Advertisements

ಹೆರಿಗೆ ನೋವಿನಲ್ಲಿ ಒದ್ದಾಡುತ್ತಿದ್ದ ಪತ್ನಿಯ ಜೊತೆ ಯೂಟ್ಯೂಬ್ ವೀಡಿಯೋ ನೋಡಿಕೊಂಡು ಎಂತಹ ಕೆಲಸ ಮಾಡಿದ್ದಾನೆ ನೋಡಿ.. ಇವನ ಜನ್ಮಕ್ಕಿಷ್ಟು..

Kannada News

ನಮಸ್ಕಾರ ವೀಕ್ಷಕರೆ ಇಂದಿನ ಕಾಲ ವಿಚಿತ್ರವಾಗಿದೆ. ಇಂದಿನ ಸೋಶಿಯಲ್ ಮೀಡಿಯಾ ಜಮಾನಾದಲ್ಲಿ ದಿನಕ್ಕೊಂದು ಅಚ್ಚರಿ ಸುದ್ದಿ ಕಿವಿಗೆ ಬೀಳುತ್ತಲೆ ಇರುತ್ತದೆ. ಇತ್ತಿಚಿಗಂತು ಟ್ರೋಲಿಂಗ್, ವೀಡಿಯೋ ಮೇಕಿಂಗ್ ಆ್ಯಪಗಳ‌ ಕಾರುಬಾರಿನಲ್ಲಿ ಅನೇಕರ ಜೀವನವೇ ಬದಲಾಗಿದೆ. ವೃದ್ದರಿಂದ ಹಿಡಿದು ಚಿಕ್ಕ ಮಕ್ಕಳವರೆಗೆ ಎಲ್ಲರೂ ಯಾವಾಗಲು ಮೊಬೈಲ್ ಗೆ ಅಂಟಿಕೊಂಡಿರುತ್ತಾರೆ. ಇದರ ಬಳಕೆಯಿಂದ ಎಷ್ಟು ಒಳ್ಳೆಯದಿದೆಯೋ ಅಷ್ಟ ಕೆಟ್ಟ ಪರಿಣಾಮವು ಇದೆ. ಯೂಟ್ಯೂಬ್ ‌ನಲ್ಲಿ ಅನೇಕ ವಿಷಯವನ್ನು ಕೇಳುತ್ತೆವೆ,‌ಕಲಿಯುತ್ತೆವೆ ಆದರೆ ಇಲ್ಲೊಬ್ಬ ಪತಿ ಯೂಟ್ಯೂಬ್ ವಿಡಿಯೋ ನೋಡಿ‌ ಗರ್ಭಿಣಿ ಹೆಂಡತಿಗೆ ತಂದ ಗತಿ ನೋಡಿದರೆ ಗಾಬರಿಯಾಗುತ್ತಿರಾ..

Advertisements
Advertisements

ಈ ರೀತಿಯ ಜನರು ನಮ್ಮ‌ ಮಧ್ಯ ಇದ್ದಾರಾ ಎಂದು ಅನುಮಾನ ಉಂಟಾಗುತ್ತದೆ. ಯಾರು ಆತ, ಆತ ನೋಡಿದ್ದ ವೀಡಿಯೋ ಆದ್ರು ಯಾವ್ದು? ಆತನ ಹೆಂಡತಿಗೆ ಮಾಡಿದ್ದೇನು ಎಂದು ತಿಳಿತಲು ಈ ಸ್ಟೋರಿನಾ ತಪ್ಪದೆ ಓದು, ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.. ಈ ಘಟನೆ ನಡದಿರುವುದು ತಮಿಳುನಾಡು ರಾಜ್ಯದಲ್ಲಿ. ಅಲ್ಲಿಯ ರಾಣಿಪೇಟ್ ಜಿಲ್ಲೆಯ ಅರಕ್ಕೋಣಂ ಸಮೀಪದ ನೆಡುಂಪುಲಿ ಗ್ರಾಮದ ನಿವಾಸಿಯಾದ 32 ವರ್ಷದ ಲೋಗನಾಥ ಎಂಬುವನು ತನ್ನ ಹೆಂಡತಿಗೆ ಯಾವ ಗತಿ ತಂದಿದ್ದಾನೆ ಎಂದರೆ. ಈತನ ಗರ್ಭಿಣಿ ಪತ್ನಿಯ ಹೆಸರು ಗೋಮತಿ..

