ನಮಸ್ಕಾರ ಗೆಳೆಯರೆ ಹೆಣ್ಣು ಮತ್ತಷ್ಟು ಹ ಸುಂದರವಾಗಿ ಕಾಣುವುದು ಆಕೆ ಧರಿಸುವ ಒಡವೆಗಳಿಂದ ಹಾಗಾಗಿ ಪ್ರತಿಯೊಬ್ಬ ಮಹಿಳೆಗೂ ಒಡವೆ ಎಂದರೆ ಎಲ್ಲಿಲ್ಲದ ಆಸೆ. ಪ್ರತಿ ಹಬ್ಬ ಹರಿದಿನ, ಕಾರ್ಯಕ್ರಮ ಸಮಾರಂಭದಲ್ಲಿ ತಾವು ತೊಡುವ ಉಡುಗೆಗೆ ಸರಿ ಹೊಂದುವ ಜ್ಯುವಲೆರಿ ಹಾಕಿಕೊಳ್ಳವುದು ಅವರ ಪ್ರತಿಷ್ಠೆ ಹಾಗು ಅವರ ಸೌಂದರ್ಯ ಪ್ರಜ್ಞೆಯನ್ನು ಮತ್ತಷ್ಟು ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ.
ಇನ್ನು ಬೆಲೆ ಬಾಳುವ ಆಭರಣಗಳನ್ನು ಖರೀದಿಸಬೇಕೆಂದರೆ ದೊಡ್ಡ ದೊಡ್ಡ ಆಭರಣದ ಅಂಗಡಿಗೆ ಹೋಗಿ ತಮಗಿಷ್ಟವಾದ ಆಭರಣಗಳ ಡಿಸೈನ್ ಗಳನ್ನು ನೋಡಿ ಬೆಲೆ ಹೊಂದಿಸಿ ಖರೀದಿಸಬೇಕಾಗುತ್ತದೆ. ಇದಕ್ಕಾಗಿ ಹತ್ತಾರು ಅಂಗಡಿಗಳಿಗೆ ಅಲೆದಾಡ ಬೇಕಾಗುತ್ತದೆ. ಗ್ರಾಹಕರಿಗೆ ಒಂದೆ ಜಾಗದಲ್ಲಿ ಎಲ್ಲ ತರಹದ ಆಭರಣಗಳು ದೊರೆಯಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ಜ್ಯುವೆಲರಿ ಆಫ್ ಇಂಡಿಯಾದವರು ಆಭರಣಗಳ ಮೇಳವನ್ನು ಭಾರತಾದ್ಯಂತ ಆಯೋಜನೆ ಮಾಡಿರುತ್ತಾರೆ.

ನಮ್ಮ ಸಿಲಿಕಾನ್ ಸಿಟಿಯಲ್ಲಿ ಸಹ ಈ ಆಭರಣಗಳ ಮೇಳ ಅದ್ದೂರಿಯಾಗಿ ವಿವಿಧ ಸ್ಥಳಗಳಲ್ಲಿ ನಡೆಯುತ್ತದೆ. ಈ ಬಾರಿ ಸೆಂಟ್ ಜೋಸೆಫ್ ಹೈಸ್ಕೂಲ್ ಆವರಣದಲ್ಲಿ ಬಾರಿ ಬೃಹತ್ ಪ್ರಮಾಣದ ಆಭರಣಗಳ ಮೇಳವನ್ನು ಆಯೋಜಿಸಿದ್ದು,ಅಭರಣ ಪ್ರಿಯರು ಹಿಂಡು ಹಿಂಡಾಗಿ ಮೇಳದಲ್ಲಿ ಭಾಗವಹಿಸಿದ್ದರು.
