Advertisements

ಕುರಿ ಪ್ರತಾಪ್ ಮನೆಯ ಗೃಹಪ್ರವೇಶ ಹೇಗಿತ್ತು.? ಆ ಸುಂದರ ಕ್ಷಣಗಳನ್ನು ನೋಡೋಣ ಬನ್ನಿ..

Cinema Entertainment

ನಮಸ್ತೆ ಸ್ನೇಹಿತರೆ, ಕನ್ನಡದ ಕನ್ನಡದ ಫೇಮಸ್ ಕಾಮಿಡಿಯನ್ ಕುರಿ ಪ್ರತಾಪ್ ಅವರ ಕನಸಿನ ಅರಮನೆ ಹೇಗಿದೆ ಗೊತ್ತಾ.. ಕುರಿ ಪ್ರತಾಪ್ ಮಾತನಾಡಿದರೆ ಸಾಕು ನಗು ಬರುವುದು ಮಾತ್ರ ಗ್ಯಾರೆಂಟಿ ಅಂತ ಅದೆಷ್ಟೋ ಜನ ಹೇಳುವವರು, ಕುರಿ ಪ್ರತಾಪ್ ಎಂದರೆ ಹಾಸ್ಯದ ಇನ್ನೊಂದು ರೂಪ ಅಂತ ಹೇಳುವವರ ಸಂಖ್ಯೆ ಮಗದೆಷ್ಟೋ.. ಹೀಗೆ ಕುರಿಪ್ರತಾಪ್ ಅಂದ ತಕ್ಷಣ ಅವರ ಒಳಗಿರುವ ಹಾಸ್ಯ ಪ್ರಜ್ಞೆಯನ್ನು ಕನ್ನಡದ ಒಬ್ಬ ಅದ್ಭುತ ಕಾಮಿಡಿಯನ್ ಅ‌ನ್ನು ಜನ ನೆನಸಿಕೊಳ್ತಾರೆ. ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿದ್ದು ಸಹ ಕುರಿ ಪ್ರತಾಪ್ ಅವರು ಇತ್ತೀಚಿನ ಕೆಲವು ವರ್ಷಗಳಲ್ಲಿ ಜನಮಾನಸದಲ್ಲಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕುರಿ ಪ್ರತಾಪ್ ಅವರು ನಟಿಸಿದ್ದಾರೆ.

Advertisements
Advertisements

ಕನ್ನಡದ ಸಾಕಷ್ಟು ಹೆಸರಾಂತ ಕಲಾವಿದರೊಂದಿಗೆ ಬಣ್ಣ ಹಚ್ಚಿದ್ದಾರೆ ಕುರಿ ಪ್ರತಾಪ್. ಆದರೆ ಅವರ ಕಾಮಿಡಿ ಟೈಮಿಂಗ್ಸ್ ಗೆ ಜನ ಬೆಂಬಲ ಸಿಕಿದ್ದು ಮಾತ್ರ ಕಿರುತೆರೆಯಲ್ಲಿ. ಹೌದು ಸಿನಿಮಾಗಳಿಗಿಂತ ಕಿರುತೆರೆಯಲ್ಲಿ ಕುರಿ ಪ್ರತಾಪ್ ಅವರು ಮಿಂಚಿದ್ದಾರೆ.. ಮೊದಲಿಗೆ ಉದಯ ಟಿವಿಯಲ್ಲಿ ಬರುತ್ತಿದ್ದ ಕುರಿಗಳು ಸಾರ್ ಕುರಿಗಳು ಅನ್ನೋ ಒಂದು ಶೋ ಅಲ್ಲಿ ಪ್ರತಾಪ್ ಜನರನ್ನು ಹೊಟ್ಟೆ ಹುಣ್ಣಾಗಿಸುವಂತೆ ಜನರನ್ನು ನಕ್ಕಿಸಿದ್ದಾರೆ. ಬಹುತೇಕರಿಗೆ ಗೊತ್ತಿದ್ಯೋ ಇಲ್ವೋ ಕುರಿಪ್ರತಾಪ್ ಒಬ್ಬ ನಿರೂಪಕ ಕೂಡ ಹೌದು. ಇನ್ನು ಕುರಿಪ್ರತಾಪ್ ಅವರು ಕಳೆದ ವರ್ಷ ಬಿಗ್‌ಬಾಸ್ 7ರ ಫೈನೆಲಿಸ್ಟ್ ನ ಒಬ್ಬರು ಆಗಿದ್ರು. ಜೊತೆಗೆ ರನ್ನರ್ ಅಪ್ ಸಹ ಆಗಿದ್ರು. ಬಿಗ್ ಮನೆಯೊಳಗೆ ಎಲ್ಲರೊಂದಿಗೆ ಸಾಮಾನ್ಯನಂತೆಯೇ ಕುರಿ ಪ್ರತಾಪ್ ಜೀವನ, ಪ್ರೇಕ್ಷಕರ ಮನಮುಟ್ಟುವಂತೆ ಮಾಡಿದೆ.

