Advertisements

ಫೇಸ್ ಬುಕ್ ನಲ್ಲಿ ಸ್ವಂತ ಹೆಂಡತಿಯ ಫೋಟೋ ಹಾಕಿ ಎಂತಹ ಕೆಲಸ ಮಾಡಿದ್ದಾನೆ ನೋಡಿ.. ಮಗಳ ಬಗ್ಗೆ ಅಳಿಯ ಬರೆದಿದ್ದನ್ನು ನೋಡಿ ಬೆಚ್ಚಿಬಿದ್ದ ಆಕೆಯ ಹೆತ್ತವರು..

Kannada News

ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಕುಟುಂಬದವರ, ಸ್ನೇಹಿತರ ಫೋಟೋ ಹಾಕೋದು ಅವರ ಬಗ್ಗೆ ಸಂತೋಷದ ವಿಚಾರಗಳನ್ನು ಹಂಚಿಕೊಳ್ಳುವುದು ಸಾಮಾನ್ಯ.. ಅದಕ್ಕೂ ಮೀರಿ ಸಂಗಾತಿಗಳ ಜೊತೆಗಿನ ಫೋಟೋ ವೀಡಿಯೋಗಳನ್ನು ಹಂಚಿಕೊಳ್ಳೋದು ಸಂಗಾತಿಗಳ ಜೊತೆ ರೀಲ್ಸ್ ಮಾಡೋದು ಎಲ್ಲವೂ ಸಾಮಾನ್ಯ.. ಆದರೆ ಇಲ್ಲೊಬ್ಬ ಭೂಪ ಸಾಮಾಜಿಕ ಜಾಲತಾಣದಲ್ಲಿ ತನ್ನ ಸ್ವಂತ ಹೆಂಡತಿಯ ಫೋಟೋ ಹಾಕಿ ಆಕೆಯ ಬಗ್ಗೆ ಬರೆದಿರೋ ಮಾತು ನೋಡಿ ಇದೀಗ ಆ ಹೆಣ್ಣು ಮಗಳ ಹೆತ್ತವರು ಬೆಚ್ಚಿಬಿದ್ದಿದು ಅಳಿಯನ ಮನೆ ಮುಂದೆ ಬಂದು ಕಣ್ಣೀರಿಡುತ್ತಿದ್ದಾರೆ..

ಹೌದು ಈತನ ಹೆಸರು ಮುನಿಕೃಷ್ಣ.. ದೊಡ್ಡಬಳ್ಳಾಪುರ ತಾಲೂಕಿನ ಉದನಹಳ್ಳಿ ಗ್ರಾಮದ ನಿವಾಸಿ.. ಈತ ಆರ್ಕೆಸ್ಟ್ರಾ ಕಲಾವಿದನಾಗಿದ್ದಾನೆ.. ಇನ್ನು ಈತನ ಪತ್ನಿಯ ಹೆಸರು ಲೀಲಾವತಿ ವಯಸ್ಸು ಇಪ್ಪತ್ತೆರೆಡು.. ಮೂರು ವರ್ಷದ ಹಿಂದಷ್ಟೇ ಮದುವೆಯಾಗಿರುವ ಈ ಜೋಡಿಗೆ ಹೆಣ್ಣು ಮಗುವೊಂದು ಇದೆ ಎಂದು ತಿಳಿದುಬಂದಿದೆ.. ಮುನಿಕೃಷ್ಣ ಹಾಗೂ ಲೀಲಾವತಿ ನಡುವೆ ಆಗಾಗ ಸಣ್ಣ ಪುಟ್ಟ ವಿಚಾರಗಳಿಗೆ ಮನಸ್ತಾಪಗಳಾಗುತ್ತಿದ್ದು ಆಗಾಗ ಜಗಳವಾಡಿಕೊಳ್ಳುತ್ತಿದ್ದರು.. ಆದರೆ ಇದೀಗ ಇದ್ದಕಿದ್ದ ಹಾಗೆ ನಿನ್ನೆ ಮಧ್ಯಾರ್ ಮುನಿಕೃಷ್ಣ ತನ್ನ ಹೆಂಡತಿಯ ಫೋಟೋವನ್ನು ಫೇಸ್ಬುಕ್ ನಲ್ಲಿ ಹಾಕಿ ಆಕೆಗೆ ಆರ್ ಐ ಪಿ ಎಂದು ಬರೆದು ಶ್ರದ್ಧಾಂಜಲಿ ಸಲ್ಲಿಸಿದ್ದಾನೆ.. ಹೌದು ತನ್ನ ಹೆಂಡತಿಯ ಬಗ್ಗೆ ಆಕೆಯ ಫೋಟೋ ಹಾಕಿ ಈ ರೀತಿಯ ಕೆಲಸ ಮಾಡಿದ್ದು ಕುಟುಂಬದವರು ಬೆಚ್ಚಿಬಿದ್ದಿದ್ದಾರೆ..

