Advertisements

ಈ ವಯಸ್ಸಿನಲ್ಲೂ ನಟಿ ಖುಷ್ಬೂ ಇಂದಿನ ನಟಿಯರಿಗೆ ಕಾಂಪಿಟೇಶನ್ ಕೊಡುವ ರೇಂಜ್ ಗೆ ಫೋಟೋ ಶೂಟ್ ಮಾಡಿಸಿದ್ದಾರೆ, ನೋಡಿ ವೈರಲ್ ಫೋಟೋಸ್.!!

Kannada News

ನಟಿ ಖುಷ್ಬೂ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಪ್ರೇಕ್ಷಕರ ಮುಂದೆ ಖುಷ್ಬೂ ಮೊದಲ ಸಿನಿಮಾ ರಣಧೀರದಲ್ಲಿ ನಟಿಸುವ ಮೂಲಕ ಕನ್ನಡಾಭಿಮಾನಿಗಳ ಹೃದಯ ಗೆದ್ದಿದ್ದರು. ಆ ಬಳಿಕ ಅಂಜದ ಗಂಡು, ಯುಗ ಪುರುಷ, ಪ್ರೇಮಾಗ್ನಿ, ಹೃದಯ ಗೀತೆ, ಶಾಂತಿ ಕ್ರಾಂತಿ ಸೇರಿದಂತೆ ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡಿಗರ ಅಪಾರ ಜನಾದರಣೆ ಹಾಗೂ ಜನಪ್ರಿಯತೆಯನ್ನು ಪಡೆದಂತಹ ನಟಿ ದಕ್ಷಿಣ ಚಿತ್ರರಂಗದ ಒಂದು ಕಾಲದ ಸ್ಟಾರ್ ನಟಿಯಾಗಿ ಮೆರೆದಿದ್ದರು. ತಮ್ಮ ಸೌಂದರ್ಯದಿಂದಲೇ ಹುಡುಗರ ಹೃದಯ ಕದ್ದಿದ್ದ ಖುಷ್ಬೂ, ಹೆಚ್ಚಾಗಿ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದರು.

Advertisements
Advertisements

ಖುಷ್ಬೂ ಅವರು ಎಷ್ಟರಮಟ್ಟಿಗೆ ಫೆಮಸ್ ಆಗಿದ್ದರು ಅನ್ನುವುದಕ್ಕೆ ಸಾಕ್ಷಿ, ತಮಿಳುನಾಡಿನ ಅಭಿಮಾನಿಗಳು ಅವರ ಹೆಸರಲ್ಲಿ ದೇವಸ್ಥಾನ ನಿರ್ಮಿಸಿದ್ದರು. ಅದೇ ರೀತಿ ಖುಷ್ಬೂ ಹೆಸರಿನ ಸೀರೆ ಕೂಡ ಸೃಷ್ಟಿಯಾಗಿ, ಹೆಣ್ಮಕ್ಕಳು ಆ ಸೀರೆಯನ್ನೇ ಖರೀದಿ ಮಾಡುತ್ತಿದ್ದರು. ಅದಕ್ಕೆ ಕಾರಣ ಸಿನಿಮಾಗಳಲ್ಲಿ ಖುಷ್ಬೂ ಅವರು ಉಡುತ್ತಿದ್ದ ಸೀರೆಗಳು ಅಷ್ಟೊಂದು ಆಕರ್ಷಿತವಾಗಿರುತ್ತಿತ್ತು. ಇನ್ನು ಖುಷ್ಬೂ ಅವರು ನೋಡಲು ದಪ್ಪಗಿದ್ದರೂ, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಅವರನ್ನು ಮೆಚ್ಚಿಕೊಂಡಿದ್ದರು. ಕಾರಣ ಅವರು ನೋಡಲು ಅಷ್ಟೊಂದು ಮುದ್ದಾಗಿದ್ದರು ಜೊತೆಗೆ ನಟನೆ ಕೂಡ ಅಧ್ಬುತವಾಗಿರುತ್ತಿತ್ತು.

ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಕನ್ನಡದಲ್ಲಿಯೂ ಅದ್ಭುತ ಸಿನಿಮಾಗಳನ್ನು ನೀಡಿರುವ ಖುಷ್ಬೂ ಕೊನೆಯದಾಗಿ ಮ್ಯಾಜಿಕ್ ಅಜ್ಜಿ ಸಿನಿಮಾದಲ್ಲಿ ನಟಿಸುವ ಮೂಲಕ ಮತ್ತೆ ಕನ್ನಡದಲ್ಲಿ ಮ್ಯಾಜಿಕ್ ಮಾಡಿದ್ದರು. ಇದೀಗ ಸಿನಿಮಾ, ಪಾಲಿಟಿಕ್ಸ್ ಹೀಗೆ ಎರಡೂ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಖುಷ್ಬೂ ಅವರು ತೂಕ ಇಳಿಸಿಕೊಂಡು ಬಲುಕುವ ಬಳ್ಳಿಯಂತಾಗಿದ್ದಾರೆ. ಇತ್ತೀಚೆಗಷ್ಟೇ ಖುಷ್ಬೂ ತಾವು ತೆಳ್ಳಗಾಗಿರುವ ಫೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಖತ್ ಯಂಗ್ ಆಗಿ ಕಾಣಿಸುತ್ತಿರುವ ಖುಷ್ಬೂ ಅವರನ್ನು ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ.

ಖುಷ್ಬೂ ಅವರು ಬರೋಬ್ಬರಿ 14 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ವರ್ಕೌಟ್, ಯೋಗ, ಡಯಟ್ ಅಂತ ತುಂಬಾನೇ ಪರಿಶ್ರಮ ಪಟ್ಟು, ಗುಂಡು ಗುಂಡಕ್ಕಿದ್ದ ಖುಷ್ಬೂ ಇದೀಗ ಸ್ಲಿಮ್ ಆಗಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಈ ಅಂದಕ್ಕೆ ಅನೇಕ ಅಭಿಮಾನಿಗಳು ಹೊಗಳಿ ಕಮೆಂಟ್ ಮಾಡಿದರೆ, ಇನ್ನು ಕೆಲವರು ನಿಮ್ಮನ್ನು ಮದುವೆ ಆಗುವ ಮನಸಿದೆ ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಖುಷೂ ಆವರು ಇದೀಗ 20 ವರ್ಷಗಳಷ್ಟು ಹಿಂದೆ ಹೋಗಿ ಯುವತಿಯರನ್ನು ನಾಚಿಸುವಂತೆ ಸುಂದರವಾಗಿ ಕಾಣುತ್ತಿದ್ದಾರೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.