ಬಿಗ್ ಮನೆಯಲ್ಲಿ ಎಲ್ಲರ ಜೊತೆ ಇರುವಾಗ ಕುರಿ ಪ್ರತಾಪ್ ಅವರು ತಮ್ಮ ಜೀವನದ ಒಂದು ದೊಡ್ಡ ಆಸೆ ಏನು.? ಅವರ ಕನಸು ಏನು ಅಂತ ಹೇಳಿಕೊಂಡಿದ್ರು. ಅವರ ಕನಸು ಸಂಸಾರಕ್ಕಾಗಿ ತನ್ನದೇ ಆದ ಒಂದು ಪುಟ್ಟ ಕನಸಿನ ಮನೆಯೊಂದನ್ನು ಕಟ್ಟಬೇಕು ಎನ್ನುವುದು. ಈಗ ಆ ಕನಸ್ಸನ್ನು ಕುರಿಪ್ರತಾಪ್ ನನಸು ಮಾಡಿಕೊಂಡಿದ್ದಾರೆ. ಹೌದು ಈ ಫೋಟೋದಲ್ಲಿ ನಿಮಗೆ ಕಾಣಿಸುತ್ತಿರುವ ಮನೆ ಕುರಿ ಪ್ರತಾಪ್ ಅವರ ಭವ್ಯ ಮನೆ. ಕಷ್ಟಪಟ್ಟು ಬೆವರು ಸುರಿಸಿ ದುಡಿದ ದುಡ್ಡಿಂದ ಕಟ್ಟಿದ ಕನಸಿನ ಗೂಡು ಇದಾಗಿದೆ.

ಕುರಿ ಪ್ರತಾಪ್ ತನ್ನ ಕನಸಿನ ಕ್ಷಣಗಳನ್ನು ನನಸು ಮಾಡಿಕೊಳ್ಳುವಾಗ ಕನ್ನಡದ ಅನೇಕ ಖ್ಯಾತ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದರು. ಬಿಗ್ ಬಾಸ್‌ನಲ್ಲಿ ಹೆಚ್ಚು ಸದ್ದು ಮಾಡಿದ ಒಳ್ಳೆ ಹುಡುಗ ಪ್ರಥಮ್ ಸಹ ಹಾಜರಾಗಿದ್ದರು. ಉಳಿದಂತೆ ಅನೇಕ ಗಣ್ಯರು ಕುರಿ ಪ್ರತಾಪ್ ಸಂತೋಷ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಬಹುತೇಕ ಸಿನಿಮಾಗಳಲ್ಲಿ ನಟಿಸಿ ಅದರಲ್ಲೂ ಕಿರುತೆರೆಯ ಮಜಾಟಾಕೀಸ್ ಮುಖಾಂತರ ಜನರ ಹೃದಯ ಗೆದ್ದ ಕುರಿ ಪ್ರತಾಪ್‌ಗೆ ಇನ್ನಷ್ಟು ಅವಕಾಶಗಳು ಹುಡುಕಿಕೊಂಡು ಬರಲಿ, ಅವರು ಕಂಡ ಕನಸುಗಳೆಲ್ಲ ನನಸಾಗಲಿ ಎಂದು ಆಶಿಸೋಣ.. ಕುರಿ ಪ್ರತಾಪ್ ಅವರ ಬಗ್ಗೆ ನಿವೇನು ಹೇಳ್ತಿರಾ.. ಕಮೆಂಟ್ ಮಾಡಿ ತಿಳಿಸಿ..