Advertisements

3 ತಿಂಗಳು ಬಳಿಕ ಅಪ್ಪು ಬಗ್ಗೆ ಹೊಸ ಸುದ್ದಿ ಬಿಚ್ಚಿಟ್ಟ ಮಹೇಶ್ ಬಾಬು!

Cinema

ನಮಸ್ಕಾರ ವೀಕ್ಷಕರೇ ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು ಅಭಿನಯದ ಜೇಮ್ಸ್ ಸಿನಿಮಾ ರಿಲೀಸ್ ಗೆ ರೆಡಿ ಆಗಿದೆ.ಆದರೆ ಈ ಹೊತ್ತಲ್ಲೆ ಒಂದು ಮಹತ್ವದ ಸುದ್ದಿ ಹೊರಬಿದ್ದಿದೆ. ಪವರ್ ಸ್ಟಾರ್ ಜೊತೆ ಬಾಲಿವುಡ್ ನಟಿ ಐಶ್ವರ್ಯ ರೈ ನಟಿಸಬೇಕಿತ್ತು ಅಂತೆ ಆದರೆ ಅದು ಕೊನೆ ಗಳಿಗೆಯಲ್ಲಿ ಸಾಧ್ಯವಾಗಲಿಲ್ಲ. ಹಾಗಾದರೆ ಯಾವುದು ಆ ಸಿನಿಮಾ ಐಶ್ವರ್ಯ ರೈ ನಟಿಸಲಿಲ್ಲ ಏಕೆ ಇದರ ಕಂಪ್ಲೀಟ್ ಡೀಟೇಲ್ಸ್ ನೋಡಿ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರಲ್ಲೇ ಒಂದು ಪವರ್ ಇದೆ ಒಂದು ಗತ್ತಿದೆ
ಕನ್ನಡಿಗರಿಗೆಲ್ಲ ಪ್ರೀತಿಯ ಅಪ್ಪು ವಾಗಿದ್ದ ಪುನೀತ್ ಅವರು ನಮ್ಮನ್ನೆಲ್ಲಾ ಅಗಲಿ ನೂರು ದಿನಗಳು ಕಳೆದಿದೆ. ಪುನೀತ್ ಅವರ ಸಿನಿ ಪಯಣದಲ್ಲಿ ನಡೆದಿದ್ದ ಒಂದೊಂದೇ ಮಹತ್ವದ ಘ’ಟ’ನೆಗಳು ರಿವಿಲ್ ಆಗುತ್ತಿವೆ. ಅಂದಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಅರಸು ಸಿನಿಮಾದ ಕ್ಲೈಮ್ಯಾಕ್ಸ್ ಸೀನ್ ನ ಅದ್ದೂರಿಯಾಗಿ ಚಿತ್ರೀಕರಿಸಲು ನಿರ್ದೇಶಕ ಮಹೇಶ್ ಬಾಬು ಪ್ಲಾನ್ ಮಾಡಿದ್ದಾರಂತೆ.

