Advertisements

ಬಿಗ್ ಬಾಸ್ ಕಿಶನ್ ತಾಯಿಗೆ ಮುಖ ಸು’ಟ್ಟು ಹೋಯ್ತು.. ನಂತರ ಏನಾಯ್ತು ಗೊತ್ತೇ!

Cinema

ನೋಡಲು ಹ್ಯಾಂಡ್ಸಮ್ ಆಗಿರುವ ಕಿಶನ್ ಒಬ್ಬ ಅದ್ಭುತ ಡ್ಯಾನ್ಸರ್ ಡ್ಯಾನ್ಸ್ ರಿಯಾಲಿಟಿ ಶೋ ನಲ್ಲಿ ಗೆದ್ದು ಮಿಂಚಿದವರು ಇವರ ಡ್ಯಾನ್ಸ್ ಗೆ ಇಡೀ ದೇಶವೇ ಸಲಾಂ ಹೊಡೆದಿತ್ತು. ಕನ್ನಡ ಚಿತ್ರರಂಗದಲ್ಲಿ ಮೆರೆಯ ಬೇಕೂ ಅನ್ನೋ ಆಸೆ ಹೊತ್ತಿರುವ ಕಿಶನ್ ಬಿಗ್ ಬಾಸ್ ಮನೆಗೂ ಕೂಡ ಎಂಟ್ರಿ ಕೊಟ್ಟಿದ್ದರು. ಆದರೆ ಅವರ ಕಣ್ಣೀರಿನ ಕಥೆ ಕೇಳಿದರೆ ಎಂಥವರಿಗೂ ಕಣ್ಣೀರು ಬರುತ್ತದೆ . ಚಿಕ್ಕಮಗಳೂರಿನ ಅಶೋಕ್ ಮತ್ತು ಸುಮಾ ಅವರ ಮಗ ಈ ಕಿಶನ್. ಇವರ ತಾಯಿ ಆಂಗ್ಲ ಇಂಡಿಯನ್ ಆಗಿದ್ದು ಅವರ ನಿಜವಾದ ಹೆಸರು ಜೀನ್ ರೋಸ್ ಫರ್ನಾಂಡಿಸ್ ಮದುವೆಯಾದ ಮೇಲೆ ಸುಮಾ ಎಂದು ಹೆಸರು ಬದಲಿಸಿಕೊಂಡರು. ಏಳು ತಿಂಗಳು ಮಗುವಾಗಿದ್ದ ಕಿಶನ್ ಗೆ ಹಾಲು ಬಿಸಿ ಮಾಡುವಾಗ ಸ್ಟವ್ ಬ್ಲಾಸ್ಟ್ ಆಗಿ ಸುಮಾ ಅವರ ಮುಖ ಸುಟ್ಟುಹೋಗಿತ್ತು ಹಲವಾರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡರು ಅವರ ಮುಖ ಇಂದಿನಂತೆ ಆಗಲಿಲ್ಲ.

[widget id=”custom_html-5″]

Advertisements
Advertisements

ಇದರಿಂದ ಡಿಪ್ರೆಷನ್ ಗೆ ಒಳಗಾದರೂ ಸುಮಾ ಅವರು. ಕಿಶನ್ ಗೆ ತಾಯಿಯೆಂದರೆ ಎಲ್ಲಿಲ್ಲದ ಪ್ರೀತಿ ಆದರೆ ತಾಯಿಯ ನಿಜವಾದ ಮುಖ ನೋಡುವ ಭಾಗ್ಯ ಕಿಶನ್ ಗೆ ಸಿಗಲಿಲ್ಲ. ಕಿಶನ್ ಗೆ ತಿಳುವಳಿಕೆ ಬರುವ ಹೊತ್ತಿಗೆ ತಾಯಿ ಮುಖ ಸುಟ್ಟು ಹೋಗಿದ್ದ ಕಾರಣ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು. ಎಂಟನೇ ವಯಸ್ಸಿನಲ್ಲಿ ಕಿಶನ್ ನನ್ನು ಡ್ಯಾನ್ಸ್ ಕ್ಲಾಸ್ ಗೆ ಸೇರಿಸಿದರು ಅವರ ತಾಯಿ ಮೊದಮೊದಲು ತನಗೆ ಡ್ಯಾನ್ಸ್ ಇಷ್ಟ ಇಲ್ಲದಿದ್ದರೂ ತಾಯಿಗೆ ಇಷ್ಟ ಎಂದು ಡ್ಯಾನ್ಸ್ ಮಾಡುತ್ತಿದ್ದರು ಈ ಕಿಶನ್. ನಂತರ ಚಿಕ್ಕವಯಸ್ಸಿನಲ್ಲೆ ಇವರನ್ನು ಬೆಂಗಳೂರಿನ ಬೋರ್ಡಿಂಗ್ ಸ್ಕೂಲ್ ಗೆ ಸೇರಿಸಲಾಯಿತು.ಹಾಗಾಗಿ ರಜೆಗಳಲ್ಲಿ ಮಾತ್ರ ತಾಯಿ ಜೊತೆ ಇರುವ ಅವಕಾಶ ಕಿಶನ್ ಗೆ ಸಿಗುತ್ತಿತ್ತು.

