Advertisements

ನೆನಪಿದ್ದಾರಾ ಈ ನಟಿ? ಇಂದು ಇವರು ಇರುವ ಪರಿಸ್ಥಿತಿ ನೋಡಿ.. ನಿಜಕ್ಕೂ ಮನಕಲಕುತ್ತದೆ..

Kannada News

ಕಲಾವಿದರೆಲ್ಲಾ ಸಿರಿವಂತರು.. ಮೈತುಂಬಾ ಆಭರಣ.. ಬ್ಯಾಂಕ್ ಬ್ಯಾಲೆನ್ಸ್.. ಹೀಗೆ ಸಾಕಷ್ಟು ಕಲ್ಪನೆಗಳು ಜನರ ಮನಸ್ಸಿನಲ್ಲಿ ಇರುತ್ತದೆ.. ಆದರೆ ವಾಸ್ತವ ಬೇರೆಯೇ ಇರುತ್ತದೆ.. ಕಲಾವಿದರು ನಮ್ಮಂತೆಯೇ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ.. ಅನುಭವಿಸುತ್ತಿದ್ದಾರೆ ಎಂಬುದೇ ಅಕ್ಷರಶಃ ಸತ್ಯದ ಮಾತು.. ಅದರಲ್ಲೂ ಕೆಲ ಕಲಾವಿದರ ಜೀವನವಂತೂ ಹೇಳಲು ಅಸಾಧ್ಯವಾದಷ್ಟು ನೋವಿನ ಸ್ಥಿತಿಯಲ್ಲಿರುತ್ತದೆ.. ಅದೇ ರೀತಿ ಕನ್ನಡದ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ ಕಲಾವಿದೆ ಲಲಿತಮ್ಮ ಅವರ ಸ್ಥಿತಿ ನಿಜಕ್ಕೂ ಮನಕಲಕುವಂತಿದೆ.. ಹೌದು ಇರೋ ಬರೋ ಆಭರಣವನ್ನೆಲ್ಲಾ ಯಾರನ್ನೋ ನಂಬಿ ಕೊಟ್ಟು ಖಾಲಿ ಕೈಯಲ್ಲಿ ಕೂತರು.. ಮನೆ ಮನೆಗೆ ಹೋಗಿ ವಸ್ತುಗಳನ್ನು ಮಾರುವ ಕೆಲಸ ಮಾಡಿದರು ಇನ್ನೂ ಸಹ ಜೀವನದಲ್ಲಿ ಸರಿಯಾದ ನೆಲೆ ಇಲ್ಲದೇ ಕಷ್ಟ ಅನುಭವಿಸುತ್ತಿದ್ದಾರೆ..

Advertisements
Advertisements

ತಾವು ಅನುಭವಿಸಿದ ಕಷ್ಟಗಳ ಬಗ್ಗೆ ಮಾದ್ಯಮದ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಲಲಿತಮ್ಮ ಅವರು ಕಣ್ಣೀರಿಟ್ಟಿದ್ದಾರೆ.. ಹೌದು “ನನ್ನ ನೋಡಿದ್ರೆ ಕೆಲವರು ನಾನು ಇರುವ ರೀತಿಗೆ ಅವಕಾಶ ಕೊಡ್ತಿರ್ಲಿಲ್ಲ.. ಆದರೆ ಸಾಧು ಸರ್ ನನ್ನ ಫೋಟೋ ನೋಡ್ಬಿಟ್ಟು ಇವರೇ ಬೇಕು ಅಂತ ಸುಂಟರಗಾಳಿ ಸಿನಿಮಾದಲ್ಲಿ ಅವಕಾಶ ಕೊಟ್ಟರು.. ಬೇರೆಯವರೆಲ್ಲಾ ನನ್ನ ಮುಖ ನೋಡಿ.. ಅಯ್ಯೋ ಇವರೆಲ್ಲಾ ಏನ್ ಮಾಡ್ತಾರೆ ಅಂತ ನಗುತ್ತಿದ್ದರು.. ಆದರೆ ನಾನು ಯಾರೇ ಏನೇ ಕಮೆಂಟ್ ಮಾಡಿದ್ರು ಸುಮ್ಮನೆ ಇರ್ತೀನಿ.. ಯಾಕಂದ್ರೆ ನಮ್ಮ ಪ್ರತಿಭೆಯನ್ನು ಏನಿದ್ರು ತೆರೆ ಮೇಲೆ ತೋರಿಸ್ಬೇಕು ಅನ್ನೋದಷ್ಟೇ ನನ್ನ ಮನಸ್ಸಿನಲ್ಲಿ ಇರೋದು.. ಎಷ್ಟೋ ಜನ ಈಗಲೂ ಕೇಳ್ತಾರೆ.. ಕಲಾವಿದರು ಮೈತುಂಬಾ ಬಂಗಾರ ಬೆರಳುಗಳ ತುಂಬಾ ಉಂಗುರ ಅದಿದ್ರೆನೆ ಕಲಾವಿದರು ಅಂದುಕೊತಾರೆ.. ಆದರೆ ನಾನ್ ಇರೋದೇ ಹೀಗೆ ಖಾಲಿ ಕೈಯಲ್ಲಿ.. ನನ್ನ ಪ್ರತಿಭೆ ನೋಡಿ ಅವಕಾಶ ಕೊಟ್ರೆ ಕೊಡಿ.. ಇಲ್ಲಾಂದ್ರೆ ಇಲ್ಲ.. ಬೆಲೆ ಕೊಟ್ರೆ ಕೊಡಿ.. ಇಲ್ಲಂದ್ರೆ ಇಲ್ಲ.. ಯಾಕಂದ್ರೆ ನಾನು ಅದಾಗಲೇ ಎಲ್ಲವನ್ನೂ ಕಳೆದುಕೊಂಡು ಬಿಟ್ಟಿದ್ದೀನಿ..