ವಯಸ್ಸು 28 ವರ್ಷ..ಯೂಟ್ಯೂಬ್ ‌ವೀಡಿಯೋ ನೋಡಿದ ಗಂಡನ ಪ್ರಯೋಗಕ್ಕೆ ತುತ್ತಾಗಿ ನೋವು ಅನುಭವಿಸುತ್ತಿರುವ ನತದೃಷ್ಟ ಹೆಂಡತಿ‌ ಇಕೆ. ಕಳೆದ ಒಂದೂವರೆ ವರ್ಷದ ಹಿಂದಷ್ಟೇ ಗೋಮತಿ ಹಾಗೂ ಲೋಗನಾಥನ್ ಮದುವೆಯಾಗಿ ನವ ಜೀವನಕ್ಕೆ ಹೆಜ್ಜೆ ಹಾಕಿದ್ದರು. ಮನೆಯವರು ನೋಡಿ ಒಪ್ಪಿ ನಿಶ್ಚಯ ಮಾಡಿದ ಮದುವೆಯೇ ಆಗಿತ್ತು.. ಸಂಕ್ರದಾಯ ಬದ್ಧವಾಗಿ ಮದುವೆಯು ಅದ್ಧೂರಿಯಾಗಿ ನಡೆದಿತ್ತು. ಮದುವೆಯ ನಂತರ ಅವರ ಸಂಸಾರ ಬಹಳ ಅನ್ಯೂನ್ಯವಾಗಿಯೇ ಸಾಗಿತ್ತು.

ಕೆಲವು ತಿಂಗಳ ನಂತರ ಆ ಮನೆಯಲ್ಲಿ‌ ಮತ್ತೆ ಸಂಭ್ರಮದ ವಾತಾವರಣ‌ ಮನೆ‌ಮಾಡಿತ್ತು. ಅದೆ ಗೋಮತಿ ಗರ್ಭಿಣಿ ಆಗಿದ್ದಳು.. ದಿನಕಳೆದಂತೆ ಗೋಮತಿಗೆ ಒಂಭತ್ತು ತಿಂಗಳು ತುಂಬಿತು.. ಹೆರಿಗೆ ನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಗಂಡ ಬೇರೆ ಕೆಲಸ ಮಾಡಿಬೀಡುತ್ತಾನೆ. ಗರ್ಭಿಣಿ ಗೋಮತಿಗೆ ಕಳೆದ ಮೂರು ದಿನಗಳ ಹಿಂದೆ ಹೆರಿಗೆ ನೋವು ಕಾಣಿಸಿಕೊಂಡಿದೆ.. ಈ ವಿಚಾರವನ್ನು ಗಂಡನಿಗೂ ಹೇಳಿದ್ದಾಳೆ..

ಮನೆಯಲ್ಲಿ ಗಂಡ ಹೆಂಡತಿ‌ ಇಬ್ಬರೆ. ಬೇರೆ ಯಾರೂ ಸಹ ಇರಲಿಲ್ಲ. ತಕ್ಷಣ ಆಸ್ಪತ್ರೆಗೆ ಸೇರಿಸಿ ಮಗು ಹಾಗೂ ತಾಯಿಯನ್ನು ಕಾಪಾಡಬೇಕಿದ್ದ ಗಂಡನೇ ಅಂತಹ ಸೂಕ್ಷ್ಮ ಸಮಯದಲ್ಲಿ ಅಧಿಕ ಪ್ರಸಂಗತನದ ನಿರ್ಧಾರ ತೆಗೆದುಕೊಂಡಿದ್ದಾನೆ.. ಹೌದು ನಾನು ಯೂಟ್ಯೂಬ್ ನಲ್ಲಿ ವೀಡಿಯೋಗಳನ್ನು ನೋಡಿದ್ದೇನೆ.. ನಿನಗೆ ನಾನೇ ಹೆರಿಗೆ ಮಾಡಿಸುತ್ತೇನೆ ಎಂದಿದ್ದಾನೆ.. ಇತ್ತ ಬೇಡ ನನಗೆ ತಡೆಯಲಾಗುತ್ತಿಲ್ಲ ಎಂದು ಪತ್ನಿ ಎಷ್ಟೇ ಅಂಗಲಾಚಿದರೂ ಸಹ ಲೋಗನಾಥಮ್ ಮಾತ್ರ ತನ್ನ ಹುಚ್ಚಾಟವನ್ನು ನಿಲ್ಲಿಸಲಿಲ್ಲ. ವಿಡಿಯೋ ನೋಡಿ ಹರಿಗೆ ಮಾಡಿಸಿಕೊಳ್ಳಲು ಮುಂದಾದ ಪತಿಗೆ ಎಷ್ಟೆ ಮನವಿ ಮಾಡಿದರು ಆತ ಆಕೆಯ ಮಾತು ಕೇಳಲಿಲ್ಲ.

