Advertisements

ಕುರಿ ಕಾಯುವ ಹುಡುಗಿ ಮಾಡಿದ ಕೆಲಸಕ್ಕೆ ಇಡೀ ದೇಶ ಸೆಲ್ಯೂಟ್ ಮಾಡ್ತಿದೆ? ನೋಡಿ..

Kannada News

ನಮಸ್ಕಾರ ಪ್ರಿಯ ಗೆಳೆಯರೆ ಇಂದಿನ ಕಾಲದಲ್ಲಿ ಎಲ್ಲ ಇದ್ದು ಓದಲು ಹಿಂದೇಟು ಹಾಕುವ ವಿದ್ಯಾರ್ಥಿಗಳನ್ನು ನಾವು ನೋಡಿದ್ದೇವೆ. ಓದುವುದನ್ನು ಮರೆತು ಅಪ್ಪ ಕೊಟ್ಟ‌ ಪಾಕೆಟ್ ಮನೆಯಲ್ಲಿ ಪಾರ್ಟಿ ಮಾಡಿ ಮನೆಗೆ ಬರುವವರನ್ನು ನೋಡಿದ್ದೇವೆ.

ಕೆಲವರು ಎಲ್ಲವು ಇದ್ದು ಓದಲು ಮನಸ್ಸು ಮಾಡುವುದಿಲ್ಲ. ಆದರೆ ಇನ್ನು ಕೆಲವು ವಿದ್ಯಾರ್ಥಿಗಳು ತಮ್ಮ ಜೀವನ ಕುಟುಂಬಕ್ಕಾಗಿ ಹಗಲಿರುಳೂ ದುಡಿದು ರಾತ್ರಿ‌ ಸಿಕ್ಕ ಸಮಯದಲ್ಲಿ ಓದಿ ಜೀವನದ ಗುರಿ ಮುಟ್ಟಿದ ಅನೇಕ ಉದಾಹರಣೆಗಳು‌‌ ನಮ್ಮ ಕಣ್ಣ ಮುಂದಿವೆ.

ಹೌದು ಮಾಡಲೇಬೇಕು, ನಾಲ್ಕು ಜನರಿಗೆ ಸಾಧಿಸಿ ತೋರಿಸಬೇಕು, ನನ್ನ ತಂದೆ ತಾಯಿಯನ್ನು ಈ ಬಡತನದಿಂದ ಹೊರಗೆ ತರಲೇಬೇಕು ಎಂದವರು ಕಠಿಣ ಪರಿಶ್ರಮದಿಂದ ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. ಹಗಲಿರುಳೂ ‌ದುಡಿದು ಸಾಧನೆ ಮಾಡಿದವರ ಪಟ್ಟಿಗೆ ಅನೇಕರು ಸೇರುತ್ತಾರೆ.

ಅಂತಹ‌ ಮಹಾನ ಸಾಧಕರ ಸಾಲಿನಲ್ಲಿ ನಿಲ್ಲುತ್ತಾಳೆ‌ ಈ ಹುಡುಗಿ. ಅವಳು ಮಾಡಿದ ಸಾಧನೆಗೆ ಈಡೀ ಹಳ್ಳಿಯೇ ಹೆಮ್ಮೆ ಪಟ್ಟಿದೆ. ಯಾರು ಆ ಹುಡುಗಿ, ಆಕೆ ಮಾಡಿದ್ದ ಸಾಧನೆಯಾದ್ರು ಏನು ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ತಪ್ಪದೆ ಓದಿ ಹಾಗೂ ನಿಮ್ಮ ಗೆಳೆಯರಿಗೆ ಶೇರ್ ಮಾಡಿ.

ರಾಜ್ಯಸ್ಥಾನದ ತನಗಜ್ಜಿ‌ ಎಂಬ ಹಳ್ಳಿಯಲ್ಲಿ ವಾಸ ‌ಮಾಡುತ್ತಿರುವ ಈ‌ ಹುಡುಗಿ ರವೀಣಾ ಗುರ್ಜಾಲ. ಇಕೆ‌ ಅವರ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಕಲಿತು ಇಂದು ದೊಡ್ಡ ಮಟ್ಟದ ಸಾಧನೆ ಮಾಡಿದ್ದಾಳೆ.‌ ಇಕೆ ತಂದೆ ಆಕೆ‌ ಹನ್ನೆರಡು ವರ್ಷಗಳ ಹಿಂದೆ ಹಾವು‌ ಕಚ್ಚಿ ಸಾವನ್ನಪ್ಪಿದರು. ‌

