Advertisements

ಮಗು ಉಳಿಸಲು ಬೇಕಿತ್ತು, 16 ಕೋಟಿ ಸಂಗ್ರಹವಾಗಿದ್ದು 40 ಲಕ್ಷ ಮಾತ್ರ, ಉಳಿದ ಹಣವನ್ನು ಇವರು ಮಾಡಿದ್ದು ತಿಳಿದರೆ ಹೃದಯ ಭಾರವಾಗುತ್ತದೆ!

Kannada News

ನಮಸ್ಕಾರ ಸ್ನೇಹಿತರೇ ಜೀವನದಲ್ಲಿ ಎಲ್ಲಾ ರೀತಿಯ ಸುಖ ಕಷ್ಟಗಳನ್ನು ನೋಡಿ ನಂತರ ದಿನಗಳಲ್ಲಿ ಇಹಲೋಕವನ್ನು ತ್ಯಜಿಸಿದರೇ ಅಷ್ಟೊಂದು ಯಾರು ಕೂಡ ದುಃಖ ಪಡಲಾರರು. ಆದರೆ ಹಸುಗೂಸುನಂತಿರುವ ಇನ್ನು ಕೂಡ ಜೀವನ ಪ್ರಾರಂಭಿಸಿದ ಸಣ್ಣ ಮಕ್ಕಳು ನಮ್ಮ ಕಣ್ಣಿಂದ ಕಣ್ಮರೆಯಾದರೆ ಖಂಡಿತವಾಗಿ ಎಂಥವರಿಗಾದರೂ ಕಲ್ಲು ಹೃದಯದವರು ಕೂಡಾ ಕರಗುವಂತೆ ಮನಸ್ಸು ಭಾವುಕ ವಾಗುವುದು ಖಂಡಿತ.

ಹೌದು ಸ್ನೇಹಿತರೆ ಈ ಹಿಂದೆಯಷ್ಟೇ ಒಂದು ಮಗುವಿಗೆ 16 ಕೋಟಿ ರೂಪಾಯಿನ ಇಂಜೆಕ್ಷನ್ ಒಂದು ಜೀವ ಉಳಿಸಲು ಬೇಕು ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ನೀವು ನೋಡಿರಬಹುದು. ಹೌದು ಸ್ನೇಹಿತರೆ ಉಡುಪಿ ಜಿಲ್ಲೆಯ ಬೆಳ್ಮಣ್ ಗ್ರಾಮದ ಮಿಥಾನ್ಶ್ ಎಂಬ ಮಗುವಿನ ಸ್ಪೈನಲ್ ಮಸ್ಕ್ಯುಲರ್ ಅತ್ರೋಫಿ ಎಂಬ ವಿರಳ ಪ್ರೀತಿಯ ಕಾಯಿಲೆ ಅಂದರೆ ಬೆನ್ನುಮೂಳೆ ಕ್ಷೀಣಿಸುವ ಕಾಯಿಲೆ ಮಗುವಿಗೆ ಬಂದಿತ್ತು.

ಇದಕ್ಕಾಗಿ ಬರೋಬ್ಬರಿ 16 ಕೋಟಿ ಮೌಲ್ಯದ ಇಂಗೆಕ್ಷನ್ ಅನ್ನು ಅಮದು ಮಾಡಿಕೊಳ್ಳಬೇಕಾಗಿತ್ತು. ಇದಕ್ಕಾಗಿ ತುಂಬಾ ಶ್ರಮ ಪಟ್ಟಂತಹ ಮಗುವಿನ ತಂದೆ ತಾಯಿಗಳಾದಂತಹ ಸಂದೀಪ್ ಹಾಗೂ ರಜಿತಾ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಫಂಡ್ ರೈಸ್ ಮುಖಾಂತರ 48 ಲಕ್ಷ ರೂಪಾಯಿಗಳಷ್ಟೆ ದೇಣಿಗೆ ಒಟ್ಟಾಗಿದ್ದು. ಕೊನೆಗೂ ಕೂಡ 16 ಕೋಟಿ ಮೌಲ್ಯದ ಹಣ ಒಟ್ಟಾಗಲಿಲ್ಲ. ಮಗುವನ್ನು ಉಳಿಸಿಕೊಳ್ಳಬೇಕೆಂಬ ಪೋಷಕರ ಕನಸು ಕನಸಾಗಿಯೇ ಉಳಿದು ಹೋಯಿತು.

ಅಷ್ಟೆಲ್ಲ ಪ್ರಯತ್ನಮಾಡಿ 48 ಲಕ್ಷ ರೂಪಾಯಿ ಒಟ್ಟು ಹಾಕಿದರೂ ಕೂಡ ಚಿನ್ನದಂತಹ ಮಗುವಿನ ಪ್ರಾಣವನ್ನು ಉಳಿಸಲಾಗಲಿಲ್ಲ. ಇನ್ನು ಸಂಗ್ರಹವಾಗಿರುವ 48 ಲಕ್ಷ ರೂಪಾಯಿಗಳನ್ನು ಮಗುವಿನ ತಂದೆ ತಾಯಿಗಳು ಏನು ಮಾಡಲು ಹೊರಟಿದ್ದಾರೆ ಗೊತ್ತಾ ಸ್ನೇಹಿತರೆ. ಹೌದು ಸ್ನೇಹಿತರೆ ಸಂಗ್ರಹವಾಗಿರುವ 48 ಲಕ್ಷ ರೂಪಾಯಿಗಳನ್ನು ಸಾಮಾಜಿಕ ಕಾರ್ಯಕ್ಕಾಗಿ ಬಳಸಲು ತಂದೆ-ತಾಯಿಗಳು ಯೋಜನೆ ಹಾಕಿದ್ದಾರೆ. ಮಗುವಿನ ಹೆಸರು ಕೊನೆಪಕ್ಷ ಇಂತಹ ಒಳ್ಳೆಯ ಕೆಲಸಕ್ಕಾದರೂ ಉಪಯೋಗವಾಗಲಿ ಎಂಬುದೇ ಮಗುವಿನ ತಂದೆ ತಾಯಿಗಳ ಆಶಯವಾಗಿತ್ತು.