Advertisements

ಆಕಾಶದಿಂದ ತನ್ನ ಹೆಸರು ಕಾಣಬೇಕು ಅಂತ ಈ ಭೂ’ಪ ಮಾಡಿದ ಕೆಲಸ ಏನು ಗೊತ್ತಾ.! ತಿಳಿದರೆ ಇಂಥವರು ಇದ್ದಾರಾ ಅನ್ಸುತ್ತೆ..!

Entertainment

ನಮಸ್ತೆ ಸ್ನೇಹಿತರೆ, ಪ್ರಪಂಚದಲ್ಲಿ ತಾವು ಫೇಮಸ್ ಆಗಬೇಕೆಂದು ಹಲವಾರು ಮಂದಿ ಹಲವಾರು ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ. ಅದಕ್ಕಾಗಿ ಚಿತ್ರ ವಿಚಿತ್ರ ಸಾಹಸ ಮಾಡುತ್ತಾರೆ, ದೊಡ್ಡ ದೊಡ್ಡ ಸಾಧನೆ ಮಾಡುತ್ತಾರೆ ಅಥವಾ ತಮ್ಮ ಕೆಲಸಗಳ ಮೂಲಕ ಹೆಸರು ಮಾಡಲು ಪ್ರಯತ್ನಿಸುತ್ತಾರೆ. ಆದರೆ ಹಣ ಇರುವ ಸಿರಿವಂತರು ತಮ್ಮಲ್ಲಿರುವ ಹಣವನ್ನು ಬಳಸಿಕೊಂಡು ಹೆಸರು ಮಾಡುವ ಪ್ರಯತ್ನದಲ್ಲಿ ಇರುತ್ತಾರೆ. ಅದೇ ಹಣದಲ್ಲಿ ದೊಡ್ಡ ದೊಡ್ಡ ಐಷಾರಾಮಿ ಕಟ್ಟಡಗಳನ್ನೋ ಅಥವಾ ಇನ್ನಿತರೇ ಹೊಸ ಹೊಸ ನಿರ್ಮಾಣಗಳ ಮೂಲಕ ಹೆಸರು ಮಾಡುತ್ತಾರೆ. ಆದರೆ ಇಲ್ಲಿ ಒಬ್ಬ ಇವೆಲ್ಲವುಗಳಿಗಿಂತಲೂ ವಿಶೇಷ ಹಾಗೂ ಭಿನ್ನವಾಗಿ ಹೆಸರು ಮಾಡಿರುವ ವ್ಯಕ್ತಿ ಇದ್ದಾನೆ. ಈ ವ್ಯಕ್ತಿ ಮಾಡಿರುವ ಕೆಲಸವಾದರೂ ಏನು ಅಂತ ನೋಡೋಣ ಬನ್ನಿ..

