Advertisements

ಬೀದಿಯಲ್ಲಿ ಭಿಕ್ಷೆ ಬೇಡ್ತಿದ್ದ ವ್ಯಕ್ತಿ ಇವತ್ತು ಬಿಗ್ ಬಾಸ್ ಸ್ಪರ್ಧಿ! ತಾಯಿ ಸಿಗದೇ ಇಂದಿಗೂ ಹುಡುಕಾಟ..

Cinema Entertainment

ಈ ಸ್ಟೋರಿ ಯಾವ ಸಿನಿಮಾ ಸ್ಟೋರಿಗೂ ಕಡಿಮೆ ಇಲ್ಲಾ.. ನಮ್ಮ ಕೈನಲ್ಲಿ ಏನೂ ಇಲ್ಲಾ ಏನೂ ಮಾಡೋದಕ್ಕೆ ಸಾಧ್ಯನೇ ಆಗೋದಿಲ್ಲಾ. ನಾನು ಯಾವುದೇ ಸಾಧನೆ ಮಾಡೋದಕ್ಕೆ ಅರ್ಹನಲ್ಲ ಅಂತ ಯಾರ್ಯಾರು ಯೋಚನೆ ಮಾಡ್ತಿರೋ ನಿಮ್ಮೆಲ್ಲರಿಗೂ ಕೂಡ ನೂರಕ್ಕೂ ನೂರರಷ್ಟು ಸ್ಪೂರ್ತಿ.. ಕಾಮಿಡಿ ಕಿಲಾಡಿ ಮೂಲಕ ಪ್ರಖ್ಯಾತಿ ಪಡೆದುಕೊಂಡಿರುವಂತಹ ಸಧ್ಯ ಬಿಗ್ ಬಾಸ್ ಒಟಿಟಿಯಲ್ಲಿ ಸದ್ದು ಮಾಡುತ್ತಿರುವಂತಹ ಹಾಸ್ಯ ನಟ ಲೋಕೇಶ್ ಗೆ ಸಂಬಂಧಿಸಿದ ಸ್ಟೋರಿ ಇದು.. ಅವರ ಬದುಕಿನ ಸ್ಟೋರಿ ಇದಿಯಲ್ಲಾ ನಮ್ಮೆಲ್ಲರಿಗೂ ಪಾಠ ಕಲಿಸುತ್ತೆ.. ಲೋಕೇಶ್ ಮೂಲತಃ ತುಮಕೂರಿನ ಶಿವಗಂಗೆಯವರು. ಅವರ ತಂದೆ ಮೊದಲ ಮದುವೆಯಾಗಿ ಮೊದಲ ಪತ್ನಿ ತೀರಿಕೊಂಡ ನಂತರ ಎರಡನೇ ಮದುವೆ ಆಗ್ತಾರೆ.. ಆ ಪತ್ನಿಗೆ ಜನಿಸಿದಂತವರೇ ಲೋಕೇಶ್.

