ನಟಿ ಮಾಲಾಶ್ರೀ ತಮ್ಮ ಜೀವನದ ಅತ್ಯಂತ ನೋವಿನ ಕ್ಷಣಗಳನ್ನು ಈ ವರ್ಷ ಕಂಡಿದ್ದಾರೆ. ಮಾಲಾಶ್ರೀ ಅವರ ಪತಿ ನಿರ್ಮಾಪಕ ರಾಮು ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಚೀನಾದ ಮಹಾಮಾರಿ ಸೋಂಕಿನಿಂದ ನಿ’ಧ’ನ ಹೊಂದಿದ್ದರು. ಕೋಟಿ ರಾಮು ಎಂದೇ ಖ್ಯಾತರಾಗಿದ್ದ ಕನ್ನಡದ ಜನಪ್ರಿಯ ಹಾಗೂ ಯಶಸ್ವಿ ನಿರ್ಮಾಪಕ ರಾಮು ಬಿಟ್ಟುಹೋಗಿದ್ದ ಜವಾಬ್ದಾರಿಗಳನ್ನು ಇದೀಗ ಮಾಲಾಶ್ರೀ ಹೆಗಲಿಗೆ ಏರಿಸಿಕೊಂಡಿದ್ದಾರೆ. ಸಿನಿಮಾದ ಜವಾಬ್ದಾರಿ ಜೊತೆಗೆ ಮಕ್ಕಳ ಜವಾಬ್ದಾರಿಯೂ ಮಾಲಾಶ್ರೀ ಅವರ ಬೆನ್ನಿಗಿದೆ. ಪತಿಯನ್ನು ಕಳೆದುಕೊಂಡು ಅತಿ ತೀವ್ರವಾದ ದುಃಖದಲ್ಲಿದ್ದ ನಟಿ ಮಾಲಾಶ್ರೀ ಗೆ ಅಪ್ಪು ನಿ’ಧ’ನವು ಕೂಡ ದೊಡ್ಡ ದುಃಖವನ್ನೇ ತಂದಿತ್ತು.
[widget id=”custom_html-5″]

ಮಾಲಾಶ್ರೀ ಹಾಗೂ ಅಪ್ಪು ಬಾಲ್ಯದ ಗೆಳೆಯರು ಪುನೀತ್ ಗಿಂತಲೂ ಕೇವಲ ಎರಡೇ ವರ್ಷ ದೊಡ್ಡವರಾಗಿದ್ದ ಮಾಲಾಶ್ರೀ ಅಪ್ಪು ವಿನೊಂದಿಗೆ ಆಪ್ತ ಗೆಳೆತನ ಹೊಂದಿದ್ದರೂ.ಗೆಳೆಯ ಅಪ್ಪು ನಿ’ಧ’ನ ಹೊಂದುವುದಕ್ಕೆ ಮುಂಚೆ ತಮ್ಮೊಂದಿಗೆ ಆಡಿದ್ದ ಸ್ಪೂರ್ತಿ ದಾಯಕ ಮಾತುಗಳನ್ನು ಮಾಲಾಶ್ರೀ ನೆನಪಿಸಿ ಕೊಂಡಿದ್ದಾರೆ. ಅಪ್ಪು ನಿ’ಧ’ನರಾಗುವ ಮೂರು ದಿನ ಮೊದಲು ಒಂದು ಮದುವೆಯಲ್ಲಿ ನಾನು ಅಪ್ಪು ಅವರನ್ನು ಭೇಟಿಯಾಗಿದ್ದೆ.ರಾಮು ನಿ’ಧ’ನದ ಬಳಿಕ ನಾನು ಹೋಗಿದ್ದ ಮೊದಲ ಕಾರ್ಯಕ್ರಮ ಅದು, ಅಲ್ಲಿ ಅಪ್ಪು ಸಿಕ್ಕಿದರು.
[widget id=”custom_html-5″]

ಅಪ್ಪು ಕೂಡಲೇ ನನ್ನ ತಬ್ಬಿಕೊಂಡು ನೀವು ಹೀಗಿರಬಾರದು ನೀವು ದುಃಖದಿಂದ ಹೊರಗೆ ಬರಬೇಕು ನಾನು ನಿಮ್ಮನ್ನು ದುರ್ಗಿ ಚಾಮುಂಡಿಯಂತೆ ನೋಡಬೇಕು. ರಾಮು ಅವರು ಇಲ್ಲ ಎಂದು ಕೊಳ್ಳಬೇಡಿ ಅವರು ಯಾವಾಗಲೂ ನಮ್ಮ ಜೊತೆ ಇದ್ದಾರೆ ನಮ್ಮ ಸುತ್ತಮುತ್ತಲೆ ಇದ್ದಾರೆ ಎಂದುಕೊಳ್ಳಿ ಈ ದುಃಖದಿಂದ ಹೊರಗೆ ಬನ್ನಿ ಎಂದಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.ಇದೆ ಅವರ ಜೊತೆಯಲ್ಲಿ ಮಾತಾಡಿದ ಕೊನೆಯ ಮಾತು ಎಂದು ಕಣ್ಣೀರಿಟ್ಟಿದ್ದಾರೆ ನಟಿ ಮಾಲಾಶ್ರೀಯವರು..
[widget id=”custom_html-5″]