Advertisements

ಕ್ರಿಸ್ಮಸ್ ಹಬ್ಬದ ದಿನವೇ ಚಿರು ನೆನೆದು ಕಣ್ಣೀರಿಟ್ಟ ಮೇಘನಾ ರಾಜ್ ! ಹೇಳಿದ್ದೇನು ?

ನಟಿ ಮೇಘನಾ ರಾಜ್ ಚಿರಂಜೀವಿ ಸರ್ಜಾ ಕನ್ನಡ ಚಿತ್ರರಂಗದ ಮುದ್ದಾದ ಜೋಡಿ ಆದರೆ ಈ ಜೋಡಿ ಹೆಚ್ಚು ಕಾಲ ಒಟ್ಟಿಗೆ ಬಾಳಿ ಬದುಕಲು ಆ ವಿಧಿ ಬಿಡಲಿಲ್ಲ ಅರ್ಧದಲ್ಲಿ ಮೇಘ ಅವರನ್ನು ಒಂಟಿ ಮಾಡಿ ಚಿರು ವನ್ನು ಕರೆದುಕೊಂಡು ಬಿಟ್ಟಿದೆ. ಆದರೆ ಈಗ ಚಿರು ಮಗನ ರೂಪದಲ್ಲಿ ಮೇಘನ ಮಡಿಲು ಸೇರಿದ್ದಾನೆ ಮೇಘನರಾಜ್ ಸರ್ಜಾ ಮತ್ತು ಕುಟುಂಬ ರಾಯನ್ ನಗುವಿನಲ್ಲಿ ತಮ್ಮ ನೋವುಗಳನ್ನು ಮರೆಯುತ್ತ ಜೀವನ ಸಾಗಿಸುತ್ತಿದ್ದಾರೆ. ರಾಯನ್ ಗಾಗಿ ಮೇಘನಾ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ.
ಇನ್ನೂ ರಾಯನ್ ಕೂಡ ಅಪ್ಪನಂತೆ ಜನರ ಮನಸ್ಸನ್ನು ಗೆದ್ದಿದ್ದಾನೆ. ನಟಿ ಮೇಘನರಾಜ್ ದೇವರ ಬಳಿ ಮಗ ರಾಯನ್ ಗಾಗಿ ಪತಿ ಚಿರು ವನ್ನು ಕೇಳಿದ್ದಾರೆ. ಈ ಸಂದರ್ಭ ಎದುರಾಗಿದ್ದು ಸಾಮಾಜಿಕ ಜಾಲತಾಣದಲ್ಲಿ,

[widget id=”custom_html-5″]

Advertisements
Advertisements

ಮೇಘನಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಶ್ನಾವಳಿಯಲ್ಲಿ ಹಮ್ಮಿಕೊಂಡಿದ್ದರು. ಅಂದರೆ ನಿಗದಿತ ಸಮಯದಲ್ಲಿ ತಮಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವುದು. ಹೀಗೆ ಮೇಘನಾಗೆ ಹಲವು ಪ್ರಶ್ನೆಗಳು ಎದುರಾಗಿವೆ. ಹಾಗೆ ಮಗನಿಗಾಗಿ ಸಂತ ಕ್ಲಾಸ್ ಬಳಿ ಏನ್ ಗಿಫ್ಟ್ ಕೇಳುತ್ತೀರಿ ಎನ್ನುವ ಪ್ರಶ್ನೆ ಕೂಡ ಎದುರಾಗಿದೆ. ಈ ಪ್ರಶ್ನೆ ಮೇಘನ ಒಂದು ಫೋಟೋ ಹಂಚಿಕೊಳ್ಳುವ ಮೂಲಕ ಉತ್ತರಿಸಿದ್ದಾರೆ. ಈ ಫೋಟೋದಲ್ಲಿ ಒಂದು ಕಡೆ ಚಿರಂಜೀವಿ ಸರ್ಜಾ ಮತ್ತೊಂದು ಕಡೆ ರಾಯನ್ ರಾಜ್ ಇದ್ದಾನೆ.

[widget id=”custom_html-5″]

ಅಂದರೆ ಮಗನಿಗಾಗಿ ಅಪ್ಪನನ್ನು ಗಿಫ್ಟಾಗಿ ಕೇಳುತ್ತೇನೆ ಎಂದು ಫೋಟೋ ಹಂಚಿಕೊಳ್ಳುವ ಮೂಲಕ ಮೇಘನಾ ಉತ್ತರಿಸಿದ್ದಾರೆ. ಮೇಘನರಾಜ್ ಸಾಮಾಜಿಕ ಜಾಲತಾಣ ಮೂಲಕ ಅಭಿಮಾನಿಗಳ ಜೊತೆಗೆ ಕನೆಕ್ಟ್ ಆಗಿರುತ್ತಾರೆ. ಸದಾ ರಾಯನ್ ಫೋಟೋ ಮತ್ತು ತುಂಟಾಟದ ವಿಡಿಯೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಈ ಮೂಲಕ ರಾಯನ್ ಕೂಡ ಜನರಿಗೆ ಸಾಕಷ್ಟು ಇಷ್ಟ ಆಗಿದ್ದಾನೆ ಅದಾಗಲೇ ರಾಯನ್ ಗೂ ಅಭಿಮಾನ ಬಳಗ ಹುಟ್ಟಿಕೊಂಡಿದೆ..