Advertisements

ಹಾಸಿಗೆ ಹಿಡಿದಿರುವ ಲೀಲಾವತಿ ಅಮ್ಮ ನನ್ನ ಮಗನ ಕೈ ಬಿಡಬೇಡಿ ಎಂದು ಕೇಳಿಕೊಳ್ಳುತ್ತಿರುವ ದೃಶ್ಯ! ಏನಾಗಿದೆ ನೋಡಿ..

Kannada News

ನಮಸ್ಕಾರ ಪ್ರಿಯ ಗೆಳೆಯರೆ ಇಂದಿಗೂ ಸಹ ಚಂದನವನ್ನು ತಮ್ಮ ಅದ್ಬುತ ಅಭಿನಯದ ಮೂಲಕ ಬೆಳೆಸಿ ಮನದ ಮನೆಯಲ್ಲಿ ಮರೆಯಾದ ಅದೆಷ್ಟೊ ಸ್ಟಾರ್ ನಟರನ್ನು ನಾವು ಇಂದಿಗೂ ನೆನೆಯುತ್ತವೆ.

ಡಾ. ರಾಜಕುಮಾರ, ಶಂಕರನಾಗ, ಅಂಬರೀಶ್ ,ಡಾ.ವಿಷ್ಣುವರ್ಧನ್ ಹಲವು ನಟರು ಇಂದಿಗೂ ಸಹ ಚಂದನವನದ ಕಂಪಿನಲ್ಲಿದ್ದಾರೆ. ಇವರನ್ನೆಲ್ಲ ಕಳೆದುಕೊಂಡಿದ್ದು ನಮ್ಮ ಕನ್ನಡ ಸಿನಿಮಾ ರಂಗ ಬರಿದಾದರು ಇನ್ನುಸಹ ಹಿರಿಯ ಕಲಾವಿದರು ನಮ್ಮೊಂದಿಗಿದ್ದಾರೆ ಎಂಬ ಸಾಮಾಧಾನ ಅಭಿಮಾನಿಗಳಿಗೆ ಇದೆ.

ಇಂತಹ ಸ್ಟಾರ್ ನಟರೊಂದಿಗೆ ಅಭಿನಯಿಸಿ, ಎಲ್ಲರ ಮೆಚ್ಚಿಗೆ ಗಳಿಸಿದ ಹಿರಿಯ ನಟಿಯೊಬ್ಬರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಆ ನಟಿ ಯಾರು, ಅವರು ಈಗ ಹೇಗಿದ್ದಾರೆ ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ಕೊನೆವರಗೂ ಓದಿ ಹಾಗೂ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ.

ಎಂಬತ್ತರ ದಶಕದಲ್ಲಿ ಸಿನಿ ರಂಗಕ್ಕೆ ಕಾಲಿಟ್ಟು ಹಲವು ಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯತೆ ಗಳಿಸಿದ ನಟಿಯರಲ್ಲಿ ಲೀಲಾವತಿ ಒಬ್ಬರು. ಇವರು ನಟಿಸಿದ್ದು ನೂರಲ್ಲ ಎರೆಡು ನೂರಲ್ಲ ಬರೊಬ್ಬರಿ 600ಸಿನಿಮಾಗಳಲ್ಲಿ ನಟಿಸಿದ್ದು, ಅವುಗಳಲ್ಲಿ 400 ಸಿನಿಮಾಗಳು ಕನ್ನಡದಲ್ಲಿವೆ ಎಂಬುವುದು ನಮ್ಮಗೆಲ್ಲ ಹೆಮ್ಮೆಯ ವಿಷಯ.

Advertisements
Advertisements

ಡಾ.ರಾಜ್ ಕುಮಾರ್, ಶಂಕರನಾಗ್ ಹೀಗೆ ಅನೇಕ ನಟರೊಂದಿಗೆ ನಟಿಸಿ ತಮ್ಮ ನಟನೆಯನ್ನು ಜಗತ್ತಿಗೆ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ ಕೀರ್ತಿ ನಟಿ ಲೀಲಾವತಿ ಅವರಿಗೆ ಸಲ್ಲುತ್ತದೆ.

ಇವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಅವುಗಳಲ್ಲಿ ಸಿಪಾಯಿ ರಾಮು, ನಾಗರ ಹಾವು,ಭಕ್ತ‌ ಕುಂಬಾರ, ಗಾಳಿ ಗೋಪುರ, ಮಹಾಸತಿ ಅನಸೂಯ, ಕಣ್ತೆರೆದು ನೋಡು ಹೀಗೆ ಇನ್ನು ಅನೇಕ ಚಿತ್ರಗಳಲ್ಲಿ ನಟಿಸಿ ಅಪಾರ ಪ್ರಮಾಣದ ಅಭಿಮಾನಿಗಳ ಬಳಗವನ್ನು ಸಂಪಾದಿಸಿದ್ದಾರೆ.

ಇನ್ನು ಇವರ ವಯಕ್ತಿಕ ಜೀವನ‌ ನೋಡುವುದಾದರೆ ಇವರ ಮಗ ವಿನೋದ ರಾಜ್ ಕುಮಾರ ಸದ್ಯ ಕನ್ನಡದ ಒಬ್ಬ ನಟರು.‌ಅವರನ್ನು ಸಾಕಿ ಸಲುಹಿ ಬೆಳೆಸಿ ಇಂದು ಅವರ ಕನ್ನಡ ಸಿನಿ ಇಂಡಸ್ಟ್ರಿಲಿ ನಟನಾಗಿ ಗುರುತಿಸಿಕೊಳ್ಳುವಂತೆ ಮಾಡಿದ್ದು ಅವರ ತಾಯಿ ಲೀಲಾವತಿ. ಸದಾ ಕಾಲ ಮಗನೊಂದಿಗೆ ಇದ್ದು, ಅವನ ಏಳು ಬೀಳಿನಲ್ಲಿ ಜೊತೆಗಿದ್ದ ಲೀಲಾವತಿ ಸದ್ಯ ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದಾರೆ.

ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ ನಂತರ ಲೀಲಾವತಿ ಹಾಗೂ ಮಗ ವಿನೋದ ರಾಜ್ ಸಿನಿಮಾ ರಂಗಕ್ಕೆ ಗುಡ್ ಬಾಯ್ ಹೇಳಿ ಸದ್ಯ ಕೃಷಿಯತ್ತ ಮುಖಮಾಡಿದ್ದರು.

ಅವರದ್ದು ನಾಲ್ಕೈದು ಎಕರೆ ಜಮೀನಿನಲ್ಲಿ ಕೃಷಿ ಮಾಡಿ ಅದರಲ್ಲಿ ಬಂದ ಹಣದಲ್ಲಿ ಜನರಿಗೆ ಸಹಾಯ ಮಾಡುತ್ತಾರೆ. ಅದಷ್ಟೆ ಅಲ್ಲದೆ ಲೀಲಾವತಿ ಚೆನೈನಲ್ಲಿದ್ದ ತಮ್ಮ ಜಮೀನನ್ನು ಮಾರಿ ಅದರಲ್ಲಿ ಬಂದ ಹಣದಿಂದ ನೆಲಮಂಗಲ ಸಮೀಪ ಆಸ್ಪತ್ರೆಯೊಂದನ್ನು ಕಟ್ಟಿಸಿ ಅದನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ. ಈ ರೀತಿಯಾಗಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ.

ಸದ್ಯ ಲೀಲಾವತಿ ಅವರು ಅನಾರೋಗ್ಯದ ಕಾರಣದಿಂದಾಗಿ ಹಾಸಿಗೆ ಹಿಡಿದಿದ್ದಾರೆ. ಇವರನ್ನು ನೋಡಲು ಸನಿ ರಂಗದ ಕಲಾವಿದರ ಬಳಗವೇ ಹರಿದು ಬರುತ್ತಿದೆ. ಈ ಸಂದರ್ಭದಲ್ಲಿ ಲೀಲಾವತಿ ‌ಮಗ ವಿನೋದ ಅವರಿಗೆ ನನ್ನ ಕೈ ಬೀಡಬೇಡ ಮಗನೆ ಎಂದು ಹೇಳಿಕೊಂಡಿದ್ದರು. ಸದ್ಯ ಹಾಸಿಗೆ ಹಿಡಿದರುವ ಲೀಲಾವತಿ ಅವರಿಗೆ ಆದಷ್ಟು ಬೇಗ ಅವರ ಆರೋಗ್ಯ ಸುಧಾರಿಸಲಿ. ಮತ್ತೆ ಅವರು ಜನರಿಗೆ ಸಹಾಯ ಮಾಡುವ ಹಾಗೆ ಆಗಲಿ ಎಂಬುವುದು ಅವರ ಅಭಿಮಾನಿಗಳ ಹಾರೈಕೆ.