Advertisements

ಸಖತ್ ವೈರಲ್ ಆಗಿರುವ ಈ ಜೋಡಿಯ ವೀಡಿಯೋ ನೋಡಿ!

Kannada News

ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಹಾಗೂ ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ ಸೆಪ್ಟೆಂಬರ್ 1ರಂದು ತಿರುಪತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಆಪ್ತ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದ ಕಾರಣ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಮದುವೆ ವಿಚಾರವನ್ನು ಅಧಿಕೃತ ಮಾಡಿದ್ದರು. ಹಸೆಮಣೆ ಮೇಲೆ ಕುಳಿತಿರುವ ಫೋಟೋ ತಾಳಿ ಕಟ್ಟುತ್ತಿರುವ ಫೋಟೋ ಪ್ರತಿಯೊಂದನ್ನು ಹಂಚಿಕೊಂಡಿದ್ದು ಆದರೆ ನೆಟ್ಟಿಗರು ಸ್ವೀಕಾರ ಮಾಡಿರುವ ರೀತಿನೇ ಬೇರೆಯಾಗಿದೆ.

ಇಷ್ಟು ಸುಂದರವಾಗಿರುವ ಹುಡುಗಿಗೆ ಈ ಅಂಕಲ್? ಹಣ ಇದ್ದರೆ ಯಾರನ್ನ ಬೇಕಿದ್ದರೂ ಮದುವೆ ಆಗಬಹುದು ಅಂಕಲ್‌ಗೆ ಹುಡುಗಿಯರು ಬೇಕು ಹುಡುಗರ ಏನು ಮಾಡಬೇಕು? ಕಪ್ಪಗಿರುವ ಹುಡುಗರು ಅಂದರೆ ಯಾಕೆ ಬೇಗ ಇಷ್ಟ ಆಗುತ್ತಾರೆ? ಹೀಗೆ ನೂರಾರು ರೀತಿಯಲ್ಲಿ ಕಾಮೆಂಟ್ ಮಾಡಿ ಅವರಿಬ್ಬರನ್ನೂ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿದೆ. ಅಲ್ಲದೆ ಯಾವ ವಿಚಾರಕ್ಕೆ ಇಷ್ಟ ಪಟ್ಟು ಮದುವೆಯಾಗಿದ್ದಾರೆ ಅನ್ನೋದನ್ನು ಇವರೇ ಅಳಿದು ಕುಡಿ ಬಿಟ್ಟಿದ್ದು ಜನರು ಏನೇ ಹೇಳಲಿ ನಾವು ನೆಮ್ಮದಿಯಾಗಿದ್ದೀವಿ ಎಂದು ರವೀಂದ್ರ ಹೇಳಿದ್ದಾರೆ. ಇದೇ ಖುಷಿಗೆ ಪತ್ನಿಗೆ ದುಬಾರಿ ಗಿಫ್ಟ್ ಕೊಟ್ಟಿದ್ದಾರೆ. ಇನ್ನು ಇದರ ನಡುವೆ ರವೀಂದ್ರ ರವರ ಹಿಂದಿನ ಕರಾಳ ಸತ್ಯ ಕೂಡ ಬೆಳಕಿಗೆ ಬಂದಿದೆ. ಅದೇನು ಗೊತ್ತಾ?

ಮಹಾಲಕ್ಷ್ಮಿಯನ್ನು ತುಂಬಾನೇ ಪ್ರೀತಿಸುತ್ತಿರುವ ರವೀಂದ್ರ ಮಲಗುವ ಹೊಸ ಮಂಚಕ್ಕೆ ಬಂಗಾರದ ಲೇಪನ ಇದ್ದು ಪತ್ನಿ ಮನೆಗೆ ಬಂದಾಗ ಸುಂದರವಾಗಿ ಕಾಣಿಸಬೇಕು ಎಂದು 300ಕ್ಕೂ ಹೆಚ್ಚು ರೇಶ್ಮೆ ಸೀರೆಗಳನ್ನು ನೀಡಿದ್ದು ಪ್ರತಿಯೊಂದು ಸೀರೆಗೂ ಮ್ಯಾಚ್ ಆಗಬೇಕು ಎಂದು ಕೋಟ್ಯಂತರ ರೂಪಾಯಿ ಆಭರಣಗಳನ್ನು ಕೊಡಿಸಿದ್ದಾರೆ. ಹೌದು ಇಷ್ಟೆಲ್ಲಾ ಮಾಡಿ ಮನೆ ಇಲ್ಲದಿದ್ದರೆ ಹೇಗೆ? ಹೀಗಾಗಿ 75 ಲಕ್ಷ ರೂಪಾಯಿ ಮೌಲ್ಯದ ಮನೆ ನಿರ್ಮಾಣ ಮಾಡುವ ನಿರ್ಧಾರ ಮಾಡಿದ್ದು ಈ ಮನೆಗ ಕೂಡ ಪತ್ನಿಗೆ ಕೊಡುತ್ತಿರುವ ಗಿಫ್ಟ್‌ ಎಂದಿದ್ದಾರೆ.

