Advertisements

ತಂಗಿಯರಿಗೋಸ್ಕರ ಕೋಟಿ ಕೋಟಿ ದುಡಿದು ಕೊನೆಗೆ ತಂಗಿಯರಿಂದಾನೆ ಬೀದಿಗೆ ಬಿದ್ದ ಈ ನಟಿ.. ಅಷ್ಟಕ್ಕೂ ತಂಗಿಯರು ಮಾಡಿದ ಖತರ್ನಾಕ್ ಕೆಲಸ ಎಂತಹದ್ದು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ತೆರೆಯ ಮೇಲೆ ನಕ್ಕು ನಲಿಸುವ ಅದೆಷ್ಟೋ ಹಾಸ್ಯ ನಟರ ಬದುಕಿನಲ್ಲಿ ಅದೆಷ್ಟೋ ಹೇಳಿಕೊಳ್ಳಲಾರದ ನೋವುಗಳು, ಕಷ್ಟಗಳಿರುತ್ತವೆ. ಆದರೆ ತಮ್ಮ ನೋವು ಕಷ್ಟಗಳನ್ನು ಮರೆಮಾಚಲು ಹಾಸ್ಯ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸುತ್ತಾರೆ.. ಈಕೆ ದಕ್ಷಿಣ ಭಾರತದ ಸಿನಿಮಾ ರಂಗದ ಖ್ಯಾತ ಹಾಸ್ಯ ನಟಿ. ಹುಟ್ಟುತ್ತಲೇ ಕಷ್ಟಗಳನ್ನು ಬೆನ್ನಿಗೆ ಅಂಟಿಸಿಕೊಂಡು ಬೆಳೆದ ಈಕೆ ತನ್ನ ಒಂಬತ್ತನೆಯ ವಯಸ್ಸಿನಲ್ಲಿಯೇ ಬದುಕಲು ಬಣ್ಣ ಹಚ್ಚಿದರು.. ಕೊವೈ ಸರಳ ದಕ್ಷಿಣ ಭಾರತ ಸಿನಿಮಾ ರಂಗದ ಪ್ರಸಿದ್ಧ ಹಾಸ್ಯ ನಟಿ. ಈಕೆ ಹುಟ್ಟಿದ್ದು ತಮಿಳುನಾಡಿನ ಕೊಯಮತ್ತೂರಿನಲ್ಲಿ..

ತುಂಬಾ ಬಡ ಕುಟುಂಬದಿಂದ ಬಂದ ಈಕೆ ಸಂಸಾರ ಸಾಗಿಸಲು ತಮ್ಮ ಒಂಬತ್ತನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟರು. ತಮ್ಮ ಅದ್ಬುತ ಹಾಸ್ಯ ನಟನೆಯಿಂದ ಕೊವೈ ಸರಳ ತಮಿಳು ಚಿತ್ರರಂಗದಲ್ಲಿ ಪ್ರಸಿದ್ಧ ಹಾಸ್ಯ ನಟಿಯಾಗಿ ಗುರುತಿಸಿಕೊಂಡರು. ಈಗೆ ನಂತರದಲ್ಲಿ ಕೇವಲ ತಮಿಳು ಮಾತ್ರವಲ್ಲದೇ ತೆಲುಗು, ಮಲಯಾಳಂ, ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದರು. ಕೊವೈ ಸರಳ ಅವರು ಕನ್ನಡದಲ್ಲಿ ಅಳಿಮಯ್ಯ, ಹೆಂಡ್ತಿ ಹೇಳಿದರೆ ಕೇಳಬೇಕು ಹಾಗೂ 2007 ರಲ್ಲಿ ಅರ್ಜುನ್ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.. ಈಗೆ ದಕ್ಷಿಣ ಭಾರತದ ಎಲ್ಲಾ ಬಾಷೆಗಳಲ್ಲಿ ತಮ್ಮ ಹಾಸ್ಯದ ಹೊನಲನ್ನು ಹರಿಸಿದರು. ಈಗೆ ಸಿನಿಮಾ ರಂಗದಲ್ಲಿ ಖ್ಯಾತಿ ಹಣ ಗಳಿಸಿದ ಕೊವೈ ಸರಳ ಅವರು ವಿವಾಹ ಆಗಲಿಲ್ಲ..

