Advertisements

ಮದುವೆಯ ದಿನವೇ ಬೆಳಿಗ್ಗೆ ಸ್ನಾನದ ಮನೆಗೆ ಹೋದಳು‌‌.. ಆದರೆ ಆಕೆ ಇದ್ದ ಸ್ಥಿತಿಯನ್ನು ಕಿಟಕಿಯಲ್ಲಿ ನೋಡಿ ಬೆಚ್ಚಿಬಿದ್ದ ಅಪ್ಪ ಅಮ್ಮ..

Kannada News

ಅಪ್ಪ ಅಮ್ಮ ಮಕ್ಕಳ ಬಗ್ಗೆ ನೂರಾರು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ.. ಚೆನ್ನಾಗಿ ಓದಿಸಿ, ಕೇಳಿದ್ದನ್ನೆಲ್ಲಾ ಕೈಲಾದ ಮಟ್ಟಿಗೆ ಕೊಡಿಸಿ ದೊಡ್ಡವರನ್ನಾಗಿ ಮಾಡುತ್ತಾರೆ.. ಕೊನೆಗೆ ಮದುವೆ ಮಾಡಿ ಜವಾಬ್ದಾರಿ ಮುಗಿಸಿ ನೆಮ್ಮದಿಯಿಂದಿರುವ ಕನಸು ಕಾಣುತ್ತಾರೆ.. ಅಂದುಕೊಂಡಂತೆ ನಡೆದರೆ ಹೆತ್ತವರ ಮುಂದಿನ್ ಜೀವನ ನೆಮ್ಮದಿಯಿಂದ ಕಳೆಯುವರು.. ಆದರೆ ಮಕ್ಕಳ ವಿಚಾರದಲ್ಲಿ ಇಂತಹ ಘಟನೆ ಗಳು ನಡೆದು ಹೋದರೆ ಹೆತ್ತವರ ಮುಂದಿನ ಜೀವನ ನಿಜಕ್ಕೂ ಹೇಳಲಾಗದು.. ಅದೇ ರೀತಿ ಇಲ್ಲೊಂದು ಮನಕಲಕುವ ಘಟನೆ ನಡೆದಿದ್ದು ಮದುವೆ ದಿನವೇ ಮದು ಮಗಳು ಬಚ್ಚಲು ಮನೆಗೆ ಹೋದವಳು ಕೊನೆಗೆ ಆಕೆ ಇದ್ದ ಸ್ಥಿತಿ ಕಂಡು ಆಕೆಯ ಹೆತ್ತವರು ಬೆಚ್ಚಿಬಿದ್ದಿದ್ದಾರೆ..

Advertisements
Advertisements

ಹೌದು ಮದುವೆಯಾಗಿ ಗಂಡನ ಜೊತೆ ಹೊಸ ಜೀವನ ಶುರು ಮಾಡಬೇಕಾದವಳು.. ಆದರೆ ಮದುವೆ ದಿನವೇ ಆಗಿದ್ದೇ ಬೇರೆ.. ಈಕೆಯ ಹೆಸರು ಮೇಘಾ.. ವಯಸ್ಸು ಮೂವತ್ತು ವರ್ಷ.. ಕೋಝಿಕೋಡ್ ನ ನಿವಾಸಿ ಸುರೇಶ್ ಬಾಬು ಎಂಬುವವರ ಪುತ್ರಿ.. ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದ ಮೇಘಾ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ತರಬೇತಿ ಪಡೆಯುತ್ತಿದ್ದಳು.. ಇತ್ತ ಮನೆಯಲ್ಲಿ ಮೇಘಾಳ ಮದುವೆ ಮಾಡುವ ನಿರ್ಧಾರಕ್ಕೆ ಆಕೆಯ ತಂದೆ ತಾಯಿ ಬಂದಿದ್ದರು.. ಇತ್ತ ಮೇಘಾ ವಿದ್ಯಾರ್ಥಿನಿಯಾಗಿದ್ದ ಖಾಸಗಿ ಆಸ್ಪತ್ರೆಯಲ್ಲಿಯೇ ಕೆಲಸ ಮಾಡುತ್ತಿದ್ದ ಹುಡುಗನೊಬ್ಬನ ಜೊತೆ ಮೇಘಾಳ ಮದುವೆ ನಿಶ್ಚಯವಾಗಿತ್ತು.. ಹೌದು ಮೇಘಾ ಓದುತ್ತಿದ್ದ ಖಾಸಗಿ ಆಸ್ಪತ್ರೆಯಲ್ಲಿ ಸಾಫ್ಟ್ ನರ್ಸ್ ಅಗಿದ್ದ ಹುಡುಗನೊಬ್ಬನ ಜೊತೆ ಮೇಘಾಳ ಮದುವೆ ನಿಶ್ಚಯವಾಗಿತ್ತು..