ಯಾವ್ ಬಂಗಾರ ಹಾಕೋಳೋಣ.. ಯಾವ್ ಉಂಗುರ ಹಾಕೊಳೋಣ.. ಎಲ್ಲವನ್ನೂ ಕಳೆದುಕೊಂಡಿದ್ದೀನಿ.. ನಮ್ಮ ತಾಯಿದು ನಾಲಕ್ಕು ಬಳೆ ಇತ್ತು.. ಎರಡು ಎಳೆ ಚೈನ್ ಇತ್ತು.. ನಾಲಕ್ಕು ಉಂಗುರ ಇತ್ತು..ಓಲೆ ಜುಮಿಕಿ ಇತ್ತು.. ಆದರೆ ಇದೇ ಒಬ್ರು ತಿಮ್ಮಯ್ಯ ಅನ್ನೋರಿಗೋಸ್ಕರ ಥಿಯೇಟರ್ ಬುಕ್ ಮಾಡೋಕೆ ಕೊಟ್ಟೆ.. ಇವತ್ತಿಗೂ ಅವರು ಅದನ್ನ ವಾಪಸ್ ಕೊಟ್ಟಿಲ್ಲ.. ನಾನು ಕೇಳೋಕು ಹೋಗಿಲ್ಲ.. ಓಲೆ ಜುಮುಕಿ ಅಡವಿಟ್ಟು ಕಲಾಕ್ಷೇತ್ರ ಬುಕ್ ಮಾಡೋಕೆ ಕೊಟ್ಟೆ.. ಎಲ್ಲಿ ಅವರು ವಾಪಸ್ ಕೊಡಲೇ ಇಲ್ಲ.. ಈಗಲೂ ಎದುರಿಗೇ ಸಿಗ್ತಾರೆ.. ಆದರೆ ನೋಡಿದ್ರೂ ಸುಮ್ಮನೆ ಹೋಗ್ತಾರೆ.. ನಾನು ಸುಮ್ಮನಾಗ್ಬಿಟ್ಟೆ.. ಇಷ್ಟೇ ಏಕೆ ಸ್ವಂತ ನನ್ನ ಅಣ್ಣನೇ ನನಗೆ ಆಗ್ಲಿಲ್ಲ.. ಏನ್ ಗೊತ್ತಾ ನಮ್ಮ ತಾಯಿ ಹೋದಾಗ ಅವರನ್ನ ಹೀಗ್ ಮಲಗಿಸಿದ್ರು.. ದೀಪ ಹಚ್ಚಿದ್ರು.. ಬಂದ ಫ್ಯಾನ್ ಆನ್ ಮಾಡಿದ ದೀಪ ಆರಿಸ್ದ.. ಮಾರನೇ ದಿನ ಬೆಳಿಗ್ಗೆ ತಾಯಿನ ರುದ್ರಭೂಮಿಗೆ ತೆಗೆದುಕೊಂಡು ಹೋಗೋ ಟೈಮ್, ಅಲ್ಲಿದ್ದವರೆಲ್ಲಾ ಹೇಳ್ತಿದ್ದಾರೆ ನೀನ್ ಮಗ ಕಣಪ್ಪಾ ನೀನ್ ಮಾಡ್ಬೇಕು ಎಲ್ಲಾ ಕಾರ್ಯನೂ ಅಂತ.. ಆದರೆ