ಆತನ ಪ್ರಯೋಗಕ್ಕೆ ಅದಾಗಲೆ ಹೆಂಡತಿ ಮೂರ್ಛೇ ಹೋಗಿದ್ದಳು. ಕರುಣೆಯೇ ಇಲ್ಲದ ಮೃಗದಂತೆ ವರ್ತಿಸಿದ ಲೋಗನಾಥನ್ ಆಸ್ಪತ್ರೆಗೆ ಸೇರಿಸಲೇ ಇಲ್ಲ.. ನಾನೇ ಹೆರಿಗೆ ಮಾಡಿಸುತ್ತೇನೆ ಎಂದು ಸಾಕಷ್ಟು ಪ್ರಯತ್ನ ಪಡುತ್ತಲೇ ಇದ್ದ. ಹೆಂಡತಿಯ ಹೊಟ್ಟೆಯ ಭಾಗಕ್ಕೆ ಸಾಕಷ್ಟು ನೋವು ಕೊಟ್ಟು ಹಲವು ಗಂಟೆಗಳ ನಂತರ ಮಗುವನ್ನು ಹೊರಗೆ ತೆಗೆದ… ಆದರೆ ಈತನ ಹುಚ್ಚಾಟಕ್ಕೆ‌ ಅದಾಗಲೇ ಮಗು ಇಹಲೋಕ ತ್ಯಜಿಸಿಬಿಟ್ಟಿತ್ತು.. ಮೊದಲ‌ ಮಗು ಪಡೆಯಬೇಕೆಂಬುವುದು ಎಲ್ಲ ತಾಯಂದಿರ ಕನಸಾಗಿರುತ್ತದೆ. ಆದರೆ ಸ್ವತಃ ತಂದೆಯೇ ಮಗುವಿನ ಬಾಳಿಗೆ‌ ಯಮನಾಗಿ ಹೋದ. ಈ ರೀತಿಯ ಹುಚ್ಚಾಟ ಮಾಡದೆ ಆಸ್ಪತ್ರೆಗೆ ‌ಕರೆದುಕೊಂಡು ಹೋಗಿದ್ದರೆ ಇಷ್ಟೊತ್ತಿಗೆ ಮಗು ಮತ್ತು ತಾಯಿ ಇಬ್ಬರು ಆರಾಮಾಗಿರುತ್ತಿದ್ದರು.‌ಆದರೆ ಗಂಡನ‌ ಈ ಮಳ್ಳಾಟಕ್ಕೆ‌ ಹೆಂಡತಿ ನೋವು ಅನುಭವಿಸಿದು ಮಾತ್ರವಲ್ಲದೆ ಮಗುವನ್ನು ಕೊಡ‌ ಕಳೆದುಕೊಂಡಿದ್ದಾಳೆ.

ರಕ್ತ ಸ್ರಾ’ವ ನಿಲ್ಲದ‌ ಕಾರಣ ಗಾಭರಿಗೊಂಡ ಲೋಗನಾಥನ್ ತನ್ನ ಪತ್ನಿಯನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾನೆ.‌‌ ಹೆತ್ತ‌ ಮಗುವನ್ನು ತನ್ನ ಕೈಯಾರೆ ತಾನೆ ಕೊಂದ ಪಾಪಿ‌ ತಂದಡ. ಗೋಮತಿಯನ್ನು ನೋಡಿದ ಸರ್ಕಾರಿ ವೈದ್ಯರೇ ಖುದ್ದಾಗಿ ಪೊಲೀಸರಿಗೆ ವಿಚಾರ ತಿಳಿಸಿ ಅವನ ಮೇಲೆ ದೂರನ್ನು ಸಹ ನೀಡಿದ್ದಾರೆ.. ವಿಚಾರ ತಿಳಿದ ಕೂಡಲೇ ಇತ್ತ ಲೋಗನಾಥನ್ ನನ್ನು ಪೊಲೀಸರು ತಮ ವಶಕ್ಕೆ ಪಡೆದಿದ್ದಾರೆ..

ಅದೇನೆ‌ ಇರಲಿ ನಾವು ಪ್ರತಿನಿತ್ಯ ನೋಡುವುದೆಲ್ಲ‌ ಸತ್ಯವಲ್ಲ. ಹಾಗಾಗಿ‌ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಲ್ಲ‌ ಸಂಗತಿ ಸತ್ಯ, ಅಥವಾ ಸುಳ್ಳೆಂದು ಭಾವಿಸುವುದು ತಪ್ಪು. ‌ಯಾವುದೆ ವಿಷಯವನ್ನು ವಯಕ್ತಿಕವಾಗಿ ತೆಗೆದುಕೊಳ್ಳಬಾರದು. ಅಲ್ಲಿ ತೋರಿಸುವ ವಿಡಿಯೊಗಳನ್ನು ನಮ್ಮ ವಾಸ್ತವ ಜೀವನಕ್ಕೆ ಹೋಲಿಕೆ‌ ಮಾಡಿದರೆ ಅಲೋಕನಾಥನಂತೆ ಎಲ್ಲರನ್ನು ಕಳೆದುಕೊಂಡು ಕಂಬಿ‌ ಹಿಂದೆ ವಾಸ ಮಾಡಬೇಕಾಗುತ್ತದೆ.