ಹೌದು ಇತ್ತ ಫೇಸ್‌ಬುಕ್‌ ನಲ್ಲಿ ತಮ್ಮ ಮಗಳ ಬಗ್ಗೆ ಅಳಿಯ ಬರೆದಿದ್ದನ್ನು ನೋಡಿ ಬೆಚ್ಚಿಬಿದ್ದ ಲೀಲಾವತಿಯ ಅಪ್ಪ ಅಮ್ಮ ಸೀದಾ ಅಳಿಯನ ಮನೆಗೆ ಆಗಮಿಸಿದ್ದಾರೆ.. ಆದರೆ ಅಲ್ಲಿ ಮಗಳು ಇರಲಿಲ್ಲ.. ಹೌದು ಇತ್ತ ಮಗಳಿಗೆ ಅಳಿಯ ಶ್ರದ್ಧಾಂಜಲಿ ಸಲ್ಲಿಸಿದ್ದಾನೆ.. ಆದರೆ ಮಗಳು ಮಾತ್ರ ಗಂಡನ ಮನೆಯಲ್ಲಿಯೇ ಇಲ್ಲ.. ಇದರಿಂದ ಆಕೆಯ ಹೆತ್ತವರು ಆತಂಕಕೊಳಗಾಗಿದ್ದು ಮಹಿಳಾ ಪೊಲೀಸ್ ಠಾಣೆಯಲ್ಲಿ ಅಳಿಯನ ಮೇಲೆ ದೂರು ದಾಖಲು ಮಾಡಿದ್ದಾರೆ.. ಆದರೆ ಇಲ್ಲಿ ಮತ್ತೊಂದು ಕತೆ ಕೇಳಿ ಬಂದಿದ್ದು ಮುನಿಕೃಷ್ಣನ ತಮ್ಮ ಹೇಳುತ್ತಿರುವ ಕತೆಯೇ ಬೇರೆಯೇ ಆಗಿದೆ..

ಹೌದು ಮುನಿಕೃಷ್ಣ ಫೆಬ್ರವರಿ ಇಪ್ಪತ್ತಮೂರು ಬುಧವಾರ ರಾತ್ರಿ ತನ್ನ ತಂಗಿಯ ಮಗನ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದು ಅಲ್ಲಿಂದ ಬಂದ ನಂತರ ಅದೇ ವಿಚಾರಕ್ಕೆ ಸಂಬಂಧಪಟ್ಟಂತೆ ಮುನಿಕೃಷ್ಣ ಹಾಗೂ ಲೀಲಾವತಿ ನಡುವೆ ಜಗಳ ವಾಗಿದೆ.. ಜಗಳ ತಾರಕಕ್ಕೇರಿದ್ದು ಲೀಲಾವತಿಯ ಮೇಲೆ ಮುನಿಕೃಷ್ಣ ಕೈ ಮಾಡಿದ್ದಾನೆ ಎನ್ನಲಾಗಿದೆ.. ಮರುದಿನ ಮಧ್ಯಾಹ್ನ ಒಂದು ಗಂಟೆಗೆ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಹೆಂಡತಿಯ ಫೋಟೋ ಹಂಚಿಕೊಂಡು ಆರ್ ಐ ಪಿ ಎಂದು ಬರೆದು ಶ್ರದ್ಧಾಂಜಲಿ ಸಲ್ಲಿಸಿದ್ದಾನೆ.. ಆನಂತರ ಲೀಲಾವತಿಯ ಅಪ್ಪ ಅಮ್ಮ ಅಳಿಯನ ಮನೆ ಮುಂದೆ ಬಂದು ಮಗಳನ್ನು ಹುಡುಕಾಡಿದ್ದಾರೆ..

