Advertisements

ಕಳ್ಳತನ ಮಾಡೋಕೆ ಬಂದ.. ಆದರೆ ಕಳ್ಳತನ ಮಾಡದೇ ಡೈರಿಯಲ್ಲಿ ಏನೆಂದು ಬರೆದಿಟ್ಟು ಹೋಗಿದ್ದಾನೆ ಗೊತ್ತಾ..

Kannada News

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕೆಲವೊಂದು ವಿಚಿತ್ರ ಘಟನೆಗಳು ವರದಿಯಾಗುತ್ತಿರುತ್ತದೆ.. ಕೆಲವೊಂದು ನಗು ತರಿಸಿದರೆ ಮತ್ತೆ ಕೆಲವೊಂದು ಅಯ್ಯೋ ಎನಿಸುತ್ತದೆ.. ಆದರೆ ಮಂಡ್ಯದಲ್ಲೊಂದು ಇನ್ನೂ ತೀರಾ ವಿಚಿತ್ರ ಘಟನೆಯೊಂದು ನಡೆದಿದ್ದು ಸಧ್ಯ ಸ್ಥಳೀಯರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.. ಹೌದು ಕಳ್ಳತನ ಮಾಡಲೆಂದು ಬಂದ ವ್ಯಕ್ತಿಯೊಬ್ಬ ಕಳ್ಳತನ ಮಾಡದೇ ಅದೇ ಜಾಗದಲ್ಲಿ ಎರಡು ಮೂರು ಗಂಟೆಗಳ ಸಮಯ ಕಳೆದು ಕೊನೆಗೆ ಡೈರಿಯಲ್ಲಿ ಏನೋ ಬರೆದಿಟ್ಟು ಹೋಗಿದ್ದಾನೆ..

Advertisements
Advertisements

ಹೌದು ಮಂಡ್ಯದಲ್ಲಿ ಈ ಘಟನೆ ನಡೆದಿದ್ದು ಬೆಳಿಗ್ಗೆ ಬಂದು ನೋಡಿದವರು ಸಧ್ಯ ಪೊಲೀಸ್ ದೂರು ನೀಡಿದ್ದಾರೆ.. ಹೌದು ಸಕ್ಕರೆನಾಡು ಮಂಡ್ಯದಲ್ಲಿ ಈ ವಿಚಿತ್ರ ಘಟನೆ ನಡೆದಿದೆ‌.. ಕಳ್ಳತನ ಮಾಡಲು ಬಂದವ ಏನನ್ನೂ ತೆಗೆದುಕೊಂಡು ಹೋಗದೇ ಅದೇ ಜಾಗದಲ್ಲಿ ಅಡುಗೆ ಮಾಡಿಕೊಂಡು ಊಟವನ್ನೂ ಸಹ ಮಾಡಿ ನಂತರ ಡೈರಿಯನ್ನೂ ಸಹ ಬರೆದು ಹೋಗಿದ್ದಾನೆ.. ಹೌದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೆಬ್ಬಣಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಈ ಕಳ್ಳತನ ಯಾರದ್ದೋ ಮನೆಯಲಲ್ಲ ಬದಲಿಗೆ ಅಂಗನವಾಡಿ ಕೇಂದ್ರದಲ್ಲಿ ಕಳ್ಳತನ ಮಾಡಲು ತೆರಳಿ ಇಷ್ಟೆಲ್ಲಾ ಮಾಡಿ ಬಂದಿದ್ದಾನೆ..

ಅಂಗನವಾಡಿ ಕೇಂದ್ರಗಳಲ್ಲಿ ಕಳ್ಳತನ ಆಗೋ ಸುದ್ದಿಗಳನ್ನು ಈ ಮುಂಚೆ ಆಗಾಗ ಕೇಳುತ್ತಿದ್ದೆವು.. ಸಿಲಿಂಡರ್ರೋ ಅಥವಾ ಮತ್ತಿನ್ನೇನೋ ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದರು.. ಆದರೆ ಈ ಮಹಾಶಯ ಮಾತ್ರ ಅಂಗನವಾಡಿ ಕೇಂದ್ರದಲ್ಲಿಯೇ ಎರಡು ಮೂರು ಗಂಟೆ ಸಮಯ ಕಳೆದು ಬಂದಿರೋದು ಆತನ ಧೈರ್ಯ ಮೆಚ್ಚಲೇ ಬೇಕು ಬಿಡಿ.. ಹೌದು ಹೆಬ್ಬಣಿ ಗ್ರಾಮದ ಶಿಂಷಾ ರಸ್ತೆಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ನಿನ್ನೆ ತಡರಾತ್ರಿಯಲ್ಲಿ ಕಳ್ಳನೊರ್ವ ಅಂಗನವಾಡಿ ಕೇಂದ್ರದ ಬೀಗ ಮುರಿದು ಒಳಗೆ ನುಗ್ಗಿದ್ದಾನೆ..

