Advertisements

ಸ್ವಿಮ್ಮಿಂಗ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಮೇಘನಾರಾಜ್! ಹೇಗೆ ಕಾಣಿಸ್ತಿದಾರೆ ನೋಡಿ..

Kannada News

ನಮಸ್ಕಾರ ಗೆಳೆಯರೆ ಸಿನಿಮಾ ಅಂದರೆ ದಿನಕ್ಕೊಂದು ಸುದ್ದಿಯನ್ನು ಅಭಿಮಾನಿಗಳಿಗಾಗಿ ಕೊಡುತ್ತಲೇ ಇರುತ್ತದೆ. ಇನ್ನು ಅಭಿಮಾನಿಗಳಿಗು ಅವರ ಫೇವರೆಟ್ ತಾರೆಯರ ವೈಯಕ್ತಿಕ ಜೀವನದ ಕುರಿತು ಹಲವು ವಿಷಯಗಳನ್ನು ತಿಳಿದುಕೊಳ್ಳುವಲ್ಲಿ ಆಸಕ್ತರಾಗಿರುತ್ತಾರೆ. ಇನ್ನು ಹೀರೋಗಳು ವರ್ಕೌಟ್, ಜಿಮ್,ಡೈಲಾಗ್ ಗಳಿಂದ ಸುದ್ದಿಯಾದರೆ, ಹೀರೋಯಿನ್ ಗಳು ತಾವು ತೊಡುವ ಬಟ್ಟೆ, ಮೇಕಪ್ , ಇಂಟರ್‌ವ್ಯೂ ಗಳಿಂದ ‌ಸುದ್ದಿಯಾಗುತ್ತಾರೆ.

ಇತ್ತಿಚೀಗೆ ಸ್ವಿಮಿಂಗ್ ಡ್ರೇಸ್ ತೊಟ್ಟು ಬೀಚ್ ಬಳಿ ಲವ್ಲಿಯಾಗಿ ಕಾಣಿಸಿಕೊಂಡ ಕನ್ನಡದ ನಟಿ ಸುದ್ದಿಯಲ್ಲಿದ್ದಾರೆ.ಅವರ ಆ ಡ್ರೇಸ್ ಮೇಲಿನ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದ್ದು ಅಭಿಮಾನಿಗಳು ಅವರ ಈ ಹೊಸ ರೂಪಕ್ಕೆ ವಾವ್ಹ್ ಎಂದಿದ್ದಾರೆ. ಹಾಗಾದರೆ ಆ ಹಾಟ್ ಡ್ರೇಸ್ ನಲ್ಲಿ ಮಿಂಚಿದ ಆ ಚಲುವೆ ಯಾರು ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ಓದಿ….

ಮೂಲತಃ ಕನ್ನಡದವರಾದ ತಮ್ಮ ಸಿನಿ ಜರ್ನಿಯನ್ನು ತೆಲಗು ಹಾಗೂ ‌ಮಳಿಯಾಳಂ ಭಾಷೆಯ ಮೂಲಕ ಪ್ರಾರಂಭಿಸಿ ನಂತರ ಕನ್ನಡ ಸಿನಿಮಾದಲ್ಲಿ ‌ನಟಿಸಿ ಕನ್ನಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೀವನದಲ್ಲಿ ಯಶಸ್ಸು ಕಂಡು, ಇಷ್ಟ ಪಟ್ಟು ತಾವು ಪ್ರೀತಿಸಿದ ನಟನೊಂದಿಗೆ‌ ಮದುವೆಯಾಗಿ ಜೀವನ ನಡೆಸಿ, ಕಲವೇ ದಿನಗಳಲ್ಲಿ ಬದುಕಿನ ಕಹಿ ಘಟನೆಗಳಿಗೆ ಒಳಗಾದ ನಟಿ ಮೇಘನಾ ರಾಜ್.

