ನಮಸ್ತೆ ಸ್ನೇಹಿತರೆ, ನಮ್ಮ ಕರ್ನಾಟಕದಲ್ಲಿ ಸುಮಾರು ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಂದ್ರೆ, ಸುಮಾರು ಜನ ಕೆಲಸಕ್ಕೆ ಹೋಗಬೇಕಾದ್ರೆ, ಮಾರ್ಕೆಟ್ ಹೋಗಬೇಕಾದ್ರೆ ಅವರು ನಂಬಿಕೊಂಡಿರುವುದು ಮಾತ್ರ ಕೆಎಸ್ಆರ್ಟಿಸಿ ಬಸ್ಸನ್ನು. ಆದರೆ ಎಷ್ಟೋ ಜನರಿಗೆ ಕೆಎಸ್ಆರ್ಟಿಸಿ ಇತಿಹಾಸ ಗೊತ್ತೇ ಇಲ್ಲ. ಹೇಗೆ ಶುರುವಾಯಿತು, ಎಲ್ಲಿಂದ ಇದು ಜನರ ಸೇವೆ ಮಾಡಲಿಕ್ಕೆ ಆರಂಭಿಸಿದೆ ಎಂಬ ಹಲವು ವಿಚಾರಗಳ ಬಗ್ಗೆ ಅರಿವೇ ಇರುವುದಿಲ್ಲ. ಈ ಲೇಖನಿಯ ಮೂಲಕ ಕೆಎಸ್ಆರ್ಟಿಸಿ ಬಗೆಯ ಸಂಕ್ಷಿಪ್ತ ನೋಟ ನಿಮ್ಮ ಮುಂದೆ ಇಡಲಿದ್ದೇವೆ.. ಮೊದಲಿಗೆ ಸಾರಿಗೆ ವ್ಯವಸ್ಥೆಯನ್ನು ಆರಂಭಿಸಿದ್ದು ಮೈಸೂರು ಸರ್ಕಾರದ ಅವಧಿಯಲ್ಲಿ. 12 ಸೆಪ್ಟೆಂಬರ್ 1948ರ ಹೊತ್ತಿಗೆ ಮೈಸೂರು ಸರ್ಕಾರ ಸಾರ್ವಜನಿಕರಿಗೆ ಸಮರ್ಪಕವಾದ ಸಾರಿಗೆ ವ್ಯವಸ್ಥೆ ಮಾಡಬೇಕು ಎಂಬ ಉದ್ದೇಶದಿಂದ ಎಂಜಿಆರ್ಟಿಡಿ ಎಂಬ ಸಾರಿಗೆ ಶುರು ಆಗುತ್ತದೆ. ಮುಂದೆ 1961 ಅಗಸ್ಟ್ 1ರ ಹೊತ್ತಿಗೆ ಎಂಜಿಆರ್ಟಿಡಿ ಸ್ವತಂತ್ರ ಕಾರ್ಪರೇಶನ್ ಆಗಿ ಬದಲಾವಣೆಯಾಗುತ್ತೆ..

ಅಲ್ಲಿಂದ ಎಂಎಸ್ಆರ್ಟಿಸಿ ಎಂಬ ಹೆಸರನ್ನು ಪಡೆದುಕೊಂಡು ಕಾರ್ಯನಿರ್ವಹಿಸುತ್ತದೆ. ನವೆಂಬರ್ 1, 1973 ರಂದು ಮೈಸೂರು ರಾಜ್ಯವನ್ನು ಕರ್ನಾಟಕ ಅಂತ ಮರುನಾಮಕಾರಣ ಮಾಡಿದ ನಂತರ, ಎಂಎಸ್ಆರ್ಟಿಸಿ ಬದಲಾಗಿ ಕೆಎಸ್ಆರ್ಟಿಸಿ ಆಗಿ ಕಾರ್ಯನಿರ್ವಹಿಸಲು ಶುರು ಮಾಡುತ್ತದೆ. ಮುಂದೆ ಕೆಎಸ್ಆರ್ಟಿಸಿ ಬೆಂಗಳೂರಿನಲ್ಲಿ ಬಿಎಂಟಿಸಿ ಆಗಿ ವಿಂಗಡಣೆಯಾಗಿ ಸಾರಿಗೆ ಸೇವೆ ಒದಗಿಸಲು ಶುರುಮಾಡುತ್ತದೆ. ನಂತರ ಉತ್ತರ ಕರ್ನಾಟಕದ ಭಾಗದ ಜನರಿಗೆ ಸೇವೆ ನೀಡುವ ಸಲುವಾಗಿ ವಾಯುವ್ಯ ಕರ್ನಾಟಕ ಸಾರಿಗೆಯಾಗಿ, ಈಶಾನ್ಯ ಕರ್ನಾಟಕದ ಜನ ಹಿತಕ್ಕಾಗಿ ಈಶಾನ್ಯ ಕರ್ನಾಟಕ ಸಾರಿಗೆಯಾಗಿ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲು ಆರಂಭಿಸುತ್ತದೆ.

ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಕೆಎಸ್ಆರ್ಟಿಸಿಯ ಮುಖ್ಯ ಕಚೇರಿ ಇದೆ. 37 ಸಾವಿರಕ್ಕೂ ಅಧಿಕ ಜನ ಈ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ. ನಿತ್ಯವೂ ಲಕ್ಷಾಂತರ ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದುಕೊಂಡು ಹೋಗುವ ಕೆಲಸವನ್ನು ಕೆಎಸ್ಆರ್ಟಿಸಿ ಸಿಬ್ಬಂದಿ ಮಾಡುತ್ತಾರೆ. ಹಾಗೆಯೇ ಕೆಎಸ್ಆರ್ಟಿಸಿಯಲ್ಲಿ ಓಲಾ ಬಸ್ಗಳನ್ನು ಸಹ ಬಳಸಲಾಗುತ್ತಿದ್ದು, ಭಾರತದಲ್ಲಿ ಮೊಟ್ಟ ಮೊದಲು ಈ ಓಲಾ ಬಸ್ಗಳನ್ನು ಬಳಸಿದ ಹೆಗ್ಗಳಿಕೆ ಬೆಂಗಳೂರಿಗೆ ಸಲ್ಲುತ್ತದೆ.. ಕೆಎಸ್ಆರ್ಟಿಸಿ ಒಟ್ಟಾರೆಯಾಗಿ 8 ಸಾವಿರ ಬಸ್ ಹೊಂದಿದ್ದು, ಎನ್ಇಕೆಆರ್ಟಿಸಿ 4 ಸಾವಿರಕ್ಕೂ ಹೆಚ್ಚು ಬಸ್ಗಳನ್ನು ಹೊಂದಿದೆ. ಎನ್ಡಬ್ಲೂಕೆಆರ್ಟಿಸಿ 4 ಸಾವಿರದ 700 ಕ್ಕೂ ಹೆಚ್ಚು ಬಸ್ಗಳನ್ನು ಹೊಂದಿದೆ. ಇನ್ನು ಬಿಎಮ್ ಟಿಸಿ 4 ಸಾವಿರಕ್ಕೂ ಹೆಚ್ಚು ಬಸ್ಗಳನ್ನು ಹೊಂದಿದೆ.. ನೀವೆಂದಾದರೂ ಈ ಬಸ್ಗಳಲ್ಲಿ ಪ್ರಯಾಣ ಮಾಡಿದ್ದೀರಾ..? ಈ ಸಾರಿಗೆ ಸಂಸ್ಥೆಯ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.