ಆದರೆ ಮುನಿಕೃಷ್ಣನ ತಮ್ಮ ಮುನಿರಾಜು ಬೇರೆಯದ್ದೇ ಕತೆ ಹೇಳುತ್ತಿದ್ದಾನೆ.. ಹೌದು ತಂಗಿ ಮಗನ ಹುಟ್ಟುಹಬ್ಬದ ಪಾರ್ಟಿ ವಿಚಾರಕ್ಕೆ ಸಂಬಂಧಪಟ್ಟಂತೆ ರಾತ್ರಿ ಅಣ್ಣ ಅತ್ತಿಗೆ ನಡುವೆ ಜಗಳವಾಗಿದ್ದು ನಿಜ.. ಮಾರನೆ ದಿನ ಅಣ್ಣ ಅತ್ತಿಗೆ ಮೇಲೆ ಕೈ ಮಾಡಿದ್ದು ನಿಜ.. ಆ ಘಟನೆ ನಡೆದ ಕೂಡಲೇ ಅತ್ತಿಗೆ ತನ್ನ ಬ್ಯಾಗ್ ತೆಗೆದುಕೊಂಡು ಮನೆ ಬಿಟ್ಟು ಹೊರಟು ಹೋದರು.. ಹೋಗುವಾಗ ಅಣ್ಣನ ಮೊಬೈಲ್ ಅನ್ನು ಸಹ ತೆಗೆದುಕೊಂಡು ಹೋಗಿದ್ದಾರೆ.. ಅವರೇ ಅಣ್ಣನ ಫೇಸ್ಬುಕ್ ನಿಂದ ತಮ್ಮ ಫೋಟೋ ಹಾಕಿ ಆರ್ ಐ ಪಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ ಎನ್ನುತ್ತಿದ್ದಾನೆ.

ಇನ್ನು ಇತ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮುನಿಕೃಷ್ಣನನ್ನು ಕರೆದು ವಿಚಾರಣೆ ಮಾಡಲಾಗಿದೆ.. ಜೊತೆಗೆ ಲೀಲಾವತಿಯ ಮೊಬೈಲ್ ಟವರ್ ಲೊಕೇಶನ್ ಅನ್ನು ಪತ್ತೆ ಮಾಡಲಾಗಿ ತಿರುಪತಿಯಲ್ಲಿ ಟವರ್ ಲೊಕೇಶನ್ ತೋರಿಸುತ್ತಿದ್ದು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.. ಆದರೆ ಇತ್ತ ಲೀಲಾವತಿಯ ಹೆತ್ತವರು ನನ್ನ ಮಗಳನ್ನು ಮುನಿಕೃಷ್ಣನೇ ಏನೋ ಮಾಡಿ ಹಾಕಿದ್ದಾನೆ.. ಅಳಿಯನಿಗೆ ಎಲ್ಲವನ್ನು ಕೊಟ್ಟು ಮದುವೆ ಮಾಡಲಾಗಿತ್ತು.. ಆದರೂ ನನ್ನ ಮಗಳಿಗೆ ಪ್ರತಿದಿನ ಹಣಕ್ಕಾಗಿ ನೋವು ಕೊಟ್ಟು ಈಗ ಈ ರೀತಿ ಮಾಡಿದ್ದಾನೆ.. ನಮ್ಮ ಮಗಳನ್ನು ನಮಗೆ ಕೊಟ್ಟುಬಿಡಿ ಎಂದು ಕಣ್ಣೀರಿಟ್ಟಿದ್ದಾರೆ. ಒಟ್ಟಿನಲ್ಲಿ ಸಂಸಾರದ ಸಣ್ಣ ವಿಚಾರವೀಗ ಇಷ್ಟು ದೊಡ್ಡ ಮಟ್ಟಕ್ಕೆ ಬಂದು ನಿಂತಿದ್ದು ಲೀಲಾವತಿ ಸುರಕ್ಷಿತವಾಗಿ ಆಕೆಯ ಹೆತ್ತವರ ಮನೆ ಸೇರುವಂತಾಗಲಿ.. ಆ ದಂಪತಿಯ ಪುಟ್ಟ ಮಗು ತಾಯಿಲ್ಲದ ತಬ್ಬಲಿಯಾಗದಿರಲಿ..