Advertisements

ಈ ಪುಟ್ಟ ಕಂದಮ್ಮನಿಗೆ ಏನಾಗಿದೆ ನೋಡಿ.. ಬೆಚ್ಚಿಬಿದ್ದ ತಂದೆ..

Kannada News

ಕನ್ನಡ ಕಿರುತೆರೆಯ ಖ್ಯಾತ ಶೋ ನಮ್ಮಮ್ಮ ಸೂಪರ್ ಸ್ಟಾರ್ ನ ಸಮನ್ವಿ ಬೆಂಗಳೂರಿನ ರಸ್ತೆಯಲ್ಲಿ ನಡೆದ ಘಟನೆಯಿಂದಾಗಿ ಜೀವ ಕಳೆದುಕೊಂಡದ್ದು ನಿಜಕ್ಕೂ ಮನಕಲಕುವಂತಿತ್ತು.. ಅದರಲ್ಲೂ ಆ ತಾಯಿ ಅಮೃತಾ ನಾಯ್ಡು ಅವರ ಕಣ್ಣ ಮುಂದೆಯೇ ಈ ಘಟನೆ ನಡೆದಿದ್ದು ಅಸಾಹಯಕರಾಗಿ ಮಗಳನ್ನು ಉಳಿಸಿಕೊಳ್ಳಲಾಗದೇ ನೋವು ಪಡುತ್ತಿದ್ದ ಅಮೃತಾ ನಾಯ್ಡು ಅವರ ಪರಿಸ್ಥಿತಿ ಯಾರಿಗೂ ಬಾರದಿರಲಿ ಎನ್ನುವಂತಿತ್ತು.. ಇತ್ತ ಸಮನ್ವಿ ಅವರ ತಂದೆ ಮಗಳ ಮುಂದೆ ನಿಂತು ನನ್ನನ್ನು ಕ್ಷಮಿಸಿಬಿಡು ಮಗಳೇ ಎಂದು ಮಗಳನ್ನು ಉಳಿಸಿಕೊಳ್ಳಲಾಗದಕ್ಕೆ ಗೋಳಾಡುತ್ತಿದ್ದ ರೀತಿ ಮನಕಲಕುವಂತಿತ್ತು.. ಆದರೆ ಇದೀಗ ಈ ಪುಟ್ಟ ಕಂದನೂ ಸಣ್ಣ ವಯಸ್ಸಿಗೆ ಇಲ್ಲವಾಗಿದ್ದು ನಿಜಕ್ಕೂ ಸಂಕಟ ತರುವಂತಿದೆ..

Advertisements
Advertisements

ಹೌದು ಆ ದಿನ ಅಮೃತಾ ನಾಯ್ಡು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರೂ ಸಹ ಖುದ್ದು ತಾವೇ ಸಮನ್ವಿಯ ಜೊತೆ ಸ್ಕೂಟರಿನಲ್ಲಿ ತನ್ನ ತಾಯಿಯ ಮನೆಗೆ ಹೋಗಲು ಮೆಟ್ರೋ ನಿಲ್ದಾಣಕ್ಕೆ ತೆರಳುವಾಗ ಈ ಘಟನೆ ನಡೆದಿತ್ತು.. ಆ ದಿನ ಸಮನ್ವಿಯ ತಂದೆ ಮನೆಯಲ್ಲಿ ಇರಲಿಲ್ಲ.. ಇದ್ದಿದ್ದರೇ ಅವರೇ ಖುದ್ದು ಸಮನ್ವಿ ಹಾಗೂ ಅಮೃತಾ ಅವರನ್ನು ಅಜ್ಜಿ ಮನೆಗೆ ಬಿಟ್ಟು ಬರುತ್ತಿದ್ದರು.. ಆ ದಿನ ನಾನು ಮನೆಯಲ್ಲಿಯೇ ಇದ್ದಿದ್ದರೆ ಇಂದು ಈ ಘಟನೆ ನಡೆಯುತ್ತಿರಲಿಲ್ಲವೆಂದು ಸಮನ್ವಿಯ ತಂದೆ ಕಣ್ಣೀರಿಡುತ್ತಾ ಮಗಳನ್ನು ಕ್ಷಮಿಸು ಮಗಳೇ.. ಸಾರಿ ಪುಟ್ಟ ಎಂದು ಗೋಳಾಡುತ್ತಿದ್ದರು.. ಮಕ್ಕಳನ್ನು ಅದರಲ್ಲೂ ಈ ರೀತಿ ಪುಟ್ಟ ಮಕ್ಕಳನ್ನು ಕಳೆದುಕೊಳ್ಳುವ ನೋವು ಅನುಭವಿಸಿದವರಿಗಷ್ಟೇ ಗೊತ್ತು..

