Advertisements

ಎಲ್ಲಾ ನಟಿಯರನ್ನು ಮೀರಿಸಲು ಒಂದು ಹೆಜ್ಜೆ ಮುಂದೆ ಇಟ್ಟ ಮೇಘನಾರಾಜ್! ಕುಣಿದು ಕುಪ್ಪಳಿಸಿದ ಫ್ಯಾನ್ಸ್..

Cinema

ನಮಸ್ಕಾರ ಗೆಳೆಯರೆ ಕನ್ನಡದ ಹಲವು ಅದ್ಬುತ ನಟಿಯರಲ್ಲಿ ನಗು ಮೊಗದ ಚಲುವೆ ಮೇಘನಾ ರಾಜ್ ಕೂಡ ಒಬ್ಬರು. ಕನ್ನಡ ಹಿರಿಯ ಕಲಾವಿದರಾದ ಮಗಳಾದ ಮೇಘನಾ ವಿದ್ಯಾಭ್ಯಾಸ ಮುಗಿದ ತಕ್ಷಣವೇ ಸಿನಿಮಾ ಜಗತ್ತಿನ ಕಡೆ ಮುಖ ಮಾಡಿದ್ದರು.

ಕನ್ನಡ ಮಾತ್ರವಲ್ಲದೆ ಹಲವು ಭಷೆಯಲ್ಲಿ ಅಭಿನಯಿಸಿ ತಮ್ಮದೆ ಆದ ಅಭಿಮಾನಿ ಬಳಗವನ್ನು ಸೃಷ್ಟಿಮಾಡಿಕೊಂಡಿದ್ದಾರೆ. ಹಲವಾರು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ, ಕನ್ನಡದ ಸ್ಟಾರ್ ನಟ ಚಿರು ಸರ್ಜಾ ಅವರನ್ನು ಪ್ರೀತಿಸಿದ್ದರು. ಅನಂತರ ಎರೆಡು ಕುಟುಂಬದ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕು ಸಹ ಕಾಲಿಟ್ಟರು ಮೇಘನಾ ರಾಜ್.

ಅವರದ್ದು ತುಂಬು ಕುಟುಂಬ ಸಂತೋಷ, ಪ್ರೀತಿ, ಹೊಂದಾಣಿಕೆ, ಸ್ನೇಹ ಎಲ್ಲವು ಅವರಲ್ಲಿ ಆಳವಾಗಿ ಬೇರುರಿದವು. ಆದರೆ ವಿಧಿ ಆಟ ಬಲ್ಲವರಾರು. ಎಲ್ಲವು ನಾವು ಅಂದುಕೊಂಡಂತೆ ಆಗುವುದಿಲ್ಲ ಎಂಬುವುದಕ್ಕೆ ಮೇಘನಾ ರಾಜ್ ಅವರ ಬದುಕೇ ಸಾಕ್ಷಿ.

ಹೌದು ಹೆಚ್ಚು ಸಂತೋಷ, ನಾವು ಇಷ್ಟ ಪಡುವ ವಸ್ತು ಅಥವಾ ವ್ಯಕ್ತಿ ಜೊತೆಗೆ ಹೆಚ್ಚು ದಿನ ನಮ್ಮೊಂದಿಗೆ ಉಳಿಯುವುದಿಲ್ಲ ಎಂಬಂತೆ ಆಕಸ್ಮಿಕ ಎನ್ನುವಂತೆ ನಮ್ಮೆಲ್ಲರ ಪ್ರೀತಿಯ ನಟ ಚಿರು ಎಲ್ಲರನ್ನು ಅಗಲಿದರು. ಚಿರು ಅವರನ್ನು ಕಳೆದುಕೊಂಡ ಬಳಿಕ ಮೇಘನಾ ರಾಜ್ ಎಲ್ಲದರಿಂದ ಕೆಲವು ದಿನಗಳ ದೊರವಾಗಿದ್ದರು. ಈಗ ಮತ್ತೆ ನಟನೆಯತ್ತ ಮುಖ ಮಾಡಿದ್ದಾರೆ.