ಎಲ್ಲಾ ಭಾಷೆಯ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗುತ್ತಿರುವ ಈ ಜೋಡಿ ಅದ್ಯ ಮಹಾಬಲಿಪುರಂಗೆ ಹನಿಮೂನ್ ಪ್ರವಾಸಕ್ಕೂ ಕೂಡ ಹೋಗಿದ್ದಾರೆ.ರವೀಂದ್ರ ಚಂದ್ರಶೇಖರನ್ ಮೂಲತಃ ಚೆನ್ನೈನವರು. ಇನ್ನು ತಮಿಳು ಚಿತ್ರರಂಗದಲ್ಲಿ ಹಲವು ವರ್ಷಗಳಿಂದದ ಕೆಲಸ ಮಾಡುತ್ತಿದ್ದು ಲಿಬ್ರಾ ಪ್ರೋಡಕ್ಷನ್‌ ಸಂಸ್ಥೆಯನ್ನು ಆರಂಭಿಸಿ 2013ರಿಂದ ದುಬಾರಿ ಬಜೆಟ್ ಸಿನಿಮಾಗಳನ್ನು ಮಾಡುತ್ತಿದ್ದು 2012ರಲ್ಲಿ ಶಾಂತಿ ಎಂಬುವವರನ್ನು ರವೀಂದ್ರ ಮದುವೆಯಾಗಿದ್ದರು ವೈಯಕ್ತಿಕ ಕಾರಣಗಳಿಂದ ದೂರವಾಗಿದ್ದಾರೆ.

ಇನ್ನು ಈ ಡಿಫರೆಂಟ್‌ ಕಪಲ್ ನಡುವೆ ಕೇವಲ 6 ವರ್ಷಗಳ ವಯಸ್ಸಿನ ಅಂತರವಿದೆ. ರವೀಂದ್ರ 38 ಮಹಾಲಕ್ಷ್ಮಿ 32 ವರ್ಷ. ಈ ಹಿಂದೆ ಅನಿಲ್ ಎಂಬುವವರನ್ನು ಮಹಾಲಕ್ಷ್ಮಿ ಮದುವೆಯಾಗಿದ್ದು ಒಬ್ಬ ಮಗನಿದ್ದಾನೆ ಎನ್ನಲಾಗಿದೆ. ಹೌದು ಇಬ್ಬರಿಗೂ ಎರಡನೇ ಮದುವೆಯಾಗಿರುವ ಕಾರಣ ಕೆಲವೊಂದು ಟ್ರೋಲ್ ಪೇಜ್‌ಗಳು ಸುಮ್ಮನಾಗಿದ್ದಾರೆ.ಇನ್ನು ರವೀಂದ್ರ ನೋಡಲು ಇಷ್ಟು ದಡೂತಿಯಾದರು ನಿಜಕ್ಕು ಗುಣವಂತರೂ ಎನ್ನಬಹುದು. ಹೌದು ಚೆನೈ ನಲ್ಲಿ ನೂರಾರು ವೃದ್ಧರಿಗೆ ಆಶ್ರಯ ನೀಡಿರುವ ಅವರು ಬಡಮಕ್ಕಳಿಗೆ ಉಚಿತ ಶಿಕ್ಷಣ ಕೂಡ ನೀಡುತ್ತಿದ್ದಾರೆ.ಸದ್ಯ ಅವರ ದೇಹದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿರುವುದರಿಂದ ಬೇಸರ ವ್ಯಕ್ತಪಡಿಸಿರುವ ಅವರು ನಾನು ಕೂಡ ಮುಂಚೆ ಸಣ್ಣಕ್ಕಿದ್ದೆ.

ರಸ್ತೆ ಅಪಘಾತ ವಾದ ನಂತರ ಹೀಗಾಗಿದ್ದೇನೆ. ನನ್ನ ದೇಹದಿಂದ ಯಾರಿಗೆಲ್ಲ ಬೇಸವಾಗಿದೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇನ್ನು ಮದುವೆ ಫೋಟೋ ಹಂಚಿಕೊಂಡ ರವೀಂದ್ರ ಮಹಾಲಕ್ಷ್ಮಿ ರೀತಿಯ ಹೆಣ್ಣು ಮಕ್ಕಳು ಜೀವನದಲ್ಲಿದ್ದರೆ ಲೈಫ್ ಅದ್ಭುತವಾಗಿರುತ್ತದೆ. ಜೀವನಕ್ಕೆ ಪ್ರೀತಿ ಕೊಡುವವರು ಬೇಕು ಪ್ರೀತಿಗೆ ನನ್ನ ಮಹಾಲಕ್ಷ್ಮಿ ಬೇಕು. ಲವ್‌ ಯು ಪೊಂಡಾತಿ. ಜೀವನದಲ್ಲಿ ಸದಾ ಬೇಸರ ಮತ್ತು ನಿರಾಶೆ ಹೆಚ್ಚಿದರೆ ಆ ದೇವರು ನಮಗೆ ಅದ ವಿಶೇಷ ವ್ಯಕ್ತಿಗಳನ್ನು ಕಳುಹಿಸುತ್ತಾರೆ ಅವರೇ ಮಹಾಲಕ್ಷ್ಮಿ ಎಂದು ರವೀಂದ್ರ ಬರೆದುಕೊಂಡುದ್ದಾರೆ.