Advertisements

ಮದುವೆ ಆದ ನಂತರ ಹೆಣ್ಣು ಮಕ್ಕಳು ಇದ್ದಕ್ಕಿದ್ದಂತೆ ದಪ್ಪ ಆಗೋದು ಯಾಕೆ ಗೊತ್ತಾ? ಕಾರಣ ತಿಳಿದು ಬೆಚ್ಚಿಬಿದ್ದ ಜನತೆ!!

Kannada News

ಹೆಚ್ಚಿನ ಹೆಣ್ಮಕ್ಕಳು ನಾನು ಮದುವೆ ಮುಂಚೆ ತುಂಬಾ ಸ್ಲಿಮ್ ಆಗಿದ್ದೆ, ನನ್ನ ಫಿಗರ್ ನೋಡಿ ಹುಡುಗರು ಹಿಂದೆ ಬರುತ್ತಿದ್ದರು, ಮದುವೆ ಆದ ಮೇಲೆ ಈ‌ ರೀತಿ ದಪ್ಪ ಆಗಿದ್ದೀನಿ ಎಂದು ವಿವಾಹಿತ ಮಹಿಳೆಯರು ಹೇಳೋದು ಸಾಮಾನ್ಯವಾಗಿ ಹೆಚ್ಚಿನ‌ ಕಡೆ ನೋಡಿದ್ದೇವೆ. ಇನ್ನು ಕೆಲವರು ಸಣ್ಣಕ್ಕಿರುವ ಹುಡುಗಿಯರನ್ನು ನೋಡಿ, ನೀನು ಮದುವೆ ಆದ ಮೇಲೆ ದಪ್ಪ ಆಗುತ್ತಿಯ, ಯೋಚನೆ ಬೇಡ ಎಂದೂ ಹೇಳುತ್ತಾರೆ.‌

ಹೌದು, ಶೇಕಡಾ 80% ರಷ್ಡು ಹೆಣ್ಣು ಮಕ್ಕಳು ಮದುವೆ ಅದ ನಂತರ ದಪ್ಪ ಆಗುತ್ತಾ ಹೋಗುತ್ತಾರೆ. ಹಾಗಂತ ಗಂಡಸರು ಏನೂ ಸಣ್ಣಗೇ ಇರುವುದಿಲ್ಲ. ಅವರು ಕೂಡ ಮದುವೆ ನಂತರದಲ್ಲಿ ದಪ್ಪವಾಗ್ತಾರೆ. ಆದರೆ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಹೆಚ್ಚು ದಪ್ಪ ಆಗೋದು. ಹಾಗಾದರೆ, ಈ ಮದುವೆ ಆಗುವುದಕ್ಕೂ ದೇಹದ ಭಾರ ಹೆಚ್ಚಾಗುವುದಕ್ಕೂ ಏನಾದರೂ ಸಂಬಂಧ ಇದೆಯಾ? ಇದಕ್ಕೆ ಯಾವುದೇ ವೈಜ್ಞಾನಿಕ ಕಾರಣ ಏನೂ ಇಲ್ಲ.

ಇದು ಮದುವೆ ನಂತರದಲ್ಲಿ ನಮ್ಮ ಜೀವನ ಕ್ರಮಗಳಲ್ಲಿ ‌ಆಗುವ ಬದಲಾವಣೆ ಗಳೇ ಕಾರಣ. ಯಾಕಂದರೆ ಮದುವೆಗೂ ಮುನ್ನ‌ ಹೆಣ್ಮಕ್ಕಳು, ತಮ್ಮ ದೇಹದ ಬಗ್ಗೆ ಹೆಚ್ಚಿನ ಗಮನವಹಿಸುತ್ತಾರೆ. ಈಟ, ತಿಂಡಿಗಳ ಸೇವನೆಯಲ್ಲಿ ಮಿತ ಕಾಪಾಡುತ್ತಾರೆ. ಹೊತ್ತು ಹೊತ್ತಿಗೆ ಸರಿಯಾಗಿ ತಿನ್ನುತ್ತಾರೆ. ಆದರೆ ಮದುವೆ ನಂತರ ಅದರತ್ತ ಹೆಚ್ಚಿನ ಗಮನ ಹರಿಸುವುದೇ ಇಲ್ಲ. ವಿವಾಹದ ನಂತರ ಗಂಡ ಮತ್ತು ಹೆಂಡತಿ ಒಟ್ಟಿಗೆ ಕುಳಿತು ಊಟ ಮಾಡುವಾಗ ಅದು ಪರಸ್ಪರ ಹೆಚ್ಚು ಆಹಾರ ಸೇವಿಸುವಂತೆ ಪ್ರೇರೇಪಿಸುತ್ತದೆ.