ತಮ್ಮ ಜೀವನದಲ್ಲಿ ನಡಸ ಕಹಿ ಘಟನೆಗಳನ್ನು ಮರೆಯಲು ಮತ್ತೆ ತಮ್ಮನ್ನು ತಾವು ಸುಧಾರಸಿಕೊಂಡು ಸಿನಿಮಾ ರಂಗದಲ್ಲಿ ‌ಮತ್ತೆ ಬ್ಯುಸಿಯಾಗಿದ್ದಾರೆ. ತಮ್ಮದೆ ಫಿಲ್ಮ ಪ್ರೋಡಕ್ಷನ್ ಹೊಂದಿರುವ ನಟಿ ಮೇಘನಾ ಅದರಲ್ಲಿ ಹಲವು ಸಿನಿಮಾಗಳನ್ನು ತಯಾರಿಸುವುದರಲ್ಲಿ ಮುಂದಾಗಿದ್ದಾರೆ.

ಇನ್ನು ಮೇಘನಾ ರಾಜ್ ಅವರ ವೈಯಕ್ತಿಕ ಜೀವನ ನೋಡುವುದಾದರೆ ‌ಮೂಲತ ಅವರ ತಂದೆ ತಾಯಿ‌ ಕೂಡ ಕಲಾವಿದರೆ. ಹೀಗಾಗಿ ಇವರಲ್ಲಿ ಸಹ ನಟನೆಯ ಕುರಿತು ಆಸಕ್ತಿ ಅಭಿರುಚಿ ಬೆಳೆಯಲು ಕಾರಣವಾಯಿತು. ಇವರ ತಾಯಿ ಪ್ರಮೀಳಾ ಜೋಷಾಯಿ ಹಾಗೂ ತಂದೆ ಸುಂದರ ರಾಜ್ ಇವರಿಬ್ಬರೂ ಸಹ ಕನ್ನಡದ ಹಿರಿಯ ಕಲಾವಿದರಾಗಿದ್ದಾರೆ. ಹೀಗಾಗಿ ಮೇಘನಾ ರಾಜ್ ಸಹ ಮಳಯಾಳಂ ಮೂಲಕ ತಮ್ಮ ಮೊದಲ ಸಿನಿಮಾದಲ್ಲಿ ಅಭಿನಯಿಸಿದ್ದರು.

ಪರಭಾಷೆ ಚಿತ್ರಗಳ‌ ನಂತರ ಇವರನ್ನು ಕನ್ನಡ ನಿರ್ದೇಶಕರು ಗುರುತಿಸಿ ಅಭಿನಯಕ್ಕೆ ಅವಕಾಶ ನೀಡಲಾಯಿತು. ನಂತರ ಕನ್ನಡದ ಸೂಪರ್ ಸ್ಟಾರ್ ನಟ ದಿವಂಗತ ಚಿರು ಸರ್ಜಾ ಅವರನ್ನು ಪ್ರೀತಿಸಿದರು. ತಮ್ಮ ಪ್ರೀತಿಯನ್ನು ಎರೆಡು ಕುಟುಂಬಕ್ಕೆ ತಿಳಿಸಿ ಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಮದುವೆಯ ನಂತರ ಇವರಿಬ್ಬರು ತಮ್ಮ ದಾಂಪತ್ಯ ಜೀವನನ್ನು ಹ್ಯಾಪಿಯಾಗಿ ಪ್ರಾರಂಭಿಸಿದ್ದರು.

ಆದರೆ ಜೀವನದಲ್ಲಿ ಯಾವುದು ನಾವು ಅಂದಕೊಂಡತೆ ಆಗುವುದಿಲ್ಲ. ಎಲ್ಲವೂ ವಿಧಿ ಲಿಖಿತ ಎಂದು ನಮ್ಮ ಹಿರಿಯರು ಹೇಳುವ ಮಾತು ಅಕ್ಷರಶಃ ಸತ್ಯ. ಹೌದು ಈ ಮುದ್ದಾದ ಜೋಡಿಗೆ ಯಾರ ಕಣ್ಣು ಬಿತ್ತು‌ ಗೊತ್ತಿಲ್ಲ. ನಡೆಯ ಬಾರದ ಕಹಿ ಘಟನೆ ಮೇಘನಾ ರಾಜ್ ಜೀವನದಲ್ಲಿ ‌ನಡೆದು ಹೋಗಿತ್ತು. ಚಿರು ಇರುವಾಗಲೇ ಮೇಘನಾ ಗರ್ಭಿಣಿಯಾಗಿದ್ದರು. ಆದರೆ ಮಗುವಿನ ಮುಖ ನೋಡುವ ಮೊದಲೆ ಚಿರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು.