ತಮ್ಮ ಜೀವನದಲ್ಲಿ ಮತ್ತೆ ಖುಷಿಯ ಕ್ಷಣಗಳನ್ನು ಕಾಣುತಿದ್ದಾರೆ‌. ಅದಷ್ಟೆ ಅಲ್ಲದೆ ಸದ್ಯ ಮತ್ತೊಂದು ಮಹತ್ವದ ನಿರ್ಧಾರ ಮೇಘನಾ ರಾಜ್ ತೆಗೆದುಕೊಂಡಿದ್ದಾರೆ, ಆ ನಿರ್ಧಾರ ಏನು ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ಒಮ್ಮೆ ನೋಡಿ.

ನಟಿಯಾಗಿ ತಮ್ಮ ಕರಿಯರ್ ಪ್ರಾರಂಭಿಸಿದ ನಟಿ, ಹಲವು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಸಹ ಕೆಲಸ ಮಾಡಿದ್ದಾರೆ. ಸದ್ಯ ಈ ಸಿನಿಮಾ ಒಂದರ ನಿರ್ಮಾಣದಲ್ಲೊ ಕೈ ಜೋಡಿಸಿದ್ದು ಮೊದಲ ಬಾರಿಗೆ ನಿರ್ಮಾಪಕಿಯಾಗಿ ಕೆಲಸ ಮಾಡಲಿದ್ದಾರೆ.

ಸಿನಿಮಾದ ನಿರ್ಮಾಣ ಹಾಗೂ ಅದೇ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಇನ್ನು ಈ‌ ಮಹತ್ವದ ಇವರ ನಿರ್ಧಾರಕ್ಕೆ ಇವರ ಕೈ ಜೋಡಿಸಿದ್ದು ನಿರ್ಮಾಪಕ ಪನ್ನಾಭರಣ‌. ಪನ್ನಾಭರಣ‌, ವಿಶಾಲ ಹಾಗೂ ವಾಸುಕಿ ವೈಭವ್ ಅವರೊಂದಿಗೆ ಫೋಟೊ ತೆಗೆಸಿಕೊಂಡು ಅದನ್ನು ಸಾಮಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದರ ಮೂಲಕ ಹೊದ ವರ್ಷ ಹೊಸದೊಂದು ಸುದ್ದಿ ಆದಷ್ಟು ಬೇಗ ನೀಡಲಿದ್ದೇನೆ ಎಂದು ಹೇಳಿದ್ದರು.

ಎಲ್ಲರೊ ಒಟ್ಟಾಗಿ ಸಿನಿಮಾ ಮಾಡಲಿಲದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತೀವೆ.ಈ ಫೋಟೊ ಹಲವು ಕುತೂಹಲಕ್ಕೆ ಕಾರಣವಾಗಿತ್ತು. ಮೇಘನಾ ನಟಿಸುತ್ತಿರುವ ಚಿತ್ರಕ್ಕೆ ವಿಶಾಲ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎಂಬ ಸುದ್ದಿ ಒಂದೆಡೆಯಾದರೆ, ಮತ್ತೊಂದೆಡೆ ಪನ್ನಾಭರಣ‌ ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿಗಳು ಸಹ ಹರಿದಾಡಿದವು.

ಸದ್ಯ ಗಾಂಧಿನಗರದ ಸುದ್ದಿ ಪ್ರಕಾರ ಈ ಚಿತ್ರಕ್ಕೆ ಖುದ್ದಾಗಿ ಮೇಘನಾ ರಾಜ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಬಹಳ ಸಿನಿಮಾದ ಬಳಿಕೆ ಮತ್ತೆ ಮೇಘನಾ ತಮ್ಮ ಜೀವನದ ಗುರಿಯತ್ತ‌ ಮುಖ ಮಾಡಿದ್ದಾರೆ. ಇನ್ನು ಗಾಯಕ ವಾಸುಕಿ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಸದ್ಯ ಬೇರೊಂದು ಚಿತ್ರದಲ್ಲಿ ಬ್ಯುಸಿಯಾಗಿರುವ ಮೇಘನಾ , ಅನಂತರ ಈ ಚಿತ್ರೀಕರಣದ ಕೆಲಸ ಪ್ರಾರಂಭಿಸಲಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ಚಿರು ಅವರು ಅಗಲಿದ ಬಳಿಕ ಮೇಘನಾ ಮತ್ತೆ ಸಿನಿಮಾ ಜಗತ್ತಿನಲ್ಲಿ ಕೆಲಸ ಮಾಡುತ್ತಿರುವುದು ಚಿರು ಅಭಿಮಾನಿಗಳಿಗೆ ಸಂತಸ ನೀಡಲಿದೆ.