Advertisements

ಯಪ್ಪಾ ಹೆಂಡತಿಯ ಖುಷಿಗೆ ಭಾರ ಆಗುವಷ್ಟು ಬಂಗಾರ ಹಾಕಿದ ರವಿಂದರ್..!ಕೊಟ್ಟದ್ದು ಎಷ್ಟು ಕೆಜಿ ನೋಡಿ..

Kannada News

ನಮಸ್ತೇ ಸ್ನೇಹಿತರೇ, ಪಕ್ಕದ ತಮಿಳು ಚಿತ್ರರಂಗದಲ್ಲಿ ಕಳೆದ ಒಂದು 15 ದಿನಗಳಿಂದ ಹೆಚ್ಚು ಸದ್ದು ಮಾಡುತ್ತಿರುವ ಸುದ್ದಿ ಅಂದರೆ ಅದು ಖ್ಯಾತ ನಿರ್ಮಾಪಕ ಆಗಿ ಗಮನ ಸೆಳೆದ ನಿರ್ಮಾಪಕ ರವೀಂದರ್ ಹಾಗೂ ತಮಿಳು ಕಿರುತೆರೆಯಲ್ಲಿ ಗಮನ ಸೆಳೆದ ಸೀರಿಯಲ್ ನ ಖ್ಯಾತ ನಟಿ ಮಹಾಲಕ್ಷ್ಮಿ ಅವರ ಮದುವೆ ವಿಚಾರ. ಹೌದು ನಟಿಯಾಗಿ ಸೀರಿಯಲ್ ನಲ್ಲಿ ಮಹಾಲಕ್ಷ್ಮಿಯವರು ಕಾರ್ಯನಿರ್ವಹಿಸುತ್ತಿದ್ದರು. ಅದೇ ಸೀರಿಯಲ್ ನಿರ್ಮಾಣ ಮಾಡಿದ ನಿರ್ಮಾಣ ಸಂಸ್ಥೆ ಸಂಸ್ಥಾಪಕರಾದ ರವೀಂದರ್ ಅವರೇ ಆಗಿದ್ದರಂತೆ. ಆರಂಭದಿಂದಲೂ ಸೀರಿಯಲ್ ನಲ್ಲಿ ಮಹಾಲಕ್ಷ್ಮಿಯವರು ನಟನೆ ಮಾಡಲು ಶುರು ಮಾಡಿದಾಗ ರವೀಂದರ್ ಅವರ ಮನಸ್ಸನ್ನು ಕದ್ದು ಬಿಟ್ಟರಂತೆ..

Advertisements
Advertisements

ಇದರ ಬಳಿಕ ಇವರಿಬ್ಬರ ನಡುವೆ ಸ್ನೇಹ ಶುರುವಾಗಿದ್ದು, ಆತ್ಮೀಯ ಸ್ನೇಹಿತದ್ರು. ಆ ಸ್ನೇಹ ಪ್ರೀತಿಗೆ ತಿರುಗಿ, ರವಿಂದರ್ ಅವರ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡ ಮಹಾಲಕ್ಷ್ಮಿಯವರು ಗ್ರಾಂಡ್ ಆಗಿಯೇ ಈಗ ರವೀಂದ್ರ ಅವರನ್ನು ಕೈ ಹಿಡಿದಿದ್ದಾರೆ. ಇದು ಇಬ್ಬರಿಗೂ ಮೊದಲನೆಯ ಮದುವೆ ಅಲ್ಲಾ, ಗಮನದಲ್ಲಿರಬೇಕು ಇದು ಇಬ್ಬರಿಗೂ ಕೂಡ ಎರಡನೆಯ ಮದುವೆ ಆಗಿದೆ..ಹೌದು ನಿರ್ಮಾಪಕ ಆಗಿ ಆ ನಿರ್ಮಾಣ ಸಂಸ್ಥೆಯನ್ನ ನಡೆಸುತ್ತಿರುವ ರವಿಂದರ್ ಅವರು ಸಾಕಷ್ಟು ಹೆಸರು ಮಾಡಿದ್ದಾರೆ..ಜೊತೆಗೆ ಅಷ್ಟೇ ಆರ್ಥಿಕವಾಗಿಯೂ ಪ್ರಭಲ ಆಗಿದ್ದಾರೆ. ಹಾಗಾಗಿ ಇವರನ್ನ ನೋಡಿ ಮದುವೆ ಆಗಿಲ್ಲ ಆ ನಟಿ ಮಹಾಲಕ್ಷ್ಮಿ, ಇವರ ಆಸ್ತಿಯನ್ನು ನೋಡಿ ಮದುವೆಯಾಗಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ. ನಿಮ್ಮ ಕುಂಕಿನ ಮಾತಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿಕೊಂಡರು.

