Advertisements

ಕೆಮರಾ ಮುಂದೆ ಕೈ ಮುಗಿದು ಬೇಡಿಕೊಂಡ ಮಂಜು ಪಾವಗಡ..! ಕಾರಣ ಕೇಳಿದರೆ ಕಣ್ಣೀರು ಬರುತ್ತದೆ.. ವಿಡಿಯೋ ನೋಡಿ..

Kannada News

ನಮಸ್ತೆ ಸ್ನೇಹಿತರೆ, ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಗೆದ್ದ ಮಂಜು ಅವರು ಈಗ ಕರ್ನಾಟಕದಲ್ಲಿ ತುಂಬಾ ಫೇಮಸ್ ಆಗಿದ್ದಾರೆ. ಮಂಜು ಅವರ ಬಗ್ಗೆ ಮನೆಮನೆಯಲ್ಲೂ ಮಾತನಾಡುತ್ತಿದ್ದಾರೆ. ಮೊದಲಿಗಿಂತ ಈಗ ಮಂಜು ಅವರಿಗೆ ತುಂಬಾ ಫಾಲವರ್ಸ್ ಹೆಚ್ಚಾಗಿದ್ದಾರೆ. ಲಕ್ಷಾಂತರ ಅಭಿಮಾನಿಗಳ ಅಭಿಮಾನದ ಅಡಿಯಲ್ಲಿ ಮಂಜು ಪಾವಗಡ ಇದ್ದಾರೆ. ಈ ನಡುವೆ ಮಂಜು ಪಾವಗಡ ಒಂದು ಸಮಾಜಮುಖಿ ವಿಡಿಯೋ ಒಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಮಂಜು ಅವರು ಕೈಮುಗಿದು ಸಹಾಯ ಮಾಡಿ‌ ಅಂತ ಬೇಡಿಕೊಂಡಿದ್ದಾರೆ. ಮಂಜು ಅವರು ಸಹಾಯ ಮಾಡಿ ಅಂತ ಬೇಡಿಕೊಂಡಿದ್ದು ಒಂದು ಸಣ್ಣ ಮಗುವಿನ ಜೀವವನ್ನು ಉಳಿಸಲು.

Advertisements
Advertisements

ಆ ಸಣ್ಣ ಮಗು ಅಪರೂಪದ ಕಾ’ಯಿಲೆಯಿಂದ ಬಳ’ಲುತ್ತಿದ್ದು, ಮಗುವಿನ ಜೀವ ಉಳಿಸಲು ಪಾವಗಡ ಮಂಜು ನೆರವಾಗುತ್ತಿದ್ದಾರೆ. ಈ ಮಗುವಿನ ಚಿಕಿತ್ಸೆಗೆ ಈಗ ಬರೋಬ್ಬರಿ 8 ಕೋಟಿ ರೂ ಬೇಕಾಗಿದೆ.! ‘ತುಮಕೂರು ಜಿಲ್ಲೆ ಶಿರಾ ತಾಲೂಕಿನ ನವೀನ್​ ಮತ್ತು ಜ್ಯೋತಿ ದಂಪತಿಯ ಪುಟ್ಟ ಮಗುವಿಗೆ ಈ ಅಪರೂಪದ ಕಾ’ಯಿಲೆ ಬಂದಿದೆ. ಈ ಕಾ’ಯಿಲೆಯನ್ನು ಆ ಪುಟ್ಟ ಮಗುವಿನಿಂದ ದೂರ ಮಾಡಲು ನಮ್ಮ ದೇಶದಲ್ಲಿ ಚಿಕಿತ್ಸೆಯ ವ್ಯವಸ್ಥೆಯಿಲ್ಲ. ಅದಕ್ಕಾಗಿ ಹೊರದೇಶದಿಂದ ಔಷಧಿ ತೋರಿಸಬೇಕಾಗುತ್ತದೆ. ಒಂದು ಇಇಂಜೆಕ್ಷನ್ ನ ಬೆಲೆ ಸುಮಾರು 16 ಕೋಟಿ ರೂಪಾಯಿ. ಈಗಾಗಲೇ ದಾನಿಗಳ ಸಹಾಯದಿಂದ 8 ಕೋಟಿ ರೂ ಸಂಗ್ರಹ ಆಗಿದೆ. ಪುಟ್ಟ ಮಗುವಿನ ಪ್ರಾಣವನ್ನು ಉಳಿಸಲು ಇನ್ನೂ 8 ಕೋಟಿ ರೂ. ಬೇಕು’ ಎಂದು ಮಂಜು ಪಾವಗಡ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

‘ಇನ್ನು ನಮಗೆ ಉಳಿದಿರುವುದು ಮೂರು ತಿಂಗಳು ಮಾತ್ರ, 3 ತಿಂಗಳ ಒಳಗೆ 8 ಕೋಟಿ ರೂ. ಸಂಗ್ರಹ ಮಾಡಬೇಕಿದೆ. ಎಲ್ಲರನ್ನೂ ಕೈಮುಗಿದು ಬೇಡಿಕೊಳ್ಳುತ್ತೇನೆ, ಆ ಮಗುವಿನ ಪ್ರಾಣವನ್ನು ಉಳಿಸಲು ನಮ್ಮ ಕೈಲಾದಷ್ಟು ಸಹಾಯ ಮಾಡೋಣ. ಪ್ರಸ್ತುತದ ಪರಿಸ್ಥಿತಿಯಲ್ಲಿ ಆ ಮಗುವಿನ ತಂದೆ ತಾಯಿಗಳು ತುಂಬಾ ಕ’ಷ್ಟದಲ್ಲಿದ್ದಾರೆ. ಆ ಮಗುವಿನ ಪರಿಸ್ಥಿತಿ ನೋಡಿದರೆ ಕ’ಣ್ಣೀರು ಬರುತ್ತದೆ. ಮಗುವಿನ ಮುಖದಲ್ಲಿ ನಗು ತರಿಸಲು ನಮ್ಮ ಕನ್ನಡದ 8 ಲಕ್ಷ ಜನರು ತಲಾ 100 ರೂ. ನೀಡಿದರೆ 8 ಕೋಟಿ ಆಗುತ್ತದೆ’ ಎಂದು ಮಂಜು ಎಲ್ಲಾ ಕನ್ನಡಿಗರಲ್ಲಿ ಮಾಡಿಕೊಂಡಿದ್ದಾರೆ. ಈ ಮಗುವಿಗೆ ಸಹಾಯ ಮಾಡಲು ಇಚ್ಚಿಸುವವರು ಮೇಲೆ ಫೋಟೋದಲ್ಲಿ ಕಾಣುತ್ತಿರುವ ಬ್ಯಾಂಕ್ ಡೀಟೇಲ್ಸ್ ಗೆ ಹಣವನ್ನು ಕಳಿಸಬಹುದು. ಇದನ್ನು ಶೇರ್ ಮಾಡಲು ಮಾತ್ರ ಮರೆಯಬೇಡಿ ಸ್ನೇಹಿತರೆ.