ಅವನು ತನ್ನ ಹೆಂಡತಿ ಶಾಂತಾಗೆ.. ಶಾಂತ ಏನ್ ಮಾಡಿದಿಯಾ, ಏನ್ ಇದೆ ಇವತ್ತು ಅಂತ ಕೇಳ್ದಾ.. ಅವಳು ತಂಗಳನ್ನ ಸಾರು ಇದೆ ಇವತ್ತು ಅಂದ್ಲು.. ಸರಿ ಅದನ್ನೆ ಹಾಕೊಡು ಅಂದ.. ತಿಂದ ಇನ್ ಶರ್ಟ್ ಮಾಡ್ಕೊಂಡ ಹೋದ.. ಸ್ವಂತ ನನ್ನ್ ಅಣ್ಣಾನೇ ಆಗ್ಲಿಲ್ಲ.. ಬೇರೆಯವರನ್ನಾ ಏನು ಅಂತ ಕೇಳೋಣಾ.. ಇದೆಲ್ಲಾ ಮರಿಯಲಾಗದ ಘಟನೆ ನನ್ನ ಲೈಫಲ್ಲಿ.. ಅದಾದ ನಂತರ ಹತ್ತು ದಿನ ನಾನೇನು ಮಾತಾಡ್ಲಿಲ್ಲ.. ಆಮೇಲೆ ತಾಯಿ ಹೋದ್ಮೇಲೆ ಪ್ರಪಂಚನೇ ಕಳಕೊಂಡ ರೀತಿ ಆಗಿತ್ತು.. ನನಗೆ ಅವರೊಬ್ಬರೇ ಇದ್ದಿದ್ದು.. ಅವರೊಬ್ಬರೇ ಪ್ರೋತ್ಸಾಹ ಮಾಡಿದ್ದು.. ಎಲ್ಲಾದ್ರು ಹೋಗು ಏನಾದ್ರು ಮಾಡು ಆದರೆ ಒಳ್ಳೆ ಹೆಸರು ತಗೊಂಡ್ ಬಾ.. ಟೈಮಿಗೆ ಕರೆಕ್ಟಾಗಿ ಬಾ ಅಂತ ಪ್ರೋತ್ಸಾಹ ಮಾಡ್ತಿದ್ರು.. ಅವರೇ ಇಲ್ಲ ಅಂದಮೇಲೆ ಯಾಕೀ ಜೀವನ ಅಂತ ಬಹಳಷ್ಟು ಸರಿ ಜೀವ ಕಳೆದುಕೊಳ್ಳೋಕೆ ನೋಡಿದೆ.. ಆದರೆ ಆಗ್ಲಿಲ್ಲ.. ಇನ್ನು ನನ್ನ ಪ್ರತಿಭೆ ನಾದ್ರೂ ತೋರಿಸ್ಬೇಕು ಅಂತ ಹೊರಟೆ..

