Advertisements

ಕೂದಲು ಉದ್ದವಾಗಿ ಬೆಳೆಯಬೇಕೆ ಹಾಗಾದರೆ ಇದನ್ನೊಮ್ಮೆ ಹಚ್ಚಿ ಸಾಕು..

Health

ಕೂದಲು ಉದ್ದವಾಗಿ ಬೆಳೆಯಬೇಕು ಕೂದಲಿನಲ್ಲಿ ಯಾವುದೇ ಸಮಸ್ಯೆ ಇಲ್ಲದೆ, ತಲೆ ಹೊಟ್ಟು, ಕೂದಲು ಉದುರುವುದು ಇಂತಹ ಯಾವುದೇ ಸಮಸ್ಯೆ ಇರಬಾರದು ಎಂದರೆ ಕೂದಲಿನ ಸರಿಯಾದ ಆರೈಕೆ ಮಾಡಬೇಕಾಗುತ್ತದೆ. ಕೂದಲಿನ ಆರೈಕೆಯೂ ಕೂಡ ನಿರಂತರವಾಗಿ ಮಾಡುತ್ತಿದ್ದರೆ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ. ಅದು ಬಿಟ್ಟು ಕೇವಲ ಒಂದು ದಿನ ನೀವು ಯಾವುದಾದರೂ ಎಣ್ಣೆ ಬಳಸಿ ಮತ್ತೆ ತಿಂಗಳಾನುಗಟ್ಟಲೆ ಏನನ್ನೂ ಹಚ್ಚದೆ ಹಾಗೇ ಬಿಟ್ಟರೆ ಕೂದಲು ಇನ್ನಷ್ಟು ಹಾಳಾಗುತ್ತದೆಯೇ ಹೊರತು ಸುಂದರವಾಗಿ ಬೆಳೆಯುವುದಿಲ್ಲ.

ಹಾಗಂದ ಮಾತ್ರಕ್ಕೆ ಕೂದಲಿನ ಆರೈಕೆಗಾಗಿ ರಾಸಾಯನಿಕ ಉತ್ಪನ್ನಗಳನ್ನು ಬಳಸುವುದು ಕೂಡ ತಪ್ಪು. ಯಾಕೆಂದರೆ ರಾಸಾಯನಿಕಗಳನ್ನು ಬಳಸಿದಷ್ಟೂ ಕೂದಲು ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ನಾವಿಲ್ಲಿ ಒಂದು ಅತ್ಯುತ್ತಮವಾದ ಮನೆಮದ್ದು ಮಾಡುವುದನ್ನು ತಿಳಿಸಿ ಕೊಡುತ್ತಿದ್ದೇವೆ. ಕೂದಲಿನ ಆರೈಕೆಗೆ ಬೇಕಾಗುವ ಎಣ್ಣೆಯನ್ನು ತಯಾರಿಸಲು ನಮಗೆ ಕೇವಲ ಎರಡೇ ಎರಡು ವಸ್ತುಗಳು ಸಾಕು. ಅವು ಯಾವುದೆಂದರೆ ಮೆಂತ್ಯ ಹಾಗೂ ಎಣ್ಣೆ.ತಯಾರಿಸುವ ವಿಧಾನ: ಮೆಂತ್ಯ ಬೀಜ, ದೇಹಕ್ಕೆ ತಂಪನ್ನು ನೀಡುವ ಅತ್ಯಂತ ಉತ್ತಮವಾದ ಪದಾರ್ಥ. ಹಾಗಾಗಿ ಇದನ್ನು ಸಾಮಾನ್ಯವಾಗಿ ಎಲ್ಲಾ ಅಡುಗೆಗಳಲ್ಲಿಯೂ ಬಳಸುತ್ತಾರೆ. ಇಂದು ಈ ಮೆಂತ್ಯ ಬೀಜವನ್ನು ಬಳಸಿ ತಯಾರಿಸಬಹುದಾದ ಎಣ್ಣೆಯ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

Advertisements
Advertisements

ಎರಡು ಚಮಚ ಮೆಂತ್ಯ ಬೀಜವನ್ನು ಒಂದು ಲೋಟ ನೀರಿನಲ್ಲಿ ನೆನೆಹಾಕಿ. ಇದನ್ನು ನಾಲ್ಕರಿಂದ ಐದು ಗಂಟೆ ನೆನೆಹಾಕಿದರೆ ಸಾಕು. ಆದರೂ ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ಬಳಸಿದರೆ ಇನ್ನೂ ಉತ್ತಮ ಫಲಿತಾಂಶವನ್ನು ಪಡೆಯಬಹುದು.ರಾತ್ರಿಯಿಡಿ ನೆನೆಸಿಟ್ಟ ಮೆಂತ್ಯ ಚೆನ್ನಾಗಿ ಉಬ್ಬಿಕೊಂಡಿರುತ್ತದೆ. ಒಂದು ಪಾತ್ರೆಯಲ್ಲಿ ಅರ್ಧ ಲೋಟ ನೀರನ್ನು ಹಾಕಿ ಕುದಿಯಲು ಬಿಡಿ ನಂತರ ಮೆಂತ್ಯ ಬೀಜವನ್ನು ನೆನೆಸಿದ ನೀರಿನ ಸಮೇತ ಪಾತ್ರೆಗೆ ಹಾಕಿ. ಈಗ ಚೆನ್ನಾಗಿ ಕುದಿಸಿ. ನೀರು ಕುದಿದು ಅರ್ಧದಷ್ಟು ಕಡಿಮೆಯಾದ ಮೇಲೆ ಅದನ್ನು ತಣ್ನಗಾಗಲು ಬಿಡಿ.

ಆದರೆ ಇದು ಸಂಪೂರ್ಣವಾಗಿ ತಣ್ಣಗಾಗುವ ಅಗತ್ಯವಿಲ್ಲ. ಉಗುರು ಬೆಚ್ಚಗೆ ಆದ ಕೂಡಲೆ ಇದಕ್ಕೆ ಅರ್ಧ ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ. ನಂತರ ಈ ಎಣ್ಣೆಯನ್ನು ಸಮವಾಗಿ ನಿಮ್ಮ ಕೂದಲಿನ ಎಲ್ಲಾ ಭಾಗಗಳಿಗೂ ತಾಗುವಂತೆ ಹಚ್ಚಿ.ಈ ಎಣ್ಣೆ ನೈಸರ್ಗಿಕವಾಗಿರುವ್ದರಿಂದ ಇದನು ಹಚ್ಚಿ ಕೂಡಲೆ ಕೂದಲನ್ನು ತೊಳೆಯಬೇಕಾದ ಅಗತ್ಯವಿಲ್ಲ. ಒಂದು ದಿನದ ನಂತರ ತೊಳೆದರೆ ಸಾಕು. ವಾರಕ್ಕೊಮ್ಮೆಯಾದರೂ ಈ ಮನೆಮದ್ದನ್ನು ಮಾಡಿ, ನಿಮ್ಮ ಕೂದಲಿನಲ್ಲಾಗುವ ಉತ್ತಮ ಬದಲಾವಣೆಯನ್ನು ನೀವೇ ಗಮನಿಸಿ.