆ ಕೊಟ್ಟಿದ್ರಂತೆ, ಇದಾದ ನಂತರ ಧ್ಯಾನ್ ಚಂದರ ಅಮೋಘ ಆಟಕ್ಕೆ ಮರುಳಾದ ಹಿಟ್ಲರ್ ತನ್ನ ಬಳಿಗೆ ಕರೆಸಿ ಸೇನೆಯಲ್ಲಿ ಉನ್ನತ ಹುದ್ದೆ, ಜರ್ಮನಿಯ ಪೌರತ್ವ ಮತ್ತೆ ಇನ್ನು ಕೆಲವು ಆಮಿಷಗಳನ್ನ ಒಡ್ಡಿ ಜರ್ಮನಿಯ ಪರ ಆಡು ಅಂದಾಗ ಎಲ್ಲಾ ಆಮಿಷಗಳನ್ನ ನಯವಾಗಿ ತಿರಸ್ಕರಿಸಿ ಕಷ್ಟಾನೊ ಸುಖಾನೊ ನಾನು ನನ್ನ ದೇಶ ಭಾರತದ ಪರವಾಗೇ ಆಡುತ್ತೇನೆ ಅಂತ ಹೇಳಿ ಬಂದಿದ್ದ ಮಹಾನ್ ದೇಶಭಕ್ತ ಈ ಧ್ಯಾನ್ ಚಂದ್ ಇವರ ಹೆಸರನ್ನು ಈಗ ಖೇಲ್ ರತ್ನ ಪ್ರಶಸ್ತಿಗೆ ಇಡಲಾಗಿದೇ ಇದನ್ನು ವಿರೋಧಿಸಿದ ಕಾಂಗ್ರೆಸ್ ರಾಜಕೀಯದಲ್ಲಿ ಈ ರೀತಿಯ ಸಣ್ಣತನವನ್ನು ತೋರಿಸಬಾರದು ರಾಜೀವ್ ಗಾಂಧಿ ಮಾಜಿ ಪ್ರಧಾನಮಂತ್ರಿ ಅವರ ನೆನಪಿಗಾಗಿ ಹೆಸರನ್ನು ಇಡಲಾಯಿತು ಈ ರೀತಿಯ ನಡೆಯಿಂದ ಬಿಜೆಪಿ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಕಾಂಗ್ರೆಸ್ ವಿರೋಧಿಸಿದೆ ಇದರ ಬಗ್ಗೆ ನೀವೇನಂತಿರಾ ಫ್ರೆಂಡ್ಸ್.