ಮೊದಲೆಲ್ಲಾ ನಾನು ಹಾಡ್ತಾ ಇದ್ದೆ.. ಆದರೆ ನಾವೆಷ್ಟೇ ಚೆನ್ನಾಗಿ ಹಾಡಿದ್ರೂ ನಮ್ಮನ್ನ ಯಾರೂ ಸಹ ಗುರುತಿಸಿತಿರಲಿಲ್ಲ.. ನನಗೆ ನಟನೆ ಮಾಡೋ ಆಸೆ ಬಹಳ ಇತ್ತು.. ನಾನು ಬಿ ಎ ಓದಿದೀನಿ.. ಕಾಲೇಜ್ ದಿನಗಳಿಂದಲೂ ಆಸಕ್ತಿ ಇತ್ತು.. ಆಗ ಇಂದ್ರೇಶ್ ಪಂಡಿತ್ ಅನ್ನೋರು ನಾಟಕದಲ್ಲಿ ಅವಕಾಶ ಕೊಟ್ರು.. ಆಮೇಲೆ ಕಿರುತೆರೆಯಲ್ಲಿ ಅವಕಾಶ ಸಿಕ್ತು.. ಡಿಡಿ ಒನ್ ನಲ್ಲಿ ಅಭಿನಯಿಸಿದೆ.. ಆಮೇಲೆ ನಾಗಭರಣ ಸರ್ ಪ್ರತಿಯೊಂದು ಧಾರಾವಾಹಿಯಲ್ಲಿಯೂ ಅವಕಾಶ ಕೊಡ್ತಿದ್ರು.. ಆಮೇಲೆ ಮಹಾಮಾಯಿ ಧಾರಾವಾಹಿಯಲ್ಲಿ ಒಳ್ಳೆ ಹೆಸರು ಬಂತು.. ನಟನೆಗೆ ಬರೋ ಮೊದಲು ಸೇಲ್ಸ್ ಕೆಲಸ ಮಾಡ್ತಾ ಇದ್ದೆ ಮನೆ ಮನೆಗೆ ಹೋಗಿ ಲಿರಿಲ್ ಸೋಪ್ ಮಾರ್ತಾ ಇದ್ದೆ.. ಆಮೇಲೆ ಒಂದ್ ಆಫೀಸಲ್ಲಿ ಕ್ಲರ್ಕ್ ಕೆಲಸ ಮಾಡ್ತಿದ್ದೆ.. ಆದರೆ ನನಗೆ ನಾಟಕದ ಆಸೆಯಿಂದ ಆ ಕೆಲಸಗಳನ್ನ ಬಿಟ್ಟೆ.. ರಂಗೋಲಿ ಧಾರಾವಾಹಿ‌ ಮಾಡುವಾಗ ನನ್ನ ಸ್ನೇಹಿತೆ ಮನೆಗೆ ಹೋಗಿದ್ದೆ.. ಆಗ ಆಟೋದವನು ನನ್ನ ಸ್ನೇಹಿತೆಗೆ ಹೇಳ್ತಾ ಇದ್ರು.. ಇವರನ್ನ ಸೇರಿಸ್ಬೇಡಿ.. ಇವರು ಸರಿ ಇಲ್ಲ ಅಂತ.. ಅಷ್ಟರ ಮಟ್ಟಕ್ಕೆ ನನ್ನ ಅಭಿನಯ ಪರಿಣಾಮ ಬೀರಿತ್ತು.. ಹಾಗೇ ಪ್ರತಿಯೊಬ್ಬರೂ ಸಹ ನನ್ನ ಅಭಿನಯದ ಬಗ್ಗೆ ಮಾತನಾಡಿದ್ದರು.. ನನ್ನ ಪಾತ್ರ ಅಷ್ಟು ರೀಚ್ ಆಗಿತ್ತು.. ಎಂದರು..

ಇನ್ನು ಕೊರೊನಾ ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಕಷ್ಟದಲ್ಲಿದ್ದ ಲಲಿತಮ್ಮ ಅವರಿಗೆ ಶಿವಣ್ಣ ನೆರವಾಗಿದ್ದರು ಎಂಬುದನ್ನು ಹೇಳಿಕೊಂಡು ಕಣ್ಣೀರಿಟ್ಟರು.. ಭಜರಂಗಿ ೨ ಸಿನಿಮಾ ಸಮಯದಲ್ಲಿಯೂ ಅವರು ನನಗೆ ಹತ್ತು ಸಾವಿರ ರೂಪಾಯಿ ಕೊಟ್ಟರು.. ಯಾರಿಗೂ ಹೇಳಬೇಡಿ ಅಂದ್ರು ಎಂದರು.. ನಿಜಕ್ಕೂ ದೊಡ್ಮನೆಯ ದೊಡ್ಡಗುಣ ಇದು.. ಪುನೀತ್ ಅವರು ಇದೇ ರೀತಿ ಕೆಲಸಗಳ ಮಾಡುತ್ತಿದ್ದರು.. ಶಿವಣ್ಣ ಸಹ ಅಪ್ಪು ಅಗಲಿದಾಗ ಅದೇ ಮಾತನ್ನು ಹೇಳಿದ್ದರು.. ನಾವು ಮಾಡೊದು ಮತ್ತೊಬ್ಬರಿಗೆ ಗೊತ್ತಾಗಬಾರದು.. ಪ್ರತಿಯೊಬ್ಬರೂ ಮತ್ತೊಬ್ಬರಿಗೆ ನೆರವಾಗಬೇಕು ಅದೇ ಜೀವನ ಎಂದಿದ್ದರು.. ನಿಜಕ್ಕೂ ಆ ಮಾತು ಸತ್ಯ.. ಇನ್ನು ಲಲಿತಮ್ಮ ಅವರಿಗೆ ಸಿನಿಮಾ ಧಾರಾವಾಹಿಗಳಲ್ಲಿ ಸಾಕಷ್ಟು ಅವಕಾಶಗಳು ಸಿಕ್ಕಿ ಅವರ ಜೀವ ಚೆನ್ನಾಗಿರಲಿ..