Advertisements
Advertisements

ಇದೇ ಕಾರಣಕ್ಕೆ ಐಶ್ವರ್ಯ ರೈ ಬಚ್ಚನ್ ಅವರನ್ನು ಅತಿಥಿ ಪಾತ್ರಕ್ಕೆ ಕರೆತರಲು ಪ್ಲಾನ್ ಮಾಡಲಾಗಿತ್ತು. ಆದರೆ ಈ ಪ್ಲಾನ್ ಕೊನೆ ಕ್ಷಣದಲ್ಲಿ ಬದಲಾಯಿ ತಂತೆ ಅರಸು ಚಿತ್ರಕ್ಕೆ ಮೊದಲು ಪುನೀತ್ ಹಾಗೂ ಮಹೇಶ್ ಕಾಂಬಿನೇಷನ್ ನಲ್ಲಿ ಆಕಾಶ್ ಸಿನಿಮಾ ಮೂಡಿಬಂದಿತ್ತು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುವ ಮೂಲಕ ಪ್ರೇಕ್ಷಕರ ಮನವನ್ನು ಕೂಡ ಗೆದ್ದಿತ್ತು. ಈ ಕಾರಣಕ್ಕೆ ಅರಸು ಸಿನಿಮಾವನ್ನು ಇನ್ನು ಅದ್ದೂರಿಯಾಗಿ ಚಿತ್ರೀಕರಿಸಲು ಪ್ಲಾನ್ ಮಾಡಿದ್ದರಂತೆ ಮಹೇಶ್ ಬಾಬು ಹೀಗಾಗಿಯೇ ಐಶ್ವರ್ಯ ರೈ ಅವರನ್ನು ಕ್ಲೈಮ್ಯಾಕ್ಸ್ ಅಲ್ಲಿ ಕರೆತರಲು ಪ್ರಯತ್ನಿಸುತ್ತಿದ್ದರು. ಐಶ್ವರ್ಯ ರೈ ಅವರಿಗೆ ಆತ್ಮೀಯರಾಗಿದ್ದ ಚಂದ್ರಶೇಖರ್ ಸ್ವಾಮೀಜಿಯವರನ್ನು ಸಂಪರ್ಕಿಸಿ ಅರಸು ಚಿತ್ರದಲ್ಲಿ ಐಶ್ವರ್ಯ ರೈ ಅವರನ್ನು ನಟಿಸುವಂತೆ ಮನವಿ ಮಾಡಲಾಗಿತ್ತು.

ಚಂದ್ರಶೇಖರ್ ಸ್ವಾಮೀಜಿ ಹಾಗೂ ಐಶ್ವರ್ಯ ರೈ ಅವರ ತಂದೆ ಆತ್ಮೀಯ ಗೆಳೆಯ ರಾಗಿದ್ದರು. ಹೀಗಾಗಿಯೇ ಸ್ವಾಮೀಜಿಗಳೇ ಮಾತನಾಡುವ ಭರವಸೆಯನ್ನು ನೀಡಿದ್ದರಂತೆ . ಇನ್ನು ಡಾಕ್ಟರ್ ರಾಜಕುಮಾರ್ ಅವರು ಕೂಡ ಚಂದ್ರಶೇಖರ ಸ್ವಾಮೀಜಿ ಅವರ ಬಳಿ ಮಾತನಾಡಿದ್ದರಂತೆ. ಚಂದ್ರಶೇಖರ ಸ್ವಾಮೀಜಿ ಅವರಿಗೂ ಕೂಡ ಅಣ್ಣಾವ್ರ ಕುಟುಂಬಕ್ಕೆ ಹತ್ತಿರವಾದ ಸಂಬಂಧವಿತ್ತು. ಹೀಗಾಗಿ ಅಣ್ಣಾವ್ರೇ ಸ್ವಾಮೀಜಿಗಳಲ್ಲಿ ಮನವಿ ಮಾಡಿಕೊಂಡಿದ್ದರಂತೆ. ಆದರೆ ಆ ಹೊತ್ತಲ್ಲಿ ಐಶ್ವರ್ಯ ರೈ ಅವರು ಬೇರೆ ಸಿನಿಮಾಗೆ ಸೈನ್ ಮಾಡಿ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದರಂತೆ. ಈ ಕಾರಣಕ್ಕಾಗಿ ಐಶ್ವರ್ಯ ರೈ ಅವರನ್ನು ಅರಸು ಚಿತ್ರದ ಅತಿಥಿ ಪಾತ್ರಕ್ಕೆ ಕರೆತರುವ ಪ್ಲಾನ್ ಸಕ್ಸಸ್ ಆಗಲಿಲ್ಲ. ಇದೇ ಕಾರಣಕ್ಕಾಗಿ ಅರಸು ಚಿತ್ರದಲ್ಲಿ ಶ್ರೇಯಾ ಶರಣ್ ಅವರು ಐಶ್ ಪಾತ್ರವನ್ನು ನಿರ್ವಹಿಸಿದ್ದರು.