Advertisements
Advertisements

ಲೋಕೇಶ್ ಅವರಿಗೆ ಬಾಲ್ಯದಲ್ಲಿ ಹೇಳಿಕೊಳ್ಳುವಂತಹ ಸಮಸ್ಯೆ ಏನು ಇರಲಿಲ್ಲಾ.. ಆದರೆ ತಾಯಿಗೆ ಮಾನಸಿಕ ಸಮಸ್ಯೆ ಇತ್ತು.. ಇದರಿಂದ ಲೋಕೇಶ್ ತುಂಬಾ ನೊಂದಿದ್ದರು.. ಇನ್ನೊಂದು ಕಡೆ ತಂದೆ ಪ್ರೀತಿ ಕೂಡ ಸರಿಯಾಗಿ ಸಿಗುತ್ತಿರಲಿಲ್ಲಾ. ಇದರ ನಡುವೆ ಲೋಕೆಶ್ ಗೆ ಎನಾದ್ರು ಮಾಡಬೇಕೆನ್ನುವ ಆಸೆ.. ಆದರೆ ಕುಟುಂಬದಲ್ಲಿ ನಾನಾ ರೀತಿಯಲ್ಲಿ ಜಂಜಾಟ, ಗೋಳಾಟ. ಇದರಿಂದ ಯಾವಾಗ ಮುಕ್ತಿ ಸಿಗುತ್ತೆ ಅಂತ ಕಾಯ್ತಾ ಇರ್ತಾರೆ ಲೋಕೇಶ್.. ಇನ್ನೂ ತುಂಬಾ ಚಿಕ್ಕ ವಯಸ್ಸಿನಲ್ಲಿ ಅಂದರೆ 9, 10 ವಯಸ್ಸಿನಲ್ಲಿ ಲೋಕೇಶ್ ಊರನ್ನ ಬಿಟ್ಟು ಸೀದಾ ಬೆಂಗಳೂರಿಗೆ ಬರ್ತಾರೆ.. ನೆಮ್ಮದಿಯನ್ನ ಹುಡುಕಿ ಹಣ ಮಾಡಬೇಕೆಂದು ಸೀದಾ ಬೆಂಗಳೂರಿಗೆ ಬಂದು ಬಿಡ್ತಾರೆ.

ಆದರೆ ಬೆಂಗಳೂರಿನ ಬದುಕು ಸುಲಭವಲ್ಲಾ.. ಹಾಗೆ ಲೋಕೇಶ್ ಗೆ ಬೆಂಗಳೂರಿಗೆ ಬಂದಮೇಲೆ ಎಲ್ಲವೂ ಅರ್ಥ ಆಗೋದಕ್ಕೆ ಶುರುವಾಗುತ್ತೆ. ಮೊದಲಿಗೆ ರೈಲ್ವೇ ಸ್ಟೇಷನ್ ನಲ್ಲಿ ಕೆಲಸ ಮಾಡ್ತಾರೆ.. ಕಸ ಗುಡಿಸೋದು ಯಾವ ಕೆಲಸವೂ ಬಿಟ್ಟಿರಲಿಲ್ಲಾ. ಎಲ್ಲಾ ಮಾಡಿದ್ದಾರೆ‌.. ಆದರೆ ಅವರ ಹೊಟ್ಟೆ ತುಂಬುವಷ್ಟು ಸಂಪಾದನೆ ಆಗ್ತಿರಲಿಲ್ಲಾ. ಇನ್ನೂ ಲೋಕೇಶ್ ಕಬ್ಬನ್ ಪಾರ್ಕ್ ಗೆ ಬಂದಾಗ ಅಲ್ಲಿನ ಭಿಕ್ಷುಕರನ್ನ ನೋಡಿ ಯಾಕೆ ನಾನು ಇಷ್ಟು ಕಷ್ಟ ಪಡಬೇಕು ನಾನು ಭಿಕ್ಷೆ ಬೇಡ್ತೀನಿ ಅಂತ ಭಿಕ್ಷೆ ಬೇಡ್ತಿರ್ತಾರೆ.. ಆದರೆ ಯಾರು ಕೂಡ ಅವರಿಗೆ ಭಿಕ್ಷೆ ಹಾಕುತ್ತಿರಲಿಲ್ಲಾ. ಆಗ ಲೋಕೇಶ್ ಒಂದು ಪ್ಲಾನ್ ಮಾಡ್ತಾರೆ.. ಯಾಕೆ ನಾನು ಮೂಗನ ರೀತಿ ಆ್ಯಕ್ಟ್ ಮಾಡಬಾರದು ಅಂತೇಳಿ..

