Advertisements

ಮನೆಗೆ ಬಂದವರ ಬಳಿ ಪಟಪಟನೆ ಮಾತಾಡುತ್ತಿರುವ ರಾಯನ್ ಸರ್ಜಾ …ಕ್ಯೂಟ್ ವಿಡಿಯೋ

Cinema

ಸದ್ಯ ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರು ಮೇಘನಾ ರಾಜ್. ಕನ್ನಡ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಇವರು ಬಹಳ ಫೇಮಸ್. ಮೇಘನಾ ರಾಜ್ ಅವರು ಎರಡು ಚಿತ್ರರಂಗದಲ್ಲಿ ಸೂಪರ್ ಯೆಶಸ್ವಿ ಸಿನಿಮಾಗಳನ್ನು ನೀಡಿದ್ದು ಜೊತೆಗೆ ತಮಿಳು ಚಿತ್ರರಂಗದಲ್ಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇವರು ಕರ್ನಾಟಕದ ಕನ್ನಡ ಚಿತ್ರರಂಗದ ಮನೆಮಗಳು. ಈಗ ಮೇಘನಾ ಅವರಿಗೆ ಮುದ್ದಾದ ಮಗು ಇದ್ದು ರಾಯನ್ ರಾಜ್ ಸರ್ಜಾ ಜೊತೆ ಇರುವ ಮೇಘನಾ ಅವರ ಮನೆಗೆ ಇತ್ತೀಚಿಗೆ ವಿಶೇಷ ಅತಿಥಿಗಳು ಬಂದು ಹೋಗಿದ್ದಾರೆ. ಅವರು ಯಾರು ಗೊತ್ತಾ? ತಿಳಿಯಲು ಮುಂದೆ ಓದಿ.

2018 ರಲ್ಲಿ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರೊಡನೆ ವಿವಾಹವಾದರು ಮೇಘನಾ ರಾಜ್. 2020 ರಲ್ಲಿ ನಟ ಚಿರಂಜೀವಿ ಸರ್ಜಾ ಅಗಲಿದರು. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುತ್ತಿದ್ದ ಮೇಘನಾ ಚಿರು ಅಗಲಿದ ನಂತರ ಎಲ್ಲದರಿಂದ ಸ್ವಲ್ಪ ದೂರ ಉಳಿದಿದ್ದರು. ಆಕ್ಟೊಬರ್ 22ರಂದು ಚಿರು ಮೇಘನಾ ಪ್ರೀತಿಯ ಸಂಕೇತವಾಗಿ ಜ್ಯೂನಿಯರ್ ಚಿರು ಜನಿಸಿದ ಬಳಿಕ ಮೇಘನಾ ಬಾಳಲ್ಲಿ ಬೆಳಕು ಮೂಡಿದೆ. ಸಧ್ಯಕ್ಕೆ ಮೇಘನಾ ರಾಜ್ ಅವರು ಮಗನ ಆರೈಕೆಗೆ ತಮ್ಮ ಸಂಪೂರ್ಣ ಸಮಯವನ್ನು ಮೀಸಲಾಗಿ ಇಟ್ಟಿದ್ದಾರೆ.

ಇದೀಗ ನಮ್ಮ ರಾಯನ್ ರಾಜ್ ಸರ್ಜಾನಿಗೆ ಒಂದು ವರೆ ವರುಷ ತುಂಬಿದ್ದು ತಾಯಿ ಮತ್ತು ಕುಟುಂಬದವರ ಆರೈಕೆ ಹಾಗೂ ಜನರ ಪ್ರೀತಿಯಿಂದ ರಾಯನ್ ಬಹಳ ಸಂತೋಷದಿಂದ ಬೆಳೆಯುತ್ತಿದ್ದಾನೆ. ನಟಿ ಮೇಘನಾ ರಾಜ್ ಈಗ ಸರಳ ಜೀವನಕ್ಕೆ ಜಾರಿದ್ದಾರೆ. ಮೇಘನಾ ಮತ್ತು ಜ್ಯೂನಿಯರ್ ಚಿರುವನ್ನು ನೋಡಲು ಆಗಾಗ ಮೇಘನಾ ಅವರ ಮನೆಗೆ ಅತಿಥಿಗಳು ಬಂದು ಹೋಗುತ್ತಿದ್ದಾರೆ. ಇತ್ತೀಚೆಗಷ್ಟೇ ಮೇಘನಾ ಅವರ ಮನೆಗೆ ಬಂದಿರುವ ಅತಿಥಿಗಳು ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ.

ಹೌದು ನಟ ಪ್ರಜ್ವಲ್ ದೇವರಾಜ್ ಮತ್ತು ಅವರ ಪತ್ನಿ ರಾಗಿಣಿ ಚಂದ್ರನ್ ಮೇಘನಾ ರಾಜ್ ಅವರ ಮನೆಗೆ ಭೇಟಿ ಮೇಘನಾ ಮತ್ತು ರಾಯನ್ ಜೊತೆ ಸಮಯ ಕಳೆದಿದ್ದಾರೆ. ರಾಯನ್ ಗೆ ಮುದ್ದಾದ ಗಿಫ್ಟ್ ಗಳನ್ನು ನೀಡಿ, ಇಬ್ಬರೂ ಸಹ ಮಗುವಿನ ಜೊತೆ ಬಹಳ ಹೊತ್ತು ಆಟ ಆಡುತ್ತಾ ಸಮಯ ಕಳೆದಿದ್ದಾರೆ. ಸ್ನೇಹಿತರು ಮನೆಗೆ ಬಂದಿರುವ ಕಾರಣ ಮೇಘನಾ ಅವರು ಸಹ ಬಹಳ ಸಂತೋಷ ಪಟ್ಟಿದ್ದಾರೆ. ಸದ್ಯ ರಾಗಿಣಿ ರವರು ಚಿರು ಪುತ್ರನ ಜೊತೆ ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದ್ದು ಈ ವಿಡಿಯೋವನ್ನು ತಾವು ಕೂಡ ನೋಡಬಹುದು.