Advertisements

ಇನ್ನೇನು ಹಾರ ಬದಲಿಸಬೇಕು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಇವರಿಬ್ಬರ ನಡುವೆ ನಡೆದದ್ದೇನು ಗೊತ್ತಾ? ಎಲ್ಲರೂ ಶಾಕ್..

Kannada News

ನಮ್ಮ ಜೀವನದಲ್ಲಿ, ಅದೇ ರೀತಿ ನಮ್ಮ ಸುತ್ತ ಮುತ್ತಲು ನಡೆಯುವ ಅನೇಕ ಘಟನೆಗಳನ್ನು ನೋಡಿದಾಗ ಅಚ್ಚರಿ ಅನ್ನಿಸಿಬಿಡುತ್ತದೆ.‌ಯಾಕಂದರೆ ಊಹೆಗೂ ಮೀರಿದ ಸಂಗತಿಗಳು, ಸನ್ನಿವೇಶಗಳು ಜರುಗಿ ಹೋಗುತ್ತದೆ. ‌ಸಂತಸ ಇದ್ದ ವಾತಾವರಣದಲ್ಲಿ‌ ಮರುಗಳಿಗೆಯೇ ನೋವಿನ‌ ಛಾಯೆ ಕಾಣುತ್ತದೆ. ಸುಖ ಇದ್ದಲ್ಲಿ ನೋವು, ನೋವು ಇದ್ದಲ್ಲಿ ಸುಖ ಹೀಗೆ ನಾವು ನಿರೀಕ್ಷೆ ಮಾಡಲು ಆಗದಂತಹ ಸನ್ನಿವೇಶಗಳು ನಡೆದು ಹೋಗುತ್ತದೆ. ಇಂತಹದ್ದೇ ಒಂದು ಘಟನೆ ಆಂದ್ರಪ್ರದೇಶದಲ್ಲಿ ನಡೆದಿದೆ. ಮದುವೆ ಅಂದರೆ ಅದು ಸಂತೋಷ ಸಂಭ್ರಮದ ಕಾರ್ಯಕ್ರಮ.

Advertisements
Advertisements

ಒಂದು ಹೆಣ್ಣಿಗೆ ಅಥವಾ ಗಂಡಿಗೆ ಮದುವೆ ಮಾಡಬೇಕೆಂದರೆ ಎಷ್ಟೋ ಸಮಯದ ತಪಸ್ಸಾಗಿರುತ್ತದೆ.‌ ಹೆತ್ತವರು ಮಕ್ಕಳ ಮದುವೆ ಚೆನ್ನಾಗಿ‌ ನಡೆಯಬೇಕು ಎಂದು ಏನೇನೋ ಸರ್ಕಸ್ ಮಾಡುತ್ತಾರೆ. ತಮ್ಮ ಮಕ್ಕಳ ಜೀವನ ಚೆನ್ನಾಗಿರಬೇಕು ಅನ್ನೋದೇ ಅವರ ಆಶಯ ಆಗಿರುತ್ತದೆ. ಅದರಲ್ಲೂ ‌ಮಗಳ ಮದುವೆ ಅಂದರೆ ಒಂದು ಕಡೆ ಭಯ ನೋವು ಇದ್ದರೂ ಅದರ ಸಂಭ್ರಮವೇ ಬೇರೆ.

ಇದೇ ರೀತಿ ಆಂದ್ರಪ್ರದೇಶದ ವಿಶಾಖಪಟ್ಟಣದ ಮಧುರವಾಡದಲ್ಲಿ ಸೃಜನಾ ಅನ್ನುವ ಮುದ್ದಾದ ಹೆಣ್ಣು ಮಗಳಿಗೆ ಮದುವೆ ಮಾಡಲು ಹೆತ್ತವರು ಕಳೆದೊಂದು ತಿಂಗಳಿಂದ ತಯಾರಿ ನಡೆಸಿದ್ದರು.‌ ತಮ್ಮ ಕೈಲಾದಷ್ಟು ಅದ್ದೂರಿಯಾಗಿ ಮದುವೆ ಮಾಡಿಸಲು ಸಿದ್ಧತೆ ನಡೆಸಿದ್ದರು.‌ ಆಂಧ್ರಪ್ರದೇಶದ ದವನೇ ಆಗಿರುವ ನಾಗೋಟಿ ಶಿವಾಜಿ ಅನ್ನುವವನ‌ ಜೊತೆ ಮಗಳ ಮದುವೆ ನಿಶ್ಚಯಿಸಿದ್ದರು.‌ ಮದುವೆ ದಿನವೂ ಹತ್ತಿರ ಬಂತು.‌