ಇತ್ತ ಬೆಂಗಳೂರಿನ ಬನಶಂಕರಿಯಲ್ಲಿ ಸಮನ್ವಿಯ ಕಾರ್ಯ ಮುಗಿಸಿ ಮೂರು ದಿನಗಳ ನಂತರ ಶ್ರೀರಂಗಪಟ್ಟಣದಲ್ಲಿ ವಿಸರ್ಜನಾ ಕಾರ್ಯವನ್ನೂ ಸಹ ಮಾಡಲಾಯಿತು.. ಇನ್ನು ಇತ್ತ ಅಮೃತಾ ನಾಯ್ಡು ಗರ್ಭಿಣಿಯಾಗಿರುವ ಕಾರಣ ದಯವಿಟ್ಟು ಎಲ್ಲರೂ ಸಮನ್ವಿ ಮತ್ತೆ ನನ್ನ ಹೊಟ್ಟೆಯಲ್ಲಿಯೇ ಹುಟ್ಟಿ ಬರಲಿ ಎಂದು ಪ್ರಾರ್ಥನೆ ಮಾಡಿ.. ನಾನು ನನ್ನ ಮಗುವನ್ನು ಜೋಪಾನ ಮಾಡಿಕೊಳ್ಳುತ್ತೇನೆ ಎಂದು ಭಾವುಕರಾಗಿ ಕಣ್ಣೀರಿಟ್ಟು ವಾಟ್ಸಪ್ ಸ್ಟೇಟಸ್ ಹಾಕಿಕೊಂಡದ್ದು ಕಣ್ಣೀರು ತರಿಸುವಂತಿತ್ತು.. ಆ ತಾಯಿ ತಂದೆಯ ಕಣ್ಣೀರು ನೋಡಿದ ಪ್ರತಿಯೊಬ್ಬರೂ ಆ ಸಂಕಟ ಅಂತಹ ಸಂದರ್ಭ ನಿಜಕ್ಕೂ ಯಾರಿಗೂ ಬಾರದಿರಲಿ ಎಂದೇ ಹೇಳಿದರು..

ಆದರೆ ಅದ್ಯಾಕೋ ಪುಟ್ಟ ಪುಟ್ಟ ಮಕ್ಕಳನ್ನು ಕಳೆದುಕೊಳ್ಳುವ ನೋವು ಅಂತಹ ಘಟನೆ ಮತ್ತೆ ಸಾಲು ಸಾಲಾಗಿ ನಡೆಯುತ್ತಿದೆ.. ಹೌದು ಸಮನ್ವಿಯಂತೆಯೇ ಇರುವ ಮತ್ತೊಂದು ಪುಟ್ಟ ಹೆಣ್ಣು ಮಗಳು ಬೆಂಗಳೂರಿನಲ್ಲಿ ಇಲ್ಲವಾಗಿದ್ದು ಕಾರಣ ಕೇಳಿದರೆ ಸಂಕಟ ತರುತ್ತಿದೆ.. ಹೌದು ಇತ್ತ ಬೆಳಗಾವಿಯಲ್ಲಿ ಇನ್ನೂ ವರ್ಷ ತುಂಬದ ಮೂವರು ಮಕ್ಕಳು ಇಲ್ಲವಾಗಿದ್ದು.. ಆ ಮೂರು ಮಕ್ಕಳಿಗೂ ಸಹ ಲಸಿಕೆ ಹಾಕಿಸಲಾಗಿತ್ತು.. ಅದೇ ಕಾರಣಕ್ಕೆ ಮಕ್ಕಳು ಜೀವ ಕಳೆದುಕೊಂಡಿದ್ದಾರೆ ಎನ್ನಲಾಗಿದ್ದು ಆರೋಗ್ಯಾಧಿಕಾರಿಯನ್ನು ಅಮಾನತು ಮಾಡಲಾಗಿದೆ.. ಅವರೇನೋ ಅಮಾನತಾದರು ಆದರೆ ಆ ಪುಟ್ಟ ಕಂದಮ್ಮಗಳು ಮತ್ತೆ ಬರುವರಾ.. ಆ ಕಂದಮ್ಮಗಳ ಅಪ್ಪ ಅಮ್ಮ ಅಜ್ಜಿ ತಾತಂದಿರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.. ಇನ್ನು ಬೆಂಗಳೂರಿನಲ್ಲಿಯೂ ಸಮನ್ವಿಯ ವಯಸ್ಸಿನ ಪುಟ್ಟ ಹುಡುಗಿಯೊಬ್ಬಳು ಜೀವ ಕಳೆದುಕೊಂಡಿದ್ದು ಮಕ್ಕಳುಗಳನ್ನು ಇಂತಹ ಸ್ಥಿತಿಯಲ್ಲಿ ನೋಡುವ ಪರಿಸ್ಥಿತಿ ನಿಜಕ್ಕೂ ಯಾವ ತಂದೆ ತಾಯಿಗೂ ಬಾರದಿರಲಿ..