ಇನ್ನು ಇವಳ ತಾಯಿ‌ ರುದ್ರೋಗಿಯಾಗಿದ್ದು ಅವರಿಗು ಸಹ ಚಿಕಿತ್ಸೆ ನೀಡಲಾಗುತ್ತಿದೆ. ಇವರದ್ದು ಪುಟ್ಟ ಕುಟುಂಬ.‌ಹಳ್ಳಿಯ ಗುಡಿಸಲು ಒಂದರಲ್ಲಿ ವಾಸವಾಗಿದ್ದರು.‌ಇವರು ಆರ್ಥಿಕ ಮಟ್ಟ ಎಷ್ಟು ಕುಸಿದಿತ್ತು ಎಂದರೆ,‌ಇವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳಲು ಸಹ ಹಣವಿಲ್ಲದ ಸ್ಥಿತಿ ಅವರದ್ದಾಗಿತ್ತು.

ಆದರೆ ರವೀಣಾ ಕತ್ತಲೆಯನ್ನೆ ಸ್ಪೂರ್ತಿಯಾಗಿಸಿಕೊಂಡು ದೀಪದ ಏಳೆ ಬೆಳಕಿನಲ್ಲಿ ಓದಿ ಇಂದು ಎಲ್ಲರು ಬೆರಗಾಗುವಂತೆ ಸಾಧನೆ ಮಾಡಿದ್ದಾಳೆ. ಇವರ ಕುಟುಂಬದಲ್ಲಿ ತಂದೆ ತಾಯಿಯ ಜೊತೆಗೆ ಅವಳಿಗೆ ಒಬ್ಬ ಅಕ್ಕ ಹಾಗೂ ತಂಗಿ ಹಾಗೂ ತಮ್ಮನು ಸಹ ಇದ್ದಾರೆ.‌ ಅಕ್ಕನಿಗೆ ಈಗಾಗಲೇ‌ ಮದುವೆ ಮಾಡಿ ಕೊಡಲಾಗಿದೆ.

ಇನ್ನು ಉಳಿದವರಲ್ಲಿಯೇ ದೊಡ್ಡ ಮಗಳಾದ ರವೀಣಾ ತಂದೆ ಮರಣದ ನಂತರ ಹಾಗೂ ತಾಯಿಗೆ ಅನಾರೋಗ್ಯದ ಸ್ಥಿತಿಯಿಂದಾಗಿ ಕುಟುಂಬ ‌ನಿರ್ವಹಣೆಯ ಜವಾಬ್ದಾರಿಯನ್ನು ರವೀಣಾ ಹೊರುತ್ತಾಳೆ.‌ ತಾನು ಕಲಿಯುತ್ತಾ ತನ್ನ ತಮ್ಮ ತಂಗಿಯ ಓದಿನ ಖರ್ಚನ್ನು ನೋಡಿಕೊಳ್ಳಲು ಕುರಿ ಕಾಯುವುದು, ಮನೆಮನೆಗೆ ಹೋಗಿ ಕೆಲಸ ಮಾಡುತ್ತಾಳೆ.‌ಹೀಗೆ ಕೆಲಸ ಮಾಡಿ ಬಂದ ಹಣದಿಂದ ಮನೆಯ ಖರ್ಚನ್ನು ನಿಬಾಯಿಸುತ್ತಾಳೆ.