ನಂತರ ಅಂಗನವಾಡಿ ಕೇಂದ್ರದಲ್ಲಿ ಬೆಲೆ ಬಾಳುವ ವಸ್ತು ಹಾಗೂ ಹಣಕ್ಕಾಗಿ ಜಾಲಾಡಿದ್ದಾನೆ.. ಆದರೆ ಎಲ್ಲಿಯೂ ಅವನಿಗೆ ಹಣವಾಗಲಿ ಅಥವಾ ವಸ್ತುಗಳಾಗಲಿ ಸಿಗಲಿಲ್ಲ.. ಕೊನೆಗೆ ಬೀರುವಿನ ಬಾಗಿಲನ್ನೂ ಸಹ ಮುರಿದು ಹಣಕ್ಕಾಗಿ ಹುಡುಕಾಡಿದ್ದಾನೆ.. ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದಾನೆ.. ಅಲ್ಲಿಯೂ ಏನೂ ಸಿಗದಿದ್ದಾಗ ಬೇರೆ ದಾರಿ ಕಾಣದೇ ಮರಳಿ ಹೋಗಬೇಕಿತ್ತು..

ಆದರೆ ಆತ ಮಾತ್ರ ಮತ್ತೆ ವಾಪಸ್ ಹೋಗದೇ ಅಂಗನವಾಡಿಯಲ್ಲಿ ದೀಪವೊಂದನ್ನು ಹಚ್ಚಿಕೊಂಡು ಅಲ್ಲಿಯೇ ಇದ್ದ ಅಡುಗೆ ವಸ್ತುಗಳನ್ನು ಬಳಸಿಕೊಂಡು ಪುಳಿಯೊಗರೆಯನ್ನು ತಾನೇ ಮಾಡಿಕೊಂಡು ತಿಂದಿದ್ದಾನೆ.. ಎರಡು ಮೂರು ತಾಸು ಅಂಗನವಾಡಿಯಲ್ಲಿಯೇ ಸಮಯ ಕಳೆದಿರುವ ಐನಾತಿ ಕಳ್ಳ ನಂತರ ಅಲ್ಲಿಯೇ ಇದ್ದ ಡೈರಿ ಒಂದಕ್ಕೆ ತನ್ನ ಜೀವನದ ಬಗ್ಗೆ ಬರೆದಿಟ್ಟಿದ್ದಾನೆ.. ಹೌದು ತನ್ನ ಜೀವನದ ಮುಖ್ಯ ಘಟನೆಗಳ ಬಗ್ಗೆ ನಾಲ್ಕು ಪುಟಗಳಷ್ಟನ್ನು ಡೈರಿಯಲ್ಲಿ ಬರೆದು ನಂತರ ಅದನ್ನು ಅಲ್ಲಿಯೇ ಇಟ್ಟು ತೆರಳಿದ್ದಾನೆ..

ಇತ್ತ ಬೆಳಿಗ್ಗೆ ಅಂಗನವಾಡಿ ಕೇಂದ್ರಕ್ಕೆ ಅಂಗನವಾಡಿ ಕಾರ್ಯಕರ್ತೆ ಶಿಲ್ಪಾ ಆಗಮಿಸಿದ್ದು ಅಂಗನವಾಡಿ ಕೇಂದ್ರದ ಬಾಗಿಲು ತೆರೆಯಲು ಹೋದಾಗ ಕಳ್ಳತನವಾಗಿರೋದು ಬೆಳಕಿಗೆ ಬಂದಿದೆ.. ತಕ್ಷಣ ಸ್ಥಳೀಯ ಪಂಡಿತಹಳ್ಳಿಯ ಪಿಡಿಓ ಮಹದೇವ ಎಂಬುವವರಿಗೆ ವಿಚಾರ ತಿಳಿಸಿದ್ದು ಸ್ಥಳಕ್ಕೆ ಬಂದ ಪಿಡಿಓ ಪರಿಶೀಲನೆ ನಡೆಸಿ ನಂತರ ಶಿಕ್ಷಕಿಯ ಜೊತೆ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರೆ.. ಪೋಲೀಸರು ಸಹ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಡೈರಿಯನ್ನು ಆಧಾರವಾಗಿಟ್ಟುಕೊಂಡು ವಿಚಿತ್ರ ಕಳ್ಳನನ್ನು ಹುಡುಕಲು ಮುಂದಾಗಿದ್ದಾರೆ..