ಮಗುವಿನ ಜನ್ಮವಾದ ಬಳಿಕ, ಆ ನೋವಿನಿಂದ ಹೊರ ಬರಲು ಮೇಘನಾ ಯಾವುದೇ ಸಿನಿಮಾ, ಮಾಧ್ಯಮ ಅಥವಾ ಕ್ಯಾಮರಾ ಕಣ್ಣಿಗೆ ಬಿದ್ದರಲಿಲ್ಲ. ಅದಾಗಲೇ ಚಿರು ನಮ್ಮೆಲ್ಲರನ್ನು ಅಗಲಿ ಎರಡು ವರ್ಷ ಕಳೆದಿದೆ. ಇಂದಿಗೂ ಮೇಘನಾ ರಾಜ್ ಅವರ ನೆನಪುಗಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ.

ಮಗುವಿನ ಪಾಲನೆ ಪೋಷಣೆಯಲ್ಲಿ ತಮ್ಮ ಸಮಯವನ್ನು ಕಳೆದ ಮೇಘನಾ ರಾಜ್ ಮತ್ತೆ ಈಗ ನಟನೆಯತ್ತ ಮುಖ ಮಾಡಿದ್ದಾರೆ. ಮಗು ಬೆಳೆದು ಮಾತನಾಡುತ್ತಿದೆ. ಇತ್ತೀಚಿಗೆ ಡ್ಯಾನ್ಸಿಂಗ್ ರಿಯಾಲಿಟಿ ಶೋ ನಲ್ಲಿ ತೀರ್ಪುಗಾರರಾಗಿ ಕೆಲಸ ನಿರ್ವಹಿಸಿದ್ದಾರೆ.

ಚಿರು ಕಳೆದು ಹೋಗಿ ಎರಡು ವರ್ಷಗಳೆ ಕಳೆದರು ಮೇಘನಾ ರಾಜ್ ಅವರಿಂದಾಗಲಿ ಅಥವಾ ಚಿರು ಅಭಿಮಾನಿಗಳಿಂದಾಗಲಿ ಅವರ ನೆನಪು ಮಾತ್ರ ಹೋಗಿಲ್ಲ. ಇಂದಿಗೂ ಸಹ ಮೇಘನಾ‌ ತಮ್ಮೆಲ್ಲ ಸುಖ ದುಃಖ ಗಳನ್ನು‌ ಚಿರು ಅವರ ಫೋಟೊದ ಮುಂದೆ ಕುಳಿರು ಹಂಚಿಕೊಳ್ಳುತ್ತಾರೆ. ಮರಣೋತ್ತರವಾಗಿ ಚಿರು ಅವರಿಗೆ ಫಿಲ್ಮ್ ಫೇರ್ ಅವಾರ್ಡ ದೊರೆತಿದ್ದು, ಅದನ್ನು ಮೇಘನಾ ರಾಜ್ ಅವರೆ ಸ್ವೀಕರಿಸಿದ್ದರು. ಆ ಪ್ರಶಸ್ತಿಯನ್ನು ಮೇಘನಾ ಚಿರು ಫೋಟೊ ಮುಂದೆ ನಿಂರು ಕ್ಲಿಕ್ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಹಿ‌ ಘಟನೆಯ ಬಳಿಕ ಮತ್ತೆ ಮೇಘನಾ ರಾಜ್ ಮೊದಲಿನಂತೆ ತಮ್ಮ ಜೀವನದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗೆ ಥೈಲ್ಯಾಂಡ್ ಗೆ ಹೋಗಿದ್ದಾರೆ ಮೇಘನಾ.ತಮ್ಮ ಸ್ನೇಹಿತರೊಡನೆ ವಿದೇಶಿ ಪ್ರವಾಸಕ್ಕೆ ತರೆಳಿದ ಫೋಟೋಗಳನ್ನು ಈಗಾಗಲೆ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೀಗೆ ಅವರು ತಮ್ಮ ಮಗುವಿನೊಂದಿಗೆ ಸಂತೋಷದಿಂದ ಇರಲಿ ಎಂಬುವುದೇ ಅಭಿಮಾನಿಗಳ ಆಶಯ.