ದಿನವಿಡಿ ಕೆಲಸ ಮಾಡಿದ ರವೀಣಾ ಎಲ್ಲರಂತೆ ಹಾಸಿಗೆ ಹಿಡಿದು ಮಲಗುತ್ತಿರಲಿಲ್ಲ. ತಾನು ಕಂಡ ಕನಸ್ಸನ್ನು ನನಸ್ಸು ಮಾಡಲು ಈಡೀ ರಾತ್ರಿ‌ ಓದುತ್ತಿದ್ದಳು. ಸರ್ಕಾರದಿಂದ ಪಾರನಾರ್ ಯೋಜನೆಯಿಂದ ಸಿಗುವ ಎರೆಡು ಸಾವಿರ ಹಣದಿಂದ ಅವಳ ಕುಟುಂಬ ನಡೆಯು ತ್ತದೆ. ಅದೇ ರೀತಿಯಾಗಿ ಅವಳು ಓದಿಗಾಗಿ ಬಳಸುವ ಪೋನ ಕೂಡ ಬಾಲಾಶ್ರಮ‌ ನಡೆಸುತ್ತಿರುವ ಹಾಗೂ ನೋಬೆಲ್ ಪ್ರಶಸ್ತಿ ವಿಜೇತ ಕೈಲಾಸ ಸತ್ಯಾರ್ಥಿ ಉಡುಗೊರೆಯಾಗಿ ನೀಡಿದ್ದಾರೆ.

ರವೀಣಾ ದ್ವೀತಿಯ ಪಿಯುಸಿ ‌ಕಲಾ ವಿಭಾಗದಲ್ಲಿ ಶೇಕಡಾ 93 ಅಂಕ‌ ಪಡೆಯುವುದರ ಮೂಲಕ ನಾರಾಯಣಪುರ‌ ಉಪಖಂಡ ವಿಭಾಗಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಇಂತಹ ಪರಿಸ್ಥಿತಿ ಇದ್ದರು ಕುರಿ ಕಾಯ್ದು ಮನೆ ಮನೆಗು ಹೋಗಿ‌ಕೆಲಸ‌ ಮಾಡಿ ಇಂದು ತಮ್ಮ ಹಳ್ಳಿಗೆ ಪ್ರಥಮ‌ ಸ್ಥಾನ. ಪಡೆದಿರುವುದಕ್ಕೆ‌ ಹಳ್ಳಿಯ ಜನ ಅವಳ‌ ಗುಡಿಸಲು ವರೆಗೂ ಬಂದು ಅವಳಿಗೆ ಸನ್ಮಾನ ಮಾಡಿದ್ದರು.‌ಇನ್ನು ಈ ಸುದ್ದಯಿಂದಾಗಿ ರವೀಣಾ ಮಾಧ್ಯಕ್ಕೊ ಪರಿಚಯವಾದಳು. ಅವಳ ಜೀವನ ಸಾಧನೆ ಕುರಿತು ಅನೇಕ ಸಂದರ್ಶನಗಳು ಸಹ ನಡೆದವು. ಇದರಿಂದ ರವೀಣಾ ಎಲ್ಲರಿಂದ ಮಚ್ಚುಗೆಯನ್ನು ಗಳಿಸಿದ್ದಾಳೆ.

ಈ ರೀತಿಯಾಗಿ ಯಾವುದೇ ಕಾರಣಕ್ಕೂ ತಾನು ಅಂದುಕೊಂಡಿದ ಗುರಿಯನ್ನು‌ ಹಿಂದೆ ಬಿಡದೆ ಮುಂದೆ ಸಾಗುತ್ತಾ ಹಗಲು ರಾತ್ರಿ ಹಾಗೂ ಕೆಲಸದ ವೇಳೆ ಬಿಡುವಿನ ಸಂದರ್ಭದಲ್ಲಿ ಸಮಯದ‌ ಸದುಪಯೋಗ ಮಾಡಿಕೊಂಡ ರವೀಣಾ ಮನಸ್ಸಿದ್ದರೆ ‌ಯಾರು ಎಂತಹದ್ದೆ ಕಠಿಣ ಪರಿಸ್ಥಿತಿಯಲ್ಲಿ ಸಾಧನೆ ಮಾಡಬಹುದು ಎಂಬುವುದಕ್ಕೆ ನೈಜ್ಯ ಸಾಕ್ಷಿಯಾಗಿದ್ದಾಳೆ.

ಇನ್ನು ಇವಳಂತೆ ಇರುವ ಅದೆಷ್ಟೊ ಬಡ‌ ಮಕ್ಕಳಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾಳೆ. ಇವಳ ಮುಂದಿನ ಓದು ಹಾಗು ಅವಳು ಹಾಕುವ ಪ್ರತಿ ಹೆಜ್ಜೆಯು ಸಹ ಯಶಸ್ಸು ಗಳಿಸಿಲಿ ಎಂಬುವುದೇ ಅವರ ಕುಟುಂಬದ ಆಸೆ.