ಮದುವೆ ಮಂಟಪದಲ್ಲಿ ಸೃಜನಾ ನಗು‌ನಗುತ್ತಲೇ ವರನ ಜೊತೆ ಅದೇ ರೀತಿ ಕುಟುಂಬಸ್ಥರ ಜೊತೆ ಮಾತನಾಡುತ್ತಿದ್ದಳು. ಎಲ್ಲಾ ಶಾಸ್ತ್ರವೂ ಚೆನ್ನಾಗಿಯೇ ನಡೆಯುತ್ತಿತ್ತು. ಅದೇ ರೀತಿ ಮದುವೆಯಲ್ಲಿ ಮುಖ್ಯವಾಗಿ ವೀಳ್ಯದೆಲೆ ಶಾಸ್ತ್ರ ಮಾಡಲಾಗುತ್ತದೆ.‌ ವರನು ವಧುವಿಗೆ ತಾಳಿ ಕಟ್ಟುವ ಮುನ್ನ ನಡೆಯುವ ಈ ಶಾಸ್ತ್ರ ಸಂಭ್ರಮದಿಂದ ನಡೆಯುತ್ತಿತ್ತು.‌

ಅಷ್ಟೇ ಚೆನ್ನಾಗಿಯೇ ಇದ್ದ ಸೃಜನಾ ಕುಸಿದು ಬಿದ್ದಿದ್ದಳು. ಅದೇನೇ ಮಾಡಿದರೂ ಆಕೆ ಕಣ್ಣು ತೆರೆಯಲಿಲ್ಲ.‌ ತಕ್ಷಣ ಆಸ್ಪತ್ರೆಗೆ ರವಾನಿಸಿದಾಗ ವೈದ್ಯರು ಸೃಜನಾ ಮೃ-ತ ಪಟ್ಟಿರುವ ಬಗ್ಗೆ ಹೇಳಿದಾಗ ಎಲ್ಲರೂ ಶಾಕ್ ಆಗಿದ್ದರು.‌ ಅದೇ ರೀತಿ ಮರಣೋ ತ್ತರ ಪರೀಕ್ಷೆ ನಡೆಸಿದಾಗ ಶಾಕಿಂಗ್ ವಿಷಯ ಹೊರ ಬಂದಿತ್ತು. ಆಕೆಯ ದೇಹದಲ್ಲಿ ವಿ-ಷ ಸೇರಿತ್ತು.‌ ಸೃಜನಾಳ ದೇಹದಲ್ಲಿ ವಿಷ ಹೇಗೆ ಬಂತು.

ಆಕೆಯೇ ವಿ-ಷ ಪ್ರಾಶನ ಮಾಡಿದ್ದಳೇ ಅಥವಾ ಯಾರಾದರೂ ವಿ-ಷ ಹಾಕಿದ್ದರಾ ಅನ್ನುವುದು ಯಾರಿಗೂ ತಿಳಿದು ಬಂದಿಲ್ಲ. ಈ ಬಗ್ಗೆ ಪೊ-ಲೀಸ್ ತನಿಖೆ ಮಾಡಲಾಗ್ತಿದೆ.‌ ಇತ್ತ ತಮ್ಮ ಮಗಳ ಮದುವೆ ನಡೆಯುತ್ತಿದೆ ಎಂದು ಸಂತೋ಼ದಿಂದ ಓಡಾಡುತ್ತಿದ್ದ ಪೋಷಕರ ಆಕ್ರಂ-ದನ ಮುಗಿಲು‌ ಮುಟ್ಟಿತ್ತು.ಆದರೆ ನೆರೆದವರು ಇದು ಸೃಜನಾಳೇ ಮದುವೆ ಇಷ್ಟ ಇಲ್ಲದೆ ವಿ-ಷ ಸೇವಿಸಿರಬಹುದು, ಆಕೆಗೆ ಬೇರೊಬ್ಬನನ್ನು ಪ್ರೀತಿಸ್ತಿದ್ದಳು ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದರು.‌ ಒಟ್ಟಾರೆ ಎಲ್ಲಾ ಸತ್ಯಗಳು ತನಿ-ಖೆ ನಂತರನೇ ಹೊರ ಬರಬೇಕಷ್ಟೇ. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.