Advertisements

ಪೇಸ್ಬುಕ್ ನಲ್ಲಿ ಫೇಕ್ ಹೆಸರಲ್ಲಿ ಪರಿಚಯ ಆಗಿ ಈತ ಮಾಡಿದ ಕೆಲಸಕ್ಕೆ ಪೊಲೀಸರೇ ಒಂದು ಕ್ಷಣ ಬೆಚ್ಚಿ ಬಿದ್ರಿದ್ದರು! ಏನು ಮಾಡಿದ್ದ ನೋಡಿ..

Kannada News

ಪ್ರಿಯ ಓದುಗರೇ ಎಲ್ಲೋ ಇರುವ ವ್ಯಕ್ತಿಯ ಬಗ್ಗೆ ಪೂರ್ವಾಪರ ತಿಳಿಯದೆ ಪ್ರೀತಿಮಾಡಿ, ವಿವಾಹವಾದರೆ ಇಂತಹ ಪ್ರಮಾದ ನಡೆಯುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಪ್ರೀತಿ ಹೆಸರಲ್ಲಿ ಈಕೆಯನ್ನು ಮೋಸಗೊಳಿಸಿದ ವ್ಯಕ್ತಿಗಳು ಏನು ಮಾಡಿದರು ಗೊತ್ತೇ? ಉತ್ತರಪ್ರದೇಶದ ಮೀರತ್ ಎಂಬಲ್ಲಿ 30 ವರ್ಷದ ಪ್ರಿಯ 5 ವರ್ಷದ ಮಗಳೊಂದಿಗೆ ವಾಸವಾಗಿದ್ದಳು. ಒಂಟಿ ಹೆಣ್ಣು ಎಂದು ಅಲ್ಲಿಯ ಸ್ಥಳೀಯ ಸರ್ಕಾರ ಒಂದು ಮನೆಯನ್ನು ನಿರ್ಮಿಸಿ ಕೊಟ್ಟಿತ್ತು. ಪ್ರಿಯ ವೃತ್ತಿಯಲ್ಲಿ ಒಬ್ಬ ಟೇಲರ್ ಆಗಿದ್ದು ಜೀವನಕ್ಕೆ ಅದನ್ನೇ ದಾರಿ ಮಾಡಿಕೊಂಡಿದ್ದಳು. ಪ್ರಿಯಾ ಕೆಲ ವರ್ಷಗಳ ಹಿಂದೆ ಫೇಸ್ಬುಕ್ನಲ್ಲಿ ಪರಿಚಯವಾದ ಗೆಳೆಯನೊಂದಿಗೆ ಪ್ರೀತಿಸಿ, ಮನೆ ಬಿಟ್ಟು ಹೋಗಿ ವಿವಾಹವಾಗಿದ್ದಳು. ಆತನೊಂದಿಗೆ ಕೆಲ ವರ್ಷಗಳ ವರೆಗೆ ಸಂಸಾರ ಮಾಡಿದಳು. ಆದರೆ ಆತ ಪ್ರಿಯಾಗೆ ಒಂದು ಹೆಣ್ಣು ಮಗುವನ್ನು ಕರುಣಿಸಿ, ಇವಳನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಿ ಬೇರೆಡೆ ಸೆಟ್ಲ್ ಆಗಿದ್ದ.

Advertisements
Advertisements

ಇತ್ತ ಪ್ರಿಯ ಮಗಳೊಂದಿಗೆ ಮರಳಿ ತಂದೆ-ತಾಯಿ ಊರಿಗೆ ಹೋಗಬೇಕೆಂದಾಗ ಪ್ರಿಯಳನ್ನು ಕೊಲ್ಲುವುದಾಗಿ ಕುಟುಂಬಸ್ಥರು ಬೆದರಿಕೆ ಹಾಕಿದರು. ಇದರಿಂದ ಪ್ರಿಯ ತಾಯಿ ಮನೆಗೆ ಹೋಗದೆ ಮೀರತ್ ನಲ್ಲಿ ಸರ್ಕಾರ ನೀಡಿದ ಮನೆಯಲ್ಲಿ ವಾಸವಾಗಿದ್ದಳು.
ಇದಾದ ಕೆಲ ವರ್ಷಗಳ ನಂತರ ಹಿಂದೂಧರ್ಮದ ಅಮಿತ್ ಎಂಬಾತ ಪ್ರಿಯಾಳ ಪೂರ್ವಾಪರ ತಿಳಿದು ವಿವಾಹವಾಗುವ ನಿವೇದನೆಯನ್ನು ಮುಂದಿಟ್ಟಿದ್ದ. ಆಕೆಯ ಮಗಳನ್ನು ತನ್ನ ಮಗಳಂತೆ ನೋಡಿಕೊಳ್ಳುವದಾಗಿ ಮಾತು ಕೊಟ್ಟಿದ್ದ. ಇವನ ಮಾತನ್ನು ನಂಬಿದ ಪ್ರೀಯಾ ಆತನ ಬ’ಲಿ’ಪಾಶಕ್ಕೆ ತಿಳಿಯದೆ ಕೊರಳು ನೀಡಿದ್ದಳು. ಹೌದು ಈತ ಅಸಲಿಗೆ ಹಿಂದೂ ಅಲ್ಲ ಮುಸ್ಲಿಮ್. ಈತನ ನಿಜವಾದ ಹೆಸರು ಶಮಷದ್ ಆಗಿತ್ತು. ಆದ್ರೆ ಪ್ರಿಯಾಳಿಗೆ ತಿಳಿಯುವಷ್ಟರಲ್ಲಿ ತಡವಾಗಿತ್ತು. ಪ್ರಿಯಾ ಅಮಿತ್ ನನ್ನ ನಂಬಿ ತಾನಿದ್ದ ಮನೆಯನ್ನು ಮಾರಿ,

