Advertisements

ನನಗೆ ಇಷ್ಟವಾದ ಆ ನಟನೊಂದಿಗೆ ಕೊನೆಗೂ ನಟಿಸಲಾಗಲಿಲ್ಲ ಎಂದು ಹೇಳಿಕೊಂಡ ಮಾಲಾಶ್ರೀ.! ಆ ನಟ ಯಾರು ಗೊತ್ತಾ?

ನಮಸ್ತೆ ಸ್ನೇಹಿತರೆ, ಮಾಲಾಶ್ರೀ ಅವರು ಎಷ್ಟೇ ಒತ್ತಡದ ಕೆಲಸ ಇದ್ದರೂ ಈ ಮೂವರು ಖ್ಯಾತ ನಟರ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಬರುತ್ತದೆ ಎಂದು ಕಾಯುತ್ತಾ ಕೂತಿದ್ದರು. ಆದರೂ ಸುಮಾರು ಒಂದು ದಶಕದ ಕಾಲ ನಾಯಕಿಯಾಗಿ ತೆರೆಮೇಲೆ ಮಿಂ’ಚಿದ ಖದರ್ ನಾಯಕಿ ಮಾಲಾಶ್ರೀ ಅವರ ಕನಸು ಮಾತ್ರ ಕೊನೆಗೂ ನಿಜವಾಗಲಿಲ್ಲ . ಮಾಲಾಶ್ರೀ ಅವರು ಕಂಡ ಕನಸು ಏನು.? ಅವರು ಯಾವ ನಟರ ಜೊತೆ ನಟಿಸುವ ಕನಸನ್ನು ಕಂಡಿದ್ದರು.? ಎಂಬುದನ್ನು ನೋಡೋಣ ಬನ್ನಿ.

Advertisements
Advertisements

ಹೌದು ಆ ಮೂವರು ಖ್ಯಾತ ನಟರೊಂದಿಗೆ ತೆರೆ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ, ಕನ್ನಡ ಸಿನಿಮಾ ಲೋಕದ ತ್ರಿಮೂರ್ತಿಗಳಾದ ಡಾ.ರಾಜಕುಮಾರ್, ವಿಷ್ಣುವರ್ಧನ್ ಮತ್ತು ಶಂಕರ್ ನಾಗ್ ಈ ಮೂವರನ್ನು ಕಂಡರೆ ಮಾಲಾಶ್ರೀಯವರಿಗೆ ತುಂಬಾ ಗೌರವ. ಆದರೆ ಅತಿ ಅನಿವಾರ್ಯತೆ ಎಂಬಂತೆ ಆ ಸದವಕಾಶ ಕೈ ತಪ್ಪಿ ಹೋದಾಗ ನಿಜಕ್ಕೂ ಮಾಲಾಶ್ರೀ ತುಂಬಾ ದುಃ’ಖ ಪಟ್ಟಿದ್ದರು. ಅಪ್ಪಾಜಿ ಅವರನ್ನು ಹತ್ತಿರದಿಂದ ನೋಡಿದ್ದೇನೆ ಮಾತನಾಡಿದ್ದೇನೆ ಆ ಸೌಭಾಗ್ಯಕಾದರೂ ನಾನು ಅದೃಷ್ಟ ಮಾಡಿದ್ದೇನೆ. ಆದರೆ ವಿಷ್ಣು ಸರ್ ಅವರ ಜೊತೆ ನಟಿಸಲು ಆಗಲಿಲ್ಲ ಎನ್ನುವ ಬೇಸರ ನನಗೆ ಈಗಲೂ ಇದೆ. ಆಗಿನ ಕಾಲ ಮಟ್ಟದಲ್ಲಿ ನಾನು ಮತ್ತು ವಿಷ್ಣುವರ್ಧನ್ ಅವರು ಬಿಜಿ಼ ಇದ್ದ ಕಾರಣ ಆ ಪಾತ್ರಗಳನ್ನು ಒಪ್ಪಿಕೊಳ್ಳುವುದಕ್ಕೆ ಆಗಲಿಲ್ಲ. ಇವತ್ತಿಗೂ ಬಹುಶಹ ನನ್ನ ಜೀವನದ ಅತಿ ದೊಡ್ಡ ಕೊರಗು ಎಂದರೆ ಅದು ವಿಷ್ಣು ಸರ್ ಅವರ ಜೊತೆ ನಟಿಸಿಲ್ಲ ಎನ್ನುವುದೊಂದು.

ಇದರ ನಡುವೆ ಮಾಲಾಶ್ರೀ ಅವರೇ ಹೇಳುವಂತೆ ಮತ್ತೊಬ್ಬ ನಟರನ್ನು ತುಂಬಾನೇ ಇಷ್ಟ ಪಡುತ್ತಿದ್ದರು ಹಾಗೂ ಅವರೊಂದಿಗೆ ನಟಿಸಬೇಕು ಎಂಬ ಆಸೆ ಸಹ ಹೊಂದಿದ್ದರು. ಹೌದು, ಅವರೇ ನಮ್ಮ ಕರಾಟೆ ಕಿಂಗ್ ಶಂಕರ್ ನಾಗ್. ಶಂಕರ್ ನಾಗ್ ಅವರದ್ದು ಪಾದರಸದಂತ ವ್ಯಕ್ತಿತ್ವ ಅವರು ಯಾವುದೇ ಒಂದು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ ಎಂದರೆ ಆ ಸಿನಿಮಾದಲ್ಲಿ ಇರುವಂತಹ ಪ್ರತ್ಯೇಕತೆ ಪ್ರತಿಯೊಬ್ಬರಿಗೂ ಹೊಸದಾಗಿ ಕಾಣುತ್ತಿತ್ತು. ಅಲ್ಲದೆ ಇಡೀ ಸಿನಿಮಾವನ್ನು ತಮ್ಮದೇ ದಾರಿಯಲ್ಲಿ ತೆಗೆದುಕೊಂಡು ಹೋಗುವಂತಹ ಶೈಲಿ ಎಲ್ಲವೂ ಕೂಡ ಪ್ರತಿಯೊಬ್ಬರಿಗೂ ಮೆಚ್ಚುವಂತಹ ಅಂಶಗಳಾಗಿದ್ದವು. ಮಾಲಾಶ್ರೀ ಶಂಕರ್ ನಾಗ್ ಜೊತೆ ಅಭಿನಯಿಸಬೇಕು ಎಂದು ನಿರ್ಧಾರ ಮಾಡಿದ್ದರು. ಆದರೆ ಮಾಲಾಶ್ರೀ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ ಕೆಲವೇ ದಿನಗಳಲ್ಲಿ ಶಂಕರನಾಗ್ ಇಹಲೋಕ ತ್ಯಜಿಸಿದ್ದರು. ಹೀಗಾಗಿ ತನಗಿಷ್ಟವಾದದ್ದ ನಟನೊಡನೆ ಮಾಲಾಶ್ರೀ ನಟಿಸಲು ಸಾಧ್ಯವಾಗಲಿಲ್ಲ. ಮಾಲಾಶ್ರೀ ಅವರ ಆಸೆಯ ಬಗ್ಗೆ ನೀವೇನಂತೀರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.