ಈ ಮೂಗಿನ ರೀತಿ ಅನುಭವಿಸಿದ್ದೇ ಲೋಕೇಶ್ ಅವರ ಬದುಕನ್ನ ಬದಲಿಸ್ತು. ನಂತರ ಮೂಗ ಅಂತ ಜನರು ಜ್ಯಾಸ್ತಿ ಹಣ ಹಾಕೋದಕ್ಕೆ ಶುರು ಮಾಡ್ತಾರೆ.. ಈಗೆ ಭಿಕ್ಷೆ ಬೆಡ್ತಾ ಇರ್ಬೇಕಾದರೆ ಇನ್ನೂ ಇದನ್ನ ಮೀರಿ ಏನಾದರೂ ಮಾಡಬೇಕು ಅಂತ ಅನಿಸುತ್ತೆ.. ಮತ್ತೆ ಹೋಟಲ್ ಗಳಲ್ಲಿ, ಬೇಕರಿಗಳಲ್ಲಿ ಕೆಲಸ, ಕಂಡ ಕಂಡ ಕಡೆ ಕೆಲಸ.. ಮನುಷ್ಯ ಎನೇನು ಕೆಲಸ ಮಾಡೋದಕ್ಕೆ ಸಾಧ್ಯನೋ ಎಲ್ಲವೂ ಮಾಡ್ತಿರ್ತಾರೆ ಲೋಕೇಶ್. ಆದರು ಕೂಡ ಲೋಕೇಶ್ ಅವರ ಬದಕು ಬದಲಾಗಲಿಲ್ಲಾ.. ಸಂಪದಾನೆ ಜ್ಯಾಸ್ತಿ ಆಗಲಿಲ್ಲಾ. ಇಂತಹ ಸಂದರ್ಭದಲ್ಲಿ ಅವರ ಬದುಕನ್ನು ಬದಲಿಸಿದಂತಹ ಸಂಸ್ಥೆ ಅಂದರೆ ಡಾನ್ ಬಾಸ್ಕೊ ಎಂಬ ಸಂಸ್ಥೆ.. ಲೋಕೇಶ್ ಮತ್ತೆ ಎಲ್ಲಾ ಕಡೆಗಳಲ್ಲೂ ಕೆಲಸ ಮಾಡಿ ಸಂಪಾದನೆ ಆಗ್ತಿಲಲ್ವಾ ಅಂತೇಳಿ ಕಬ್ಬನ್ ಪಾರ್ಕ್ ಗೆ ಬಂದು ಅಲ್ಲಿ ಮತ್ತೆ ಭಿಕ್ಷೆ ಬೇಡೋದಕ್ಕೆ ಶುರು ಮಾಡ್ತಾರೆ..

ಹುಡುಗ ಮೂಗ ಎನ್ನುವ ಕಾರಣಕ್ಕಾಗಿ ಸಂಸ್ಥೆಯವರು ಆಶ್ರಯವನ್ನ ಕೊಡ್ತೀವಿ ಅಂತೇಳಿ ಲೋಕೇಶ್ ಅವರನ್ನ ಕರೆದುಕೊಂಡು ಹೋಗ್ತಾರೆ. ಅಲ್ಲಿ ಏಲ್ಲಾ ರೀತಿಯಲ್ಲಿ ಟ್ರೇನಿಂಗ್ ಕೊಡ್ತಾರೆ.. ಮಿಮಿಕ್ರಿ ಮಾಡೋದಾಗಿರ್ಬೋದು, ಪೇಂಟಿಂಗ್, ಬೇರೆ ಬೇರೆ ಆಟಗಳ, ನಾಟಕಗಳು ಎಲ್ಲವನ್ನ ಕಲಿಸಿಕೊಡ್ತಾರೆ.. ಲೋಕೇಶ್ ಕಲಿಯೋದಕ್ಕೆ ಶುರುಮಾಡ್ತಾರೆ. ನಂತರ ಅದೇ ಜೀವನ ಕೊಡುತ್ತೆ. ನಿದಾನಕ್ಕೆ ಬೇರೆ ಬೇರೆ ಕಡೆಗಳಲ್ಲಿ ಮಿಮಿಕ್ರಿ ಮಾಡೋದಕ್ಕೆ ಶುರುಮಾಡ್ತಾರೆ, ನಾಟಕ ಮಾಡ್ತಾರೆ ಕೊನೆದಾಗಿ ಒಂದು ಚಿಕ್ಕ ಪುಟ್ಟ ರಿಯಾಲಿಟಿ ಶೋಗಳಲ್ಲಿ ಲೋಕೇಶ್ ಅವರಿಗೆ ಅವಕಾಶ ಸಿಗುತ್ತೆ.. ಈಗಿರುವಾಗ ಕೊನೆದಾಗಿ ಅವರನ್ನ ಇನ್ನೂ ಮೇಲಕ್ಕೆ ಕರೆದುಕೊಂಡು ಹೊದಂತದ್ದು ಕಾಮಿಡಿ ಕಿಲಾಡಿಗಳು ಶೋ.. ಕಾಮಿಡಿ ಕಿಲಾಡಿಗಳಿಗೆ ಎಂಟ್ರಿ ಕೊಡ್ತಾರೆ. ನೊಡ್ತಾನೊಡ್ತಾ ಲೋಕೇಶ್ ದೊಡ್ಡ ಆರ್ಟಿಸ್ಟ್ ಅಂತ ಗುರುತಿಸಿಕೊಳ್ತಾರೆ..