ಆತನಿಗೆ ಬಿಸಿನೆಸ್ ಮಾಡಲು ಹಣ ನೀಡಿದ್ದಳು.ಅದನ್ನು ಮರಳಿ ಕೊಡು ಎಂದಾಗ ಇಬ್ಬರ ನಡುವೆ ಆಗಾಗ ಜಗಳಗಳು ಪ್ರಾರಂಭವಾದವು. ಶಮಷದ್ ಎಲ್ಲ ಹಣವನ್ನು ನುಂಗಿ ಹಾಕಿದ್ದ. ಅದೇ ಹಣದಲ್ಲಿ ತನ್ನ ಮಡದಿಗೆ ಮನೆಯನ್ನು ಸಹ ಕಟ್ಟಿಸಿಕೊಟ್ಟಿದ್ದ. ಈ ಕಾರಣದಿಂದಲೇ ಅದೆಷ್ಟು ಬಾರಿ ಇವರಿಬ್ಬರ ಮಧ್ಯೆ ಜಗಳಗಳು ಆಗಿದ್ದವು. ಹೀಗಿರುವಾಗ ಅದೊಂದು ದಿನ ತಾಯಿ-ಮಗಳು ಇದ್ದಕ್ಕಿದ್ದಂತೆ ಕಾಣೆಯಾಗುತ್ತಾರೆ. ಪ್ರಿಯ ತಾನಿದ್ದ ಪಕ್ಕದಮನೆಯ ಚಂಚಲ್ ಚೌದ್ರಿ ಮತ್ತು ಲಕ್ಷ್ಮಿ ದಂಪತಿಯ ಸ್ನೇಹ ಗಳಿಸಿಕೊಂಡಿದ್ದಳು. ಜೀವನದಲ್ಲಿ ನಂಬಿ ಮೋಸ ಹೋದ ಎರಡು ಘಟನೆಗಳ ಕುರಿತು ಹೇಳಿಕೊಂಡಿದ್ದಳು. ಈ ಚೌದ್ರಿ ದಂಪತಿಯೇ ಪ್ರಿಯಾಗೇ ಆಗಾಗ ಧೈರ್ಯ ಹೇಳುತ್ತಿದ್ದರು. ಪ್ರಿಯ ಮತ್ತು ಆಕೆಯ ಮಗಳು ಕಾಣದೆ ಇದ್ದಾಗ ಪತಿಗೆ ಕೇಳಿದ್ದಾರೆ.ಆದರೆ ಆತ ಕೋಪಗೊಂಡು ಇವರ ಮೇಲೆ ರೇಗಾಡಿದ್ದಾನೆ.