ಹೌದು ಇವರಿಬ್ಬರ ಅಜಗಜಾಂತರ ದೇಹದ ವ್ಯತ್ಯಾಸ ನೋಡಿ ನೆಟ್ಟಿಗರು ಟ್ರೋಲ್ ಮಾಡಿದ್ದು ಸತ್ಯ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ರವಿಂದರ್ ಹಾಗೂ ಮಹಾಲಕ್ಷ್ಮೀ ಹನಿಮೂನ್ ನ ಸಂಭ್ರಮದಲ್ಲಿದ್ದಾರೆ. ಹಂತ ಹಂತವಾಗಿ ಅವರು ಹೋಗುವ ಪ್ರದೇಶಗಳ ಮತ್ತು ಮದುವೆಯಾದ ಬಳಿಕ ಅವರು ಕೈಗೊಳ್ಳುತ್ತಿರುವ ಕೆಲಸಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಅಪ್ಡೇಟ್ ಕೊಡುತ್ತಲೇ ಇದೆ ಈ ನೂತನ ಜೋಡಿ..ಹೌದು, ರವಿಂದರ್ ಹೇಳುವ ಹಾಗೆ ನಾನು ಮದುವೆಗೂ ಮುನ್ನ ಮಹಾಲಕ್ಷ್ಮಿಗೆ ದೊಡ್ಡ ದೊಡ್ಡ ಉಡುಗೊರೆಗಳ ನೀಡುತ್ತಾ ಬಂದಿದ್ದೇನೆ. ಆಕೆ ಖುಷಿಗೆ ನಾನು ಏನು ಮಾಡಲು ಸಿದ್ದ. ಬೆಲೆ ಬಾಳುವ ಸೀರೆಯನ್ನು ಕೂಡ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

ಇದಕ್ಕೆ ಉತ್ತರ ನೀಡಿದ ಮಹಾಲಕ್ಷ್ಮಿಯವರು ನಾವು ಕೂಡ ದೊಡ್ಡ ಕುಟುಂಬದಿಂದ ಬಂದವರು, ನನ್ನ ತಂದೆಯವರು ಖ್ಯಾತ ಕೊರಿಯಾಗ್ರಾಫರ್ ಆರ್ ಆರ್ ಆರ್ ಸಿನಿಮಾದಲ್ಲಿ ನಮ್ಮ ತಂದೆ ಕೊರಿಯಾಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ನಾನು ಚಿತ್ರರಂಗದ ಕುಟುಂಬದಿಂದ ಬಂದಿದ್ದೇನೆ, ನನ್ನ ಕುಟುಂಬ ನಾನು ಮತ್ತು ನನ್ನ ಮಗನನ್ನು ಸಾಕುವಷ್ಟು ಹಣ ನನ್ನ ಬಳಿ ಇತ್ತು..ಆದರೆ ರವಿಂದರ್ ಅವರು ನನಗೆ ಪ್ರಪೋಸ್ ಮಾಡಿದ ಪರಿ ಅದ್ಭುತವಾಗಿತ್ತು ಹಾಗೆ ಇಷ್ಟ ಸಹ ಆಯ್ತು. ಆ ಕಾರಣಕ್ಕಾಗಿ ನಾನು ಅವರನ್ನ ಮದುವೆಯಾದೆ. ನೀವು ನನ್ನನ್ನು ಮದುವೆ ಆಗುತ್ತೀರ, ನನ್ನನ್ನು ವರಿಸುತ್ತೀರಾ ಎನ್ನುವ ರವಿಂದರ್ ಅವರ ಆ ಶೈಲಿಗೆ ಅಂದೆ ಫಿದಾ ಆದೆ. ಆ ನಗುಮುಖ ರವೀಂದರ್ ಅವರಲ್ಲಿ ನನಗೆ ಇಷ್ಟವಾಯಿತು.

ಹಾಗಾಗಿ ಇಷ್ಟಪಟ್ಟು ಸಮಯ ತೆಗೆದುಕೊಂಡು ಆಲೋಚನೆ ಮಾಡಿಯೇ ಅವರನ್ನು ಮದುವೆಯಾಗಿದ್ದೇನೆ. ಹಾಗೆ ಮದುವೆಯಲ್ಲಿ ಮಹಾಲಕ್ಷ್ಮಿಗೆ ಕೊಟ್ಟ ಬಂಗಾರ ಎಷ್ಟು ಎನ್ನುವ ವಿಚಾರ ಕೂಡ ಈಗ ಬಯಲಾಗಿದ್ದು, ಸುಮಾರು ಒಂದೂವರೆ ಕೆಜಿ ಬಂಗಾರವನ್ನು ನಟಿ ಮಹಾಲಕ್ಷ್ಮಿ ಅವರ ಕೊರಳಲ್ಲಿ ಹಾಕಿದ್ದಾರಂತೆ ರವೀಂದ್ರನ್..ಬಂಗಾರ ತೊಟ್ಟ ನಟಿಯ ಫೋಟೋ ಇದೀಗ ಸಕತ್ ವೈರಲ್ ಆಗುತ್ತಿದೆ. ಈ ಎಲ್ಲಾ ವಿಚಾರ ತಿಳಿದು, ರವಿಂದರ್ ಅವರು ನಿಜ ದೊಡ್ಡ ಕುಳವೆ ಬಿಡಿ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.