ನಮಸ್ತೆ ಸ್ನೇಹಿತರೆ, ಕಾಮಿಡಿ ಶೋ ಮಾಜಾ ಭಾರತ ಕಾರ್ಯಕ್ರಮದಲ್ಲಿ ತನ್ನದೇ ಆದ ವಿಭಿನ್ನ ಶೈಲಿಯ ಕಾಮಿಡಿ ಮೂಲಕ ಪ್ರೇಕ್ಷಕರನ್ನು ಗಮನ ಸೆಳೆದ ಮಂಜು ಪಾವಗಡ ಅವರು ಇದೀಗ ಬಿಗ್ ಬಾಸ್ ಮನೆಯಲ್ಲೂ ಕೂಡ ತನ್ನ ಹಾಸ್ಯದ ಮೂಲಕ ಬಿಗ್ ಸ್ಪರ್ಧಿಗಳಿಗೆ ಮಾತ್ರವಲ್ಲದೇ ಹೊರಗಿನ ಜನರನ್ನು ಸಹ ನಕ್ಕು ನಗಿಸಿ ಎಲ್ಲರ ಮನ ಗೆದ್ದಿದ್ದಾರೆ. ಹೌದು ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಮಾತ್ರವಲ್ಲದೇ ಮನೆಯಲ್ಲಿ ಕೂತು ಬಿಗ್ ಬಾಸ್ ನೋಡುತ್ತಿರುವ ಜನರು ಕೂಡ ಮಂಜು ಪಾವಗಡ ಅವರ ಕಾಮಿಡಿಗೆ ಫಿದಾ ಆಗಿದ್ದಾರೆ. ಇನ್ನೂ ಮಂಜು ಪಾವಗಡ ಬಿಗ್ ಬಾಸ್ ಮನೆಯಲ್ಲಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಇನ್ನೂ ಮಂಜು ಪಾವಗಡ ಅವರು ಮಜಾ ಭಾರತ ಶೋ ನಲ್ಲಿ ಸ್ರ್ಕಿಪ್ಟ್ ಮೂಲಕ ಕಾಮಿಡಿ ನಟನೆ ಮಾಡುತ್ತಿದ್ದರು.. ಆದರೆ ಇದೀಗ ಬಿಗ್ ಬಾಸ್ ಗೆ ಹೋದ ನಂತರ ಸ್ಕ್ರಿಪ್ಟ್ ಇಲ್ಲದೆ ಹೇಗೆ ಹಾಸ್ಯವನ್ನು ಮಾಡುತ್ತಾರೆ ಎಂಬುದು ಹಲವರ ಅಭಿಪ್ರಾಯವಾಗಿತ್ತು.. ಆದರೆ ಈ ಮಾತುಗಳಿಗೆ ತೆರೆ ಎಳೆದ ಮಂಜು ಪಾವಗಡ ಅವರು ತಮ್ಮ ಮಾತಿನ ಮೂಲಕವೇ ವಿಭಿನ್ನ ಹಾಸ್ಯ ಚಟಾಕಿಯನ್ನು ಹಾರಿಸಿ ಎಲ್ಲರನ್ನು ನಕ್ಕು ನಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಿನಲ್ಲಿ ಮಂಜು ಪಾವಗಡ ಅವರು ಸ್ಕ್ರೀಪ್ಟ್ ಇಲ್ಲದಿದ್ದರು ನಾನು ಎಲ್ಲರನ್ನು ನಗಿಸಬಲ್ಲೆನು ಎಂದು ತೋರಿಸಿಕೊಟ್ಟಿದ್ದಾರೆ..

‘ಮಜಾ ಭಾರತ’ ಕಾಮಿಡಿ ಶೋನಲ್ಲಿ ಮೂರುವರೆ ವರ್ಷಗಳ ಕಾಲ ಭಾಗವಹಿಸಿದ್ದ ಮಂಜು ಪಾವಗಡ ಅವರು ಪ್ರಸ್ತುತ ಸಿನಿಮಾಗಳಲ್ಲಿ ನಟಿಸಲು ಅವಕಾಶ ಪಡೆದುಕೊಂಡಿದ್ದಾರೆ. ಪಾವಗಡ ಎಂಬ ಊರಿನಲ್ಲಿ ಹುಟ್ಟಿ ಬೆಳೆದ ಮಂಜು ಅವರಿಗೆ ನಟನಾಗುವ ಆಸೆಯಿತ್ತು. ಹೀಗಾಗಿ ಅವರು ಬೆಂಗಳೂರಿಗೆ ಬಂದರು. ಈಗ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಒಟ್ಟು ಹತ್ತು ವಾರಗಳನ್ನು ಮುಗಿಸಿರುವ ಮಂಜು ಪಾವಗಡ 5 ಲಕ್ಷದ ಐವತ್ತು ಸಾವಿರ ಹಣವನ್ನು ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ. ಮಂಜು ಪಾವಗಡ ಅವರ ಬಗ್ಗೆ ನೀವೇನಂತೀರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.