ನಮಸ್ತೆ ಸ್ನೇಹಿತರೆ, ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ವೇಟ್ ಲಿಫ್ಟಿಂಗ್ನಲ್ಲಿ ಭಾರತಕ್ಕೆ 20 ವರ್ಷಗಳ ನಂತರ ಪದಕದ ಭಾಗ್ಯ ಸಿಕ್ಕಿದೆ. 20 ವರ್ಷಗಳ ಹಿಂದೆ ಭಾರತದ ಕರ್ಣಂ ಮಲ್ಲೇಶ್ವರಿ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಇಂದು ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಹೊಸ ದಾಖಲೆ ಮಾಡಿದ್ದಾರೆ. ಭಾರತೀಯರಿಗೆ ಒಲಿಂಪಿಕ್ಸ್ ಕ್ರೀಡಾಕೂಟದ ಮೊದಲ ದಿನವೇ ಖುಷಿ ಅನುಭವಿಸುವಂತೆ ಮತ್ತು ಹೆಮ್ಮೆಪಡುವಂತೆ ಮಾಡಿದ್ದಾರೆ. ಈ ಸಾಧನೆಗೆ ಏಕೆ ಏನೇನು ಮಾಡಿದ್ದಾಳೆ ಗೊತ್ತಾ..? ಮುಂದೆ ಓದಿ..

ಮಣಿಪುರದ ಪುಟ್ಟಹಳ್ಳಿಯಲ್ಲಿ ಹುಟ್ಟಿದ ಮೀರಾಬಾಯಿ ಚಾನು, ಬಾಲ್ಯದಲ್ಲೇ ವೇಟ್ಲಿಫ್ಟರ್.! ಬಾಲಕಿಯಾಗಿದ್ದಾಗ ತಮ್ಮ ಸಹೋದರನೊಂದಿಗೆ ಕಾಡಿಗೆ ಹೋಗಿ ಕಟ್ಟಿಗೆಗಳನ್ನು ಹೊತ್ತು ಮನೆಗೆ ತರುತ್ತಿದ್ದರು. ಸಹೋದರನಿಂದ ಸಾಧ್ಯವಾಗದಷ್ಟು ಭಾ’ರವನ್ನು ಚಾನು ಒಬ್ಬರೇ ಹೊತ್ತು ತರುತ್ತಿದ್ದನ್ನು ಕಂಡು ಹಳ್ಳಿಯವರೆಲ್ಲಾ ಬೆರಗಾಗುತ್ತಿದ್ದರು ಎಂದು ಅವರ ತಾಯಿ ಬಿಯೊಂಟ್ ಮೀಟೆ ನೆನಪಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ, ಬಹಳ ದೂರ ತೆರಳಿ ಬಿಂದಿಗೆಗಳಲ್ಲಿ ಕುಡಿಯಲು ನೀರು ಸಹ ತರುತ್ತಿದ್ದಳಂತೆ. ಈಗ ಇಡೀ ದೇಶವೇ ಹೆಮ್ಮೆ ಪಡುವಂತೆ ಟೋಕಿಯೋ ಒಲಿಂಪಿಕ್ಸ್ 49 ಕೆ.ಜಿ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಒಟ್ಟು 202 ಕೆ.ಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾಳೆ.

2016ರಲ್ಲಿ ಕ’ಣ್ಣೀರು, 2021ರಲ್ಲಿ ಮುಗಿಲು ಮುಟ್ಟಿದ ಸಂಭ್ರಮ. ಮೀರಾಬಾಯಿ ಚಾನು ಒಲಿಂಪಿಕ್ಸ್ ಹಾದಿ ಬಹಳ ರೋಚಕವಾಗಿದೆ. ಛಲ, ದಿಟ್ಟತನ, ಪರಿಶ್ರಮ ಅವರನ್ನು ಬಿಡದೆ ಕೈಹಿಡಿದಿದೆ. 2016ರ ರಿಯೋ ಒಲಿಂಪಿಕ್ಸ್ನಲ್ಲಿ ಚಾನು ವಿ’ಫಲರಾಗಿದ್ದರು. ಸ್ಪರ್ಧೆಯಲ್ಲಿ ನಡೆಸಿದ 6 ಪ್ರಯತ್ನಗಳಲ್ಲಿ ಕೇವಲ 1ರಲ್ಲಿ ಮಾತ್ರ ಅವರು ಯಶಸ್ಸು ಕಂಡಿದ್ದರು. ಈ ವೈಫಲ್ಯದಿಂದ ಖಿ’ನ್ನತೆಗೆ ಜಾರಿದ್ದರು. ಆದರೆ ರಿಯೋನಲ್ಲೇ ಟೋಕಿಯೋ ಪದಕಕ್ಕೆ ಸಿದ್ಧತೆ ಆರಂಭಿಸಿದ್ದರು. 2017ರಲ್ಲಿ ವಿಶ್ವ ಚಾಂಪಿಯನ್ ಆದ ಚಾನು, 2018ರಲ್ಲಿ ತಮ್ಮ ಹೆಸರಿನಲ್ಲೇ ಇದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮಗೊಳಿಸಿಕೊಂಡರು. 2021ರಲ್ಲಿ ಒಲಿಂಪಿಕ್ಸ್ಗೆ ಕೆಲವೇ ದಿನಗಳು ಬಾಕಿ ಇದ್ದಾಗ ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ ವಿಶ್ವ ದಾಖಲೆ ಬರೆದ ಚಾನು, ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಸಾಧನೆ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಜಾನು ಅವರು ಮಾಡಿದ ಈ ಸಾಧನೆಯ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.