Advertisements
Advertisements

ಕತಾರ್ ನ ರಾಜಮನೆತನದವರಾದ ಒಬ್ಬ ಶ್ರೀಮಂತ ಹಮದ್ ಬಿನ್ ಖಲೀಫ್ ಎಂಬುವರು ತನ್ನ ಬಳಿ ಇರುವ ಸಾಕಷ್ಟು ಹಣದ ಸಹಾಯದಿಂದ ಗೂಗಲ್ ಮ್ಯಾಪ್ ನಲ್ಲಿ ತಮ್ಮ ಹೆಸರು ಬರುವಂತೆ ಮಾಡಿದ್ದಾರೆ..! ಹೌದು ಇವರ ಹೆಸರನ್ನು ತಮ್ಮದೇ ಒಡೆತನದ ಯುನೈಟೆಡ್ ಅರಬ್ ಎಮಿರೆಟ್ಸ್ ನಲ್ಲಿಯೇ ಇರುವ ಫುತೈಸಿ ಎಂಬ ಹೆಸರಿನ ಒಂದು ಐಸ್ಲಾಂಡ್ ಮೇಲೆ ಕೆತ್ತನೆ ಮಾಡಿಸಿದ್ದಾರೆ. ನೆಲವನ್ನು ಅಗೆದು ಮಾಡಲಾದ ಆ ಹೆಸರು ಎಷ್ಟು ದೊಡ್ಡದು ಅಂದರೆ ಗೂಗಲ್ ಮ್ಯಾಪ್ ನಲ್ಲಿಯೂ ಸಹ ಕಾಣಿಸುತ್ತಿದೆ. ಆ ಹೆಸರಿನ ಉದ್ದ ಬರೊಬ್ಬರಿ ಒಂದೂ ಮುಕ್ಕಾಲು ಕಿಲೋಮೀಟರ್. ಈ ಹೆಸರು ಇಂಗ್ಲಿಷ್ ಕ್ಯಾಪಿಟಲ್ ವರ್ಣ ಮಾಲೆಯಲ್ಲಿ ಬರೆದ ಹಮದ್ ಎಂಬ ಹೆಸರು ಕಾಣಿಸುತ್ತದೆ ಅದನ್ನು ಸ್ವಲ್ಪ ಜೂಮ್ ಮಾಡಿ ನೋಡಿದರಂತೂ ಪೂರ್ತಿಯಾಗಿ ಕಾಣಿಸುತ್ತದೆ.

63 ವರ್ಷದ ಈ ಹಮದ್ ಗೋ ಹೋಮ್ ಎಂಬ ಒಂದು ಮೋಟ್ಟೋ ಇಟ್ಟುಕೊಂಡು ಇಂತಹ ಇನ್ನೂ ಹಲವಾರು ದೊಡ್ಡ ದೊಡ್ಡ ನಿರ್ಮಾಣಗಳನ್ನು ಮಾಡಿದ್ದಾರೆ. ಇಷ್ಟೇ ಅಲ್ಲದೇ ಇವರಿಗೆ ಇನ್ನೂ ಒಂದು ವಿಶೇಷ ಆಸಕ್ತಿ ಇದೆ ಅದೇನೆಂದರೆ, ಇವರು ತಮ್ಮ ಹೆಚ್ಚಾನುಹೆಚ್ಚು ಕಾರುಗಳ ಮೇಲೆ ರೈನ್ ಬೋ ಕಲರನ್ನು ಪೇಂಟಿಂಗ್ ಮಾಡಿಸುತ್ತಾರಂತೆ, ಹೀಗಾಗಿ ಇವರಿಗೆ ರೈನ್ ಬೋ ಶೇಕ್ ಎಂಬ ಹೆಸರಿನಿಂದ ಕರೆಯುತ್ತಾರೆ. ಇದಷ್ಟೇ ಅಲ್ಲದೇ ಒಂದು ಜೀಪ್ ಅನ್ನು ಕೂಡ ಅದರ ಸಾಕಷ್ಟು ಪಟ್ಟು ಹೆಚ್ಚು ದೊಡ್ಡದಾಗಿ ನಿರ್ಮಿಸಿದ್ದಾರೆ. ವಿಶೇಷ ಏನೆಂದರೆ, ಇವರ ನಿರ್ಮಾಣಗಳೆಲ್ಲವೂ ಒಂದೂ ಕೆಲಸಕ್ಕೆ ಬಾರದಂತ ನಿರ್ಮಾಣಗಳು. ಕೇವಲ ಹೆಸರಿಗೋಸ್ಕರ ಮಾಡಿಸಿಕೊಂಡದ್ದು ಅಷ್ಟೇ. ನೋಡಿದ್ರಲ್ಲ ಸ್ನೇಹಿತರೆ ದುಡ್ಡು ಹೆಚ್ಚಾಗಿ ಹೀಗೆಲ್ಲ ಹುಚ್ಚು ಹುಚ್ಚಾಗಿ ಆಡ್ತಾರೆ ಅಂತ. ಹಮದ್ ಬಗ್ಗೆ ನಿಮಗೇನು ಅನಿಸ್ತಿದೆ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.