ಅಂದುಕೊಂಡಂತೆ ಮದುವೆ ದಿನವೂ ಬಂತು.. ಎರಡೂ ಕುಟುಂಬಗಳು ಸಹ ಮದುವೆಗೆ ಸಕಲ ತಯಾರಿ ಮಾಡಿಕೊಂಡಿದ್ದವು.. ಇನ್ನೇನು ಕೆಲವೇ ಗಂಟೆಯಲ್ಲಿ ಮೇಘಾ ತಮ್ಮ ಮನೆಯ ಸೊಸೆಯಾಗುವಳು ಎಂದು ಹುಡುಗನ ಕುಟುಂಬ ಅಂದುಕೊಂಡಿತ್ತು.. ಇತ್ತ ಮಗಳ ಮದುವೆ ನಡೆದರೆ ದೊಡ್ಡ ಜವಾಬ್ದಾರಿಯೊಂದು ಮುಗಿಯಲಿದೆ ಎಂದು ಸುರೇಶ್ ಬಾಬು ಅಂದುಕೊಂಡಿದ್ದರು.. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮೊನ್ನೆ ಮೇಘಾ ಆ ಹುಡುಗನ ಜೊತೆ ಹೊಸ ಜೀವನವನ್ನು ಶುರು ಮಾಡಬೇಕಿತ್ತು.. ಆದರೆ ನಡೆದದ್ದೇ ಬೇರೆ…

ಹೌದು ಬೆಳಿಗ್ಗೆ ಮದುವೆ ಮನೆಯಾಗಿದ್ದ ಆ ಮನೆ ಕೆಲವೇ ಗಂಟೆಯಲ್ಲಿ ಸೂತಕದ ಮನೆಯಾಗಿ ಹೋಯ್ತು.. ಹೌದು ಮೇಘಾಳ ಮನೆಯಲ್ಲಿಯೇ ಮದುವೆ ಸಮಾರಂಭ ನೆರವೇರುತಿತ್ತು.. ಇತ್ತ ಮನೆ ತುಂಬಾ ಸಂಬಂಧಿಕರು ಓಡಾಡುತ್ತಿದ್ದರು.. ಶಾಸ್ತ್ರ ಸಂಪ್ರದಾಯಗಳು ನೆರವೇರುತ್ತಿದ್ದವು.. ಮನೆಗೆ ಒಂದು ಕಡೆ ಅಲಂಕಾರ ನಡೆಯುತಿತ್ತು.. ಇತ್ತ ಮೇಘಾಳನ್ನು ಅಲಂಕಾರ ಮಾಡಲು ಮನೆಗೆ ಬ್ಯುಟಿಷಿಯನ್ ಕೂಡ ಆಗಮಿಸಿದ್ದರು.. ಆದರೆ ಮೇಘಾ ಸ್ನಾನ ಮಾಡಿಕೊಂಡು ಬರುತ್ತೇನೆ ಎಂದು ಸ್ನಾನದ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಳು.. ಇತ್ತ ಬ್ಯುಟಿಷಿಯನ್ ಗಳು ಮೇಘಾಳನ್ನು ಕಾದು ಕಾದು ಸುಸ್ತಾದರು.. ಹೊರಗಿನಿಂದ ಎಷ್ಟೇ ಕೂಗಿದರು ಬಾಗಿಲು ತೆಗೆಯಲಿಲ್ಲ..

