ನಮಸ್ತೆ ಸ್ನೇಹಿತರೆ, ಕೆಲವೊಮ್ಮೆ ನಾವು ಮಾಡುವ ಸಣ್ಣ ಕೆಲಸವೂ ಸಹ ಇನ್ನೊಬ್ಬರಿಗೆ ಆದರ್ಶವಾಗುತ್ತದೆ. ಇನ್ನೊಬ್ಬರ ಕಷ್ಟ ಅರಿತು ಅಂತಹವರ ಸಹಾಯ ನಿವಾರಿಸಲು ಸಹಾಯ ಹಸ್ತ ಚಾಚಿದರೆ ದೇವರು ನಮಗೆ ಬೇರೆ ರೂಪದಲ್ಲಿ ಸಹಾಯ ಹಸ್ತ ಚಾಚುತ್ತಾನೆ ಎಂಬುದು ಸುಳ್ಳಲ್ಲ. ಇಲ್ಲೊಬ್ಬ ಅರಣ್ಯ ಸಚಿವರು ಜನರೆದುರೇ ಕಾರ್ಯಕ್ರಮವೊಂದರಲ್ಲಿ ಎಲ್ಲರೆದುರು ಕ್ಷೌರ ಮಾಡಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.. ಇಷ್ಟಕ್ಕೂ ಈ ಸಚಿವರು ಈ ರೀತಿ ಬಹಿರಂಗವಾಗಿ ಕ್ಷೌರ ಮಾಡಿಸಿಕೊಂಡದ್ದಾದರೂ ಏಕೆ ? ಅಂದಹಾಗೆ ಈ ಘಟನೆ ನಡೆದದ್ದು ಬೇರೆಲ್ಲೂ ಅಲ್ಲ ಮಧ್ಯ ಪ್ರದೇಶದಲ್ಲಿ. ಹೌದು ಇಷ್ಟೇ ಅಲ್ಲದೆ ಕ್ಷೌರ ಮಾಡಿಸಿಕೊಂಡ ಸಚಿವರು ಆ ಕ್ಷೌರಿಕನಿಗೆ ಸ್ಥಳದಲ್ಲಿಯೇ ದೊಡ್ಡ ಮಟ್ಟದ ನಗದನ್ನೂ ಸಹ ನೀಡಿದ್ದಾರೆ.. ನಗದನ್ನು ನೀಡಲು ಕಾರಣ ಏನು ಗೊತ್ತಾ..? ನೋಡೋಣ ಬನ್ನಿ.

ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯ ಗುಲೈಮಾಲ್ ನಲ್ಲಿ ವಾಸವಿರುವ ರೋಹಿದಾಸ ಎಂಬ ಕ್ಷೌರಿಕ ಜೀವನದಲ್ಲಿ ಮುಂದೆ ಬರಬೇಕು ಎಂದು, ತನ್ನದೇ ಸ್ವಂತ ಸಲೂನ್ ಅನ್ನು ಶುರು ಮಾಡಬೇಕೆಂಬ ಕನಸು ಕಂಡಿದ್ದ. ಇವನ ಕೈಚಳಕವನ್ನು ನೋಡಿದ್ದ ಅದೆಷ್ಟೋ ಜನರೂ ಸಹ ಈತನಿಗೆ ಸಲೂನ್ ಓಪನ್ ಮಾಡಲು ಸಲಹೆ ನೀಡಿದ್ದರು.
ಆದರೆ ಆರ್ಥಿಕ ಸಂ’ಕಷ್ಟಕ್ಕೆ ಸಿಲುಕಿದ್ದ ಈತನಿಗೆ ಸಲೂನ್ ತೆರೆಯುವುದು ಕಷ್ಟದ ಕೆಲಸವಾಗಿತ್ತು. ಆದರೆ ಈತನಿಗೆ ತನ್ನ ಸ್ವಂತ ಸಲೂನ್ ತೆರೆಯುವುದರ ಬಗ್ಗೆ ಅಪಾರ ಕನಸಿತ್ತು. ಹೀಗಾಗಿ ಸಲೂನ್ ತೆರೆಯಲು ಆರ್ಥಿಕ ಸಹಾಯ ಮಾಡುವಂತೆ ಅಲ್ಲಿನ ಅರಣ್ಯ ಸಚಿವರಾದ ವಿಜಯ್ ಸಾಹಾ ಅವರ ಬಳಿ ಆರ್ಥಿಕ ನೆರವು ನೀಡಲು ಕೋರಿದ್ದನು. ಇದಾದ ಕೆಲ ದಿನಗಳ ಬಳಿಕ ಆದದ್ದೆ ಬೇರೆ.. ಏನಾಯ್ತು.?

ಆರ್ಥಿಕ ಸಹಾಯ ಕೇಳಿದ್ದ ರೋಹಿದಾಸನಿಗೆ ಕೆಲ ದಿನಗಳು ಕಾಯುವಂತೆ ತಿಳಿಸಿದ ಸಚಿವರು ಕೆಲ ದಿನಗಳ ಬಳಿಕ ನಡೆದ ಬಹಿರಂಗ ಕಾರ್ಯಕ್ರಮವೊಂದರಲ್ಲಿ ರೋಹಿದಾಸನನ್ನು ಕರೆದು ಎಲ್ಲರೆದುರು ಕ್ಷೌರ ಮಾಡಲು ತಿಳಿಸಿದರು. ಸಚಿವರ ಮಾತಿನಂತೆ ಜನರೆದುರೇ ಮಾ’ಸ್ಕ್ ಧರಿಸಿಕೊಂಡು ಸಚಿವರಿಗೆ ಕ್ಷೌರ ಮಾಡಿದ ರೋಹಿ ದಾಸನಿಗೆ ಸಚಿವರು ಸ್ಥಳದಲ್ಲಿಯೇ ಸಲೂನ್ ತೆರೆಯಲು 60 ಸಾವಿರಗಳನ್ನು ನೀಡಿದರು.. ಅಂದಹಾಗೆ ಸಚಿವರು ಹೀಗೆ ಮಾಡಲು ಕಾರಣ ಕೂಡ ಇದೆ. ಅದೇನೆಂದರೆ ಚೀನಾ ರೋ’ಗದ ಕಾರಣದಿಂದಾಗಿ ಜನ ಕ್ಷೌರಿಕರ ಬಳಿ ಬರಲು ಹೆದರುತ್ತಿದ್ದು ಇದರಿಂದಾಗಿ ಕ್ಷೌರಿಕರು ಆರ್ಥಿಕವಾಗಿ ಕು’ಗ್ಗಿ ಹೋಗಿದ್ದಾರೆ. ಹೀಗಾಗಿ ನಾನು ಎಲ್ಲರುದುರೇ ಕ್ಷೌರ ಮಾಡಿಸಿಕೊಂಡು ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ. ಸಚಿವರ ಈ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಎಲ್ಲರಿಂದ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. ಈ ಸಚಿವರು ಮಾಡಿದ ಕೆಲಸದ ಬಗ್ಗೆ ನೀವೇನಂತೀರಿ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.