[widget id=”custom_html-5″]

ಇನ್ನೊಂದು ಕಡೆ ಚಿಕ್ಕವಯಸ್ಸಿನಲ್ಲಿ ತನ್ನ ಸುಂದರವಾದ ಮುಖವನ್ನು ಕಳೆದುಕೊಂಡ ಕಿಶನ್ ಅವರ ತಾಯಿ ಸುಮಾ ಅವರು ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡಲು ಸಂಕೋಚ ಪಡುತ್ತಿದ್ದರು ಇದರಿಂದ ಡಿಪ್ರೆಶನ್ ಗೆ ಹೋಗಿದ್ದ ಅವರು ಮದ್ಯಪಾನಕ್ಕೆ ಅ’ಡಿ’ಕ್ಟ್ ಆಗಿದ್ದರು ಎಂದು ಕಿಶನ್ ಹೇಳಿಕೊಂಡಿದ್ದಾರೆ. 2013 ರಲ್ಲಿ ಕಿಶನ್ ದೆಹಲಿಯ ಡ್ಯಾನ್ಸ್ ಸ್ಪರ್ಧೆಗೆ ಹೋಗಿದ್ದಾಗ ನಿಮ್ಮ ತಾಯಿಗೆ ಹುಷಾರಿಲ್ಲ ಬೇಗ ಮನೆಗೆ ವಾಪಸ್ಸು ಬಾ ಎಂದು ಅವರ ತಂದೆ ಕಾಲ್ ಮಾಡುತ್ತಾರೆ. ಆಗ ತಕ್ಷಣ ದೆಹಲಿಯಿಂದ ಹೊರಟು ಬಂದ ಕಿಶನ್ ಗೆ ಮನೆಯ ಮುಂದೆ ಕಂಡಿದ್ದು ತಾಯಿಯ ಮೃತದೇಹ ಹೌದು ತಾಯಿ ಮರಣದ ಸುದ್ದಿ ಹೇಳದೆ ಅವರಿಗೆ ಹುಷಾರಿಲ್ಲ ಎಂದಷ್ಟೇ ಕಿಶನ್ ಗೆ ಅವರ ತಂದೆ ಹೇಳಿದ್ದರು. ತಾಯಿ ಇಲ್ಲ ಅನ್ನೋದನ್ನ ಅರಗಿಸಿಕೊಳ್ಳಲಾಗದ ಕಿಶನ್ ಡ್ಯಾನ್ಸ್ ಮಾಡುವುದನ್ನು ಬಿಟ್ಟು ಬಿಡಬೇಕೆಂದು ನಿರ್ಧಾರಕ್ಕೆ ಬರುತ್ತಾರೆ. ಆದರೆ ತಾಯಿಗೆ ಡ್ಯಾನ್ಸ್ ಇಷ್ಟ ಎಂದು ಮತ್ತೆ ಡ್ಯಾನ್ಸ್ ಮಾಡಲು ಶುರುಮಾಡಿದ್ದಾರೆ..

[widget id=”custom_html-5″]