ಇದರಿಂದ ಅನುಮಾನಗೊಂಡ ಚೌದ್ರಿ ದಂಪತಿ ಪೊಲೀಸ್ ಠಾಣೆಗೆ ದೂರು ನೀಡಿದರು. ಆದರೆ ಈ ಕುರಿತು ಶಮಷದನನ್ನು ತನಿಖೆ ಮಾಡದೆ ಇದ್ದಾಗ ಕಮಿಷನರ್ ಗೆ ನೇರವಾಗಿ ಭೇಟಿಯಾಗಿ ಪ್ರಿಯ ಮತ್ತು ಆಕೆಯ ಮಗಳನ್ನು ಹುಡುಕಿಕೊಡುವಂತೆ ದೂರು ದಾಖಳಿಸಿದರು. ಹಾಗೆ ಮಾಧ್ಯಮದ ಸಹಾಯ ಪಡೆದರು. ಆಗ ನೋಡಿ ತನಿಖೆ ಚುರುಕುಗೊಂಡಿತು. ಶಮಷದ ನನ್ನು ವಶಕ್ಕೆ ಪಡೆದು ವಿಚಾರಿಸಿದರು.ಮೊದಮೊದಲು ತನಗೆ ಅವರು ಎಲ್ಲಿ ಹೋದರು ಎಂದು ಗೊತ್ತಿಲ್ಲ ಎನ್ನುತ್ತಿದ್ದ ಸಂಸದ್, ಪೊಲೀಸರ ಲಾಠಿ ರುಚಿಗೆ ತಾಯಿ ಮಗಳಿಗೆ ಮಾಡಿದ ದ್ರೋಹದ ಕಥೆಯನ್ನು ಅನಾವರಣಗೊಳಿಸಿದ.
ಹೌದು ಓದುಗರೇ ಸುಮಾರು 16 ಲಕ್ಷದವರೆಗೆ ಶಮಶಾದ್ ಪ್ರಿಯಾಳ ಹಣವನ್ನು ನುಂಗಿ ನೀರು ಕುಡಿದಿದ್ದ. ಆದ್ದರಿಂದ ಈ ವಿಷಯವಾಗಿ ಆಗಾಗ ಜಗಳವಾಗುತ್ತಿತ್ತು.

ರಾತ್ರಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಪ್ರಿಯಾ ಪತಿಯ ಕೈಗೆ ಚಾ’ಕು’ವಿನಿಂದ ಗಾಯ ಮಾಡಿದ್ದಳು. ಇದರಿಂದ ಕೋಪಗೊಂಡ ಪತಿ ಪ್ರಿಯಾಳನ್ನು ಕತ್ತು ಹಿಚುಕಿ ಕೊಂದಿದ್ದ. ಅಷ್ಟೇ ಅಲ್ಲ ಏನೂ ಅರಿಯದೆ ನಿದ್ದೆ ಮಾಡುತ್ತಿದ್ದ ಆಕೆಯ ಪುಟ್ಟ ಮಗಳನ್ನು ಸಹ ನಿರ್ದಾಕ್ಷಿಣ್ಯವಾಗಿ ಮುಖದಮೇಲೆ ದಿಂಬು ಇಟ್ಟು ಉಸಿರುಗಟ್ಟಿಸಿ ಕೊಂದಿದ್ದ. ಇಬ್ಬರ ಶ’ವಗಳನ್ನು ಅದೇ ರೂಮಿನಲ್ಲಿ 8 ಅಡಿ ಅಗೆದು ಹೂತಿಟ್ಟಿದ್ದ. ಇದು ಯಾರಿಗೆ ತಿಳಿಯದಂತೆ ಹಾಗೂ ಶ’ವ’ಗಳು ವಾಸನೆ ಬರದಂತೆ ಮೇಲೆ ಚೀಲಗಳಲ್ಲಿ ತಂದು ಉಪ್ಪನ್ನು ಸುರಿದಿದ್ದ. ಪೊಲೀಸರ ಲಾಠಿ ತನಿಖೆಗೆ ಈತ ತನ್ನ ತಪ್ಪನ್ನೇ ನೋ ಒಪ್ಪಿಕೊಂಡಿದ್ದ, ಆದರೆ ಈತನ ಪತ್ನಿಯ ಬಗ್ಗೆ ಬಾಯಿಬಿಟ್ಟಿಲ್ಲ ಹಾಕಿ ಮನೆಯನ್ನು ಖಾಲಿ ಮಾಡಿ ಅದೆಲ್ಲಿಗೋ ಓಡಿಹೋಗಿದ್ದಳು. ಇತ್ತ ನಿಜವಾದ ಪ್ರೀತಿಗಾಗಿ ಹಂಬಲಿಸಿ ಹಾತೊರೆದ ಅಮಾಯಕ ಮುಗ್ಧ ಜೀವಗಳೇರಡು ಬಲಿಯಾಗಿದ್ದವು. ಈ ದುಃಖದ ದುರಂತ ಕಥೆ ಉತ್ತರಪ್ರದೇಶದ ಎಲ್ಲ ಮಾಧ್ಯಮಗಳಲ್ಲಿಯೂ “ಲವ್ ಜಿಹಾದಿಗೆ ಎರಡು ಜೀವ ಬಲಿ ” ಎಂದು ಪ್ರಸಾರ ಮಾಡಿತ್ತು. ಈ ಸುದ್ದಿ ಅಂದು ಭಾರಿ ಸಂಚಲನವನ್ನೇ ಮೂಡಿಸಿತು.