ಕೊನೆಗೆ ಸ್ನಾನದ ಮನೆಯ ಕಿಟಕಿಯ ಗಾಜನ್ನು ತೆಗೆದು ನೋಡಿದಾಗ ಕೂಗಿಕೊಂಡರು.. ತಕ್ಷಣ ಮೇಘಾಳ ರೂಮಿನ ಬಳಿ ಬಂದ ಮೇಘಾಳ ತಂದೆ ತಾಯಿ ಮಗಳು ಇದ್ದ ಸ್ಥಿತಿ ಕಂಡು ಬೆಚ್ಚಿಬಿದ್ದಿದ್ದಾರೆ.. ಹೌದು ಮಗಳು ಸ್ನಾನದ ಕೋಣೆಯಲ್ಲಿಯೇ ತನ್ನ ಬಟ್ಟೆಯನ್ನು ಬಳಸಿ ಜೀವ ಕಳೆದುಕೊಂಡು ಬಿಟ್ಟಿದ್ದಳು.. ತಕ್ಷಣ ಬಾಗಿಲನ್ನು ತೆರೆದು ಆಕೆಯನ್ನು ಇಳಿಸಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು.. ಅದರೆ ಕಾಲ ಮಿಂಚಿ ಹೋಗಿತ್ತು.. ಮೇಘಾ ಅದಾಗಲೇ ಕೊನೆಯುಸಿರೆಳೆದುಬಿಟ್ಟಿದ್ದಳು.. ಇತ್ತ ಚೀವಾಯೂರು ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಈ ನಿರ್ಧಾರಕ್ಕೂ ಮುನ್ನ ಮೇಘಾ ಬರೆದಿಟ್ಟ ಪತ್ರ ದೊರೆತಿದೆ ಎಂದು ತಿಳಿದು ಬಂದಿದೆ..

ಸ್ನೇಹಿತರೆ ಈ ವೀಡಿಯೋ ನೋಡಿ ಯುಟ್ಯೂಬ್ ಚಾನಲ್ ಅನ್ನು ದಯವಿಟ್ಟು Subscribe ಮಾಡಿ..

ಆದರೆ ಆ ಪತ್ರದಲ್ಲಿ ಏನು ಬರೆದಿದೆ ಮದುವೆಯ ದಿನವೇ ಮೇಘಾ ಇಂತಹ ನಿರ್ಧಾರಕ್ಕೆ ಬರಲು ಏನು ಕಾರಣ ಎಂದು ಬಹಿರಂಗ ಪಡಿಸಿಲ್ಲ.. ಅದೇನದರೂ ಆಗಲಿ ಅಪ್ಪ ಅಮ್ಮನ ಬಗ್ಗೆ ಸ್ವಲ್ಪವೂ ಆಲೋಚಿಸದೇ ಇಂತಹ ನಿರ್ಧಾರ ಮಾಡಿದ್ದು ನಿಜಕ್ಕೂ ತಪ್ಪು.. ಅದೇನೇ ತೊಂದರೆ ಇದ್ದರು ಧೈರ್ಯವಾಗಿ ಮನೆಯವರ ಜೊತೆ ಮಾತನಾಡಿ ಬಗೆಹರಿಸಿಕೊಳ್ಳಬಹಿದಾಗಿತ್ತು.. ಆದರೆ ಆಕೆ ಮಾಡಿದ ಆ ಒಂದು ದುಡುಕಿನ ನಿರ್ಧಾರದಿಂದ ಮೇಘಾಳ ಅಪ್ಪ ಅಮ್ಮ ಜೀವನ ಪೂರ್ತಿ ಕೊರಗುವಂತಾಗಿದೆ.. ಮದುವೆಯ ಸಂಭ್ರಮದಲ್ಲಿರಬೇಕಾದ ಮನೆ ಸೂತಕದ ಮನೆಯಾಗಿ ಹೋಗಿದೆ..