Advertisements

ಜೀವನದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಮೇಘನಾ ರಾಜ್! ಸಿಹಿ ಸುದ್ದಿ

Cinema

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಮೇಘನಾ ರಾಜ್ ರವರು ಮಗು ಆದ ಬಳಿಕ ಕೆಲವು ದಿನಗಳು ಬ್ರೇಕ್ ತೆಗೆದುಕೊಂಡಿದ್ದು ಮತ್ತೆ ಬಣ್ಣ ಹಚ್ಚಿದ್ದಾರೆ. ಕೆಲವು ಸಿನಿಮಾಗಳಿಗೆ ಸಹಿ ಮಾಡಿದ್ದು ಇದರ ಜೊತೆಗೆ ಕಿರುತೆರೆಯಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಮೇಘನಾ ಕೆಲವು ದಿನಗಳ ಭಾಗಿ ಆಗಿದ್ದು ರಿಯಾಲಿಟಿ ಶೋ ಮುಗಿಸಿದ ಬಳಿಕ ಮೇಘನಾ ರಾಜ್ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗುತ್ತಿದ್ದಾರೆ.

ಹೌದು ಕಳೆದ ವರ್ಷ ಅನೌನ್ಸ್ ಮಾಡಿದ್ದ ಸಿನಿಮಾಗಳು ಕಿಕ್ ಸ್ಟಾರ್ಟ್ ಆಗಿದ್ದು ಈ ಬಗ್ಗೆ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ಸದ್ಯ ಇದೀಗ ಮೇಘನಾ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದು ರಿಯಾಲಿಟಿ ಶೋ ಮುಗಿಸಿ ಮೇಘನಾ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಹೌದು ಈ ಬಗ್ಗೆ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಮೇಘನಾ ರಾಜ್ ಜುಲೈ 7 ಒಂದು ಸಣ್ಣ ಆಲೋಚನೆ ನಿಜವಾಯಿತು. ನಾವು ಪ್ರಾಜೆಕ್ಟ್ ಅಕ್ಟೋಬರ್ 17, 2021ರಲ್ಲಿ ಅನೌನ್ಸ್ ಮಾಡಿದ್ದೆವು.

ಸಾಕಷ್ಟು ಚರ್ಚೆಗಳ ಬಳಿಕ ಸ್ಕ್ರಿಪ್ಟ್ ಮರುನಿರ್ಮಾಣ ಲುಕ್ ಟೆಸ್ಟ್ ನಂತರ ಒಟ್ಟಾಗಿ ಸೇರಿ ಕನಸನ್ನು ಪ್ರಾರಂಭಿಸಿದ್ದೇವೆ. ಈ ಸಿನಿಮಾ ನನಗೆ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಕ್ಯಾಮೆರಾ ರೋಲಿಂಗ್ ಆಕ್ಷನ್ ಎಂದು ಬರೆದುಕೊಂಡಿದ್ದಾರೆ. ನಟಿ ಮೇಘನಾ ರಾಜ್ ಹೊಸ ಸಿನಿಮಾಗೆ ಅನೇಕರು ಶುಭಾಶಯ ತಿಳಿಸುತ್ತಿದ್ದು ಅಭಿಮಾನಿಗಳು ಮತ್ತು ಸಿನಿ ಗಣ್ಯರು ಶುಭಕೋರಿದ್ದಾರೆ. ಹೌದು ಅಂದಹಾಗೆ ಮೇಘನಾ ಹೊಸ ಸಿನಿಮಾದಲ್ಲಿ ಯಾವ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದ್ದು ಮೇಘನಾ ಕೊನೆಯದಾಗಿ ಕುರುಕ್ಷೇತ್ರ ಮತ್ತು ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಸಿನಿಮಾದಲ್ಲಿ ನಟಿಸಿದ್ದರು.

ಹೌದು ಕುರುಕ್ಷೇತ್ರ ಸಿನಿಮಾದಲ್ಲಿ ಭಾನುಮತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸದ್ಯ ಇದೀಗ ರಾಯನ್ ರಾಜ್ ಸರ್ಜಾಗೆ ಜನ್ಮ ನೀಡಿದ ಬಳಿಕ ಮೇಘನಾ ಮೊದಲ ಬಾರಿಗೆ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಇನ್ನು ಮಗು ಆದ ಬಳಿಕ ಸದ್ಯ ಒಂದೊಂದೇ ಕಾರ್ಯಗಳನ್ನು ಆರಂಭಿಸಿದ್ದು ಎಲ್ಲರೂ ಸಂತೋಷವಾಗಿ ಇರುವುದು ಎಂದರೆ ಚಿರು ಆವರಿಗೆ ಬಲು ಇಷ್ಟ ಎಂದು ಮೇಘನಾ ಹಲವು ಬಾರಿ ‌ಹೇಳಿಕೊಂಡಿದ್ದು ಅಂತೆಯೇ ಮೇಘನಾ ಮೂಲಕ ಎಲ್ಲರ ಮುಂದೆ ಬಂರಲಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಮೇಘನಾ ರಾಜ್ ಸದಾ ಆಯಕ್ಟಿವ್ ಆಗಿದ್ದು ಮಗ ರಾಯನ್ ರಾಜ್ ಬಗ್ಗೆ ಹಲವು ಪೋಸ್ಟ್‌ಗಳನ್ನು ಹಾಕುತ್ತಾ ಇರುತ್ತಾರೆ. ಜೊತೆಗೆ ರಾಯನ್ ಫೊಟೋಗಳನ್ನು ಹಂಚಿಕೊಳ್ಳುವ ಮೂಲಕ ರಾಯನ್ ಚಟುವಟಿಕೆಗಳ ಬಗ್ಗೆ ಕೂಡ ವಿಚಾರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.