ಹೌದು ಈ ಪುಟ್ಟ ಹುಡುಗಿಯ ಹೆಸರು ಗೌತಮಿ.. ವಯಸ್ಸಿನ್ನೂ ಕೇವಲ ಆರು ವರ್ಷ.. ಬೆಂಗಳೂರು ಉತ್ತರ ತಾಲೂಕಿನ ಚಿಕ್ಕ ಬಾಣಾವರ ಗ್ರಾಮದ ನರಸಿಂಹಮೂರ್ತಿ ಹಾಗೂ ಮಂಗಳ ದಂಪತಿಯ ಮಗಳು.. ಈ ಕುಟುಂಬ ಹದಿನೈದು ವರ್ಷದ ಹಿಂದೆ ರಾಮನಗರದಿಂದ ಬಂದು ಚಿಕ್ಕ ಬಾಣವರದಲ್ಲಿ ನೆಲೆಸಿ ಇಲ್ಲಿಯೇ ಉದ್ಯೋಗ ಮಾಡಿಕೊಂಡಿದ್ದರು.. ಆದರೆ ಚೆಂದದ ಸಂಸಾರದ ಮೇಲೆ ಅದ್ಯಾವ ಕಣ್ಣು ಬಿತ್ತೋ ಏನೋ.. ಒಂದೇ ದಿನ ತಾಯಿ ಮಗು ಇಬ್ಬರೂ ಸಹ ಇಲ್ಲವಾಗಿ ಹೋದರು.. ಹೌದು ನಿನ್ನೆ ಬೆಳಿಗ್ಗೆ ನರಸಿಂಹ ಮೂರ್ತಿ ಕೆಲಸಕ್ಕೆಂದು ಹೊರಗೆ ಹೋಗಿದ್ದರು.. ಆ ಸಮಯದಲ್ಲಿ ಸ್ನಾನ ಮಾಡಲೆಂದು ಮಂಗಳ ಹಾಗೂ ಮಗಳು ಗೌತಮಿ ಬಾತ್ ರೂಪಿಗೆ ತೆರಳಿದ್ದಾರೆ.. ಗ್ಯಾಸ್ ಗೀಸರ್ ಅನ್ನು ಆನ್ ಮಾಡಿ ಸ್ನಾನ ಮಾಡಿಸಲು ಮುಂದಾಗಿದ್ದಾರೆ.. ಆದರೆ ಕೆಲವೇ ನಿಮಿಷಗಳಲ್ಲಿ ತಾಯಿ ಮಗು ಇಬ್ಬರೂ ಸಹ ಇಲ್ಲವಾಗಿ ಹೋಗಿದ್ದಾರೆ..

ಹೌದು ಅನಿಲ ಸೋರಿಕೆಯಿಂದಾಗಿ ಮೂವತ್ತೈದು ವರ್ಷದ ಮಂಗಳ ಹಾಗೂ ಏಳು ವರ್ಷದ ಗೌತಮಿ ಇಬ್ಬರೂ ಸಹ ಬಾತ್ ರೂಮಿನಲ್ಲಿಯೇ ಕೊನೆಯುಸಿರೆಳೆದು ಬಿಟ್ಟಿದ್ದರು.. ಮನೆಯ ಓನರ್ ಮನೆ ಬಳಿ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.. ಇತ್ತ ಹೆಂಡತಿ ಹಾಗೂ ಪುಟ್ಟ ಮಗುವನ್ನು ಕಳೆದುಕೊಂಡ ನರಸಿಂಹ ಮೂರ್ತಿ ಕಣ್ಣೀರಿಡುತ್ತಿದ್ದು ಯಾಕಾದರೂ ಆ ಗೀಸರ್ ತಂದೆವೋ ಎಂದು ಗೋಳಾಡುತ್ತಿದ್ದರು.. ದಯವಿಟ್ಟು ಯಾರೇ ಆಗಲಿ ಗೀಸರ್ ಗಳು ಅಥವಾ ಕರೆಂಟ್ ಸಂಬಂಧ ಪಟ್ಟ ವಸ್ತುಗಳನ್ನೂ ಅಥವಾ ಮತ್ಯಾವುದೇ ವಸ್ತುಗಳಾಗಲಿ ದಯವಿಟ್ಟು ಎಚ್ಚರಿಕೆಯಿಂದ ಬಳಸಿ..