ಸರಳ ಅವರ ತಂದೆ ತಾಯಿಗೆ ಐದು ಜನ ಪುತ್ರಿಯರಲ್ಲಿ ಸರಳ ಅವರೇ ಹಿರಿಯ ಮಗಳು. ಬಾಲ್ಯದಿಂದ ಸರಳ ಅವರಿಗೆ ತಮ್ಮ ನಾಲ್ಕು ಜನ ತಂಗಿಯರ ಮೇಲೆ ಅಪಾರ ಪ್ರೀತಿ ಇತ್ತು. ಸಿನಿಮಾ ರಂಗದಲ್ಲಿ ಪ್ರಸಿದ್ಧ ನಟಿಯಾಗಿ ಗುರುತಿಸಿಕೊಂಡ ಮೇಲೆ ಸರಳ ಅವರು ತಮ್ಮ ನಾಲ್ಕು ಜನ ತಂಗಿಯರಿಗೆ ಉತ್ತಮ ವಿಧ್ಯಾಭ್ಯಾಸ ಕೊಡಿಸಿ ಒಳ್ಳೆಯ ಕಡೆ ಮದುವೆ ಮಾಡಿ ತಮ್ಮ ತಂಗಿಯರ ಜೀವನವನ್ನು ಭದ್ರ ಪಡಿಸಿದರು.. ಇನ್ನೂ ಸರಳ ಅವರು ಮಾತ್ರ ವಿವಾಹ ಆಗಲಿಲ್ಲ. ಮದುವೆಯಾಗದೆ ಹಾಗೆ ಉಳಿದ ಅವರನ್ನು ಕೆಲವು ವರ್ಷಗಳ ನಂತರ..

ಅವರ ತಂಗಿಯರು ಒಂಟಿಯಾಗಿ ಮಾಡಿ ಅವರಲ್ಲಿದ್ದ ಹಣವನ್ನೆಲ್ಲಾ ತೆಗೆದುಕೊಂಡು ವಿದೇಶಕ್ಕೆ ಹೊರಟು ಹೋದರು.. ಇನ್ನೂ ಇದೇ ಸಮಯದಲ್ಲಿ ಸರಳ ಅವರಿಗೆ ಸಿನಿಮಾದಲ್ಲಿ ಅವಕಾಶಗಳು ಕೂಡ ಕಡಿಮೆ ಆದವು. ಈಗೆ ಕೈಯಲ್ಲಿ ಹಣವಿಲ್ಲದೆ, ಸಿನಿಮಾದಲ್ಲಿ ಅವಕಾಶಗಳು ಇಲ್ಲದೇ ಸರಳ ಅವರು ತುಂಬಾ ತೊಂದರೆಗೆ ಸಿಲುಕಿದರು.. ಪ್ರೀತಿಯಿಂದ ಸಾಕಿ ಸಲುಹಿದ ನಾಲ್ಕು ಜನ ತಂಗಿಯರು ಸರಳ ಅವರ ಮೇಲೆ ಯಾವುದೇ ಕನಿಕರ ಕರುಣೆ ತೋರದೆ ಒಂಟಿ ಮಾಡಿ ವಿದೇಶಕ್ಕೆ ಹೋಗಿದ್ದು ತುಂಬಾ ಬೇಜಾರಿನ ಸಂಗತಿ. ಇನ್ನೂ ಪ್ರಸ್ತುತ ಕೊವೈ ಸರಳ ಅವರಿಗೆ ಸಿನಿಮಾದಲ್ಲಿ ಕೆಲವು ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದು ಅವರ ಜೀವನ ಉತ್ತಮವಾಗಲಿ ಎಂದು ಎಲ್ಲರೂ ಆಶಿಸೋಣ.