ಖ್ಯಾತ ನಟ ಅರ್ಜುನ್ ಸರ್ಜಾ ತಾಯಿ ಧ್ರುವ ಸರ್ಜಾ ಅಜ್ಜಿ, ಹಿರಿಯ ನಟ ಶಕ್ತಿ ಪ್ರಸಾದ್ ಪತ್ನಿ ಲಕ್ಷ್ಮೀದೇವಿ ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮೀದೇವಿ ಇಂದು ಮಾಧ್ಯಾಹ್ನ 12 ಗಂಟೆ ಸುಮಾರಿಗೆ ನಿಧನ ಹೊಂದಿದ್ದಾರೆ ಎನ್ನು ಮಾಹಿತಿ ಲಭ್ಯವಾಗಿದೆ.ಲಕ್ಷ್ಮೀದೇವಿ ಅವರಿಗೆ 84 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮೀದೇವಿ ಅವರನ್ನು ಕಳೆದ 22 ದಿಗಳಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮೀದೇವಿ ಇಹಲೋಕ ತ್ಯಜಿಸಿದ್ದಾರೆ
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕಳೆದ ಒಂದು ತಿಂಗಳಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ, ಇಂದು ಮಧ್ಯಾಹ್ನ 12 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.ಸರ್ಜಾ ಕುಟುಂಬದ ಬೆಳವಣಿಗೆಯಲ್ಲಿ ಲಕ್ಷ್ಮಿದೇವಿ ಅವರ ಪಾತ್ರದ ದೊಡ್ಡದು. ಪತಿಯು ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದರೆ, ಮಕ್ಕಳನ್ನು ಬೆಳೆಸುವಲ್ಲಿ ಲಕ್ಷ್ಮಿದೇವಿ ಅವರೇ ಪ್ರಮುಖ ಪಾತ್ರ ವಹಿಸಿದವರು. ಮೂವರು ಮಕ್ಕಳಲ್ಲಿ ಇಬ್ಬರು ಮಕ್ಕಳನ್ನು ಸಿನಿಮಾ ರಂಗದಲ್ಲೇ ಬೆಳೆಯುವಂತೆ ಮಾಡಿದ್ದರು. ಕಿಶೋರ್ ಸರ್ಜಾ ಮತ್ತು ಅರ್ಜುನ್ ಸರ್ಜಾ ಹಾಗೂ ಚಿರು ಸರ್ಜಾ ಅವರ ತಾಯಿ ಅಮ್ಮಾಜಿ ಇವರ ಮೂವರು ಮಕ್ಕಳು. ಮುಂದೆ ಮೊಮ್ಮಕ್ಕಳು ಕೂಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಾಗ ಅವರನ್ನು ಪ್ರೋತ್ಸಾಹಿಸಿದವರು.
ಕಳೆದ ವರ್ಷವಷ್ಟೇ ಸರ್ಜಾ ಕುಟುಂಬ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದೆ. ಈಗ ಕುಟುಂಬದ ಹಿರಿಯ ಜೀವವನ್ನು ಕಳೆದುಕೊಂಡಿದೆ.ಅರ್ಜುನ್ ಸರ್ಜಾ ಸದ್ಯ ಬೆಂಗಳೂರಿನಲ್ಲೇ ಇದ್ದಾರೆ ಎಂಬ ಮಾಹಿತಿ ಇದೆ. ಧ್ರುವ ಸರ್ಜಾ ಶೂಟಿಂಗ್ ಗಾಗಿ ಹೈದರಾಬಾದ್ ಗೆ ತೆರಳಿದ್ದರು. ಅಲ್ಲಿಂದ ಈಗ ಹೊರಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಬೆಂಗಳೂರಿನಲ್ಲಿ ಮಗಳ ಮನೆಯಲ್ಲಿಯೇ ಲಕ್ಷ್ಮೀ ದೇವಿ ಇದ್ದರು. ಲಕ್ಷ್ಮೀ ದೇವಿ ಅವರ ಅನಾರೋಗ್ಯದ ವಿಚಾರ ತಿಳಿದು ಚೆನ್ನೈನಿಂದ ಅರ್ಜುನ್ ಸರ್ಜಾ ಕುಟುಂಬ ಬೆಂಗಳೂರಿಗೆ ಬಂದಿದೆ. ಧ್ರುವ ಸರ್ಜಾ ಅವರು ಮಾರ್ಟಿನ್ ಸಿನಿಮಾ ಶೂಟಿಂಗ್ನಲ್ಲಿ ಭಾಗಿಯಾಗಿದ್ದು, ಅಜ್ಜಿ ನಿಧನದ ವಿಷಯ ತಿಳಿದು ಆಸ್ಪತ್ರೆಗೆ ಬಂದಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಅರ್ಜುನ್ ಸರ್ಜಾ ಮಾವ ನಟ ರಾಜೇಶ್ ನಿಧನರಾಗಿದ್ದರು. ಅದಕ್ಕೂ ಮುನ್ನ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಶಕ್ತಿ ಪ್ರಸಾದ್ ಅವರ ಇನ್ನೋರ್ವ ಪುತ್ರ ಕಿಶೋರ್ ಸರ್ಜಾ ಕೂಡ ಚಿಕ್ಕ ವಯಸ್ಸಿನಲ್ಲಿ ನಿಧನರಾಗಿದ್ದರು.ಲಕ್ಷ್ಮೀ ದೇವಿ ಅವರು, ಚಿರು ಎರಡನೇ ವರ್ಷದ ಪುಣ್ಯತಿಥಿಯಲ್ಲಿ ಮರಿ ಮೊಮ್ಮಗನನ್ನು ಮುದ್ದಾಡಿದುದನ್ನು ನೋಡಿರಬಹುದು. ಅಜ್ಜಿ ಒಂದಷ್ಟು ವರ್ಷಗಳ ಹಿಂದೆ ಚಿರಂಜೀವಿಯನ್ನು ಕೂಡ ಹೀಗೆ ಮುದ್ದಾಡಿದ್ದರು. ಆ ಫೋಟೋಗಳು ಈಗ ವೈರಲ್ ಆಗಿದ್ದವು. ಅಂದು ಚಿರಂಜೀವಿಯನ್ನು ಎತ್ತಿಕೊಂಡಿರುವ ಅಜ್ಜಿ ಲಕ್ಷ್ಮೀದೇವಿ ಫೋಟೋ ನೋಡ್ತಿದ್ರೆ, ಇದು ರಾಯನ್ ಅಥವಾ ಚಿರಂಜೀವಿ ಸರ್ಜಾನಾ ಅನ್ನೋವಷ್ಟು ಗೊಂದಲ ಆಗುವುದಂತೂ ಸತ್ಯ.