ಎಲ್ಲೋ ಇದ್ದಂತಹ ಲೋಕೇಶ್ ಎಲ್ಲಿಗೋ ಹೋಗ್ತಾರೆ. ಕಾಮಿಡಿ ಕಿಲಾಡಿಗಳಲ್ಲಿ ದೊಡ್ಡ ಮಟ್ಟಕ್ಕೆ ಹೆಸರು ಮಾಡಿಬಿಡ್ತಾರೆ.. ನಂತರ ಕೆಲವೊಂದು ಸಿನಿಮಾಗಳಿಗೆ ಅವಕಾಶ ಸಿಗುತ್ತೆ. ಇದು ಲೋಕೇಶ್ ಅವರ ಕಣ್ಣೀರಿನ ಕಥೆ.. ಸಧ್ಯ ಬಿಗ್ ಬಾಸ್ ಒಟಿಟಿಗೂ ಬಂದಿದ್ದಾರೆ. ಇನ್ನೊಂದು ನೋವಿನ ವಿಚಾರ ಏನೆಂದರೆ ಲೋಕೆಶ್ ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿ ಇಬ್ಬರನ್ನ ಬಿಟ್ಟು ಬಂದಿರ್ತಾರೆ.. ತಾಯಿಗ ಮಾನಸಿಕ ಸಮಸ್ಯೆ ಇರುತ್ತೆ. ತಾಯಿಯನ್ನ ನೋಡೊದಕ್ಕೆ ಪ್ರಯತ್ನ ಪಟ್ಟಿರ್ತಾರೆ ತಾಯಿ ಸಿಕ್ಕಿರಲಿಲ್ಲಾ.. ಕಾರಣ ಏನಂದರೆ ಲೋಕೇಶ್ ಅವರ ತಾಯಿ ಮಾನಸಿಕವಾಗಿ ಸಮಸ್ಯೆಗೆ ಸಿಲುಕಿದಂತಹ ಕಾರಣಕ್ಕಾಗಿ ಮನೆ ಬಿಟ್ಟು ಹೊಗಿರ್ತಾರೆ.. ಎಲ್ಲಿದ್ದಾರೆ ಎನ್ ಮಾಡ್ತಿದ್ದಾರೆ ಬದುಕಿದ್ದಾರಾ ಇಲ್ವಾ ಅನ್ನೋದು ಲೊಕೇಶ್ ಅವರಿಗೆ ಗೊತ್ತಿಲ್ಲಾ.. ಇಗಲೂ ಕೂಡ ಹುಡುಕ್ತಾ ಇದ್ದಾರೆ ಆದರೆ ಇಂದಿಗೂ ಕೂಡ ಲೋಕೇಶ್ ತಾಯಿ ಸಿಕ್ಕಿಲ್ಲಾ.. ಈ ಸ್ಟೋರಿ ಬಗ್ಗೆ ನಿಮ್ಮ ಅನಿಸಿಕೆಯನ್ನ ತಿಳಿಸಿ..