ಅಕ್ಟೋಬರ್ 13 ರಿಂದ 16 ರ ವರಗೆ ಈ ಆಭರಣಗಳ ಮೇಳ ನಡೆಸಲಾಗಿತ್ತು. ಇನ್ನು ಕನ್ನಡಿಗರ ಹೆಮ್ಮೆಯ ವಿಷಯವೆನೆಂದರೆ ಈ ಜ್ಯುವೆಲರಿ ಆಫ್ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿ ಕನ್ನಡದ ನಟಿ ಮೇಘನಾ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಮೇಳಕ್ಕೆ ಅದ್ದೂರಿಯಾಗಿ ಚಾಲನೆ ನೀಡಿದ ಮೇಘನಾ ರಾಜ್ ಬೆಳ್ಳಿ, ಚಿನ್ನ, ವಜ್ರ ವಿವಿಧ ಬಗೆಯ ಆಭರಣಗಳನ್ನು ತೊಟ್ಟು ಫೋಟೊಗಳಿಗೆ ಫೊಸ್ ನೀಡಿದ್ದಾರೆ. ಇದೇ ಸಮಾರಂಭದಲ್ಲಿ ಅವರು ಗೋಲ್ಡ್ ಕಲರ್ ಸಾರಿ ಊಟ್ಟು ಎಲ್ಲರ ಮದ್ಯ ಮಿಂಚುತ್ತಿದ್ದರು.
ಇನ್ನಜ ಸಮಾರಂಭದ ಬಳಿಕ ಮಾಧ್ಯಮ ಮುಂದೆ ಮಾತನಾಡಿದ ಅವರು ಸತ್ಯ ಒಂದನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ. ಹೌದು ಅವರ ಹೇಳಿದ್ದ ಆ ಸತ್ಯ ನಿಜಕ್ಕೂ ಎಲ್ಲರನ್ನು ಒಂದು ನಿಮಿಷ ಮೌನರನ್ನಾಗಿಸಿತ್ತು. ಅವರು ಹೇಳಿಕೊಂಡ ಆ ವಿಷಯ ಎನೆಂದರೆ ತಮ್ಮ ಜೀವನದಲ್ಲಿ ಹೆಚ್ಚಾಗಿ ಇಷ್ಟ ಪಟ್ಟ ಡೈಮಂಡ್ ನೆಕ್ಲೆಸ್ ಕುರಿತು.

ಹೌದು ಚಿರು ಅವರು ನಮ್ಮನ್ನೆಲ್ಲ ಅಗಲಿ ಎರೆಡು ವರ್ಷಗಳು ಕಳೆದರು ಅವರ ನೆನಪು ಮಾತ್ರ ನಮ್ಮ ಹೃದಯದಲ್ಲಿ ಹಚ್ಚ ಹಸಿರಾಗಿದೆ. ಅವರು ಎಂದಿಗೂ ಕನ್ನಡಿಗರ ಮನದಲ್ಲಿ ಇರುತ್ತಾರೆ. ಅವರ ನನಪಿನಲ್ಲೆ ಜೀವನ ಸಾಗಿಸುತ್ತಿದ್ದಾರೆ ನಟಿ ಮೇಘನಾ ರಾಜ್. ಅವರು ತಮ್ಮ ಮದುವೆ ಆ್ಯನಿವರ್ಸರಗೆ ತಂದು ಕೊಟ್ಟ ಡೈಮಂಡ್ ನೆಕ್ಲಸ್ ಕುರಿತು ಮಾತನಾಡುತ್ತಾ ಚಿರುವ ಅವರೊಂದಿಗೆ ಕಳೆದ ಸವಿ ನೆನಪುಗಳನ್ನು ಮೆಲಕು ಹಾಕಿದರು.
ಈ ಮೇಳದ ಸಂದರ್ಭದಲ್ಲಿ ಅದೇ ಡೈಮಂಡ್ ಸರ ಧರಿಸಿದ್ದು ಎಲ್ಲರ ಗಮನ ಅವರ ತೊಟ್ಟ ಸರದ ಮೇಲಿತ್ತು. ಒಟ್ಟಿನಲ್ಲಿ ಮೇಘನಾ ರಾಜ್ ಚಿರು ನೆನಪಿಗಾಗಿ ಅವರು ನೀಡಿದ ಪ್ರತಿಯೊಂದು ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಂಡಿದ್ದಾರೆ ಎಂಬುವುದಕ್ಕೆ ಈ ಡೈಮಂಡ್ ನಕ್ಸಲ್ ಒಂದು ಉದಾಹರಣೆ.