ಪ್ರೀತಿಯಿಂದ ಊಟ ಮಾಡಿಸುವಾಗ ಹೆಚ್ಚು ಹೆಚ್ಚು ತಿನ್ನುವುದರಿಂದಲೇ ಮದುವೆ ಆದ ನಂತರ ದಂಪತಿಗಳು ದಪ್ಪ ಆಗುತ್ತಾರಂತೆ. ಅದೂ ಅಲ್ಲದೆ ಮದುವೆ ಆದ ನಂತರ ಕುಟುಂಬದವರು ಊಟ ಉಪಚಾರಕ್ಕೆ ತಿಂಗಳು ಕಳೆದರೂ ಕರೆಯುತ್ತಲೇ ಇರುತ್ತಾರೆ. ಹೀಗೆ ಸಿಹಿ ತಿಂಡಿ ಬಗೆ ಬಗೆ ಊಟ ತಿಂದು ದೇಹದ ತೂಕ ಹೆಚ್ಚಾಗುತ್ತದೆ. ಇನ್ನು ಈ ಮದುವೆ ಅಂದರೆ ಸಂತಸ ಅರಳುವ ಸಮಯ. ಅದೊಂದು ರೀತಿಯ ಹೊಸ ವಾತಾವರಣ ಸೃಷ್ಟಿಸುತ್ತದೆ.

ಮನಸ್ಸು, ದೇಹ ರಿಲ್ಯಾಕ್ಸ್ ಆಗುವ ಹೊತ್ತು ಅದು. ಅಷ್ಟೆ ಅಲ್ಲ, ಒಂದಿಷ್ಟು ಸಮಯ ವೃತ್ತಿ ಸೇರಿದಂತೆ ಹಲವಾರು ಒತ್ತಡಗಳಿಂದ ದೂರ ಇರುವ ಸಮಯ ಅದು. ದೇಹ ದಂಡನೆಗೆ ಒಳಗಾಗುವುದಿಲ್ಲ. ನೆಂಟರಿಷ್ಟರ ಮನೆ ಅದು ಇದೂ ಅಂತ ತಿನ್ನುವ ಆಹಾರದಲ್ಲೂ ಲಿಮಿಟ್ ಇರುವುದಿಲ್ಲ. ಈ ಎಲ್ಲಾ ಕಾರಣದಿಂದ ದೇಹದ ತೂಕ ಹೆಚ್ಚಾಗುತ್ತದೆ. ಇನ್ನು ಮಕ್ಕಳಾದ ಮೇಲಂತೂ ಬಾಣಂತನ ಅದಾದ ನಂತರ ಮಕ್ಕಳ ಮಿಕ್ಕಿದ ಊಟ ತಿಂದು ದೇಹ ಊದಿ‌ಕೊಳ್ಳುತ್ತಾ ಹೋಗುತ್ತದೆ.‌

ಇದರ ಜೊತೆ ಮನೆ‌ಕೆಲಸ ಹೆಚ್ಚಾಗಿ ಹೊತ್ತು ಹೊತ್ತಿಗೆ ತಿನ್ನದೆ ಗ್ಯಾಸ್ಟ್ರಿಕ್‌ ಹೆಚ್ಚಾಗಿಯೂ ತೂಕ ಹೆಚ್ಚುತ್ತದೆ. ಇದೇ ಕಾರಣದಿಂದ ಹೆಣ್ಮಕ್ಕಳು ದಪ್ಪವಾಗುತ್ತಾರೆ. ಇನ್ನು ಮದುವೆ ನಂತರ ತನ್ನನ್ನು ಯಾರು ನೋಡಬೇಕು ಎಂದು ಅಂದು‌ಕೊಂಡು ದೇಹದ ಕಡೆ ಗಮನ‌ ಕೊಡುವುದಿಲ್ಲ, ಇದರ ಬದಲು ದೇಹ ಹಾಗೂ ಮನಸ್ಸು ಉಲ್ಲಾಸದಿಂದ ಇಟ್ಟು ಕೊಂಡು ಕ್ರಮಬದ್ಧ ಆಹಾರ, ನಿಯಮಿತ ವ್ಯಾಯಾಮ ರೂಢಿಸಿಕೊಳ್ಳಲೇಬೇಕು.

ಮದುವೆಯ ನಂತರ ಯಾರನ್ನೂ ಆಕರ್ಷಿಸಬೇಕಿಲ್ಲ ಎಂದುಕೊಳ್ಳಬೇಡಿ. ನಿಮ್ಮ ಸಂಗಾತಿ ದೀರ್ಘಕಾಲ ನಿಮ್ಮತ್ತ ಆಕರ್ಷಣೆ ಉಳಿಸಿಕೊಳ್ಳಬೇಕು ಅಂದರೆ ಮದುವೆ ಮುಂಚಿನ ನಿಮ್ಮ ದೇಹ ಸೌಂದರ‌್ಯಕ್ಕೆ ಕೊಟ್ಟ ಗಮನವನ್ನು ಮದುವೆ ನಂತರವೂ ಕೊಡಬೇಕು. ಈ ಮಾಹಿತಿ ಕುರಿತಾಗಿ ನಿಮ್ಮ‌ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.